Breaking News

ಮಾಜಿ ಗೆಳತಿಯ ಬಾಳಿಗೆ ಬೆಂಕಿ ಇಟ್ಟ ಪಾಪಿ..!

Spread the love

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನ ಆಕೆಯ ಮಾಜಿ ಪ್ರಿಯತಮ ಕೊಲೆ ಮಾಡಿ ಬೆಂಕಿ ಹಚ್ಚಿದ ದಾರುಣ ಘಟನೆ ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯಲ್ಲಿ ನಡೆದಿದೆ.‌

ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಲಾಗಿದ್ದು, ಆಕೆ ಬೇರೆಯವನ ಜೊತೆ ಪ್ರೇಮ ಸಂಬಂಧ ಹೊಂದಿದ್ದನ್ನ ಸಹಿಸಲಾಗದೇ ಈ ರೀತಿ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಗಾರೆ ಕೆಲಸ ಮಾಡಿಕೊಂಡಿದ್ದ ರಾಜೇಶ್​ ಸ್ನೇಹಲತಾ ಎಂಬಾಕೆಯನ್ನ ಪ್ರೀತಿ ಮಾಡುತ್ತಿದ್ದ. ಆದರೆ ಸ್ನೇಹಲತಾ ಗುತ್ತಿಗೆ ಆಧಾರದಲ್ಲಿ ಎಸ್​ಬಿಐನಲ್ಲಿ ಕೆಲಸ ಪಡೆದ ಬಳಿಕ ಈತನಿಂದ ದೂರವಾಗಿದ್ದಳು. ಅಲ್ಲದೇ ತನ್ನ ಸಹಪಾಠಿಯೊಂದಿಗೆ ಆಕೆ ಹತ್ತಿರವಾಗುತ್ತಿದ್ದುದ್ದನ್ನ ಸಹಿಸಲಾಗದೇ ರಾಜೇಶ್​ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಸ್ನೇಹಲತಾಲಳನ್ನ ಭೇಟಿಯಾಗೋದಕ್ಕೆ ಕರೆದ ರಾಜೇಶ್​​, ಆಕೆಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಮದನ್​ಪಲ್ಲಿ ಬಳಿ ಇಳಿಸಿದ್ದಾನೆ. ಅಲ್ಲಿ ಆಕೆ ಬೇರೊಬ್ಬನ ಜೊತೆ ಇರೋದರ ಬಗ್ಗೆ ಕ್ಯಾತೆ ತೆಗೆದ ರಾಜೇಶ್​ ಬಳಿಕ ಆಕೆಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

 


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