Breaking News

ರಾಜ್ಯ

ಶಾಲೆ ಆರಂಭದ ಕುರಿತು ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು : ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಪೂರ್ವ ಸಿದ್ದತೆಗಳನ್ನು ಕೈಗೊಳ್ಳುತ್ತಿದೆ. ಜನವರಿಯಿಂದಲೇ ಶಾಲೆ ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಮಕ್ಕಳಿಗೆ ಹೊರೆಯಾಗದ ರೀತಿ ಪಠ್ಯಕ್ರಮ ಅಂತಿಮಗೊಳಿಸಲಾಗುತ್ತದೆ. ಕನಿಷ್ಠ ಕಲಿಕೆಗೆ ಒತ್ತು ನೀಡಲಾಗುತ್ತದೆಯಲ್ಲದೇ, ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಹಿರಿಯ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಅವಶ್ಯಕತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ …

Read More »

ಬ್ರೇಕಿಂಗ್: ರಾಜ್ಯಾದ್ಯಂತ ಇಂದಿನಿಂದ 9 ದಿನ ನೈಟ್ ಕರ್ಪ್ಯೂ ಜಾರಿ

ಬ್ರೇಕಿಂಗ್: ರಾಜ್ಯಾದ್ಯಂತ ಇಂದಿನಿಂದ 9 ದಿನ ನೈಟ್ ಕರ್ಪ್ಯೂ ಜಾರಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇಂದಿನಿಂದ 9 ದಿನಗಳವರೆಗೆ ಅಂದರೆ ಜನೆವರಿ 2 ವರೆಗೆ ಈ ಆದೇಶ ಅನ್ವಯವಾಗಲಿದೆ. ಇನ್ನು ಹೊರ ದೇಶದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಪಡಬೇಕು. ರಾತ್ರಿ ಹೊತ್ತು …

Read More »

ರಾಜ್ಯದಲ್ಲಿ ಹೆಚ್ಚಿನ ಚಳಿಯಿದೆ. ಜಾಕೆಟ್, ಸ್ವೆಟರ್ ಹಾಕಿದರೂ ಚಳಿ ಕಡಿಮೆಯಾಗುತ್ತಿಲ್ಲ.

(ಡಿಸೆಂಬರ್​ 23): ಸಿಲಿಕಾನ್ ಸಿಟಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಚಳಿಯಿದೆ. ಕಳೆದ‌ ಹದಿನೈದು ದಿನಗಳ ಹಿಂದೆ ಚಂಡಮಾರುತ ಕಾರಣದಿಂದ ಚಳಿ ಹೆಚ್ಚಿತ್ತು. ಇದೀಗ ಚಂಡಮಾರುತದಿಂದಲ್ಲದೇ ಹೋದರೂ ಚಳಿಗಾಲಕ್ಕೆ ಚಳಿಯಿದೆ ಎಂದುಕೊಳ್ಳುವವರಿದ್ದಾರೆ‌‌. ಆದರೆ, ಕಳೆದ ವರುಷಕ್ಕೆ ಹೋಲಿಸಿದರಲ್ಲಿ ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಚಳಿಯಿದೆ. ಜಾಕೆಟ್, ಸ್ವೆಟರ್ ಹಾಕಿದರೂ ಚಳಿ ಕಡಿಮೆಯಾಗುತ್ತಿಲ್ಲ. ಕಳೆದೊಂದು ವಾರದಿಂದ ಅತಿಯಾದ ಚಳಿಯಿದ್ದು, ಬೆಳಗ್ಗೆ ಹಾಗೂ ರಾತ್ರಿ ವೇಳೆ‌ ಇನ್ನಷ್ಟು ಹೆಚ್ಚಿದೆ. ನಿಮ್ಮೆ ಮಂಗಳವಾರ ಬೆಂಗಳೂರಿನ ಹೆಚ್​ಎಎಲ್​​ ಬಳಿ ಕನಿಷ್ಠ …

Read More »

ನಾನು ಫೋಟೋಶೂಟ್ ಮಾಡಿಸಿದ್ದೆ ಅಷ್ಟೆ. ಆ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತೇನೆ. ಸದ್ಯ ನಾನು ಬೆಂಗಳೂರಿನಲ್ಲಿಯೇ ಇದ್ದೇನೆ.

