ಬೆಳಗಾವಿ – ಇಲ್ಲಿಯ ಶಾಲಾ ಆವರಣವೊಂದರಲ್ಲಿ ಬರ್ತ್ ಡೇ ಆಚರಣೆ ನಡೆದಿದ್ದು, ವಿಡೀಯೋ ವೈರಲ್ ಆಗಿದೆ. ವಿಜಯನಗರ (ಹಿಂಡಲಗಾ) ಶಾಲಾ ಆವರಣದಲ್ಲಿ ಬುಧವಾರ ರಾತ್ರಿ ಸ್ಥಳೀಯ ಮುಖಂಡ ಜ್ಯೋತಿಬಾ (ಮುತ್ತುರಾಜ್) ಎನ್ನುವವರ ಬರ್ತ್ ಡೇ ಆಚರಿಸಲಾಗಿದೆ. ಜೆ ಬಾಸ್ ಎಂದೂ, ಜ್ಯೋತಿಬಾ ಅಣ್ಣಾ ಎಂದು ಬ್ಯಾನರ್ ಹಾಕಿಕೊಂಡು ಜೋರಾದು ಸಂಗೀತ, ನೃತ್ಯದೊಂದಿಗೆ ಬರ್ತ್ ಡೇ ಪಾರ್ಟಿ ನಡೆದಿದೆ. ನೂರಾರು ಜನರು ಸೇರಿ ಕುಣಿದು ಕುಪ್ಪಳಿಸಿ ಬರ್ತ್ ಡೇ ಆಚರಿಸಿದ್ದು, ಕೈಯಲ್ಲಿ …
Read More »ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳು, ಒಟಿಟಿ ಪ್ಲಾಟ್ ಫಾರ್ಮ್, ಡಿಜಿಟಲ್ ಮಾಧ್ಯಮಗಳಿಗೆ ಗುರುವಾರ ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಗಳನ್ನು ಹಂಚಿಕೊಂಡರು. ಹೊಸ ಮಾರ್ಗಸೂಚಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸಮೂಹ ಸಂವಹನ ಮಾಧ್ಯಮಗಳ ವಿಷಯದ ಮೇಲೆ ನಿಗಾ ಇಡುತ್ತವೆ ಎಂದರು. ದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ಎತ್ತಿ ತೋರಿಸಿದ ಸಚಿವರು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು …
Read More »ವಿಡಿಯೋ ವೈರಲ್; ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ
ಪಣಜಿ, ಫೆಬ್ರವರಿ 25: ಗೋವಾದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ಮುಂದುವರಿಯುತ್ತಲೇ ಇದೆ. ಪ್ರವಾಸಕ್ಕೆಂದು ತೆರಳಿದ್ದ ಕನ್ನಡಿಗರು ಬಯಲಲ್ಲಿ ಅಡುಗೆ ತಯಾರಿಸಿದ್ದಕ್ಕಾಗಿ ಅವರ ಮೇಲೆ ಗೋವಾ ಪುಂಡರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ಯುವಕರ ತಂಡ ಗೋವಾಕ್ಕೆ ಪ್ರವಾಸಕ್ಕೆ ತೆರಳಿತ್ತು. ಈ ವೇಳೆ ಒಂದು ಬಯಲಲ್ಲಿ ಚಿಕ್ಕ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕೆಲ ಗೋವಾದ …
Read More »ಇಂಧನ ಬೆಲೆ ಏರಿಕೆ ಖಂಡಿಸಿ ಎಲೆಕ್ಟ್ರಿಕ್ ಸ್ಕೂಟರ್ ಏರಿದ ದೀದಿ
