Breaking News

ರಾಜ್ಯ

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ .

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ . ಬೆಳಗಾವಿ ಮಾಳ ಮಾರುತಿ ಬಡಾವಣೆ ನಿವಾಸಿ ಅಭಿಷೇಕ ಸಜ್ಜನ 24 ನಾಪತ್ತೆಯಾಗಿದ್ದು ಯುವಕ ಮೋಜು ಮಸ್ತಿ ಮಾಡಲು ಕುಟುಂಬಸ್ಥ ರೊಂದಿಗೆ ತೆರಳಿದ್ದು ಮದ್ಯಾಹ್ನ ಸುಮಾರು 2-30 ರ ಹೊತ್ತಿಗೆ ನಾಪತ್ತೆ ಯಾಗಿದ್ದಾನೆ .. ಜಲಪಾತದ ಕಡೆ ಹೋಗಿದ್ದ ಎಂದು ಹೇಳಲಾಗುತ್ತಿದೆ .ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ

Read More »

ಕೊರೊನಾದಿಂದ ಕಳಸ ಪಟ್ಟಣದ ಬ್ಯಾಂಕ್‍ವೊಂದು ಸೀಲ್‍ಡೌನ್

ಚಿಕ್ಕಮಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗ್ತಿದೆ. ಇನ್ನೇನು ನಾಳೆ-ನಾಡಿದ್ದು ಅನ್ನುವಷ್ಟರಲ್ಲಿ ಲಸಿಕೆಯೂ ಸಿಗುತ್ತೆ, ಅಬ್ಬಾ… ಈ ಹೆಮ್ಮಾರಿ ತೊಲಗಿತು ಎಂದು ಜನಸಾಮಾನ್ಯರು ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ಕೊರೊನಾದಿಂದ ಕಳಸ ಪಟ್ಟಣದ ಬ್ಯಾಂಕ್‍ವೊಂದು ಸೀಲ್‍ಡೌನ್ ಶುಕ್ರವಾರ, ಶನಿವಾರ ಹಾಗೂ ಇಂದು ಭಾನುವಾರವಾದ್ದರಿಂದ ಜನರಿಗೆ ಬ್ಯಾಂಕ್ ಇಲ್ಲದೆ ತೀವ್ರ ಸಮಸ್ಯೆ ಎದುರಾಗಿತ್ತು. ಕಳಸ ಪಟ್ಟಣ ಸುತ್ತಮುತ್ತ ಅಡಿಕೆ, ಕಾಫಿ ತೋಟವೇ ಹೆಚ್ಚಿದ್ದು, ಈ ಭಾಗದಲ್ಲಿ ಕೂಲಿ …

Read More »

ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವ

ಹಾವೇರಿ: ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಿಲ್ಲೆಯ ಹಾನಗಲ್ ಪಟ್ಟಣದ ಗರಡಿಮನಿ ಕ್ರಾಸ್ ಬಳಿ ಘಟನೆ ನಡೆದಿದ್ದು, ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡಿದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಗಣಪತಿ ಲಮಾಣಿ 22 ವರ್ಷ ಮೃತ ಬೈಕ್ ಸವಾರ. ಮೃತ ಗಣಪತಿ, ಕಾರವಾರ ಜಿಲ್ಲೆ ಶಿರಸಿ ತಾಲೂಕಿನ …

Read More »

ಮೋದಿ ಅವರೇ ಕುಮಾರಸ್ವಾಮಿಗೆ ಕರೆ ಮಾಡಿ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದರು ಅನ್ನೋ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ ಕರೆ ಮಾಡಿ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದರು ಅನ್ನೋ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ವಿಲೀನ ಆಗುತ್ತಾ ಅನ್ನೋ ಮಾತುಗಳು ಬಿಸಿಬಿಸಿಯಾಗಿ ಚರ್ಚೆಯಾಗುತ್ತಿವೆ. ಈ ಬಗ್ಬಗ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಆಳವಾಗಿ ಮಾತನಾಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವಂತಹ ಪ್ರಯತ್ನ ಮಾಡಿದ್ರು. ಈ ಸಂದರ್ಭದಲ್ಲಿ ಮೋದಿ …

