Breaking News

ಥಂಬ್ ಹಾಕಲು ಬಂದಾಗ ಸೊಂಟ ಮುಟ್ಟಿ ಕಂಪ್ಯೂಟರ್ ಆಪರೇಟರ್‌ನಿಂದ ಕಿರುಕುಳ

Spread the love

ದಾವಣಗೆರೆ: ಕಂಪ್ಯೂಟರ್ ಆಪರೇಟರ್ ಅಟೆಂಡರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಕಂಪ್ಯೂಟರ್ ಆಪರೇಟರ್ ವೆಂಕಟೇಶ್ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ವ್ಯಕ್ತಿ. ಕಳೆದ ಫೆಬ್ರವರಿ 15 ಮತ್ತು 18 ರಂದು ನಡೆದ ಲೈಂಗಿಕ ಕಿರುಕುಳ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ವೆಂಕಟೇಶ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಹಿಳೆ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕಂಪ್ಯೂಟರ್ ಆಪರೇಟರ್ ವೆಂಕಟೇಶ್ ಕಿರುಕುಳ ನೀಡುತ್ತಿದ್ದಾನೆ. ಪ್ರತಿದಿನ ಥಂಬ್ ಮೂಲಕ ಹಾಜರಾತಿ ಹಾಕುವ ವೇಳೆ ಮಹಿಳೆ ಸೊಂಟ ಮುಟ್ಟುತ್ತಿದ್ದನು. ಮಹಿಳೆ ವಿರೋಧ ಮಾಡಿದರೂ ಕಾಮುಕ ವೆಂಕಟೇಶ್ ಮಾತ್ರ ಮತ್ತೆ ಮತ್ತೆ ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದನು.

ಕಳೆದ ಫೆಬ್ರವರಿ 15 ಮತ್ತು 18 ರಂದು ಇದೇ ರೀತಿ ಮಾಡಿದ್ದಾನೆ. ನಂತರ ಮಹಿಳೆ ಹಾಜರಾತಿ ಹಾಕುವುದಕ್ಕೆ ಹೋಗಿಲ್ಲ. ಬಳಿಕ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯವನ್ನ ಪಡೆದು ಇದೀಗ ಆತನ ಬಣ್ಣವನ್ನ ಬಯಲು ಮಾಡಿದ್ದಾರೆ. ನನಗೆ ವೆಂಕಟೇಶ್‍ನಿಂದ ಲೈಂಗಿಕ ಕಿರುಕುಳ ಹೆಚ್ಚಾಗಿದೆ. ನನಗೆ ನ್ಯಾಯಬೇಕು ಎಂದು ನೊಂದ ಮಹಿಳೆ ಆಗ್ರಹಿಸಿದ್ದಾರೆ.

ಮಹಿಳೆ ಕಚೇರಿಯಲ್ಲಿ ನಡೆಯ ಘಟನೆಯ ಬಗ್ಗೆ ಕುಟುಂಬದಲ್ಲಿ ತಿಳಿಸಿದ್ದಾರೆ. ಆಗ ಕುಟುಂಬದವರು ಮಹಿಳೆ ಬೆಂಬಲಕ್ಕೆ ನಿಂತಿದ್ದಾರೆ. ವೆಂಕಟೇಶ್ ಪ್ರಭಾವಿ ವ್ಯಕ್ತಿಯಾಗಿದ್ದು, ನಮಗೆ ಜೀವ ಬೆದರಿಕೆ ಹಾಕಿದ್ದಾನೆ. ಕಾನೂನಿನ ಮೂಲಕ ಆತನಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಮಹಿಳೆ ಪತಿ ಸುರೇಶ್ ಆಗ್ರಹಿಸಿದ್ದಾರೆ.

ಈ ಸಂಬಂಧ ಈಗಾಗಲೇ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ಸಿಇಓ ಅವರು, ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗ್ರಾಮ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.

FacebookTwitter


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