Breaking News

ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹಕ್ಕೆ ಬ್ರೇಕ್:

ನವದೆಹಲಿ: ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಪ್ರಕ್ರಿಕೆಯನ್ನು ನಿಲ್ಲಿಸಲಾಗಿದ್ದು ಟ್ರಸ್ಟ್ ಅಂದಾಜಿಸಿದಂತೆ 2,500 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಇನ್ನು ಮೂವರು ವರ್ಷಗಳ ಕಾಲ ನಿರ್ಮಾಣ ಕಾರ್ಯ ತಡೆಯಿಲ್ಲದೆ ಮುಂದುವರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ. ದೇಣಿಗೆ ಸಂಗ್ರಹ ಕಾರ್ಯ ನಿಲ್ಲಿಸಿದ್ದರೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಹಣ ನೀಡುತ್ತಿದ್ದಾರೆ ಎಂದು ಟ್ರಸ್ಟ್ ನ …

Read More »

ಬೆಳಗಾವಿ – ಧಾರವಾಡ ರೈಲ್ವೆ: ಸಚಿವರ ಉತ್ತರ ಅಸಮರ್ಪಕ ಎಂದ ಕವಟಗಿಮಠ

ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಸಂಬಂಧ ಘೋಷಣೆಯಾದ ಯೋಜನೆಯು ಯಾವ ಹಂತದಲ್ಲಿದೆ ಎನ್ನುವ ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯನ್ನು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸದನದಲ್ಲಿ ಪ್ರಶ್ನೋತ್ತರ ವೇಳೆ ಮೂಲಭೂತ ಸೌಕರ್ಯ ಸಚಿವರಿಗೆ ಕೇಳಿದ್ದರು. ಆದರೆ ಸಚಿವರು ಒದಗಿಸಿದ ಉತ್ತರ ಅಸಮರ್ಪಕವಾಗಿದೆಯೆಂದು ಕವಟಗಿಮಠ ಆಕ್ಷೇಪಿಸಿ, ತುರ್ತಾಗಿ ರಾಜ್ಯ ಸರಕಾರಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ …

Read More »

ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಮಾರ್ಚ್​​​ 8ರಂದು ಎಂ.ಇ.ಎಸ್​ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಮಾರ್ಚ್​​​ 8ರಂದು ಎಂ.ಇ.ಎಸ್​ ಪ್ರತಿಭಟನೆ ಹಮ್ಮಿಕೊಂಡಿದೆ. ಎಂ.ಇ.ಎಸ್ ಪ್ರತಿಭಟನೆಯಲ್ಲಿ ಸಂಘದ ಮುಖಂಡರು ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳನ್ನು ನೀಡುವ ಸಾಧ್ಯತೆ ಸಹ ಇದೆ. ಇವುಗಳಿಂದ ಶಾಂತಿ ‌ಭಂಗವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ 2 ದಿನಗಳ ಕಾಲ ಮಹಾರಾಷ್ಟ್ರ ನಾಯಕರ ಪ್ರವೇಶವನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 6ರಿಂದ ಮಾ.9ರವರೆಗೂ ಗಡಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ …

Read More »

ಸಚಿವ ಉಮೇಶ್ ಕತ್ತಿ ಯಡಿಯೂರಪ್ಪ ಮಟ್ಟದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಬೆಳಗಾವಿ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ‌ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಜಟಾಪಟಿ ಶುರುವಾಗಿದೆ. ಬೆಳಗಾವಿಯ ಇಬ್ಬರು ಸಚಿವರಿಂದ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆದಿದ್ದು, ಬೆಳಗಾವಿ ಜಿಲ್ಲೆಯನ್ನು ತಮ್ಮ ಕಂಟ್ರೋಲ್​ಗೆ ತೆಗೆದುಕೊಳ್ಳಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿಯಿಂದ ದೆಹಲಿ ಮಟ್ಟದಲ್ಲೂ ಲಾಬಿ ನಡೆದಿದೆ. ಸಚಿವ ಉಮೇಶ್ ಕತ್ತಿ ಯಡಿಯೂರಪ್ಪ ಮಟ್ಟದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ …

Read More »

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡಕರರ 79 ನೇ ವಾರ್ಷಿಕೋತ್ಸವದ ಸಪ್ತಾಹ ಸಮಾರಂಭವು ದಿ.7 ಮತ್ತು 8 ರಂದು ನಡೆಯಲಿದೆ. ದಿ.7ರಂದು ಅಭಿಷೇಕ ಕಾರ್ಯಕ್ರಮವು ಸಿದ್ದಯ್ಯಸ್ವಾಮಿ ಹಿರೇಮಠ ಇವರಿಂದ ಜರುಗಲಿದೆ. ಸಂಜೆ 5 ಗಂಟೆಗೆ ಸಾಧಕರಿಗೆ ಮತ್ತು ಗ್ರಾಮ ಪಂಚಾಯತ ನೂತನ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಿಂದಿಕುರಬೇಟ ಐಡಿಯಲ್ ಅರ್ಪಿಸುವ ಎಸ್.ಬಿ.ಇವೆಂಟ್ಸ್ ಮುರಗೋಡ ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ …

Read More »

ಅರಿವಿಲ್ಲದೇ ಮಾತನಾಡುವ ರಾಜಕಾರಣಿ ರಾಹುಲ್: ಸುರೇಶ್ ಕುಮಾರ್ ಟೀಕೆ

ಸುಬ್ರಹ್ಮಣ್ಯ: ‘ತಾನು ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೇ ಮಾತನಾಡುವ ದೇಶದ ಒಬ್ಬನೇ ರಾಜಕಾರಣಿ ರಾಹುಲ್‌ ಗಾಂಧಿ’ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್ ಟೀಕಿಸಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಆರ್‌ಎಸ್‌ಎಸ್ ನೇತೃತ್ವದ ಶಾಲೆಗಳು ಪಾಕಿಸ್ತಾನದ ಮದರಸಾಗಳಿಗೆ ಸಮ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಆರ್‌ಎಸ್‌ಎಸ್ ಏನು ಎಂದು ಅರಿಯಲು ಅದರ ಒಳಗನ್ನು ತಿಳಿಯಬೇಕು’ ಎಂದರು. ‘ಆರ್ಥಿಕ …

