Breaking News

ರಾಜ್ಯ

ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪಣ ತೊಡೋಣ’’:

ಇಂದು ಸಿ.ಎಫ್.ಟಿ.ಎಫ್.ಕೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ, ಡ್ರಗ್ಸ್, ಮದ್ಯಪಾನ ಮುಕ್ತ ಕರ್ನಾಟಕ ಜನಜಾಗೃತಿ ಕಾರ್ಯಕ್ರಮದಲ್ಲಿ, ಗೂಗಲ್ ಮೀಟ್ ಮೂಲಕ ಭಾಗವಹಿಸಿ, ಮಾತನಾಡಲಾಯಿತು. ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಡ್ರಗ್ಸ್ , ಮದ್ಯಪಾನ ಹೀಗೆ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿರುವ ನಡುವೆ ಸಮಾಜದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ಸಿ.ಎಫ್.ಟಿ.ಎಫ್.ಕೆ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಮ್ಮ ಇಲಾಖೆಯ ರೀತಿ ಸಿ.ಎಫ್.ಟಿ.ಎಫ್.ಕೆ ಸಂಸ್ಥೆ ಕೂಡ ಸಮಾಜದಲ್ಲಿ ಧೂಮಪಾನ, ಡ್ರಗ್ಸ್, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಜನರನ್ನು ದೂರವಿರಿಸಲು ಶ್ರಮವಹಿಸುತ್ತಿದೆ. …

Read More »

ಬಂಡೀಪುರದಲ್ಲಿ ಮೋಜು ಮಸ್ತಿಗೆ ಬ್ರೇಕ್

ಮೈಸೂರು, ಡಿ. 18- ಬಂಡೀಪುರ, ಬಿಆರ್ ಹಿಲ್ಸ್‍ನಲ್ಲಿ ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮೋಜು, ಮಸ್ತಿಗೆ ಕಡಿವಾಣ ಹಾಕಿರುವ ಅರಣ್ಯ ಇಲಾಖೆ ಎರಡು ದಿನಗಳ ಕಾಲ ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಡಿ.31 ಹಾಗೂ ಜ.1ರಂದು ಪ್ರವಾಸಿಗರ ವಾಸ್ತವ್ಯ ನಿಷೇಧಿಸಲಾಗಿದೆ. ಪ್ರವಾಸಿಗರು ಪ್ರತಿ ವರ್ಷ ಬಂಡೀಪುರ ಹಾಗೂ ಬಿಳಿಗಿರಿ ರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಈ …

Read More »

ಕೊಲೆ ಮಾಡಿದ್ದ 6 ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಶಹಾಪುರ ಠಾಣೆ ಪೊಲೀಸರು ಯಶಸ್ವಿ

ಬೆಳಗಾವಿ – ನಿನ್ನೆ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯಲ್ಲಿ ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಿದ್ದ 6 ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಶಹಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಎಲ್ಲ 6 ಜನರೂ ಅಂಬೇಡ್ಕರ್ ಗಲ್ಲಿಯವರೇ ಆಗಿದ್ದಾರೆ. ಜ್ಯೋತಿರಾಜ ಸಿದ್ರಾಯಿ ದೊಡ್ಮನಿ(24), ಅಕ್ಷಯ ಕೃಷ್ಣ ಕೋಲ್ಕಾರ್ (24), ಪ್ರಶಾಂತ ಯಲ್ಲಪ್ಪ ಕಳ್ಳಿಮನಿ (30), ಪ್ರಶಾಂತ ಬಸವಂತ ಗರಾಣಿ (28), ರೋಹಿತ್ ರಾಜೇಂದ್ರ ದೊಡ್ಮನಿ (23), ಶಿವರಾಜ ಸೋನ್ಯಾ ತಂದೆ ನಾಗೇಶ ದೊಡ್ಮನಿ (21) ಆರೋಪಿಗಳು. …

Read More »

