ಬೆಂಗಳೂರು, ಫೆ.12- ಕಡಿತ ಮಾಡಲಾದ ಪಡಿತರಕ್ಕೆ ಪರ್ಯಾಯವಾಗಿ ರಾಗಿ ಮತ್ತು ಜೋಳವನ್ನು ವಿತರಿಸುವಂತೆ ಸಚಿವ ಉಮೇಶ್ ಕತ್ತಿ ಕೇಂದ್ರ ಆಹಾರ ಸಚಿವರಲ್ಲಿ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರನ್ನು ಭೇಟಿ ಮಾಡಿದ ಅವರು ಭೇಟಿ ಮಾಡಿ ಚರ್ಚಿಸಿದ ಅವರು ಪ್ರಸ್ತುತ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ, ಗೋ ವಿತರಣೆ ಕಡಿತಗೊಳಿಸಿದ ಪ್ರಮಾಣಕ್ಕೆ ಪರ್ಯಾಯವಾಗಿ ರಾಗಿ, ಜೋಳ, ಸ್ಥಳೀಯ ಧಾನ್ಯಗಳನ್ನು ವಿತರಿಸಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಪತ್ರ ಸಲ್ಲಿಸಿದರು.
ಭೌಗೋಳಿಕವಾಗಿ ಸ್ಥಳೀಯ ಜನರ ಆಹಾರ ಪದ್ಧತಿಗೆ ಅನುಸಾರವಾಗಿ ಪಡಿತರ ವಿತರಣೆ ಮಾಡಬೇಕಾಗುತ್ತದೆ. ಪ್ರಸ್ತುತ ಅಕ್ಕಿ, ಗೋಯನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
Laxmi News 24×7