Breaking News

ರಾಜ್ಯ

ಜನಪ್ರತಿನಿಧಿಗಳ ಜತೆ ಸಂವಹನ ಇರಲಿ: ಗದಗ ಜಿ.ಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಸೂಚನೆ

ಗದಗ: ‘ಎಲ್ಲ ಇಲಾಖೆಗಳ ಅಧಿಕಾರಿಗಳು ಸರ್ಕಾರ ನೀಡುವ ಆದೇಶಗಳು, ನೂತನ ಯೋಜನೆಗಳ ಮಾಹಿತಿ ಹಾಗೂ ಅನುದಾನದ ವಿವರಗಳನ್ನು ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಈ ಮೂಲಕ ಉತ್ತಮ ಆಡಳಿತಕ್ಕೆ ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಪ್ಪ ನಾಡಗೌಡ್ರ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯ ಆರಂಭದಲ್ಲಿ ಡಿಎಚ್‌ಒ ಡಾ.ಸತೀಶ ಬಸರಿಗಿಡದ ಮಾತನಾಡಿ, ‘ಆಂಬುಲೆನ್ಸ್‌ ಖರೀದಿ ಸಲುವಾಗಿ ಸರ್ಕಾರಕ್ಕೆ …

Read More »

ಫಾರ್ಮಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ 6 ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹೈದರಾಬಾದ್: ಫಾರ್ಮಸಿ ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ರಾಜು, ರಮೇಶ್, ಶಿವ, ನಾದಂ, ಭಾಸ್ಕರ, ಕುಮಾರ್ ಎಂದು ಗುರುತಿಸಲಾಗಿದೆ. ಕಾಲೇಜು ತರಗತಿಯನ್ನು ಮುಗಿಸಿ ಆಟೋ ಹತ್ತಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಆಟೋ ಚಾಲಕನೇ ಕಿಡ್ನಾಪ್ ಮಾಡಿ ಸ್ನೇಹಿತರ ಜೊತೆ ಓಮ್ನಿ ಕಾರಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಗ್ಯಾಂಗ್ ರೇಪ್ …

Read More »

ಮೈಸೂರು- ಚಾಮರಾಜನಗರ ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿಗೆ ಶೀಘ್ರವೇ ಚಾಲನೆ

ಮೈಸೂರು: ಬಹುನಿರೀಕ್ಷಿತ, ಬಹು ಅಗತ್ಯವಿದ್ದ ಮೈಸೂರು-ಚಾಮರಾಜನಗರ ರೈಲು ಮಾರ್ಗ ಎಲೆಕ್ಟ್ರಿಫಿಕೇಷನ್ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ. ಕಾಮಗಾರಿಗೆ ಗುತ್ತಿಗೆಯನ್ನು ನೀಡಲಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ವಿದ್ಯುದೀಕರಣಕ್ಕಾಗಿ ಇರುವ ಕೇಂದ್ರ ಕಚೇರಿಯ ಮುಖ್ಯ ಯೋಜನಾ ನಿರ್ದೇಶಕ ಆರ್ ಎ ಚೌಧರಿ ವಿದ್ಯುದೀಕರಣ ಕಾಮಗಾರಿ 12 ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ, ಫೆ.1 ರಂದು ಮಂಡನೆಯಾದ ಬಜೆಟ್ ನಲ್ಲಿ ಇದಕ್ಕಾಗಿ ಅನುದಾನವನ್ನೂ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆಗೆ 18.89 ಕೋಟಿ ರೂಪಾಯಿಗಳ …

Read More »

ಮೀಸಲಾತಿ ‘ಬಲೆ’ಯಲ್ಲಿ ಸಿಲುಕಿ ಯಡಿಯೂರಪ್ಪ ಸರ್ಕಾರ ವಿಲವಿಲ..!

