Breaking News

ರಾಜ್ಯ

ರಾಜ್ಯದಲ್ಲಿ ಈವರೆಗೆ ಮೂವರು ಡಿವೈಎಸ್‍ಪಿಗಳ ಆತ್ಮಹತ್ಯೆ

ಬೆಂಗಳೂರು, ಡಿ.17- ಕಳೆದ ರಾತ್ರಿ ಸಿಐಡಿ ಡಿವೈಎಸ್‍ಪಿ ವಿ.ಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೂ ಸೇರಿದಂತೆ ರಾಜ್ಯದಲ್ಲಿ ಈವರೆಗೂ ಮೂರು ಮಂದಿ ಡಿವೈಎಸ್‍ಪಿಗಳು ಆತ್ಮಹತ್ಯೆ ಮೂಲಕ ಜೀವ ಕಳೆದುಕೊಂಡಂತಾಗಿದೆ. ಲಕ್ಷ್ಮೀ ಅವರಿಗೂ ಮೊದಲು ಇಬ್ಬರು ಡಿವೈಎಸ್‍ಪಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಎರಡು ಪ್ರಕರಣಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು. 2016 ಜುಲೈ 5ರಂದು ಚಿಕ್ಕಮಗಳೂರು ಗ್ರಾಮಾಂತರ ಉಪವಿಭಾಗದಲ್ಲಿ ಡಿವೈಎಸ್‍ಪಿ ಆಗಿದ್ದ ಕಲ್ಲಪ್ಪ ಹಂಡಿಬಾಗ್ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುರ್‍ಗೋಡು ಗ್ರಾಮದಲ್ಲಿರುವ …

Read More »

ಯಮಕನಮರಡಿ ಫೈರಿಂಗ ಕೊಡಲೇ ತಪಿತಸ್ಥ ಆರೋಪಿಗಳನ್ನು ಬಂಧಿಸಬೇಕ: ಸತೀಶ್ ಜಾರಕಿಹೊಳಿ

ಬೆಳಗಾವಿ: ಹುಕ್ಕೆರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆದಿರುವ ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರು ಕೊಡಲೇ ತಪಿತಸ್ಥ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜು ತಳವಾರಗೆ ರಾಜಕೀಯ ರಕ್ಷಣೆ ಇದೆ. ಅಂಕಲಗಿ ಗ್ರಾಮದಲ್ಲಿ ಮತ್ತೆ ಗುಂಡಾಗಿರಿ ನಡೆದಿದೆ. ಕಳೆದ 6 ತಿಂಗಳಲ್ಲಿ ಮೂರು ಸಲ ಇಂತಹ ಘಟನೆ …

Read More »

ವಿಧಾನ ಪರಿಷತ್ ಸಭಾಪತಿ ಕಾಂಗ್ರೆಸ್ ನಿಯಂತ್ರಣದಲ್ಲಿದ್ದಾರೆ

ಉಡುಪಿ: ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಗದ್ದಲವನ್ನು ಕುರಿತು ಮಾತನಾಡಿರುವ ಉಡುಪಿ ಶಾಸಕ ಕೋಟ ಶ್ರಿನಿವಾಸ್ ಪೂಜಾರಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಕಾಂಗ್ರೆಸ್ ನಿಯಂತ್ರಣ ಮಾಡುವುದು ಬಿಟ್ಟಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಗದ್ದಲದ ಕುರಿತು ಪ್ರತಿಕ್ರಿಯಿಸಿರುವ ಸಚಿವರು ಕಾಂಗ್ರೆಸ್ ನಾಯಕರು ಸಭಾಪತಿ ತಾನು ಹೇಳಿದಂತೆ ಕೇಳಬೇಕು ಎಂದು ಸಿದ್ದರಾಮಯ್ಯ ಸಹಿತ ಎಲ್ಲರೂ ಕಾಂಗ್ರೆಸ್ಸೀಕರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸೀಕರಣ ಮಾಡಿದ್ದರ ಫಲವೇ ವಿಧಾನಪರಿಷತ್ ಗದ್ದಲಕ್ಕೆ …

Read More »

ಹೆಸರಾಂತ ಉದ್ಯಮಿ ಆರ್.ಎನ್. ಶೆಟ್ಟಿ ವಿಧಿವಶ..!

