ದಾವಣಗೆರೆ: ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮಕ್ಕಳ ಸೇರಿ ಮೂವರು ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಸಂಸದರು ಆರೋಗ್ಯ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ನನ್ನ ಮಗಳು ಮತ್ತು ಮಗ ಸೇರಿದಂತೆ ಇನ್ನೊಬ್ಬ ಯುವಕ 16 ದಿನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗುತ್ತಿದ್ದಾರೆ. ಹಗಲಿರುಳು ಶ್ರಮಿಸಿದ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಧನ್ಯವಾದ ಎಂದು ಅವರು ಹೇಳಿದ್ದಾರೆ.
ನಮ್ಮ ಜಿಲ್ಲೆ ಸದ್ಯ ಕೊರೊನಾ ಮುಕ್ತ. ಜನರು ಇನ್ನಷ್ಟು ಜಾಗೃತಿಯಿಂದ ಇರಬೇಕು. ಕೊರೊನಾ ತೊಲಗಿಸಲು ನಾವೆಲ್ಲ ಶತಸಿದ್ಧ ಎಂದು ಎಂದಿದ್ದಾರೆ. ಮೂವರ ಮಾದರಿಯನ್ನು ಶಿವಮೊಗ್ಗ ಲ್ಯಾಬ್ಗೆ ಕಳಿಸಲಾಗಿತ್ತು. ಪುಣೆಗೆ ಮತ್ತೊಂದು ಬಾರಿ ಮಾದರಿ ಕಳುಹಿಸಿದ್ದೇವೆ. ಅದರ ವರದಿ ಬಂದ ಬಳಿಕ ರಾಜ್ಯ ಪಟ್ಟಿಯಲ್ಲಿ ಪ್ರಕಟಿಸುತ್ತೇವೆ ಅಂತ ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.