ಬೆಳಗಾವಿ ಲೋಕಸಭೆಗೆ ಇಬ್ಬರ ಹೆಸರು:ಡಿ.ಕೆ.ಶಿವಕುಮಾರ

ಶುಕ್ರವಾರ ಬೆಳಗ್ಗೆ ಹಾವೇರಿ ಜಿಲ್ಲೆಯ ಮೈಲಾರಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೈಲಾರ ಲಿಂಗೇಶ್ವರನಲ್ಲಿ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಮೈಲಾರಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಒಪ್ಪಿಸಿದ್ದಾರೆ. ಮೈಲಾರದಿಂದ ನೇರವಾಗಿ ಬೆಳಗಾವಿಗೆ ಆಗಮಿಸಿದ್ದ ಶಿವಕುಮಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು. ಈ ಹಿಂದೆ ಮೈಲಾರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದೆ. ಆದರೆ ಅಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋಗುವುದು ತಪ್ಪು ಎಂದು ಕಾರ್ಯಕರ್ತರು ತಿಳಿಸಿದರು. ಜೊತೆಗೆ ಅವರು ಅದಕ್ಕಾಗಿ ಹರಕೆಯನ್ನೂ ಹೊತ್ತಿದ್ದರು. ಹಾಗಾಗಿ ನಾನು …

Read More »

ಈಗಾಗಲೇ ಅಧಿಕಾರ ಕಳೆದುಕೊಂಡು, ದೇಶಕ್ಕೆ ಬೆಂಕಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೇಸ್”: ಕಟೀಲ್

ಗದಗ: ಈಗಾಗಲೇ ಅಧಿಕಾರ ಕಳೆದುಕೊಂಡು, ದೇಶಕ್ಕೆ ಬೆಂಕಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಸಿಎನ್​ಎ ಕಾನೂನು ತಂದಾಗ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯ ಭವನ ಶಿಲಾನ್ಯಾಸದಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಅವರು ಕಾಂಗ್ರೇಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ …

Read More »

ಸಾರ್ವಜನಿಕರ ಎದುರೇ ಉಜಿರೆಯ ಬಾಲಕನ ಕಿಡ್ನಾಪ್-

ಸಾರ್ವಜನಿಕರ ಎದುರೇ ಉಜಿರೆಯ ಬಾಲಕನ ಕಿಡ್ನಾಪ್- ಮಾಹಿತಿ ಕೊಡಲು ಸ್ಥಳೀಯರು ಕೋರಿಕೆಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 8 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.ಸಾರ್ವಜನಿಕರ ಎದುರೇ ದುಷ್ಕರ್ಮಿಗಳು ಉಜಿರೆಯಿಂದ ಬಿಳಿ ಬಣ್ಣದ ಹಾಗೂ ಯಲ್ಲೋ ಬೋರ್ಡ್ ಇದ್ದ ಇಂಡಿಕಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಈ ಘಟನೆ ನಿನ್ನೆ ಸಂಜೆ 6.30ರ ಸುಮಾರಿಗೆ ನಡೆದಿದೆ. ಕಾರು ಉಜಿರೆಯಿಂದ ಚಾರ್ಮಾಡಿ ಕಡೆ ಹೋಗಿದೆ ಕಿಡ್ನಾಪ್ ಬಳಿಕ ಬಾಲಕನ ತಂದೆ ಬಿಜೋಯ್ …

Read More »

ಜನಪದ ಕಲಾವಿದರು ತಮ್ಮ ಕಲೆಯ ಬಗೆಗೆ ಸ್ವಾಭಿಮಾನಿಗಳಾಗಿದ್ದು,

ಗೋಕಾಕ: ಜನಪದ ಕಲಾವಿದರು ತಮ್ಮ ಕಲೆಯ ಬಗೆಗೆ ಸ್ವಾಭಿಮಾನಿಗಳಾಗಿದ್ದು, ಆತ್ಮಗೌರವವುಳ್ಳವರಾಗಿರಬೇಕೆಂದು ಜಾನಪದತಜ್ಞ, ಕರ್ನಾಟಕ ಜಾನಪದ ಪರಿಷತ್ತಿನ, ಬೆಳಗಾವಿ ಜಿಲ್ಲಾಧ್ಯಕ್ಷ ಡಾ| ಸಿ.ಕೆ.ನಾವಲಗಿ ಅಭಿಪ್ರಾಯಿಸಿದರು. ಅವರು ನಗರದ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತೆ, ಬಯಲಾಟ ಹಿರಿಯ ಕಲಾವಿದೆ ಕೆಂಪವ್ವ ಹರಿಜನ ಇವರನ್ನು ಕಜಾಪದ ಪರವಾಗಿ ಸನ್ಮಾನಿಸಿ, ಮಾತನಾಡಿದ ಅವರು, ಕಲಾವಿದರಿಂದಲೇ ಕಲೆಗಳ ಉಳಿವು-ಬೆಳವಣಿಗೆ, ಸರಕಾರ-ಸಾರ್ವಜನಿಕರು ಕಲಾವಿದರನ್ನು ಪೋಷಿಸಬೇಕಾದ ಅಗತ್ಯವಿದೆಯೆಂದು ಮಾತನಾಡಿದರು. ಕಲಾವಿದರ ಬದುಕು ಕುರಿತು ಪ್ರಾ. …

