Breaking News

ರಾಷ್ಟ್ರಮಟ್ಟದ ಜೂಡೋ ಸ್ಪರ್ಧೆಯಲ್ಲಿ ಬೆಳಗಾವಿಯ ಕಾವೇರಿ ಸೂರ್ಯವಂಶಿಗೆ ಕಂಚಿನ ಪದಕ

Spread the love

ರಾಷ್ಟ್ರಮಟ್ಟದ ಜೂಡೋ ಸ್ಪರ್ಧೆಯಲ್ಲಿ ಬೆಳಗಾವಿಯ ಕಾವೇರಿ ಸೂರ್ಯವಂಶಿಗೆ ಕಂಚಿನ ಪದಕ
ಪಂಜಾಬ್‌ನ ಲೂಧಿಯಾನದಲ್ಲಿ ನಡೆಯುತ್ತಿರುವ 69ನೇ ರಾಷ್ಟ್ರಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಬೆಳಗಾವಿ ಡಿವೈಇಎಸ್ (DYES) ಕ್ರೀಡಾ ವಸತಿ ನಿಲಯದ 12 ವರ್ಷದ ವಿದ್ಯಾರ್ಥಿನಿ ಕಾವೇರಿ ಸೂರ್ಯವಂಶಿ ಜುಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದಾಳೆ.
32 ಕೆಜಿ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕಾವೇರಿ, ಆರಂಭಿಕ ಹಂತದ ಪಂದ್ಯಗಳಲ್ಲಿ ತೆಲಂಗಾಣ ಹಾಗೂ ಜಮ್ಮು-ಕಾಶ್ಮೀರದ ಸ್ಪರ್ಧಿಗಳನ್ನು ‘ಇಪ್ಪೋನ್’ ತಂತ್ರದ ಮೂಲಕ ಸೋಲಿಸಿ ಪ್ರಾಬಲ್ಯ ಮೆರೆದಳು. ಕ್ವಾರ್ಟರ್ ಫೈನಲ್‌ನಲ್ಲಿ ಹರಿಯಾಣದ ಸ್ಪರ್ಧಿ ವಿರುದ್ಧ ಅಲ್ಪ ಅಂತರದ ಸೋಲು ಅನುಭವಿಸಿದರೂ, ನಂತರದ ರಿಪಚೇಜ್ ಸುತ್ತಿನಲ್ಲಿ ಪಂಜಾಬ್ ಮತ್ತು ಕಂಚಿನ ಪದಕದ ಹಣಾಹಣಿಯಲ್ಲಿ ದೆಹಲಿಯ ಭಾಗ್ಯ ಅವರನ್ನು ಮಣಿಸಿ ಪದಕವನ್ನು ತನ್ನದಾಗಿಸಿಕೊಂಡಳು. ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಎನ್.ಐ.ಎಸ್ ತರಬೇತುದಾರರಾದ ರೋಹಿಣಿ ಪಾಟೀಲ್ ಮತ್ತು ಕುತುಜಾ ಮುಲ್ತಾನಿ ಅವರಿಂದ ತರಬೇತಿ ಪಡೆಯುತ್ತಿರುವ ಕಾವೇರಿಗೆ, ಉಪನಿರ್ದೇಶಕ ಶ್ರೀನಿವಾಸ್ ಬಿ. ಅವರ ನಿರಂತರ ಬೆಂಬಲ ಹಾಗೂ ಮಾರ್ಗದರ್ಶನ ಲಭಿಸಿದೆ. ತಳಮಟ್ಟದ ಕ್ರೀಡಾ ತರಬೇತಿಯ ಯಶಸ್ಸಿಗೆ ಈ ಪದಕ ಸಾಕ್ಷಿಯಾಗಿದ್ದು, ಕಾವೇರಿಯ ಈ ಸಾಧನೆಯು ಬೆಳಗಾವಿ ಜಿಲ್ಲೆ ಹಾಗೂ ಇಡೀ ಕರ್ನಾಟಕ ಜುಡೋ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