ಬೆಂಗಳೂರು: ನಾನು ಬೆಂಗಳೂರಲ್ಲಿಯೇ ಇದ್ದೀನಿ. ಆರಾಮಾಗಿದ್ದೀನಿ ಎಂದು ನಟಿ ಹರ್ಷಿಕಾ ಪೂಣಚ್ಚ ಸ್ಪಷ್ಟಪಡಿಸಿದ್ದಾರೆ. ವಿಡಿಯೋ ಮೂಲಕ ಲಂಡನ್ ಪ್ರವಾಸದ ಬಗ್ಗೆ ಮಾಹಿತಿ ನೀಡಿರುವ ನಟಿ, ಹೌದು ನಾನು ಲಂಡನ್ ಗೆ ಹೋಗಿದ್ದೆ. ಆದರೆ ಎರಡು ವಾರಗಳ ಹಿಂದೆನೆ ನಾನು ಅಲ್ಲಿಂದ ವಾಪಸ್ ಬಂದಿದ್ದೇನೆ. ಮತ್ತೆ ಅಲ್ಲಿಗೆ ಹೋಗಲಿಲ್ಲ. ಲಂಡನ್ ನನಗೆ ತುಂಬಾ ಇಷ್ಟವಾದ ಜಾಗವಾಗಿರುವುದರಿಂದ ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತೇನೆ. ಎಂದರು. ವಾರದ ಹಿಂದೆ ಅಲ್ಲಿ ನಾನು ಫೋಟೋಶೂಟ್ …

Read More »

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಲತಂದೆ ಮಗುವನ್ನೇ ಕೊಲೆ

ಮಡಿಕೇರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಲತಂದೆ ಮಗುವನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ರವಿ ಐದು ವರ್ಷದ ಮಗುವನ್ನು ಕೊಂದಿದ್ದಾನೆ. ಮೈಸೂರು ಜಿಲ್ಲೆಯ ಹುಣುಸೂರಿನ ಲಕ್ಷ್ಮಿ ಎಂಬುವರ ಮಗುವನ್ನು ರವಿ ಕೊಲೆ ಮಾಡಿದ್ದಾನೆ. ಪತಿಯನ್ನು ಬಿಟ್ಟು ಬಂದ ಲಕ್ಷ್ಮಿ ರವಿಯೊಂದಿಗೆ ವಾಸವಿದ್ದಳು. ಕಳೆದ ಆರು ತಿಂಗಳಿಂದ ರವಿ ಹಾಗೂ ಲಕ್ಷ್ಮಿ ಒಟ್ಟಿಗೆ ಇದ್ದರು. ನಮ್ಮಿಬ್ಬರ …

Read More »

ಲೋಕೋಪಯೋಗಿ ಇಲಾಖೆಯಲ್ಲಿ ಹೊರಗುತ್ತಿಗೆ ಮೂಲಕ 950 ಎಂಜಿನಿಯರ್ ಗಳ ನೇಮಕ: ಗೋವಿಂದ ಕಾರಜೋಳ

ಧಾರವಾಡ(ಡಿಸೆಂಬರ್​​.22): ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಗಳ ಕೊರತೆ ಇದೆ, ಹೊರಗುತ್ತಿಗೆ ಮೂಲಕ 950 ಇಂಜಿನಿಯರ್ ಗಳನ್ನ ತೆಗೆದುಕೊಳ್ಳಲು ಕ್ರಮ ವಹಿಸಲಾಗಿದೆ. ಏಜೆನ್ಸಿಯಿಂದ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಧಾರವಾಡದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿ ಅವರು, ರಾಜ್ಯದಲ್ಲಿನ ಟೂರಿಸಂ ಪ್ರದೇಶಗಳಲ್ಲಿನ ಪ್ರವಾಸಿ ಮಂದಿರಗಳನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಅಲ್ಲದೇ ಲೋಕೋಪಯೋಗಿ ಇಲಾಖೆಗೂ ಸಹ …

Read More »

ಬಿಜೆಪಿ-ಜೆಡಿಎಸ್ ವಿಲೀನ..? ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣ..!

