ಬೆಂಗಳೂರು : ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಲು ಮುಂದಾಗಿರುವಂತ ಮಧು ಬಂಗಾರಪ್ಪ ಅವರು, ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗೋದು ಖಚಿತ ಎಂಬಂತೆ ಆಗಿದೆ. ಈಗಾಗಲೇ ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟ ಪಡಿಸಿದ್ದಂತ ಮಧು ಬಂಗಾರಪ್ಪ ಅವರು, ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. …
Read More »ಆಸ್ಕರ್‌ನಿಂದ ಹೊರಬಿದ್ದ ಜಲ್ಲಿಕಟ್ಟು ಸಿನಿಮಾ..!
ನವದೆಹಲಿ : ವಿಶ್ವ ಪ್ರಸಿದ್ಧ ಆಸ್ಕರ್ ಸ್ಪರ್ಧೆಯಿಂದ ಭಾರತೀಯ ಚಿತ್ರರಂಗದ ಪ್ರತಿಷ್ಠೆಯ ಗುರುತಾಗಿ, ಅತ್ಯುತ್ತಮ ಅಂತಾರಾಷ್ಟ್ರೀಯ ವೈಶಿಷ್ಟ್ಯ ವಿಭಾಗದಲ್ಲಿ ಪ್ರವೇಶ ಪಡೆದಿದ್ದ ಮಲೆಯಾಳಂ ಚಿತ್ರ ಜಲ್ಲಿಕಟ್ಟು ಮುಂದಿನ ಹಂತಕ್ಕೆ ತಲುಪುವಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿದೆ. 93ನೇ ಅಕಾಡೆಮಿ ಪ್ರಶಸ್ತಿಯಿಂದ ಜಲ್ಲಿಕಟ್ಟು ಹೊರಬಿದ್ದರೂ, ದೇಶದ ಮತ್ತೊಂದು ಅತುತ್ತಮ ಲೈವ್ ಆಯಕ್ಷನ್ ಶಾರ್ಟ್ ಫಿಲಂ ‘ಬಿಟ್ಟು’ ಮುಂದಿನ ಹಂತಕ್ಕೆ ತಲುಪಿ ಆಶ್ಚರ್ಯ ಮೂಡಿಸಿದೆ. ಶಾರ್ಟ್ ಫಿಲಂ ವಿಭಾಗದಲ್ಲಿ ಬಿಟ್ಟು ತೀವ್ರ ಸ್ಪರ್ಧೆ ನೀಡುತ್ತಿದೆ. …
Read More »ಶಿಲ್ಪಕಲಾ ಅಕಾಡೆಮಿ: ಐವರಿಗೆ ಗೌರವ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿಗೆ ಐವರು ಕಲಾವಿದರು ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ 6 ಮಂದಿಯ ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಗೆ ಭಾಜನರಾದವರ ಪಟ್ಟಿಯನ್ನು ಅಕಾಡೆಮಿ ಬುಧವಾರ ಬಿಡುಗಡೆ ಮಾಡಿದೆ. ಗದಗದ ನಾಗರಾಜ ಎಸ್. ಬೆಟಗೇರಿ (ಸಾಂಪ್ರದಾಯಿಕ ಶಿಲ್ಪ), ಶಿವಮೊಗ್ಗದ ಜೆ.ಸಿ. ಗಂಗಾಧರ (ಸಾಂಪ್ರದಾಯಿಕ ಶಿಲ್ಪ), ಧಾರವಾಡದ ರುದ್ರಪ್ಪ ಮಾನಪ್ಪ ಬಡಿಗೇರ (ಜಾನಪದ ಶಿಲ್ಪ), ಬೆಂಗಳೂರಿನ ಉಲ್ಲಾಸ್ಕರ್ ಡೇ (ಟೆರ್ರಾಕೋಟಾ) ಹಾಗೂ ಉಡುಪಿಯ …
Read More »ಕೃಷಿ ಕಾಯ್ದೆ ಜಾರಿಯಿಂದ ರೈತರ ಯಾವ ಹಕ್ಕನ್ನೂ ಕಸಿದುಕೊಳ್ಳಲಾಗಿಲ್ಲ.: ಪ್ರಧಾನಿ ಮೋದಿ
ನವದೆಹಲಿ: ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಭಾಷಣ ದೇಶದ 130 ಕೋಟಿ ಜನರ ಸಂಕಲ್ಪ.ಇಂಥ ಸಂಕಷ್ಟದ ಸಂದರ್ಭದಲ್ಲಿ ರಾಷ್ಟ್ರಪತಿ ಭಾಷಣ ದೈರ್ಯ ತುಂಬಿದೆ ಎಂದು ಹೇಳಿದರು. ಕೊನೆಯ ಬ್ರಿಟೀಷ್ ಕಮಾಂಡರ್ ಒಂದು ಮಾತು ಹೇಳಿದ್ದರು. ಭಾರತ ಅನೇಕ ದೇಶಗಳ ಮಾಹಾದ್ವೀಪ ಎಂದು. ಭಾರತ ಒಂದು ಪವಾಡದ ಪ್ರಜಾಪ್ರಭುತ್ವ ರಾಷ್ಟ್ರ. ವಿವಿಧತೆಯಿಂದ ತುಂಬಿರುವ ದೇಶ. ಆದರೂ ಭಾರತ ಒಂದು ಗುರಿಯತ್ತ ಮುನ್ನುಗ್ಗುತ್ತಿದೆ. ಸ್ವಾತಂತ್ರ್ಯದ 75 …
