Breaking News

ರಾಜ್ಯ

ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಮುಹೂರ್ತ ಆಚರಿಸಲಾಗಿತ್ತು. ಆದರೆ ಇದೀಗ ಈ ಸಿನಿಮಾಗೆ ಕಂಟಕ ಎದುರಾಗಿದೆ.

ಬೆಂಗಳೂರು: ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಎಂಆರ್ ಬ್ಯಾನರ್ ನಲ್ಲಿ ತೆರೆಗೆ ಬರಲು ಮುಹೂರ್ತ ಆಚರಿಸಲಾಗಿತ್ತು. ಆದರೆ ಇದೀಗ ಈ ಸಿನಿಮಾಗೆ ಕಂಟಕ ಎದುರಾಗಿದೆ. ಮುತ್ತಪ್ಪ ರೈ ಈ ಹಿಂದೆ ನನ್ನ ಸಿನಿಮಾ ಅಥವಾ ಬುಕ್ ಬರೆಯುವ ಮುನ್ನ ಕುಟುಂಬದವರನ್ನು ಕೇಳಬೇಕೆಂದು ವಿಲ್ ಬರೆದಿದ್ದರು. ಆದರೆ ಎಂಆರ್ ಸಿನಿಮಾವನ್ನು ರವಿ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದು, ಇವರು ಕುಟುಂಬಸ್ಥರನ್ನು ಕೇಳದೆ ಸಿನಿಮಾ ಮಾಡಿದ್ದಾರೆ ಎಂದು ಫಿಲಂ ಚೇಂಬರ್ ಮತ್ತು ನಿರ್ಮಾಪಕ ಸಂಘಕ್ಕೆ …

Read More »

ಮಹಾಲಕ್ಷ್ಮೀ ಅರ್ಬನ್ ಬ್ಯಾಂಕಿನ ಉಪಾಧ್ಯಕ್ಷ ಜಿತೇಂದ್ರ ಬಾಳಾಸಾಹೇಬ ಮಾಂಗಳೇಕರ ಹೇಳಿದರು.

ಗೋಕಾಕ: ಹಿರಿಯ ಸಹಕಾರಿ, ಮಹಾಲಕ್ಷ್ಮೀ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಬಾಳಾಸಾಹೇಬ ಮಾಂಗಳೇಕರ ಅವರ ಮಾರ್ಗದರ್ಶನದಲ್ಲಿ ಮತ್ತು ಗ್ರಾಹಕರ ಸಹಕಾರದಿಂದ ನಮ್ಮ ಬ್ಯಾಂಕು ಪ್ರಸಕ್ತ ಸಾಲಿನಲ್ಲಿ 1.70 ಕೋಟಿ ರೂಗಳ ಲಾಭ ಗಳಿಸಿದೆ ಎಂದು ಇಲ್ಲಿನ ಮಹಾಲಕ್ಷ್ಮೀ ಅರ್ಬನ್ ಬ್ಯಾಂಕಿನ ಉಪಾಧ್ಯಕ್ಷ ಜಿತೇಂದ್ರ ಬಾಳಾಸಾಹೇಬ ಮಾಂಗಳೇಕರ ಹೇಳಿದರು. ಬ್ಯಾಂಕಿನ 44ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀ ಅರ್ಬನ್ ಬ್ಯಾಂಕ್ ಗ್ರಾಹಕರ ಹಿತಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಅತ್ತುತ್ತಮವಾದ ಸೇವೆಯನ್ನು …

Read More »

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ. ನಂದಿನಿಯಿಂದ ಗ್ರಾಹಕರಿಗೆ ಗುಡ್ ನ್ಯೂಸ್: ಸಿಹಿ-ಚೀಸ್ ಫೇಸ್ಟ್ ಮೇಲೆ ಶೇಕಡಾ 10ರಷ್ಟು ರಿಯಾಯಿತಿ.

ಬೆಂಗಳೂರು: ರಾಜ್ಯದ ಎಲ್ಲಾ ವರ್ಗಗಳ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಶುಚಿ-ರುಚಿಯಾದ ಹಾಲು ಮತ್ತು ಹಾಲಿನ ಉತ್ಪನಗಳನ್ನು ನಂದಿನಿ ಬ್ರಾಂಡ್ ಅಡಿಯಲ್ಲಿ ಕಳೆದ 4ದಶಕಗಳಿಂದ ನೀಡುತ್ತಾ ಬಂದಿರುವ ಕೆಎಮ್‍ಎಫ್, ಹೊಸ ವರ್ಷದ ನಿಮಿತ್ಯ ಇಂದಿನಿಂದ ಜ. 7ರವರೆಗೆ ರಾಜ್ಯದಾದ್ಯಂತ ನಂದಿನಿ ಸಿಹಿ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.   ಗುರುವಾರದಂದು ಇಲ್ಲಿಯ ಕೆಎಮ್‍ಎಫ್ ಪ್ರಧಾನ ಕಛೇರಿಯಲ್ಲಿ ನಂದಿನಿ ಸಿಹಿ ಉತ್ಸವ …