Read More »

ಬೆಳಗಾವಿಯ ಯಳ್ಳೂರ ಗ್ರಾಮದ ಹೊರವಲಯದಲ್ಲಿ ರಾಜಹಂಸಗಡ ಕೋಟೆ ಗುಡ್ಡಕ್ಕೆ ಆಕಸ್ಮಿಕ ಬೆಂಕಿ

ಬೆಳಗಾವಿ: ಐತಿಹಾಸಿಕ ರಾಜಹಂಸಗಡ ಕೋಟೆಯ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ. ಬೆಳಗಾವಿಯ ತಾಲೂಕಿನ ಯಳ್ಳೂರ ಗ್ರಾಮದ ಹೊರವಲಯದಲ್ಲಿ ರಾಜಹಂಸಗಡ ಕೋಟೆ ಗುಡ್ಡ ಇದೆ. ಕೋಟೆ ಗುಡ್ಡದ ಅಕ್ಕಪಕ್ಕದಲ್ಲಿರುವ ಒಣಹುಲ್ಲಿಗೆ ಆಕಸ್ಮಿಕ ಬೆಂಕಿ ಆವರಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಕಿ ನಂದಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣವಾಗಿರುವ ಐತಿಹಾಸಿಕ ರಾಜಹಂಸಗಡ ಕೋಟೆಗೆ ತನ್ನದೇ ಆದ ಹೆಸರಿದೆ.

Read More »

ಗೊಂದಲಗಳನ್ನು ಸೃಷ್ಟಿಸುತ್ತಿದೆ ಕೊರೊನಾ ಲಸಿಕೆ..!

ಜಕಾರ್ತ, ಡಿ.20- ಮಹಾಮಾರಿ ಕೊರೊನಾಗೆ ಔಷ ಸಿಕ್ಕಿದೆ. ವಿಶ್ವಕ್ಕೆ ಎದುರಾಗಿರುವ ಕಂಟಕ ಮುಕ್ತಿ ದೊರೆಯಲಿದೆ ಎಂಬ ಆಶಾದಾಯಕ ಬೆಳವಣಿಗೆಯ ನಡುವೆಯೇ ಲಸಿಕೆ ತಯಾರಿಕೆಗೆ ಬಳಕೆ ಮಾಡಲಾಗಿರುವ ಅಂಶಗಳು ಧಾರ್ಮಿಕ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಇಂಡೋನೇಷ್ಯಾದ ರಾಜ ತಾಂತ್ರಿಕರು ಮತ್ತು ಇಸ್ಲಾಂ ಧಾರ್ಮಿಕ ಗುರುಗಳು ಅಲ್ಲಿ ಔಷಧ ತಯಾರಿಕೆಯ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆನಂತರ ಇಂಡೋನೇಷ್ಯಾಗೆ ಲಕ್ಷ ಗಟ್ಟಲೆ ಔಷಯ ಡೋಸೇಜ್‍ಗಳನ್ನು ಕಳುಹಿಸಲಾಗಿದೆ. ಕೊರೊನಾ ಲಸಿಕೆ ಉತ್ಪಾದಕ ಕಂಪೆನಿಗಳು ಸುರಕ್ಷತೆ , …

Read More »

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ

ಬೆಂಗಳೂರು, ಡಿ.20- ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನಾ ನಿರತರನ್ನು ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಬಿಡದಿಯ ಟೊಯೋಟಾ ಕಂಪೆನಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಅದರ ಒಂದು ಘಟಕದಲ್ಲಿ ಸುಮಾರು ಎರಡು ಸಾವಿರ ಜನರು ಖಾಯಂ ನೌಕರರಾಗಿ ಕೆಲಸ ಮಾಡುತ್ತಿದ್ದರು. ಈ …

Read More »

ಕೇವಲ ಎರಡು ಗಂಟೆಯಲ್ಲಿ 23,90,900 ರೂ. ದಂಡ ಸಂಗ್ರಹ: ಪೊಲೀಸ್ ಆಯುಕ್ತ ಡಾ|| ಬಿ.ಆರ್. ರವಿಕಾಂತೇಗೌಡ

ಬೆಂಗಳೂರು, ಡಿ.20- ರಸ್ತೆ ಬಳಕೆದಾರರ ಸುರಕ್ಷತೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಪ್ರವರ್ತನ ಚಟುವಟಿಕೆಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗ ಆಪರೇಷನ್ ಸರ್‍ಪ್ರೈಸ್ ಚೆಕ್ ಕಾರ್ಯಾಚರಣೆ ಪ್ರಾರಂಭಿಸಿದ್ದು ಕೇವಲ ಎರಡು ಗಂಟೆಯಲ್ಲಿ 23,90,900 ರೂ. ದಂಡ ಸಂಗ್ರಹಿಸಲಾಗಿದೆ. ನಗರದ 44 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಆಪರೇಷನ್ ಸರ್‍ಪ್ರೈಸ್ ಚೆಕ್ ಕಾರ್ಯಾಚರಣೆ ಹಮ್ಮಿಕೊಂಡು ಒಟ್ಟು 178 ಸ್ಥಳಗಳಲ್ಲಿ 5123 …

Read More »

3.9 ಡಿಗ್ರಿ ಕೊರೆವ ಮಹಾಚಳಿಗೆ ತತ್ತರಿಸಿದ ದೆಹಲಿ,

ನವದೆಹಲಿ, ಡಿ.20- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದಲ್ಲೇ ಅತ್ಯಂತ ಕಡಿಮೆ ಶೀತ ವಾತವರಣ ದಾಖಲಾಗಿದ್ದು, ಜನ ಜೀವನ ಗಡಗಡ ನಡುಗಿ ಹೋಗಿದೆ. ಶನಿವಾರ ಸಫ್ಜಜಂಗ್‍ನ ಮಾಪಕ ಕೇಂದ್ರದಲ್ಲಿ 3.9 ಡಿಗ್ರಿ ಸೆಲ್ಸಿಯಸ್ ಶೀತ ವಾತವರಣ ದಾಖಲಾಗಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಶನಿವಾರ ಅತ್ಯಂತ ಕನಿಷ್ಠ ತಾಪಮಾನ 3.4 ಡಿಗ್ರಿ ದಾಖಲಾಗಿದೆ. ಲೋದಿ ರಸ್ತೆಯಲ್ಲಿ ಮಾಪನ ಕೇಂದ್ರದಲ್ಲಿ 3.3 ಡಿಗ್ರಿ ಸೆಲ್ಸಿಯಸ್ ತೇವಾಂಶ ವರದಿಯಾಗಿದೆ. …

Read More »

ಪಿಡಿಓಎಸಿಬಿ ಅಧಿಕಾರಿಗಳ ಬಲೆಗೆ

ಶಿರಸಿ :    ಶಿರಸಿ  ತಾಲ್ಲೂಕಿನ ಕುಕ್ರಿ ಗ್ರಾಮದ ರೈತರರೊಬ್ಬರಿಂದ ಮನೆ ಸಂಖ್ಯೆ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಜಾನ್ಮನೆ ಗ್ರಾಮ ಪಂಚಾಯ್ತಿ ಪಿಡಿಓ ಕೃಷ್ಣಪ್ಪ ಯಲ್ವಗಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.       ಸುಧೀಂದ್ರ ಹೆಗಡೆ ಎಂಬುವವರು 2014ರಲ್ಲಿ ಹೊಸ ಮನೆ ಕಟ್ಟಿಸಿದ್ದರು. ಅದಕ್ಕೆ ಸಂಖ್ಯೆ ನೀಡಲು ಪಿಡಿಓ ₹15 ಸಾವಿರ ಹಣದ ಬೇಡಿಕೆ ಇಟ್ಟಿದ್ದಾಗಿ ಸುಧೀಂದ್ರ ಎಸಿಬಿಗೆ ದೂರು ನೀಡಿದ್ದರು. ಶನಿವಾರ ಸುಧೀಂದ್ರ ಅವರು ಲಂಚ …

Read More »