ಕೋಲ್ಕತ್ತಾ,ಫೆ.25- ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸ್ಕೂಟರ್‍ನಲ್ಲಿ ಸಂಚರಿಸುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದರು. ದೇಶದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ರಾಜ್ಯ ಕಾರ್ಯದರ್ಶಿ ನಬಣ್ಣಾ ಅವರೊಂದಿಗೆ ಮುಖ್ಯಮಂತ್ರಿಯವರು ಸ್ಕೂಟರ್‍ನಲ್ಲಿ ಕುಳಿತಿದ್ದರು. ಇದರ ವಿಡಿಯೋ ಈಗ ವೈರಲ್ ಆಗಿದ್ದು, ಸಿಎಂ ಬ್ಯಾನರ್ಜಿ ಅವರು, ಹೆಲ್ಮೆಟ್ ಧರಿಸಿ, ಪೆಟ್ರೋಲ್ ಬೆಲೆ ಏರಿಕೆಯ ಖಂಡಿಸಿದರು. ಪ್ರದರ್ಶನ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು …
Read More »ಮೋದಿʼ ಸ್ಟೇಡಿಯಂ ಪೆವಿಲಿಯನ್ಗೆ ಅದಾನಿ, ಅಂಬಾನಿ ಹೆಸರಿಟ್ಟಿರುವುದರ ಹಿಂದಿದೆ ಈ ಕಾರಣ
ಗುಜರಾತ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನರೇಂದ್ರ ಮೋದಿ ಸ್ಟೇಡಿಯಂನ್ನು ಉದ್ಘಾಟನೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿವಾದದ ಅಲೆಯೇ ಹುಟ್ಟಿಕೊಂಡಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್ರ ಹೆಸರಲ್ಲಿದ್ದ ಈ ಸ್ಟೇಡಿಯಂಗೆ ಮರುನಾಮಕರಣದ ಅಗತ್ಯವಿತ್ತೇ ಎಂದು ವಿಪಕ್ಷಗಳು ಕೆಂಡ ಕಾರ್ತಿವೆ . ಈ ವಿವಾದ ಇನ್ನೂ ಸುದ್ದಿಯಲ್ಲಿ ಇರುವಾಗಲೇ ಇದೀಗ ಅದಾನಿ ಹಾಗೂ ಅಂಬಾನಿ ಹೆಸರು ಕೂಡ ಈ ಮೈದಾನದ ವಿವಾದದ ಜೊತೆ ಥಳುಕು ಹಾಕಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಅಂದರೆ …
Read More »ಕ್ರಿಕೆಟ್ ಬೆಟ್ಟಿಂಗ್ ಗೃಹ ಮಂತ್ರಿ ಕಿವಿಗೂ ಬಿತ್ತು
ಬೆಳಗಾವಿ. ಕ್ರಿಕೆಟ್ ಬೆಟ್ಟಿಂಗ್ ಅಷ್ಟೇ ಅಲ್ಲ ಹವಾಲಾ ಮತ್ತಿತರ ದಂಧೆಗಳಿಗೆ ಕಡಿವಾಣ ಹಾಕಲು ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ದಂಗೆಯನ್ನು ಮಟ್ಟ ಹಾಕಲು ಕೇವಲ ಜಿಲ್ಲಾ ಪೊಲೀಸರು ಅಷ್ಟೇ ಅಲ್ಲ ಬೆಳಗಾವಿ ನಗರ ಪೊಲೀಸರು ತಯಾರಾಗಿ ಕುಳಿತಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಬೆಟ್ಟಿಂಗ್ ದಂಧೆ ಸಮಗ್ರ ಮಾಹಿತಿ ಈಗ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಿವಿಗೂ ಬಿದ್ದಿದೆ. ಹೀಗಾಗಿ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದರಲ್ಲಿ ಎರಡು …
Read More »ಬಸ್ ನಲ್ಲಿ ಯುವತಿಯ ಮೈಮುಟ್ಟಿ ಕಿರುಕುಳ ಆರೋಪ.. ಠಾಣೆಯ ಮುಂಭಾಗದಲ್ಲಿ ಬಸ್!
