ದಾವಣಗೆರೆ,: ಯಾವುದೇ ರೈತರು ಆತುರದ ಬುದ್ಧಿಗೆ ಬೆಲೆಕೊಟ್ಟು ತಮ್ಮ ಬೆಳೆಗಳನ್ನು ನಾಶ ಪಡಿಸಿಕೊಳ್ಳಬಾರದು. ಕೊರೊನಾ ಲಾಕ್ಡೌನ್ ಅನಿರೀಕ್ಷಿತವಾಗಿದ್ದು, ಯಾರೂ ಸಹ ಇದನ್ನು ನಿರೀಕ್ಷಿಸಿರಲಿಲ್ಲ.ಲಾಕ್ಡೌನ್ ಮುಗಿದ ಮೇಲೆ ರೈತರ ಫಸಲುಗಳಿಗೆ ಒಳ್ಳೆಯ ಬೆಲೆ ಬಂದೇ ಬರುತ್ತದೆ. ಆತುರಕ್ಕೆ ಸ್ವಯಂಪ್ರೇರಿತರಾಗಿ ಬೆಳೆ ನಾಶ ಪಡಿಸಿಕೊಂಡರೆ ಪರಿಹಾರ ಸಾಧ್ಯವಿಲ್ಲ.ಪ್ರಾಕೃತಿಕ ನಷ್ಟಕ್ಕೆ ಮಾತ್ರ ಪರಿಹಾರ ಒದಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಲಾಕ್ಡೌನ್ ಹಿನ್ನಲೆಯಲ್ಲಿ ರೈತರ ಪರಿಸ್ಥಿತಿ,ಕೃಷಿ ಚಟುವಟಿಕೆ ಕುರಿತು ಜಿಲ್ಲೆಯ ಕೃಷಿ,ತೋಟಗಾರಿಕೆ ಅಧಿಕಾರಿಗಳು,ಜನಪ್ರತಿನಿಧಿಗಳ …
Read More »ದಾವಣಗೆರೆ:ಮನೆಯಿಂದ ಹೊರಗಡೆ ಬಂದವ್ರ ಮೇಲೆ ಡ್ರೋಣ್ ಕಣ್ಣು
ದಾವಣಗೆರೆ: ಕೋವಿಡ್-19 ಸೋಂಕು ಹರಡದಂತೆ ಲಾಕ್ ಡೌನ್ ಮಾಡಲಾಗಿದ್ದರೂ ಜನ ಹೊರ ಬರುತ್ತಿರುವುದನ್ನು ಮಟ್ಟ ಹಾಕಲು ಎಸ್‍ಪಿ ಹನುಮಂತರಾಯ ನೇತೃತ್ವದ ತಂಡ ಡ್ರೋಣ್ ಕ್ಯಾಮೆರಾ ಮೂಲಕ ಹದ್ದಿನ ಕಣ್ಣಿಟ್ಟಿದೆ. ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಹಂತವಾಗಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಕ್ಯಾಮೆರಾವನ್ನು ನಗರದಲ್ಲಿ ಹಾರಿಸಲಾಯಿತು. ಆಜಾದ್ ನಗರ, ಬಾಷಾನಗರ, ವೆಂಕೊಬ ಕಾಲೊನಿ …
Read More »ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮಕ್ಕಳ ಸೇರಿ ಮೂವರು ಸೋಂಕಿನಿಂದ ಗುಣಮುಖ
ದಾವಣಗೆರೆ: ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮಕ್ಕಳ ಸೇರಿ ಮೂವರು ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಸಂಸದರು ಆರೋಗ್ಯ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಮಗಳು ಮತ್ತು ಮಗ ಸೇರಿದಂತೆ ಇನ್ನೊಬ್ಬ ಯುವಕ 16 ದಿನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗುತ್ತಿದ್ದಾರೆ. ಹಗಲಿರುಳು ಶ್ರಮಿಸಿದ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಧನ್ಯವಾದ ಎಂದು ಅವರು ಹೇಳಿದ್ದಾರೆ. ನಮ್ಮ ಜಿಲ್ಲೆ ಸದ್ಯ ಕೊರೊನಾ ಮುಕ್ತ. ಜನರು ಇನ್ನಷ್ಟು ಜಾಗೃತಿಯಿಂದ …
Read More »ದಾವಣಗೆರೆ:ವರುಣನ ಆರ್ಭಟ – ಮನೆಗೆ ನುಗ್ಗಿದ ನೀರು,,,,,..