Read More »

ಐಎಸ್‍ಡಿ ಕಚೇರಿಗೆ ಬೀಗ ಜಡಿದ ಎಡಿಜಿಪಿ ಭಾಸ್ಕರ್ ರಾವ್

ಶಿವಮೊಗ್ಗ, ಡಿ.24- ಇಲ್ಲಿನ ಡಿಎಆರ್ ಆವರಣದಲ್ಲಿರುವ ಆಂತರಿಕ ಭದ್ರತಾ ವಿಭಾಗದ ಕಚೇರಿಯ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿಗಳ ನಿರಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಕಚೇರಿಗೆ ಬೀಗ ಜಡಿದಿದ್ದಾರೆ. ಎರಡು ದಿನಗಳ ಹಿಂದೆ ಭಾಸ್ಕರ್ ರಾವ್ ಶಿವಮೊಗ್ಗದಲ್ಲಿ ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ಭೇಟಿ ನೀಡಿದಾಗ ಇಲ್ಲಿನ ಸಿಬ್ಬಂದಿಗಳ ಕಾರ್ಯ ವೈಖರಿಯ ಪರಿಶೀಲನೆ ನಡೆಸಿ ತಿಂಗಳ ಹಿಂದೆಯೇ ಸೂಚನೆ ಕೊಟ್ಟಿದ್ದರೂ ಸ್ಪೋಟಕ ಸಂಗ್ರಹ ಮತ್ತು …

Read More »

ಸರ್ಕಾರ ರಾತ್ರಿ ಕರ್ಫ್ಯು ರದ್ದು ಮಾಡಿದೆ.

ಬೆಳಗಾವಿ- ಇಂದಿನಿಂದ ಜನೇವರಿ 2 ರವರೆಗೆ ನೈಟ್ ಕರ್ಫ್ಯು ಜಾರಿ ಮಾಡಿ ಮಾರ್ಗಸೂಚಿ ಗಳನ್ನು ಹೊರಡಿಸಿದ್ದ ರಾಜ್ಯ ಸರ್ಕಾರ ಇಂದು ಏಕಾ ಏಕಿ ಕರ್ಫ್ಯು ಆದೇಶವನ್ನು ವಾಪಸ್ ಪಡೆದು ನೈಟ್ ಕರ್ಫ್ಯು ರದ್ದು ಮಾಡಿದೆ. ಸರ್ಕಾರ ನೈಟ್ ಕರ್ಫ್ಯು ಆದೇಶ ಹೊರಡಿಸಿದ ಮೇಲೆ ಅನೇಕ ಟೀಕೆ ಟಿಪ್ಪಣಿ ಗಳು ಎದುರಾದ ಹಿನ್ನಲೆಯಲ್ಲಿ ಸರ್ಕಾರ ರಾತ್ರಿ ಕರ್ಫ್ಯು ರದ್ದು ಮಾಡಿದೆ. ಕೊರೊನಾ ರೂಪಾಂತರ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ …

Read More »

ಸಾಂಸ್ಕೃತಿಕ ನಗರಿಯಲ್ಲಿ ಹೊಸವರ್ಷಕ್ಕಿಲ್ಲ ಸಂಭ್ರಮ; ಅರಮನೆ ದೀಪಾಲಂಕಾರದ ಜೊತೆ ಹಲವು ಕಾರ್ಯಕ್ರಮಗಳು ರದ್ದು

ಮೈಸೂರು: ಸಾಕಷ್ಟು ಕೆಟ್ಟ ಘಟನೆಗಳಿಂದ ಕಳೆದು ಹೋಗಿರುವ ಈ 2020ರನ್ನ ಕಳುಹಿಸಿ 2021ನ್ನು ಸಂಭ್ರಮದಿಂದ ಸ್ವಾಗತಿಸಲು ವಿಶ್ಚದಾದ್ಯಂತ ಜನರು ಸಜ್ಜಾಗಿದ್ದಾರೆ. ಆದರೆ, ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಯಾಗಿರುವ  ಮೈಸೂರಿನಲ್ಲಿ ಈ ವರ್ಷ ಹೊಸ ವರ್ಷದ ಸಂಭ್ರಮಗಳಿಗೆ ಬ್ರೇಕ್‌ ಬಿದ್ದಿದೆ. ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಹೊಸವರ್ಷಾಚರಣೆ ಕಾರ್ಯಕ್ರಮಗಳು ಇರೋದಿಲ್ಲ,  ಮೈಸೂರು ಅರಮನೆ ದೀಪಾಲಂಕಾರ ಹಾಗೂ ಅರಮನೆಯಲ್ಲಿ ಮಧ್ಯರಾತ್ರಿ 12 ಗಂಟೆಗೆ ಬಾಣಬಿರುಸು ಪ್ರದರ್ಶನದ ಮೂಲಕ ಹೊಸ ವರ್ಷ ಸ್ವಾಗತವು ಕೂಡ …