ಬೆಂಗಳೂರು : ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕರು ಹಾಗೂ ಸಮಾಜಮುಖಿ ಚಿಂತಕ ಮತ್ತು ದಾನಿ, ಶ್ರೀ ಆರ್.ಎನ್. ಶೆಟ್ಟಿ (92) ಗುರುವಾರ ಡಿ.17ರ ನಸುಕಿನ 2 ಗಂಟೆ ಸುಮಾರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಇಡಲಾಗುವುದು, ಅಂತ್ಯಸಂಸ್ಕಾರ ಸಂಜೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು …

Read More »

ಸಿಐಡಿ DySP ಲಕ್ಷ್ಮೀ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ..!

ಬೆಂಗಳೂರು, ಡಿ.17- ಸಿಐಡಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್‍ಪಿ ಲಕ್ಷ್ಮಿ (33) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಅನ್ನಪೂರ್ಣೇಶ್ವರಿ ನಗರದ ಪರಿಚಿತರ ಮನೆಯಲ್ಲಿ ಲಕ್ಷ್ಮಿ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಡಿವೈಎಸ್‍ಪಿ ಲಕ್ಷ್ಮಿ ಅವರ ಆತ್ಮಹತ್ಯೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಲಕ್ಷ್ಮಿ ಅವರು 2014ರ ಬ್ಯಾಚ್‍ನ ಕೆಎಸ್‍ಪಿಎಸ್ ಅಧಿಕಾರಿ, 2017ರಲ್ಲಿ ಸಿಐಡಿ ಘಟಕದಲ್ಲಿ ಡಿವೈಎಸ್‍ಪಿ ಆಗಿ ಅವರು ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಃ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ …

Read More »

ಕಾಂಗ್ರೇಸ್ ಮುಖಂಡರ ಮೇಲೆ ಗುಂಡಿ ದಾಳಿ: ಗ್ರಾ,ಪಂ, ಚುನಾವಣೆ ಹಿನ್ನೆಲೆ ಶಂಕೆ,

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಶಾಸಕ ಸತೀಶ ಜಾರಕಿಹೋಳಿ ಆಪ್ತರಾದ ಕೀರಣ ರಜಪೂತ, ಬರಮಾ ದೂಪದಾಳೆ ಮೇಲೆ ಗುಂಡಿನ ದಾಳಿ ಗ ನಡೆಸಿ ಫರಾರಿಯಾಗಿರುವ ಘಟನೆ ನಡೆದಿದೆ. ಈ ದಾಳಿಯು ಕಂಟ್ರಿ ಪಿಸ್ತೋಲದಿಂದ ನಡೆಸಲಾಗಿದೆ. ಕಳೆದ ಬುಧವಾರ ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯ ನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಪ್ರಾಣಾಪಾಯದಿಂದ …

Read More »

ತಿರುಪತಿ ತಿಮ್ಮಪ್ಪ ಕಲ್ಯಾಣ ಕರ್ನಾಟಕದ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಕೇವಲ 1 ಗಂಟೆ 5 ನಿಮಿಷದಲ್ಲಿ ಕಲಬುರ್ಗಿಯಿಂದ ತಿರುಪತಿಗೆ ಹೋಗೋ ಅವಕಾಶವನ್ನು ಜನ ಪಡೆದಿದ್ದಾರೆ.

ಕಲಬುರ್ಗಿ(ಡಿಸೆಂಬರ್​. 16): ಕಲ್ಯಾಣ ಕರ್ನಾಟಕಕ್ಕೂ ತಿರುಪತಿಗೂ ಅವಿನಾಭಾವ ಸಂಬಂಧ. ಒಂದು ಕಾಲಕ್ಕೆ ತಿರುಪತಿ ಮೇಲೆ ದಾಳಿ ನಡೆದಂತಹ ಸಂದರ್ಭದಲ್ಲಿ ಕ್ಷೇತ್ರದ ಸಂರಕ್ಷಣೆಗೆ ನಿಂತವರು ಸುರಪುರ ಸಂಸ್ಥಾನದ ದೊರೆಗಳು. ಅದೇ ಕಾರಣಕ್ಕೆ ವಿಜಯದಶಮಿ ಸಂದರ್ಭದಲ್ಲಿ ತಿರುಪತಿಯಲ್ಲಿ ನಡೆಯುವ ಬ್ರಹ್ಮತ್ಸವದಲ್ಲಿ ಮೊದಲ ಪೂಜೆ ನಡೆಯುವುದು ಸುರಪುರ ದೊರೆಗಳದ್ದು. ಈಗಲೂ ಸಹ ಸುರಪುರ ಸಂಸ್ಥಾನವನ್ನು ಪ್ರತಿನಿಧಿಸುವವರಿಗೆ ಅಗ್ರ ಪೂಜೆಯ ಭಾಗ್ಯ ಕಲ್ಪಿಸಲಾಗಿದೆ. ಹೀಗಾಗಿ ತಿರುಪತಿಯಲ್ಲಿ ಕಲ್ಯಾಣ ಕರ್ನಾಟಕದ ಜನತೆಯ ಬಗ್ಗೆ ಒಂದಷ್ಟು ಪ್ರೀತ್ಯಾದರಗಳಿವೆ. ಪ್ರತಿ ವರ್ಷವೂ …