ದಾವಣಗೆರೆ: ಕೊರೊನಾ ಅಬ್ಬರದ ಮಧ್ಯೆ ವರುಣರಾಯ ಕೂಡ ರಾಜ್ಯದ ಕೆಲವೆಡೆ ಅಬ್ಬರಿಸಿದ್ದಾನೆ. ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ಆದರೆ ದಾವಣಗೆರೆಯಲ್ಲಿ ರಾತ್ರಿ ಇಡೀ ಸತತ ಮಳೆ ಸುರಿದಿದ್ದು, ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ದಾವಣಗೆರೆ ನಗರದ ಬೇತೂರ ರಸ್ತೆಯ ಆನೆಕೊಂಡ ಎಕೆ ಕಾಲೋನಿಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಜನರು ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಕಡೆ ರಸ್ತೆಯಲ್ಲಿ …
Read More »ಥಂಬ್ ಹಾಕಲು ಬಂದಾಗ ಸೊಂಟ ಮುಟ್ಟಿ ಕಂಪ್ಯೂಟರ್ ಆಪರೇಟರ್‌ನಿಂದ ಕಿರುಕುಳ
ದಾವಣಗೆರೆ: ಕಂಪ್ಯೂಟರ್ ಆಪರೇಟರ್ ಅಟೆಂಡರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಕಂಪ್ಯೂಟರ್ ಆಪರೇಟರ್ ವೆಂಕಟೇಶ್ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ವ್ಯಕ್ತಿ. ಕಳೆದ ಫೆಬ್ರವರಿ 15 ಮತ್ತು 18 ರಂದು ನಡೆದ ಲೈಂಗಿಕ ಕಿರುಕುಳ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ವೆಂಕಟೇಶ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಅಟೆಂಡರ್ …
Read More »ದಾವಣಗೆರೆಯಲ್ಲಿ ಕರೋನಾಕ್ಕೆ ಲಸಿಕೆ, ಹಾಕಿಸಿಕೊಂಡವರೇ ಪುಣ್ಯವಂತರು!
ದಾವಣಗೆರೆ ಖಾಸಗಿ ಶಾಲೆಯೊಂದರಲ್ಲಿ ಕರೋನಾಕ್ಕೆ ಲಸಿಕೆ ಸಿಕ್ಕಿದೆ. ಆಯುರ್ವೇದ ವೈದ್ಯರೊಬ್ಬರು ಅನೇಕ ಜನರಿಗೆ ಲಸಿಕೆ ಹಾಕಿದ್ದಾರೆ.ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇದಾದ ಮೇಲೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಒಟ್ಟಿನಲ್ಲಿ ಕರೋನಾ ಭೀತಿ ನಡುವೆ ಇದೊಂದು ಸುದ್ದಿ ಒಂದಿಷ್ಟು ಹಲ್ ಚಲ್ ಗೆ ಕಾರಣವಾಗಿತ್ತು.
Read More »ಕೊರೋನಾ ಆತಂಕ : ಬೆಣ್ಣೆನಗರಿಗಿಲ್ಲ ಮಾರಕ ರೋಗದ ಭೀತಿ..!!
ಕೊರೋನಾ ಆತಂಕ : ಬೆಣ್ಣೆನಗರಿಗಿಲ್ಲ ಮಾರಕ ರೋಗದ ಭೀತಿ..!! ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿರುವ ಕಿಲ್ಲರ್ ಕೊರೋನಾ ವೈರಸ್ ಆತಂಕ ಬೆಣ್ಣೆನಗರಿ ದಾವಣಗೆರೆಯಿಂದ ದೂರಾಗಿದೆ.ಈಗ ಈ ಮಹಾಮಾರಿ ಕೊರೋನಾ ಆತಂಕದಿಂದ ದಾವಣಗೆರೆ ಜಿಲ್ಲಾಡಳಿತ ನಿರಾಳವಾಗಿದೆ.ವಿದೇಶಕ್ಕೆ ತೆರಳಿ ವಾಪಸಾಗಿದ್ದ 12 ಮಂದಿಯಲ್ಲಿ ಕೊರೋನಾ ಸೋಂಕು ನೆಗೆಟಿವ್ ಇದ್ದು, ಈ ಬಗ್ಗೆ ದಾವಣಗೆರೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.14 ಹಾಗೂ 28 ದಿನಗಳ ಅವಧಿಯ ತಪಾಸಣೆ ಮುಗಿದಿದ್ದು, 12 ಮಂದಿಗೂ ಯಾವುದೇ ಸೋಂಕಿಲ್ಲ …
Read More »