ಉಪ್ಪಿನಂಗಡಿ, ಫೆಬ್ರವರಿ 24: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಮೈಮುಟ್ಟಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. ಪೊಲೀಸರ ವಶದಲ್ಲಿರುವ ಯುವಕನನ್ನು ಚಿಕ್ಕಮಗಳೂರು ನಿವಾಸಿ ಮೊಹಮ್ಮದ್ ಸೈಫುಲ್ಲಾ ಎಂದು ಗುರುತಿಸಲಾಗಿದ್ದು. ಆರೋಪಿಯು ಮಂಗಳವಾರ ಬೆಳಗ್ಗೆ ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದಾಗ ಕೆಎಸ್ಆರ್ಟಿಸಿಯ ಬಸ್‌ನಲ್ಲಿ ವಿದ್ಯಾರ್ಥಿನಿಯ ಮೈಮುಟ್ಟಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿಯು ಬಸ್ ಚಾಲಕ, ನಿರ್ವಾಹಕರಲ್ಲಿ ಈ ವಿಚಾರ …
Read More »ರಾತ್ರೋರಾತ್ರಿ ಕಾರ್ಯಾಚರಣೆ, ಬಿಜೆಪಿ ಮುಖಂಡ ನಾಗರಾಜ್ ಸೇರಿ ಇಬ್ಬರು ಅರೆಸ್ಟ್
ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ಕ್ವಾರಿ ಮಾಲೀಕ ನಾಗರಾಜ್ ನನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ಪ್ರಮುಖ ಆರೋಪಿ ನಾಗರಾಜ್ ನನ್ನು ಬಂಧಿಸಿದ್ದಾರೆ. ನಿನ್ನೆ ನಾಲ್ವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಯಾಗಿರುವ ಭ್ರಮರವಾಸಿನಿ ಕ್ರಷರ್ಸ್ ಮಾಲೀಕ ಜಿ.ಎಸ್. ನಾಗರಾಜ್ ಹಾಗೂ ಸ್ಪೋಟಕ ಸರಬರಾಜು ಮಾಡಿದ ಮತ್ತೋರ್ವ ಆರೋಪಿ ಗಣೇಶ್ ಎಂಬುವನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಸ್ಫೋಟ ಪ್ರಕರಣದ ನಂತರ ಆರೋಪಿಗಳು …
Read More »ಕ್ಷೇತ್ರದ ಸುಮಾರು ಪ್ರತಿಶತ ೯೦ ರಷ್ಟು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಸ್ವೀಕರಿಸಿದ್ದೇನೆ: ಅಣ್ಣಾಸಾಹೇಬ ಜೊಲ್ಲೆ
ಚಿಕ್ಕೋಡಿ – ಚಿಕ್ಕೋಡಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಸುಮಾರು ಪ್ರತಿಶತ ೯೦ ರಷ್ಟು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಸ್ವೀಕರಿಸಿದ್ದೇನೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಸುಧಾರಣೆ, ಸಮುದಾಯ ಭವನಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ, ನೂತನ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಪ.ಜಾತಿ.ಪ.ಪಂ ವಸಾಹತುಗಳಲ್ಲಿ ಚರಂಡಿ ಸಿಸಿ ರಸ್ತೆ ಸೇರಿದಂತೆ …
Read More »ನೂರು ವರ್ಷದ ಬಳಿಕ ನಡೆಯುತ್ತಿರುವ ಹಿಂಡಲಗಾ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ಜಾತ್ರೆ
ಬೆಳಗಾವಿ – ನೂರು ವರ್ಷದ ಬಳಿಕ ನಡೆಯುತ್ತಿರುವ ಹಿಂಡಲಗಾ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಮಾರ್ಚ್ 16ರಿಂದ 20ರ ವರೆಗೆ ಜಾತ್ರೆ ನಡೆಯಲಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ. ಜಾತ್ರಾ ಮಹೋತ್ಸವಕ್ಕೆ ಯಾವುದೇ ಅಡ್ಡಿ ಆತಂಕಗಳು, ಅಹಿತಕರ ಘಟನೆಗಳು ನಡೆಯದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಶಾಸಕಿ ಲಕ್ಷ್ಮಿ …
Read More »
Laxmi News 24×7