Breaking News

ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಚಿಕ್ಕೋಡಿಯಲ್ಲಿ ಅದ್ದೂರಿಯ ಸ್ವಾಗತ

Spread the love

ಚಿಕ್ಕೋಡಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ಚಿಕ್ಕೋಡಿಗೆ ಆಗಮಿಸಿದ ವೀರ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು.
ನಿಪ್ಪಾಣಿಯಿಂದ ಆಗಮಿಸಿದ ಜ್ಯೋತಿಯನ್ನು ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ,ತಹಶೀಲ್ದಾರ ರಾಜೇಶ ಬುರ್ಲಿ,ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ,ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಸೇರಿದಂತೆ ವಿವಿಧ ಗಣ್ಯರು ಜ್ಯೋತಿಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.ವೀರಜ್ಯೋತಿಯು ಬಸ್ ನಿಲ್ದಾಣದ ಮೂಲಕ ಕೆಸಿ ರಸ್ತೆ,ಗುರವಾರ ಪೇಠ ಮೂಲಕ ಅಂಕಲಿ ಕೂಟದವರೆಗೂ ಹೋಗಿ ಸಂಪನ್ನಗೊಂಡಿತ್ತು.
ಇದೇ ಸಂದರ್ಭದಲ್ಲಿ ಲಕ್ಷ್ಮಣರಾವ ಚಿಂಗಳೆ ಮಾತನಾಡಿ ಸಂಗೊಳ್ಳಿ ರಾಯಣ್ಣ ಒಂದು ಜಾತಿ,ಧರ್ಮ,ಸಂಘಟನೆಗೆ,ರಾಜ್ಯಕ್ಕೆಸೀಮಿತವಾದ ಭಕ್ತನಲ್ಲ.ಇಡೀ ಭಾರತ ದೇಶದಲ್ಲಿ ದೇಶದ ಸಂರಕ್ಷಣೆಗಾಗಿ,ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿ ಸಂಗೊಳ್ಳಿ ರಾಯಣ್ಣ.ಸಿದ್ದರಾಮಯ್ಯನವರ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷಕೂಡಾ ಆಚರಣೆ ಮಾಡುತ್ತಿದೆ.ರಾಯಣ್ಣ ಸಮಾಧಿಸ್ಥಳವಾದ ನಂದಗಡದಿಂದ ಪ್ರಾರಂಭವಾದ ಜ್ಯೋತಿಯು ೧೫ ತಾಲೂಕುಗಳಲ್ಲಿ ‌ಸಂಚರಿಸುತ್ತಿದೆ.ಬೈಲಹೊಂಗಲದಲ್ಲಿ‌ ಉತ್ಸವದಲ್ಲಿ ಮುಕ್ತಾಯ ಸಮಾರಂಭದಲ್ಲಿ ನಡೆಯಲಿದೆ ಎಂದರು.
ಬಳಿಕ ಕರ್ನಾಟಕ ರಾಜ್ಯ ಕುರುಬರ ಸಂಘದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ
ಸಂತೋಷ ಪೂಜೇರಿ ಮಾತನಾಡಿ ಚಿಕ್ಕೋಡಿ ಪಟ್ಟಣದಲ್ಲಿ ತಾಲೂಕಾಡಳಿತ ಹಾಗೂ ಹಾಲುಮತ ಸಮಾಜದ ಬಾಂಧವರಿಂದ ವೀರಜ್ಯೋತಿಗೆ ಸ್ವಾಗತವನ್ನು ಕೋರಲಾಯಿತು ಹಾಗೂ ಚಿಕ್ಕೋಡಿ ಪಟ್ಟಣದಲ್ಲಿ ಡೊಳ್ಳುವಾದ್ಯಗಳೊಂದಿಗೆ ಮೆರವಣಿಗೆಯನ್ನು ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಜಗದೀಶ ಈಟ್ಟಿ, ಪ್ರವೀಣ ಗಂದ, ಸಂತೋಷ ಕಾಂಬಳೆ, ಬಿ ಎ ನಾಯಿಕವಾಡಿ,ಗಣೇಶ ಮೊಹಿತೆ,ಶಿವು ಮರ್ಯಾಯಿ,ಮುರಾರಿ ಶಿಂಗಾಡೆ,ಚಂದ್ರಕಾಂತ ಹುಕ್ಕೇರಿ, ಪ್ರತಾಪ ಪಾಟೀಲ, ಶಂಕರ ಅವಾಡಖಾನ,ಸಂಜು ಅವಾಡಖಾನ,ರಾಕೇಶ ಡಂಗೇರ,ತುಕಾರಾಮ ವಾಲಿಕರ,ಪ್ರಕಾಶ ವೆಂಕಪ್ಪಗೊಳ,ಕಾಣ್ಣಪ್ಪ ಬಾಡಕರ,ರಮೇಶ ಡಂಗೆರ,ರಮೇಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