Read More »

ಸಿಡಿ ಸ್ಪೋಟದ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ.. ಆದ್ರೆ, ಹೇಳಲ್ಲ: ಎಸ್‌.ಟಿ ಸೋಮಶೇಖರ್‌

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿ.ಡಿ ಸ್ಫೋಟದ ಹಿಂದೆ ಯಾವ ಗುಂಪಿದೆ, ಇದಕ್ಕೆ ಯಾರು ನಾಯಕತ್ವ ಕೊಡುತ್ತಿದ್ದಾರೆ ಅನ್ನೋದು ನನಗೆ ಗೊತ್ತು ಎಂದು ಸಚಿವ ಎಸ್‌.ಟಿ ಸೋಮಶೇಖರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ಸಿಡಿ ಬಹಿರಂಗದ ಹಿಂದೆ ತೇಜೋವಧೆ ಮಾಡುವ ಉದ್ದೇಶವಿದೆ. ಇದ್ರ ಹಿಂದೆ ಯಾರಿದ್ದಾರೆ ಅನ್ನೋ ಖಚಿತ ಮಾಹಿತಿ ನನಗಿದೆ. ಆದ್ರೆ, ನಾನು ಒಬ್ಬನೇ ಇದನ್ನೆಲ್ಲಾ ಹೇಳುವುದಕ್ಕೆ ಬರೋದಿಲ್ಲ ಎಂದರು. ಇನ್ನು ರಾಜಕೀಯವಾಗಿ ತಮ್ಮ ವಿರುದ್ಧ ಫೈಟ್ ಮಾಡಲಿ. ಆದ್ರೆ, …

Read More »

ರಮೇಶ್​ ಜಾರಕಿಹೊಳಿಯ ಮಹಿಳಾ ಬೆಂಬಲಿಗರು ಘೋಷಣೆ ಕೂಗಿ ಆಕ್ರೋಶ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು.

ಹುಬ್ಬಳ್ಳಿ: ರಮೇಶ್ ಜಾರಕಿಹೊಳಿ CD ಬಹಿರಂಗ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಎಳೆದು ತರ್ತಿದ್ದಾರೆ ಗೊತ್ತಿಲ್ಲ ಎಂದು ನಗರದಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ರಾಜಕಾರಣಿಗಳು ಒಂದು ಉದಾಹರಣೆ ಸೆಟ್ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​ ಹೇಳಿದರು. ಸಿ.ಡಿ ವಿಚಾರದಲ್ಲಿ ನಾನೇನು ಮಾತನಾಡಲ್ಲ. ಬೇರೆ ವಿಚಾರವಾಗಿ ಏನಾದ್ರು ಪ್ರಶ್ನೆ ಇದ್ರೇ ಕೇಳಿ. ಆ ವಿಚಾರದಲ್ಲಿ ನನ್ನ ಹೆಸರಿ ಯಾಕೆ ಎಳೆದು ತರುತ್ತಿದ್ದಾರೆ ಎಂದು ನಂಗೆ ಗೊತ್ತಿಲ್ಲ. …

Read More »

ಸಿಡಿ ಸಂತ್ರಸ್ತೆಯ ಮೌನ, ಷಡ್ಯಂತ್ರದ ಅನುಮಾನಕ್ಕೆ ಕಾರಣ: ಬೊಮ್ಮಾಯಿ

ಹಾವೇರಿ, ಮಾರ್ಚ್ 06: ಸಂತ್ರಸ್ತೆ ಇನ್ನೂ ದೂರು ನೀಡದಿರುವುದರಿಂದ ರಮೇಶ್ ಜಾರಕಿಹೊಳಿ ವಿರುದ್ಧದ ವಿಡಿಯೋ ಸುತ್ತ ಸಾಕಷ್ಟು ಅನುಮಾನ ಮೂಡುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಪ್ರಕರಣ ಆದ ಬಳಿಕ ಬಹಳ‌ಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರಗಳು, ಪೂರ್ವಭಾವಿ ಹನಿಟ್ರ್ಯಾಪ್ ಸೇರಿದಂತೆ ಬಹಳಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಹೀಗಾಗಿ ಕೆಲವು ಸಚಿವರು, ಶಾಸಕರಾಗಲಿ ಅವರ ತೇಜೋವಧೆ ಆಗುವ ಸಾಧ್ಯತೆಗಳು ಹೆಚ್ಚಿವೆ. ತೇಜೋವಧೆ, …

Read More »

ಗೋಕಾಕ: ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಮೆಳವಂಕಿ ಗ್ರಾಮದ ಗೌಡನ ಕ್ರಾಸ್‍ದಲ್ಲಿ ಪ್ರತಿಭಟನೆ ನಡೆಸುತ್ತಿರುವುದು.

ಗೋಕಾಕ: ರಮೇಶ ಜಾರಕಿಹೊಳಿ ಅವರ ಮೆಳವಂಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಿಬಟ್ಟಿ, ಚಿಗಡೊಳ್ಳಿ ಮತ್ತು ಮೆಳವಂಕಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಶನಿವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಹಿರೇಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಮೆಳವಂಕಿ ಗ್ರಾಮದ ಗೌಡನ ಕ್ರಾಸದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ …

Read More »