Breaking News
Home / ಜಿಲ್ಲೆ / ಮೈಸೂರ್ / ಸಾಂಸ್ಕೃತಿಕ ನಗರಿಯಲ್ಲಿ ಹೊಸವರ್ಷಕ್ಕಿಲ್ಲ ಸಂಭ್ರಮ; ಅರಮನೆ ದೀಪಾಲಂಕಾರದ ಜೊತೆ ಹಲವು ಕಾರ್ಯಕ್ರಮಗಳು ರದ್ದು

ಸಾಂಸ್ಕೃತಿಕ ನಗರಿಯಲ್ಲಿ ಹೊಸವರ್ಷಕ್ಕಿಲ್ಲ ಸಂಭ್ರಮ; ಅರಮನೆ ದೀಪಾಲಂಕಾರದ ಜೊತೆ ಹಲವು ಕಾರ್ಯಕ್ರಮಗಳು ರದ್ದು

Spread the love

ಮೈಸೂರು: ಸಾಕಷ್ಟು ಕೆಟ್ಟ ಘಟನೆಗಳಿಂದ ಕಳೆದು ಹೋಗಿರುವ ಈ 2020ರನ್ನ ಕಳುಹಿಸಿ 2021ನ್ನು ಸಂಭ್ರಮದಿಂದ ಸ್ವಾಗತಿಸಲು ವಿಶ್ಚದಾದ್ಯಂತ ಜನರು ಸಜ್ಜಾಗಿದ್ದಾರೆ. ಆದರೆ, ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಯಾಗಿರುವ  ಮೈಸೂರಿನಲ್ಲಿ ಈ ವರ್ಷ ಹೊಸ ವರ್ಷದ ಸಂಭ್ರಮಗಳಿಗೆ ಬ್ರೇಕ್‌ ಬಿದ್ದಿದೆ. ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಹೊಸವರ್ಷಾಚರಣೆ ಕಾರ್ಯಕ್ರಮಗಳು ಇರೋದಿಲ್ಲ,  ಮೈಸೂರು ಅರಮನೆ ದೀಪಾಲಂಕಾರ ಹಾಗೂ ಅರಮನೆಯಲ್ಲಿ ಮಧ್ಯರಾತ್ರಿ 12 ಗಂಟೆಗೆ ಬಾಣಬಿರುಸು ಪ್ರದರ್ಶನದ ಮೂಲಕ ಹೊಸ ವರ್ಷ ಸ್ವಾಗತವು ಕೂಡ ಇರೋದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, “ಕೊರೋನಾ ರೂಪಾಂತರದ ಬಗ್ಗೆ ಮೈಸೂರು ಜಿಲ್ಲಾಡಳಿತ ಕ್ರಮ ವಹಿಸಿದೆ. ಈ ಹಿನ್ನೆಯಲ್ಲಿ ಹೊಸ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನವು ಇರೋದಿಲ್ಲ. ಹಾಗೇ ದೀಪಾಲಂಕಾರ ಮತ್ತು ಬಾಣಬಿರುಸುಗಳ ಪ್ರದರ್ಶನ ಕೂಡ ಇರುವುದಿಲ್ಲ.

ಅಂದು ರಾತ್ರಿ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗುವುದು ಅಂತ ಮಾಹಿತಿ ನೀಡಿದರು. ಇನ್ನು ನಗರದಲ್ಲಿ ಆಯೋಜನೆಗೋಳ್ಳುತ್ತಿದ್ದ ಉಳಿದ ಕಾರ್ಯಕ್ರಮಗಳ ಬಗ್ಗೆಯೂ ಎಚ್ಚರ ವಹಿಸಿದ್ದೇವೆ. ಹೊಸ ವರ್ಷದ ದಿನ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ ಬಗ್ಗೆ ಚಿಂತನೆ ಮಾಡಿದ್ದು, ಈ ಬಗ್ಗೆ ನಾಳೆ ಅಥವ ನಾಳಿದ್ದು ನಿರ್ಧಾರ ಪ್ರಕಟಿಸುತ್ತೇವೆ” ಎಂದು ತಿಳಿಸಿದರು.ಇನ್ನು ನಾಳೆ ಏಕಾದಶಿ ಇರೋದ್ರಿಂದ ಖಾಸಗಿ ದೇವಾಲಯಗಳನ್ನ ಮುಚ್ಚುವಂತೆ ಆದೇಶ ನೀಡಲು ಸಾಧ್ಯವಿಲ್ಲ. ಆದರೆ ಕೋವಿಡ್ ನಿಯಮ ಪಾಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಕೊಡುವಂತೆ ಸೂಚಿಸುತ್ತೇವೆ. ರೂಪಾಂತರಗೊಂಡ ವೈರಸ್ ವಿಚಾರವಾಗಿ ಬ್ರಿಟನ್‌ನಿಂದ ಬಂದವರ ಮಾಹಿತಿ ಪತ್ತೆಯಾಗಿದೆ. 137 ಮಂದಿ ಬ್ರಿಟನ್‌ನಿಂದ ಮೈಸೂರಿಗೆ ಬಂದಿದ್ದಾರೆ. ಅದರಲ್ಲಿ ಡಿ.21ರಂದು 18 ಮಂದಿ ಆಗಮಿಸಿದ್ದರು, ಆ 18 ಮಂದಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಉಳಿದ 119 ಮಂದಿಯ ಪರೀಕ್ಷೆಯನ್ನು ಮಾಡುತ್ತಿದ್ದೇವೆ. ಹೊಸ ವೈರಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗುತ್ತಿಲ್ಲ ಆದರೆ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಿದೆ ಅಂತಷ್ಟೆ ಗೊತ್ತಾಗಿದೆ. ಇದಕ್ಕಾಗಿ ಎಲ್ಲ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಇತ್ತ ಅರಮನೆಯಲ್ಲಿ ಈ ಬಾರಿ ಮೈಸೂರು ಅರಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿರುವ  ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಮೈಸೂರು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ. ಹೊಸ ವರ್ಷಾಚರಣೆ ಕಾರ್ಯಕ್ರಮ ಯುಗಾದಿ ಸಂಗೀತೋತ್ಸವಕ್ಕೆ ಮಾಡುವ ಚಿಂತನೆ ಇದೆ, ಅದು ಸಹ ಕೊರೋನಾ ಕಡಿಮೆ ಆದರೆ ಮಾತ್ರ. ಇಲ್ಲವಾದರೆ ಯುಗಾದಿ ವೇಳೆಯ ಸಂಗಿತೋತ್ಸವ ರದ್ದಾಗಲಿದೆ.ಈ ಬಾರಿಬಾಣಬಿರಿಸುಗಳ ಸಂಭ್ರಮ, ಫ್ಲವರ್ ಶೋ, ಗೊಂಬೆಗಳ ಪ್ರದರ್ಶನಕ್ಕು ಬ್ರೇಕ್ ಹಾಕಿದ್ದೇವೆ. ಸಹಜವಾಗಿ ದಸರಾ ಸಮಯಕ್ಕಿಂತ ಹೆಚ್ಚು ಮಂದಿ ಡಿಸೆಂಬರ್ ಕೊನೆ ವಾರದಲ್ಲಿ ಅರಮನೆಗೆ ಬರುತ್ಥಾರೆ.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