ಬೆಂಗಳೂರು,ಡಿ.22- ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣದ ಮಾತುಗಳು ಕೇಳಿ ಬರುತ್ತಿದೆ. ರಾಜ್ಯದ ಏಕೈಕ ಪ್ರಭಾವಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎನ್ನುವ ಚರ್ಚೆ ಆರಂಭಗೊಂಡಿದೆ. ಸ್ವತಃ ಉಭಯ ಪಕ್ಷಗಳ ಪ್ರಮುಖ ನಾಯಕರೇ ನೇರವಾಗಿ ಸ್ಪಷ್ಟೀಕರಣ ನೀಡುತ್ತಿರುವುದು ಎರಡೂ ಪಕ್ಷಗಳ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿದೆ. ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದನಂತರ ಹಳೇ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ …

Read More »

ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರದ್ದು ದಪ್ಪ ಚರ್ಮ.:ಶ್ರೀನಿವಾಸ್ ಪ್ರಸಾದ್

ಮೈಸೂರು (ಡಿ. 22): ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರದ್ದು ದಪ್ಪ ಚರ್ಮ. ನನ್ನನ್ನು ಮಂತ್ರಿಸ್ಥಾನದಿಂದ ಕೆಳಗಿಳಿಸಿ, ಬರೆ ಹಾಕಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಆ ಮಹದೇವಪ್ಪ ಸಿದ್ದರಾಮಯ್ಯನ ಚೇಲ. ಸಿದ್ದರಾಮಯ್ಯನ ದುರಹಂಕಾರದಿಂದಲೇ ಜನರು ಅವರನ್ನು ಸೋಲಿಸಿದರು. ಅವರು ಸರಿಯಾಗಿದ್ದರೆ ಅವರ ಪಕ್ಷದವರೇ ಅವರ ವಿರುದ್ಧ ಯಾಕೆ ಹೈಕಮಾಂಡ್​ಗೆ ದೂರು ಕೊಡುತ್ತಿದ್ದರು? ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ದಪ್ಪ ಚರ್ಮದ ಮನುಷ್ಯ. ಆತನಿಗೆ ನಾಗರಿಕತೆ, ಸಂಸ್ಕೃತಿಯೇ ಇಲ್ಲ. …

Read More »

ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್​ ನಕಾರ; ಸಿಎಂ ಬಿಎಸ್​ವೈಗೆ ಸಂಕಷ್ಟ

ಬೆಂಗಳೂರು (ಡಿ. 22):  ಬೆಳ್ಳಂದೂರು ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪಗೆ  ಸಂಕಷ್ಟ ಎದುರಾಗಿದೆ. ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈ ಕೋರ್ಟ್​ ನಿರಾಕರಿಸಿದೆ. ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾ. ಜಾನ್ ಮೈಕೆಲ್ ಕುನ್ಹಾ ನೇತೃತ್ವದ  ಪೀಠ ಅರ್ಜಿ ವಜಾಗೊಳಿಸಿದೆ. ಅರ್ಜಿಯೊಂದಿಗೆ ಸಲ್ಲಿಸಿದ್ದ ಪೂರಕ ದಾಖಲೆಗಳು ಸೂಕ್ತವಾಗಿಲ್ಲ ಎಂದು ತಿಳಿಸಿ ಹೈಕೋರ್ಟ್​​ ಏಕ ಸದಸ್ಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ‌. ಇದರಿಂದ ಮುಖ್ಯಮಂತ್ರಿಗಳು ಮತ್ತೊಮ್ಮೆ ತೊಂದರೆಗೆ ಸಿಲುಕಿದ್ದಾರೆ.  ಬೆಳ್ಳಂದೂರು …

Read More »

ಡೀಸೆಲ್ ಟ್ಯಾಂಕರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ

: ಡೀಸೆಲ್ ಟ್ಯಾಂಕರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದ ಐವರು ಸಜೀವ ದಹನಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ಲಖನೌದಿಂದ ಆಗ್ರಾಗೆ ತೆರಳುತ್ತಿದ್ದ ಕಾರು, ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಏಕಾಏಕಿ ರಾಂಗ್ ಟರ್ನ್ ತೆಗೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಡೋರ್ ಲಾಕ್ ಆಗಿದ್ದ ಕಾರಣ ಹೊರಬರಲಾಗದೇ ಕಾರಿನಲ್ಲಿದ್ದ …

Read More »