Read More »

ಹೊಸ ವರ್ಷಾಚರಣೆಗೆ ಬ್ರೇಕ್: ಸರ್ಕಾರದ ಆದೇಶ ಮೀರಿದರೆ ಕಠಿಣ ಕ್ರಮ; ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಕೆ

ಬೆಂಗಳೂರು(ಡಿ.24): ರಾಜ್ಯದಲ್ಲಿ ಇಂದಿನಿಂದ ಜನವರಿ 2ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಕ್ರಿಸ್​ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ, ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹೊಸ ವರ್ಷಾಚರಣೆ ವೇಳೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಬಿಗಿ ಭದ್ರತೆ ಹೇಗಿರುತ್ತೆ ಎಂಬುದರ ಬಗ್ಗೆ ಪೊಲೀಸ್ ಕಮೀಷನರ್ ಕಮಲ್​ ಪಂಥ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದಿನಿಂದ ಜನವರಿ 2 ರ ವರೆಗೆ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ …

Read More »

ಮಾಜಿ ಗೆಳತಿಯ ಬಾಳಿಗೆ ಬೆಂಕಿ ಇಟ್ಟ ಪಾಪಿ..!

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನ ಆಕೆಯ ಮಾಜಿ ಪ್ರಿಯತಮ ಕೊಲೆ ಮಾಡಿ ಬೆಂಕಿ ಹಚ್ಚಿದ ದಾರುಣ ಘಟನೆ ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯಲ್ಲಿ ನಡೆದಿದೆ.‌ ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಲಾಗಿದ್ದು, ಆಕೆ ಬೇರೆಯವನ ಜೊತೆ ಪ್ರೇಮ ಸಂಬಂಧ ಹೊಂದಿದ್ದನ್ನ ಸಹಿಸಲಾಗದೇ ಈ ರೀತಿ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಗಾರೆ ಕೆಲಸ ಮಾಡಿಕೊಂಡಿದ್ದ ರಾಜೇಶ್​ ಸ್ನೇಹಲತಾ ಎಂಬಾಕೆಯನ್ನ ಪ್ರೀತಿ ಮಾಡುತ್ತಿದ್ದ. ಆದರೆ ಸ್ನೇಹಲತಾ ಗುತ್ತಿಗೆ ಆಧಾರದಲ್ಲಿ …

Read More »

ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರ ಕೊರೋನಾ ವೈರಸ್ ಪತ್ತೆ

ನವದೆಹಲಿ: ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿ ಜಗತ್ತಿನಾದ್ಯಂತ ಜನ ಕಂಗೆಟ್ಟಿದ್ದಾರೆ. ಇದರ ಬೆನ್ನಲ್ಲೇ ಈಗ ದಕ್ಷಿಣ ಆಫ್ರಿಕಾದಲ್ಲಿ ಹೊಸ ಮಾದರಿಯ ಕೋವಿಡ್-19 ವೈರಾಣುವಿನ 2 ಪ್ರಕರಣಗಳು ಪತ್ತೆಯಾಗಿದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೊಸ ಮಾದರಿಯ ವೈರಾಣು ವ್ಯಾಪಕವಾಗಿ ಹರಡುತ್ತಿರುವ ರೀತಿಯಲ್ಲೇ ದಕ್ಷಿಣ ಆಫ್ರಿಕಾದಲ್ಲೂ ವೈರಾಣು ಹರಡುತ್ತಿದ್ದು ಎರಡನೇ ಅಲೆ ಪ್ರಾರಂಭವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಎರಡೂ ಪ್ರಕರಣಗಳು ದಕ್ಷಿಣ ಆಫ್ರಿಕಾದಿಂದ ಬಂದವರಿಂದಲೇ ಹೊಸ ಮಾದರಿಯ …

Read More »

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪೊಲೀಸರ ವಶಕ್ಕೆ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಕಾಯ್ದೆ ರದ್ದು ಮಾಡುವಂತೆ ಕೋರಿ ಸಹಿ ಸಂಗ್ರಹ ಮನವಿ ಪತ್ರದೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರೀಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃಷಿ ಕಾಯ್ದೆ ರದ್ದು ಮಾಡಬೇಕು ಎಂದು ಆಗ್ರಹಿಸಿ 2 ಕೋಟಿ ಸಹಿ ಸಂಗ್ರಹ ಮನವಿ ಪತ್ರದೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು …

Read More »