ಬೆಂಗಳೂರು, ಫೆ.12- ಕಳೆದ ಕೆಲ ತಿಂಗಳಿನಿಂದ ರಾಜ್ಯದಲ್ಲಿ ಹಲವು ಸಮುದಾಯಗಳು ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯಿಸುತ್ತಿರುವುದು ಸರ್ಕಾರವನ್ನು ಅಕ್ಷರಶಃ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಒಂದೆಡೆ ಕುರುಬರು ಎಸ್ಟಿಗೆ ಸೇರಿಸಲು ಶಕ್ತಿ ಪ್ರದರ್ಶನ ತೋರುತ್ತಿದ್ದರೆ, ಇತ್ತ ಪಂಚಮಸಾಲಿ ಲಿಂಗಾಯತರು 2ಎ ಮೀಸಲಾತಿಗೆ ಪಟ್ಟು ಹಿಡಿದಿದ್ದಾರೆ. ಇನ್ನು ವಾಲ್ಮಿಕಿ ಸಮುದಾಯದವರು ಮೀಸಲಾತಿ ಹೆಚ್ಚಿಸುವಂತೆ ಪಟ್ಟು ಹಿಡಿದಿದ್ದಾರೆ.ಎಸ್ಟಿ ಮೀಸಲಾತಿ ಶೇ.7.5ರಷ್ಟು ಹೆಚ್ಚಿಸುವ ಸಂಬಂಧ ಸರ್ಕಾರದ ಮೇಲೆ ನಾನಾ ಸಮುದಾಯಗಳು ಒತ್ತಡ ಹೇರುತ್ತಿವೆ. ಪ್ರಸ್ತುತ ಕನಿಷ್ಠ 8 …

Read More »

ಪಡಿತರದಲ್ಲಿ ರಾಗಿ ಮತ್ತು ಜೋಳ ನೀಡುವಂತೆ ಕೇಂದ್ರ ಸಚಿವರಲ್ಲಿ ಕತ್ತಿ ಮನವಿ

ಬೆಂಗಳೂರು, ಫೆ.12- ಕಡಿತ ಮಾಡಲಾದ ಪಡಿತರಕ್ಕೆ ಪರ್ಯಾಯವಾಗಿ ರಾಗಿ ಮತ್ತು ಜೋಳವನ್ನು ವಿತರಿಸುವಂತೆ ಸಚಿವ ಉಮೇಶ್ ಕತ್ತಿ ಕೇಂದ್ರ ಆಹಾರ ಸಚಿವರಲ್ಲಿ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರನ್ನು ಭೇಟಿ ಮಾಡಿದ ಅವರು ಭೇಟಿ ಮಾಡಿ ಚರ್ಚಿಸಿದ ಅವರು ಪ್ರಸ್ತುತ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ, ಗೋ ವಿತರಣೆ ಕಡಿತಗೊಳಿಸಿದ ಪ್ರಮಾಣಕ್ಕೆ ಪರ್ಯಾಯವಾಗಿ ರಾಗಿ, ಜೋಳ, ಸ್ಥಳೀಯ …

Read More »

ಯುವಕನ ಬರ್ಬರ ಕೊಲೆ!ತಲೆ ಮೇಲೆ ಕಲ್ಲು ಎತ್ತಿ ಹಾಕಿ ಶವ ಗುಂಡಿಗೆ ಹಾಕಿದ್ರು.

ಕಲಬುರಗಿ: ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊನೆಗೆ ಶವವನ್ನು ಗುಂಡಿಯೊಂದಕ್ಕೆ ಹಾಕಿ ಹೋಗಿದ್ದಾರೆ. ಕಲಬುರಗಿ ನಗರದ ದುಬೈ ಕಾಲನಿ ನಿವಾಸಿ ವೀರೇಶ್​ ಬೀಮಳ್ಳಿ (28) ಕೊಲೆಯಾದ ಯುವಕ. ನಗರದ ಸೂಪರ್ ಮಾರ್ಕೆಟ್​​ನ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೀರೇಶ್​, ನಿನ್ನೆ ಮುಂಜಾನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದರೆ ಸಂಜೆ ಮನೆಗೆ ಮರಳಿರಲಿಲ್ಲ. ನಿನ್ನೆ ಮಧ್ಯಾಹ್ನದಿಂದಲೇ ಆತ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಚೌಕ್ ಠಾಣಾ ಪೊಲೀಸರಿಗೆ …

Read More »

ಮೋದಿ ಏಳು ಸುತ್ತಿನ ಕೋಟೆ ಕಟ್ಟಿಕೊಂಡು ತನ್ನ ಪಾಡಿಗೆ ತಾನು ದೆಹಲಿಯಲ್ಲಿ ಇದ್ದಾರೆ. ಮೋದಿ ಇಲ್ಲಿಗೆ ಬಂದು ಕೆಲಸ ಮಾಡುತ್ತಾರಾ:. ಸಿದ್ದರಾಮಯ್ಯ

ಬಾಗಲಕೋಟೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ. ಇದು ಶತಃಸಿದ್ದ. ನಾನು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿ ತಾಲೂಕು ಗೋವನಕೊಪ್ಪದಲ್ಲಿ 2 ಕೋಟಿ ವೆಚ್ಚದಲ್ಲಿ ಪ್ರವಾಹದಿಂದ ಹಾನಿಯಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. …

Read More »

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ

ವಿಜಯಪುರ: ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ನೀಡಲು ಸಮಾಜದ ಎರಡು ಪೀಠಗಳ ಜಗದ್ಗುರುಗಳು ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದಾರೆ. ಈ ಹಂತದಲ್ಲೇ ವಿಜಯಪುರ ನಗರದ ಯುವಕನೊಬ್ಬ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದು, ಸಮಾಜದ ಜಗದ್ಗುರುಗಳ ಮೂಲಕ ಸರ್ಕಾರಕ್ಕೆ ರವಾನಿಸಿ ಗಮನ ಸೆಳೆದಿದ್ದಾನೆ. ನಗರದ ಗ್ಯಾಂಗ್‍ಬಾವಡಿ ನಿವಾಸಿ ಮಂಜುನಾಥ ನಿಡೋಣಿ ಎಂಬ ಯುಕನೇ ತಮ್ಮ ರಕ್ತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ …

Read More »

EPFO ಚಂದಾದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಮನೆ ಬಾಗಿಲಲ್ಲೇ ಸಿಗಲಿದೆ ಜೀವನ ಪ್ರಮಾಣ ಪತ್ರ

ಜೀವನ ಪ್ರಮಾಣ ಪತ್ರ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಿದ್ದು, ಆ ದಿನವೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿದಾರರಿಗೆ ಹೆಚ್ಚು ಸಮಯವೇ ಉಳಿದಿಲ್ಲ. ಆದರೆ ಪಿಂಚಣಿದಾರರಿಗೆ ನೆಮ್ಮದಿ ಕೊಡುವ ನಡೆಯೊಂದರಲ್ಲಿ, ಜೀವನ ಪ್ರಮಾಣ ಪತ್ರವನ್ನು (ಡಿಎಲ್‌ಸಿ) ಡಿಜಿಟಲ್‌ ಆಗಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಇಪಿಎಫ್‌ಓ. ಆಧಾರ್‌ ಚಾಲಿತ ಬಯೋಮೆಟ್ರಿಕ್ ಅಥೆಂಟಿಕೇಶನ್‌ ಮೂಲಕ ಡಿಎಲ್‌ಸಿ ಜನರೇಟ್ ಮಾಡಬಹುದಾಗಿದೆ. ಬಯೋಮೆಟ್ರಿಕ್ ಆಧರಿತ ಡಿಜಿಟಲ್ ಸೇವೆಯಾದ ಡಿಎಲ್‌ಸಿ ಬಳಸಿಕೊಂಡು ಕೇಂದ್ರ ಹಾಗೂ ರಾಜ್ಯ …

Read More »

ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆ, ರಸ್ತೆ ನಿಯಮಗಳ ಪಾಲನೆ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಡಿವೈ ಎಸ್ ಪಿ ಅವರಿಂದ ಜಾಗೃತಿ .

ಗೋಕಾಕ: ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆ, ರಸ್ತೆ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆಗಾಗಿ   ತಗೆದುಕೊಳ್ಳಲು ಪೋಲಿಸ್ ಇಲಾಖೆಯ ವತಿಯಿಂದ ನಗರದಲ್ಲಿ ಸಂಚರಿಸುವ ಆಟೊ ರಿಕ್ಷಾಗಳು, ಬಸ್ಸುಗಳು ಮತ್ತು ಇನ್ನಿತರ ವಾಹನಗಳಿಗೆ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು.   ಈ ಸಂದರ್ಭದಲ್ಲಿ ಡಿವೈಎಸ್ ಪಿ ಜಾವೇದ ಇನಾಮದಾರ, ಹುಕ್ಕೇರಿ ಸಿಪಿಐ ರಮೇಶ ಚಾಯಾಗೋಳ, ಪಿಎಸ್ಐಗಳಾದ ಗಣಪತಿ ಕೊಂಗನೊಳಿ, ಎಸ್ ಎಚ್ ಕರನಿಂಗ, ರಮೇಶ್ ಪಾಟೀಲ, ಆರ್ …

Read More »