Breaking News

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.

Spread the love

ಹುಕ್ಕೇರಿ : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.
ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ ತಮ್ಮ ಜೀವನವನ್ನು ರೂಪಿಸಿ ಕೋಳ್ಳಬೇಕು ಎಂದು ಜಿಲ್ಲಾ ಮುಸ್ಲಿಂ ಕಲ್ಯಾಣ ಮತ್ತು ಶಿಕ್ಷಣ ಸಂಸ್ಥೆಗಳ ಅದ್ಯಕ್ಷ ಇಕ್ಬಾಲ್ ಅಹ್ಮದ ಪೀರಜಾದೆ ಹೇಳಿದರು.
ಹುಕ್ಕೇರಿ ನಗರದ ಟಿಪ್ಪು ಸುಲ್ತಾನ ಪ್ರೌಢ ಶಾಲೆ ವಿದ್ಯಾರ್ಥಿಗಳು ಹಮ್ಮಿಕೊಂಡ ವಿಜ್ಞಾನ ಪ್ರದರ್ಶನ ಮತ್ತು ಆಹಾರ ಮೇಳವನ್ನು ಸಂಸ್ಥೆಯ ಅದ್ಯಕ್ಷ ಇಕ್ಬಾಲ್ ಅಹ್ಮದ ಪೀರಜಾದೆ ರೀಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶಾಹೀದರಜಾ ಪೀರಜಾದೆ ಮಾತನಾಡಿ ವಿದ್ಯಾರ್ಥಿಗಳು ಆಹಾರ ಮತ್ತು ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ ಗಳನ್ನು ಪ್ರದರ್ಶಿಸಿ ಮಾದರಿಯಾಗಿದ್ದಾರೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಧೈರ್ಯ ಮಾಡಬೇಕು ಎಂದರು
ಗಣ್ಯರು ವಿವಿಧ ರೀತಿಯ ಆಹಾರ ಮೇಳಗಳ ಮಾಹಿತಿ ಪಡೆದು ರುಚಿ ಸವಿದರು
ಅದ್ಯಕ್ಷ ಇಕ್ಬಾಲ್ ಅಹ್ಮದ ಪೀರಜಾದೆ ಮಾತನಾಡಿ ಇಂದು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಆಹಾರ ಮತ್ತು ವಿಜ್ಞಾನ ಪ್ರದರ್ಶನಗಳಲ್ಲಿ ಸ್ವತಃ ಹಾಗೂ ಪಾಲಕರ ಸಹಕಾರದಿಂದ ಭಾಗವಹಿಸಿ ಸಾಕಷ್ಟು ಅನುಭವ ಪಡೆದಿದ್ದಾರೆ ಇದೆ ರೀತಿ ಸತತ ಪ್ರಯತ್ನದಿಂದ ಮುಂಬರುವ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ ಸಂಸ್ಥೆಗೆ ಮತ್ತು ಪಾಲಕರಿಗೆ ಗೌರವ ಸಲ್ಲಿಸಬೇಕು ಎಂದರು ( )
ಆಹಾರ ಮೇಳದಲ್ಲಿ ಚಾಟ್ಸ ಸೇರಿದಂತೆ ಸಿಹಿ ತಿಂಡಿಗಳೊಂದಿಗೆ ಭಕ್ಷ್ಯಗಳು ಮತ್ತು ಪಾನೀಯಗಳು ಸೇವಿಸಿದ ತಿರ್ಪುಗಾರರು ಮತ್ತು ಗಣ್ಯರು ಮೇಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಇರ್ಷಾದ ಮೋಕಾಶಿ, ಡಿ ಆರ್ ಖಾಜಿ, ಕಲಂದರ ಮೋಕಾಶಿ, ಹುಸೇನಸಾಬ ಶೇಖಬಡೆ, ಜಹಾಂಗೀರ ಇನಾಂದಾರ, ಸಲಿಂ ನದಾಫ್, ಹಜರತ್ ಪೀರಜಾದೆ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಡಿಗೇರ, ಬಿರಾದಾರ ಹಾಗೂ ಟಿಪ್ಪು ಸುಲ್ತಾನ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು, ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