Read More »

ಮತ್ತೆ ಹೆಲಿಕಾಪ್ಟರ್ ಹಾರಿಸುತ್ತಿರುವುದಕ್ಕೆ ಸತೀಶ ಜಾರಕಿಹೊಳಿ ಕೊಟ್ಟ ಉತ್ತರ ಏನು..?

ಬೆಳಗಾವಿ ಲೋಕಸಭೆ ಬೈಎಲೆಕ್ಷನ್‍ಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಯಾರೂ ಮುಂಚೂಣಿಗೆ ತರುತ್ತಿಲ್ಲ. ಸಭೆಯಲ್ಲಿ ನನ್ನ ಹೆಸರು ಚರ್ಚೆ ಆಗಿದೆ ಹೀಗಾಗಿ ಬರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. : ಬೆಳಗಾವಿ ಲೋಕಸಭೆಯಲ್ಲಿ ನಿಮ್ಮ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ರಾಜ್ಯ ರಾಜ ರಾಜಕಾರಣದಿಂದ ನಿಮ್ಮನ್ನು ದೂರ ಮಾಡಲು ಏನಾದ್ರು ಷಡ್ಯಂತ್ರ ನಡೆದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉತ್ತರಿಸಿದ …

Read More »

ತಿಂಗಳಾಂತ್ಯದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ-ಸಚಿವ ರಮೇಶ ಜಾರಕಿಹೋಳಿ

  ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆಯಾಗಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಇಲ್ಲವೇ ಜನವರಿ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಹೇಳಿದರು. ಗುರುವಾರದಂದು ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಪಂಚಾಯತ ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆಗೆ ತಡವಾಗಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಆಗುವ ಸಾಧ್ಯತೆ ಇದೆ ಎಂದ್ರು. …

Read More »

ಗಣರಾಜ್ಯೋತ್ಸವದಂದು ಹೊಸ ಬಾಬರಿ ಮಸೀದಿಗೆ ಶಂಕುಸ್ಥಾಪನೆ

ಅಯೋಧ್ಯ,,ಡಿ.17-ಬಾಬರಿ ಮಸೀದಿ ಸ್ಥಳದಿಂದ ಸ್ಥಳಾಂತರಿಸಿರುವ ಮಸೀದಿ ನಿರ್ಮಾಣ ಕಾರ್ಯಕ್ಕೆ ಗಣರಾಜ್ಯೋತ್ಸವದಂದು ಶಂಕು ಸ್ಥಾಪನೆ ನೆರವೇರಿಸಲು ತೀರ್ಮಾನಿಸಲಾಗಿದೆ. ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿರುವ ಐದು ಎಕರೆ ಪ್ರದೇಶದಲ್ಲಿ ಹೊಸ ಮಸೀದಿ ನಿರ್ಮಾಣ ಮಾಡಲು ಟ್ರಸ್ಟ್ ಸದಸ್ಯರು ತೀರ್ಮಾನಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದ ದಿನವಾದ ಗಣರಾಜ್ಯೋತ್ಸವದಂದು ಏಕತೆ ಸಂಕೇತವಾಗಿ ಅಂದು ಮಸೀದಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದೇವೆ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅತ್ತಾರ್ ಹುಸೇನ್ ತಿಳಿಸಿದ್ದಾರೆ. ಮಸೀದಿ ನಿರ್ಮಾಣ …

Read More »