ಬೆಂಗಳೂರು: ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿಯಾಗಿದೆ. ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಜನ ತತ್ತರಿಸಿದ್ದಾರೆ. ಅದರ ಪ್ರಭಾವ ರಾಜ್ಯದಲ್ಲೂ ಬೀರಲಿದೆ ಎಂಬ ಆತಂಕ ಮನೆಮಾಡಿತ್ತು. ಆದರೆ, ಇದೇ ಸಮಯದಲ್ಲಿ ವರುಣನ ಆಗಮನ ಹಾಗೂ ಹವಾಮಾನ ತಜ್ಞರ ಮುನ್ಸೂಚನೆಯು ಜನರ ಆತಂಕವನ್ನು ತಕ್ಕಮಟ್ಟಿಗೆ ದೂರ ಮಾಡಿದೆ. ಅದರಂತೆ ರಾಜ್ಯದಲ್ಲಿ “ಬೇಸಗೆಯ ಪೀಕ್’ ಅಂದರೆ ಮೇಯಲ್ಲೂ ಮಳೆಯ ದಿನಗಳು ಹೆಚ್ಚು ಇರಲಿದ್ದು, ಇದರಿಂದ …
Read More »ಸವಾಲಿಗೆ ಜವಾಬ್ ವಾರ್ – ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದಾರಾ?
ಬೆಂಗಳೂರು: ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಈಗ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದು, ತನ್ನ ವಿರುದ್ಧ ತೊಡೆ ತಟ್ಟಿದವರನ್ನು ಎಕ್ಸ್ ಪೋಸ್ ಮಾಡಲು ಡಿಕೆ ಶಿವಕುಮಾರ್ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಹೌದು. ಈ ಮೊದಲ ರಾಜಕೀಯವಾಗಿ ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪ, ವಾಗ್ದಾಳಿ ನಡೆಯುತ್ತಿದ್ದವು. ಆದರೆ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ʼಸವಾಲಿಗೆ ಜವಾಬ್ʼ ಎಂಬ ಪೊಲಿಟಿಕ್ಸ್ ಶುರುವಾಗಿದೆ. ಸವಾಲಿಗೆ ಜವಾಬ್ʼ ಹೋರಾಟದಲ್ಲಿ ಕಾಕತಾಳಿಯವೋ ತಂತ್ರಗಾರಿಕೆಯೋ ಗೊತ್ತಿಲ್ಲ. ಆದರೆ ಡಿಕೆಶಿ …
Read More »ಲಹರಿಗೆ 48 ವರುಷ : ಇಬ್ಬರ ಸಾಧನೆಗೆ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರಿಂದ ಅಭಿನಂದನೆ
ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಕಳೆದಿದೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ಮೂಡಿಬಂದಿದೆ. ಈ ಆಲ್ಬಂ ಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಬಂದಿರುವುದು ಇದು ಎರಡನೇ ಬಾರಿ. ಈ ಸಂತಸ ಹಂಚಿಕೊಳ್ಳಲು ಲಹರಿ ಸಂಸ್ಥೆ …
Read More »ಬದಲಾವಣೆ ಕಾಲ ಪ್ರಾರಂಭವಾಗಿದೆ, ಸಬೂಬುಗಳ ಕಾಲ ಮುಗಿದಿದೆ: ಬೊಮ್ಮಾಯಿ
ಬೆಂಗಳೂರು: ಜನ ಕಲ್ಯಾಣಕ್ಕಾಗಿ ವಿವಿಧ ನಿಗಮಗಳಿಗೆ ನೀಡಲಾಗಿರುವ ಅನುದಾನ ನೇರವಾಗಿ ಫಲಾನುಭವಿಗಳಿಗೆ ಮುಟ್ಟಬೇಕೆನ್ನುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದ್ದು, ಇದನ್ನು ನಾನೇ ಸ್ವತ: ಮೇಲ್ವಿಚಾರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲ್ಯಾಣ ಮಿತ್ರ ಸಹಾಯವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟರು. ಬದಲಾವಣೆಯ ಕಾಲ ಪ್ರಾರಂಭವಾಗಿದ್ದು, ಸಬೂಬುಗಳ ಕಾಲ ಮುಗಿದಿದೆ. ಶಿಕ್ಷಣ, …
Read More »ಮೋದಿ ಬಂದ್ರೂ ಮಣಿದಿಲ್ಲ, ಸವದಿ ಏನ್ ಮಾಡ್ತಾನ್?
ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿವೆ. “ಉದಯವಾಣಿ’ ಕಳೆದ ಏ.20ರಂದು “ಎಂ.ಬಿ.ಪಾಟೀಲ ವಿರುದ್ಧ ಲಕ್ಷ್ಮಣ ಸವದಿ ಸ್ಪರ್ಧೆ?’ ಎಂಬ ತಲೆಬರಹದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಇದೀಗ ಸಾಕಷ್ಟು ಸದ್ದು ಮಾಡಿದೆ. “ಬಬಲೇಶ್ವರ ಕ್ಷೇತ್ರದಲ್ಲಿ ಮೋದಿ ಬಂದ್ರೂ ಏನೂ ಮಾಡಿಕೊಳ್ಳಲಾಗಿಲ್ಲ, ಮಣಿಸಲಾಗಿಲ್ಲ. ಇನ್ನ ಸವದಿ ಬಂದೇನ್ ಮಾಡ್ತಾನ್’ ಎಂದು ಬಬಲೇಶ್ವರ ಹಾಲಿ ಶಾಸಕರೂ ಆಗಿರುವ ಮಾಜಿ ಮಂತ್ರಿ, ಕೆಪಿಸಿಸಿ ಪ್ರಚಾರ …
Read More »ಇಂದು ಚಂದ್ರ ದರ್ಶನವಾಗದ ಕಾರಣ ನಾಳೆ ಬದಲು ನಾಡಿದ್ದು ಮಂಗಳವಾರ ರಂಜಾನ್
ಬೆಂಗಳೂರು: ಇಂದು ಚಂದ್ರದರ್ಶನ ವಾಗದ ಹಿನ್ನೆಲೆಯಲ್ಲಿ ಸೋಮವಾರದ ಬದಲು ಮಂಗಳವಾರ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂದ್ರದರ್ಶನವಾಗದ ಕಾರಣ ಮಂಗಳವಾರ ರಂಜಾನ್ ಆಚರಿಸಲಾಗುವುದು ಎನ್ನಲಾಗಿದೆ. ಮೇ 3 ರಂದು ರಂಜಾನ್ ನಿಗದಿಯಾಗಿತ್ತು. ರಾಜ್ಯದಲ್ಲಿ ಮೇ 2 ರಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಆದರೆ, ಚಂದ್ರದರ್ಶನವಾಗದ ಕಾರಣ ಸೋಮವಾರದ ಬದಲು ಮಂಗಳವಾರ ರಂಜಾನ್ …
Read More »ಕಾರ್ಮಿಕ ದಿನದಂದೇ KSRTC ನೌಕರರಿಗೆ ಸಿಕ್ತು ಸಿಹಿ ಸುದ್ದಿ: 7200 ನೌಕರರ ಶಿಸ್ತು ಪ್ರಕರಣ ಮನ್ನಾ
ಬೆಂಗಳೂರು: ಇಂದು ಮೇ.1ರ ಕಾರ್ಮಿಕ ದಿನಾಚರಣೆ. ಈ ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿಯೇ, ಕೆ ಎಸ್ ಆರ್ ಟಿ ಸಿ ನೌಕರರಿಗೆ ( KSRTC Employees ) ನಿಗಮವು ಭರ್ಜರಿ ಗಿಫ್ಟ್ ನೀಡಿದೆ. ಅದೇ.. ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ ಮಾಡಲಾಗಿದೆ. ಹತ್ತು ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರುಹಾಜರಿಯನ್ನು ಮನ್ನಿಸಿ, ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ …
Read More »PSI ನೇಮಕಾತಿ ಹಗರಣ: ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ!
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಆರೋಪಿ ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಡತಿ. ಇದೇ ಶಾಲೆಯಲ್ಲಿ ಅಕ್ರಮ ನಡೆದಿರುವ ಆರೋಪವಿದೆ. ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ದಿವ್ಯಾ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. ಎರಡು ಟೀಮ್ಗಳಿಂದಲು ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ದಿವ್ಯಾ ಬಾಯಿಬಿಟ್ಟಿದ್ದಾರೆ. ಆ …
Read More »ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ
ಬೆಂಗಳೂರು: ಆಜಾನ್ ವಿಚಾರದಲ್ಲಿ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ದೇವಾಲಯಗಳಲ್ಲಿ ಆರತಿ, ಹನುಮಾನ್ ಚಾಲೀಸಾ ಪಠಿಸಲು ನಿರ್ಧರಿಸಿವೆ ಈ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಮತ್ತು ಆಂದೋಲ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಪರ ಸಂಘಟನೆಗಳು ಆಜಾನ್ ಕೂಗುವುದನ್ನು ನಿಷೇಧಿಸಲು ಮೇ 1 ರವರೆಗೂ ಗಡುವು ನೀಡಿದ್ದವು. ಮೇ 1ರ ಒಳಗೆ ಮಸೀದಿಯ …
Read More »ಜೆಡಿಎಸ್ ಶಾಸಕ ಸಾರಾ ಮಹೇಶ್ ಮೇಲೆ ಎಫ್ ಐಆರ್ ದಾಖಲು ಆರೋಪ : ರಾತ್ರೋರಾತ್ರಿ ಠಾಣೆ ಎದುರು ಧರಣಿ
ಮೈಸೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮೇಲೆ ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯ ಸ್ವತಃ ಶಾಸಕ ಸಾ.ರಾ.ಮಹೇಶ್ ಅವರೇ ಠಾಣೆಗೆ ಆಗಮಿಸಿ ತಮ್ಮನ್ನು ಬಂಧಿಸುವಂತೆ ಪ್ರತಿಭಟಿಸುತ್ತಿರುವ ಘಟನೆ ನಡೆಯುತ್ತಿದೆ. ಆರ್ ಟಿಐ ಕಾರ್ಯಕರ್ತ ಗಂಗರಾಜು ಎಂಬುವವರು ನೀಡಿದ ದೂರಿನ ಮೇರೆಗೆ ಶಾಸಕ ಸಾ.ರಾ.ಮಹೇಶ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸಾ.ರಾ.ಮಹೇಶ್ ಸ್ವತಃ ಠಾಣೆಗೆ ಆಗಮಿಸಿದ್ದು, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡರ …
Read More »
Laxmi News 24×7