Read More »

ಈ ವೇಳೆ ರಾಹುಲ್​ ಗಾಂಧಿಯವರಿಗೆ ಮಾತನಾಡದಲು ಸಮಿತಿ ಅಧ್ಯಕ್ಷರು ಅವಕಾಶ ನೀಡಲಿಲ್ಲ. ಈ ಹಿನ್ನಲೆ ಕಾಂಗ್ರೆಸ್​ ನಾಯಕರು ಸಭೆಯಿಂದ ಹೊರ ನಡೆಯಲು ನಿರ್ಧರಿಸಿದರು ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಮತ್ತಿಬ್ಬರು ನಾಯಕರಾದ ಸತ್ವ ಹಾಗೂ ರೆಡ್ಡಿ ಕೂಡ ಅವರ ಹಾದಿ ಹಿಡಿದರು.

ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ಮಧ್ಯಭಾಗದಲ್ಲಿಯೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೊರ ನಡೆದಿದ್ದಾರೆ. ಇವರ ಜೊತೆಗೆ ಕಾಂಗ್ರೆಸ್​ ಸಂಸದರಾದ ರಾಜೀವ್​ ಸತ್ವ ಹಾಗೂ ರೇವಂತ್​ ರೆಡ್ಡಿ ಕೂಡ ಹೊರ ನಡೆದಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಸ್ಯೆ ಕುರಿತು ಚರ್ಚೆ ನಡೆಸುವ ಬದಲು ಸಶಸ್ತ್ರ ಪಡೆಗಳ ಸಮವಸ್ತ್ರ ಕುರಿತು ಚರ್ಚಿಸುವ ಮೂಲಕ ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಚೀನಾದ ಆಕ್ರಮಣಶೀಲತೆ ಮತ್ತು …

Read More »

ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ನವದೆಹಲಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಕಬ್ಬು ಬೆಳೆಗಾರರಿಗೆ 3,500 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, 60 ಲಕ್ಷ ಟನ್ ಸಕ್ಕರೆಯನ್ನು ರೈತರಿಂದ ಖರೀದಿಸಿ ವಿದೇಶಗಳಿಗೆ ರಫ್ತು ಮಾಡಲು ನಿರ್ಧರಿಸಲಾಗಿದೆ. ಹೀಗೆ ಬಂದ ಹಣವನ್ನು ರೈತರ ಖಾತೆಗೆ ಜಮಾವಣೆ ಮಾಡಲು ಕೇಂದ್ರ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ …

Read More »

ಹಾಡ ಹಗಲೇ ಪೊಲೀಸರ ಮೇಲೆ ದುಷ್ಕರ್ಮಿಗಳು ತಲ್ವಾರ್ ನಿಂದ ದಾಳಿ

ಮಂಗಳೂರು: ಹಾಡ ಹಗಲೇ ಪೊಲೀಸರ ಮೇಲೆ ದುಷ್ಕರ್ಮಿಗಳು ತಲ್ವಾರ್ ನಿಂದ ದಾಳಿ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕರ್ತವ್ಯ ನಿರತ ಹೆಡ್ ಕಾನ್ಸ್ ಟೇಬಲ್, ಮಹಿಳಾ ಪೊಲೀಸರ ಮೇಲೆ ದುಷ್ಕರ್ಮಿಗಳು ತಲ್ವಾರ್ ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬಂದರು ಠಾಣಾ ಹೆಡ್ ಕಾನ್ಸ್ ಟೇಬಲ್ ಗಣೇಶ್ ಕಾಮತ್ ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »