Breaking News

ರಾಷ್ಟ್ರೀಯ

ಎಳೇಬೈಲ್‍ನಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ. ಶಾಸಕರ ನಿಧಿ

ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ನಿಧಿಯ ವತಿಯಿಂದ 5 ಲಕ್ಷ ರೂ. ನೀಡಲಾಗಿದೆ. ಮೊದಲ ಕಂತಿನಲ್ಲಿ 2.77 ಲಕ್ಷ ರೂ,ಗಳ ಚೆಕ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ದೇವಸ್ಥಾನದ ಕಮೀಟಿಯವರಿಗೆ ಮಂಗಳವಾರ ಹಸ್ತಾಂತರಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಮನೋಹರ್ ಬೆಳಗಾಂವ್ಕರ್, ಮೃಣಾಲ ಹೆಬ್ಬಾಳಕರ್, ಮಹೇಶ ಪಾಟೀಲ, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

Read More »

ನಾನು ಅಂಬರೀಶ್ ಮಾಡಬಾರದನ್ನೂ ಮಾಡಿದ್ದೇವೆ’: ಸಿಎಂ ಬೊಮ್ಮಾಯಿ

ಬೆಂಗಳೂರು, ಫೆ 28: ಕನ್ನಡ ಚಿತ್ರೋದ್ಯಮದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಂಬರೀಶ್ ಅವರ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಕಾರ್ಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫ್ಲ್ಯಾಷ್ ಬ್ಯಾಕಿಗೆ ಹೋಗಿದ್ದಾರೆ. ತಮ್ಮ ಮತ್ತು ಅಂಬರೀಶ್ ಅವರ ನಲವತ್ತು ವರ್ಷದ ಒಡನಾಟದ ಬಗ್ಗೆ ರಸವತ್ತಾಗಿ ಸಭೆಯಲ್ಲಿ ವಿವರಣೆಯನ್ನು ನೀಡಿದ ಬೊಮ್ಮಾಯಿ ಅವರ ಹೇಳಿಕೆಗೆ ನೆರೆದಿದ್ದ ಜನಸ್ತೋಮ ಚಪ್ಪಾಳೆಯ ಮೇಲೆ ಚಪ್ಪಾಳೆಯನ್ನು ಹೊಡೆದಿದೆ. “ನನ್ನ ಆತ್ಮೀಯ ಸ್ನೇಹಿತ ಅಂಬರೀಶ್, ನಮ್ಮ …

Read More »

ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು

ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು ಗಜಾನನ ನಾಯಿಕ್ ಕೊಲೆಯಾದ ದುರ್ದೈವಿ. ಸುಮಾರು ಅನೇಕ ವರ್ಷಗಳಿಂದ ಗಜಾನನ ನಾಯಕ್ ಹಾಗೂ ಅವರ ಪತ್ನಿ ಬೇರೆಯಾಗಿಯೇ ವಾಸಮಾಡುತ್ತಿದ್ದರು. ಗಜಾನನ ತಮ್ಮ ಮಗನೊಂದಿಗೆ ವಾಸ ಮಾಡುತ್ತಿದ್ದರು. ನಿನ್ನೆ ಮಗ ಉಜಗಾಂವ್‍ಗೆ ಹೋದ ಸಂದರ್ಭದಲ್ಲಿ ಇಂದು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ತಂದೆ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಡಿಸಿಪಿ ರವಿಂದ್ರ ಗಡಾದಿ, ಎಸಿಪಿ …

Read More »

ಗೋಕಾಕ ಮುಪ್ಪಯ್ಯನ ಮಠದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ : ರಾಚೋಟಿ ಶ್ರೀಗಳಿಂದ ಚಾಲನೆ

ಗೋಕಾಕ : ನಗರದ ಸೋಮವಾರ ಪೇಟೆಯ ಅಂಗನವಾಡಿ ಕೇಂದ್ರ ಸಂಖ್ಯೆ 176 ಮತ್ತು 177 ರ ಮಕ್ಕಳಿಗೆ ರವಿವಾರದಂದು ಶ್ರೀ ಮುಪ್ಪಯ್ಯನವರ ಹಿರೇಮಠದಲ್ಲಿ ಪೂಜ್ಯ ಶ್ರೀ ರಾಚೋಟಿದೇವರು ಪೋಲಿಯೋ ಹನಿ ನೀಡುವ ಮೂಲಕ ಫಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಿರ್ಮಲಾ ಸುಭಂಜಿ, ಲಕ್ಷ್ಮೀ ದೇಶನೂರ, ಮುಖಂಡರಾದ ಮಲ್ಲಿಕಾರ್ಜುನ ಹೊಸಪೇಠ, ಧರೀಶ ಕಲಘಾಣ, ಬಸವರಾಜ ಶೇಗುಣಸಿ, ಸೋಮಶೇಖರ ಮಗದುಮ್ಮ, ಬಸವರಾಜ ದೇಶನೂರ, ಗಣೇಶ ಕರೋಶಿ, …

Read More »

ನ್ಯಾಯವಾದಿಯಿಂದ ಮಹಿಳೆ ಮೇಲೆ ಅತ್ಯಾಚಾರ; ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಗೋಕಾಕ : ಮನೆಯಲ್ಲಿ ರಾತ್ರಿ ಮಕ್ಕಳೊಂದಿಗೆ ಮಲಗಿದ್ದಾಗ ಮಹಿಳೆ ಮೇಲೆ ಅತ್ಯಾಚಾರ ಏಸಗಿದ ಘಟನೆ ಘಟಪ್ರಭ ಪೊಲೀಸ್‌ ಠಾಣೆ ವ್ಯಾಪ್ತಿಯ ಶಿಂಗಳಾಪುರ ಗ್ರಾಮದಲ್ಲಿ ಈಚೆಗೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.   22.02.2022ರ ರಾತ್ರಿ ಸಂತ್ರಸ್ತೆ ಮಹಿಳೆ ಮಕ್ಕಳೊಂದಿಗೆ ಮಲಗಿದ್ದ ವೇಳೆ ಬಾಗಿಲು ಬಡೆದು ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಏಸಗಿದ್ದಾನೆ. ಸಂತ್ರಸ್ತೆ ಮಹಿಳೆ ಕಿರುಚಿದಾಗ ಪಕ್ಕದ ಮನೆಯವರು ಸಹಾಯಕ್ಕೆ ಬಂದಿದ್ದು, ಆರೋಪಿಯಾಗಿರುವ ವಕೀಲ ಮಹಮ್ಮದ ಶಫಿ …

Read More »

ಅಕ್ರಮ ಸಂಬಂಧ’ವನ್ನು ವಿರೋಧಿಸಿದ ಪತ್ನಿಯ ತಲೆ ಕಡಿದ ಪತಿ!

ಪಾಟ್ನಾ(ಬಿಹಾರ): ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಮಿರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ತಿಗೆಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದ ಪತ್ನಿಯ ತಲೆ ಕಡಿದು ಕೊಲೆ ಮಾಡಿದ್ದಲ್ಲದೇ, ಸಾಕ್ಷ್ಯ ನಾಶಪಡಿಸಲು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘಟನೆ ನಡೆದಿದೆ.   ಸಂಜು ದೇವಿ ಮೃತ ಮಹಿಳೆ. ಸಂಜು ದೇವಿಯನ್ನು ಮಿರ್‌ಗಂಜ್‌ನ ಕಾಸಿ ಸಮೈಲ್ ಗ್ರಾಮದಲ್ಲಿ ವಿಜಯ್ ಗೊಂಡ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಹೀಗಿದ್ದರೂ ಪತಿಯು ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ …

Read More »

