Breaking News

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the love

ಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.

ರಾಮ ಮಂದಿರ ದೇಣಿಗೆ ಹಗರಣದಲ್ಲಿ ಕರ್ನಾಟಕದ  ನಂಟಿದೆ ಎಂಬ ಅಖಿಲೇಶ್ ಯಾದವ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದ್ರೆ ಬಿಜೆಪಿಗೆ RSSಗೆ ನೇಷನ್ ಫಸ್ಟ್ ಅಲ್ಲ. ಬಿಜೆಪಿ-RSSಗೆ ಡೊನೇಷನ್ ಫಸ್ಟ್ ಎಂದು ಕಿಡಿಕಾರಿದ್ದಾರೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಯಾರು? ಉದ್ಘಾಟನೆ ಮಾಡಿದ್ದು ಯಾರು? ಸಮಿತಿ ಮಾಡಿದ್ದು ಯಾರು? ಎಲ್ಲಾ ಮಾಡಿದ್ದು ಪ್ರಧಾನಿ ಮೋದಿ ಅವರು. ಈಗ ದೇಣಿಗೆ ಹಗರಣ ಆಗಿದೆ. ಚಿನ್ನ, ಬೆಳ್ಳಿ, ಹಣ ಏನು ಇಲ್ಲ. ಈಗ ಪ್ರಧಾನಿ ಮೋದಿ ಮೌನವಾಗಿ ಇದ್ದಾರೆ ಎಂದಿದ್ದಾರೆ.

ಯೋಗಿ ಭಾಷಣ ಮಾಡ್ತಾರೆ. ಈಗ ಲೂಟಿ ಹೊಡೆದಿದ್ದು ನೀವು. ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲ ಅಂತ ಏನು ಗ್ಯಾರಂಟಿ ಇದೆ?. SIT ಮಾಡಿ ಯಾರಿಗೆ ರಿಪೋರ್ಟ್ ಕೊಟ್ಟರು? IAS ಆಫೀಸರ್‌ಗೆ ರಿಪೋರ್ಟ್ ಕೊಟ್ಟರು. ಆ ಅಧಿಕಾರಿ ಕೂಡ ಟ್ರಸ್ಟ್‌ನಲ್ಲಿ ಇರೋನು. ಮೋದಿ ನಾನು ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ ಅಂದ್ರು. ಈಗ ಏನ್ ಆಯ್ತು? ಬಿಜೆಪಿ ಅವರು ಈ ಹಗರಣವನ್ನು ಮುಚ್ಚಿ ಹಾಕೋಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.


Spread the love

About Laxminews 24x7

Check Also

80ನೇ ಸ್ವಾತಂತ್ರ‍್ಯ ದಿನಾಚರಣೆ – ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆಶಿ

Spread the loveಬೆಂಗಳೂರು: ಇಂದು ದೇಶದೆಲ್ಲೆಡೆ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ. ಇದರ ಅಂಗವಾಗಿ ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