Read More »ನಾಲ್ಕು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ : ಹೆಚ್.ಡಿ.ದೇವೇಗೌಡ
ರಾಯಚೂರು: ನಾಲ್ಕು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ದೇವೇಗೌಡರು, ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುವುದಿಲ್ಲ. ಕೇರಳದಲ್ಲಿ ಎಲ್ ಡಿಎಫ್ ಗೆ ಹೆಚ್ಚು ಶಕ್ತಿಯಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆದಿದೆ. ಮತಗಳು ಕಡಿಮೆ ಬಂದರೂ ಈ ಬಾರಿ ಮಮತಾ ಬ್ಯಾನರ್ಜಿ …
Read More »ಸರಕಾರದ ಮಟ್ಟದಲ್ಲಿ ಹೋರಾಟಮಾಡಿ ಅನುದಾನ ತರುತ್ತಿದ್ದೇನೆ : ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕಿರುವ ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿಯನ್ನು ತೆಗೆದುಹಾಕುವುದೇ ನನ್ನ ಸಂಕಲ್ಪ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಬಾಳೇಕುಂದ್ರಿ ಕೆ. ಎಚ್ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಶಾಸಕರ ನಿಧಿಯ (MLA Fund) ವತಿಯಿಂದ 8 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆಯ ಎರಡೂ ಬದಿಗೆ ಕಾಂಕ್ರೀಟ್ ಗಟಾರ್ ನಿರ್ಮಾಣದ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದಿನಿಂದಲೂ ಅಭಿವೃದ್ಧಿ ವಂಚಿತವಾಗಿದೆ. ಬೆಳಗಾವಿ ನಗರದ …
Read More »ದಿಢೀರ್ ಹೆಚ್.ಸಿ.ಮಹದೇವಪ್ಪ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ : ಕುತೂಹಲ ಮೂಡಿಸಿದ ಭೇಟಿ
ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಂತ ಹೆಚ್.ಸಿ.ಮಹದೇವಪ್ಪ ಅವರು, ಸಿದ್ದರಾಮಯ್ಯ ಜೊತೆಗಿನ ಆತ್ಮೀಯತೆಯಿಂದ ದೂರಾಗಿದ್ದರು. ಆದ್ರೇ ಇಂದು ದಿಢೀರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಇಂತಹ ಭೇಟಿ ತೀವ್ರ ಕುತೂಹಲ ಮೂಡಿಸಿತ್ತು. ಮೈಸೂರು ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಾಗಿ ಗುರ್ತಿಸಿಕೊಂಡಿದ್ದವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಸಿ.ಮಹದೇವಪ್ಪ. ಆದ್ರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಂತ …
Read More »ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಭಾರತೀಯ ಉಡುಗೆಯಲ್ಲಿತ್ತು ರಾಶಿ ರಾಶಿ ಡ್ರಗ್ಸ್..!
ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಲೆಹೆಂಗಾಗಳ ಒಳಗೆ 1.7 ಕೋಟಿ ರೂಪಾಯಿ ಮೌಲ್ಯದ ಡ್ರಗ್ಗಳನ್ನ ಸಾಗಿಸುತ್ತಿದ್ದ ತಂಡವನ್ನ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಸ್ಟ್ರೇಲಿಯಾಗೆ ಈ ಲೆಹೆಂಗಾಗಳನ್ನ ರವಾನೆ ಮಾಡುತ್ತಿದ್ದ ವೇಳೆ ಮಾಹಿತಿ ಕಲೆ ಹಾಕಿದ ಗುಪ್ತಚರ ಇಲಾಖೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಈ ಸರಕನ್ನ ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಲೆಹೆಂಗಾಗಳ ಒಳಗೆ 3900 ಗ್ರಾಂನ ಎಂಡಿಎಂಎ ಡ್ರಗ್ ಇತ್ತು ಎನ್ನಲಾಗಿದೆ. ಈ ಎಂಡಿಎಂಎ ಡ್ರಗ್ಗಳ ಅತಿಯಾದ ಸೇವನೆಯಿಂದ ಲಿವರ್, …
Read More »ನಿಯತಿ ಫೌಂಡೇಶನ್ ವತಿಯಿಂದ ಅಮಟೆಗೆ ಸನ್ಮಾನ
ಬೆಳಗಾವಿ – ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ, ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಂಗಳವಾರ ಬೆಳಗಾವಿ ಡಿಸಿಪಿ ಡಾ. ವಿಕ್ರಂ ಅಮಟೆ ಅವರನ್ನು ಭೇಟಿ ಮಾಡಿ, ಪ್ರಾಣಿ ಕಲ್ಯಾಣ ಮಂಡಳಿ ಕೆಲಸದಲ್ಲಿ ಪೊಲೀಸರ ಸಹಕಾರದ ಕುರಿತು ಚರ್ಚಿಸಿದರು. ವಿಕ್ರಂ ಅಮಟೆ ಪಶು ವೈದ್ಯರಾಗಿದ್ದು, ಪ್ರಾಣಿಗಳ ರಕ್ಷಣೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಬ್ಬರೂ ಚರ್ಚಿಸಿದರು. ಈ ಸಂಬಂಧ ರಚಿಸಬೇಕಾದ ಎಸ್ ಪಿಸಿಎ ಸಮಿತಿ ಕುರಿತು ಸಹ ಚರ್ಚಿಸಲಾಯಿತು. ಪ್ರಾಣಿ ಕಲ್ಯಾಣ …
Read More »ಸರ್ಕಾರಿ ನೌಕರರಿಗೆ ಇಲ್ಲಿದೆ ಶುಭ ಸುದ್ದಿ: ಶೇಕಡ 4 ರಷ್ಟು ಡಿಎ ಘೋಷಣೆಗೆ ಮುಂದಾದ ಕೇಂದ್ರ
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಇದೇ ತಿಂಗಳಲ್ಲಿ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಕೇಂದ್ರದ 50 ಲಕ್ಷ ಉದ್ಯೋಗಿಗಳು ಮತ್ತು 61 ಲಕ್ಷ ಪಿಂಚಣಿದಾರರಿಗೆ ಸರ್ಕಾರ ಉಡುಗೊರೆ ನೀಡಲಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಈ ತಿಂಗಳು ಘೋಷಣೆಯಾಗಲಿದೆ. ಡಿಎ ನೀಡುವ ಬಗ್ಗೆ ದೀರ್ಘ ಸಮಯದಿಂದ ಚರ್ಚೆಯಾಗ್ತಿದೆ. ಶೇಕಡ 4 ರಷ್ಟು ಡಿಎ ಹೆಚ್ಚಳವನ್ನು ಕೇಂದ್ರ ಘೋಷಿಸಬಹುದು ಎನ್ನಲಾಗಿದೆ. ಇದು ಕೇಂದ್ರ ನೌಕರರ ವೇತನದ ಮೇಲೆ ನೇರ ಪರಿಣಾಮ ಬೀರಲಿದೆ. …
Read More »
Laxmi News 24×7