ಅಕ್ರಮದಲ್ಲಿ ಸಚಿವರು, ಶಾಸಕರ ಪಾತ್ರದ ಬಗ್ಗೆ ತನಿಖೆಯಾಗಲಿ: ಎಎಪಿ

ಬೆಂಗಳೂರು: ಎಸಿಬಿ ಪತ್ತೆ ಮಾಡಿರುವ ಬಿಬಿಎಂಪಿಯ ಅಕ್ರಮಗಳಲ್ಲಿ ಪ್ರಭಾವಿ ಸಚಿವರು ಹಾಗೂ ಬೆಂಗಳೂರಿನ ಶಾಸಕರುಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಕೇವಲ ಅಧಿಕಾರಿಗಳನ್ನು ಬಲಿಪಶು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಕಿಡಿಕಾರಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಟಿ.ನಾಗಣ್ಣ ಅವರು, ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ 27 ಕಚೇರಿಗಳ ಮೇಲೆ ದಾಳಿ ಮಾಡಿ, ಸುಮಾರು 300 ಕೋಟಿ ರೂ. ಗಿಂತಲೂ ಹೆಚ್ಚಿನ ಮೊತ್ತದ ಹಲವು ಅಕ್ರಮಗಳನ್ನು ಬಯಲು ಮಾಡಿರುವುದು …

Read More »

ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ: ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್‌ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು.   ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಯುದ್ಧ ರಾಷ್ಟ್ರದಲ್ಲಿ …

Read More »

ಎನ್‌ಸಿಡಿಎಫ್‌ಐ ನಿರ್ದೇಶಕರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ

ಬೆಂಗಳೂರು : ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳ ನಿಯಮಿತ(ಎನ್‌ಸಿಡಿಎಫ್‌ಐ) ಆನಂದ್ (ಗುಜರಾತ್ ರಾಜ್ಯ) ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಇಂದು ಗುರುವಾರದಂದು ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳದಿoದ ಶಾಮಲ್ ಬಾಯ್ ಪಟೇಲ್, ಕರ್ನಾಟಕ ಸಹಕಾರ ಎಣ್ಣೆ ಬೀಜ …

Read More »

ಸುದ್ದಿ ತಾಣವೊಂದರ ವಿರುದ್ಧ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ ಭಾರತ್ ಬಯೋಟೆಕ್​; ತೆಲಂಗಾಣ ಕೋರ್ಟ್ ಹೇಳಿದ್ದೇನು?

ದಿ ವೈರ್​ ಸುದ್ದಿ ಮಾಧ್ಯಮದ ಪ್ರಕಾಶಕರು, ಸಂಪಾದಕರು ಮತ್ತು ಅಲ್ಲಿರುವ ಕೆಲವು ಬರಹಗಾರರ ವಿರುದ್ಧ ತೆಲಂಗಾಣ ಕೋರ್ಟ್​​ವೊಂದರಲ್ಲಿ ಭಾರತ್ ಬಯೋಟೆಕ್​​ ಔಷಧೀಯ ಕಂಪನಿ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದೆ. ಭಾರತ್​ ಬಯೋಟೆಕ್​ (Bharat Biotech) ಅಭಿವೃದ್ಧಿ ಪಡಿಸಿದ ಕೊವ್ಯಾಕ್ಸಿನ್​ ಕೊವಿಡ್​ 19 ಲಸಿಕೆ (covaxin)  ಬಗ್ಗೆ ಅವಹೇಳನಕಾರಿ ಸುದ್ದಿಗಳನ್ನು ಬರೆದು, ಪ್ರಕಟಿಸಿದ ಆರೋಪದಡಿ ಈ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾಗಿ ಕಂಪನಿ ಹೇಳಿಕೊಂಡಿದೆ. ತೆಲಂಗಾಣದ ರಂಗಾರೆಡ್ಡಿ ಕೋರ್ಟ್​​ನಲ್ಲಿ ಕೇಸ್​ …

Read More »