ಚಿಕ್ಕೋಡಿ (ಬೆಳಗಾವಿ) : ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಷಡ್ಯಂತ್ರದ ವಿರುದ್ಧ ಅಥಣಿ ಮತಕ್ಷೇತ್ರದ ರೈತಬಾಂಧವರು ಹಾಗೂ ತಾಲೂಕಿನ ಅಭಿಮಾನಿಗಳು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲರಿಗೂ ನಮ್ಮ ಕುಟುಂಬದ ಪರವಾಗಿ ತುಂಬು ಹೃದಯದ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ಶಾಸಕ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಅವರು ಹೇಳಿದ್ದಾರೆ.
ಜಿಲ್ಲೆಯ ಅಥಣಿ ಪಟ್ಟಣದ ಅವರ ನಿವಾಸದಲ್ಲಿ ಮಾತನಾಡಿದರು. ನಿಮ್ಮ ತಂದೆಯ ವಿರುದ್ಧ ಹಾಗೂ ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಸುದ್ದಿ ಬಂತು. ಈ ಬಗ್ಗೆ ನನಗೆ ಎಫ್ಐಆರ್ ಕಾಪಿಯಾಗಲಿ, ನೋಟಿಸ್ ಆಗಲಿ ಬಂದಿಲ್ಲ. ಇವತ್ತು ಅಥವಾ ನಾಳೆ ಬಂದರೆ ನಾವು ಕಾನೂನಿಗೆ ಗೌರವ ಕೊಡುತ್ತೇವೆ. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ನಡೆದಿರುವ ಘಟನೆಯ ಹಿಂದೆ ಯಾರಿದ್ದಾರೆ. ಯಾರು ಅವರಿಗೆ ಪ್ರಚೋದನೆ ನೀಡಿ ಅವರನ್ನು ನಮ್ಮ ಮನೆಗೆ ಕಳುಹಿಸಿದ್ದರು. ಘಟನೆ ಆಗುವುದಕ್ಕೆ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆಯಲ್ಲಿ ಬಹಿರಂಗವಾಗಬೇಕು. ನಂತರ ನಿಮ್ಮೆಲ್ಲರನ್ನು ಕರೆದು ಅವರ ಹೆಸರನ್ನು ಪ್ರಸ್ತಾಪ ಮಾಡುವಂತಹ ಕೆಲಸ ಮಾಡುತ್ತೇವೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನಮ್ಮ ಮೇಲೆ ಆರೋಪ ಬಂದಿದೆ. ಖಂಡಿತಾ ನನಗೆ ವಿಶ್ವಾಸವಿದೆ. ನಮ್ಮ ತಂದೆಯವರು ಹಾಗೂ ನಾನು ಈ ಆರೋಪದಿಂದ ಮುಕ್ತರಾಗುತ್ತೇವೆ ಎಂದಿದ್ದಾರೆ.
Laxmi News 24×7