ಬೆಂಗಳೂರು: ಅಶ್ಲೀಲ ವಿಡಿಯೋ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಸ್ವಾಮೀಜಿ, ರಮೇಶ್ ಜಾರಕಿಹೊಳಿ ನಿರ್ದೋಷಿಯಾಗಿದ್ರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಆದರೆ ಇಷ್ಟು ತರಾತುರಿಯಲ್ಲಿ ಅವರ ರಾಜಿನಾಮೆ ಅಂಗೀಕರಿಸಬಾರದಿತ್ತು. ಹೀಗಾಗಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ …
Read More »ಮಗಳನ್ನು ಕತ್ತರಿಸಿ, ರುಂಡ ಸಮೇತ ಸ್ವಯಂ ಪೊಲೀಸರಿಗೆ ಶರಣಾದ ತಂದೆ
ಲಖನೌ: ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ತಂದೆಯೊಬ್ಬ ತನ್ನ 17 ವರ್ಷದ ಮಗಳ ರುಂಡ ಕತ್ತರಿಸಿರುವ ಭಯಾನಕ ಘಟನೆ ನಡೆದಿದೆ. ತರಕಾರಿ ಮಾರಾಟ ಮಾಡುವ ಸರ್ವೇಶ್ ಕುಮಾರ್ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ನಿನ್ನೆ ಸುಮಾರು ಮೂರು ಗಂಟೆಯ ಹೊತ್ತಿಗೆ ಮಗಳು ಪ್ರಿಯತಮನ ಜತೆಗೆ ಇರುವುದನ್ನು ಕಂಡು ಸಿಟ್ಟುಗೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಹರಿತವಾದ ಚಾಕು ತಂದು ಮಗಳ ತಲೆ ಕತ್ತರಿಸಿದ್ದಾನೆ. ಅಷ್ಟೇ …
Read More »1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಉತ್ತಿರ್ಣರನ್ನಾಗಿಸುವ ಚಿಂತನೆಯತ್ತ ಶಿಕ್ಷಣ ಇಲಾಖೆ!
ಬೆಂಗಳೂರು : ದೇಶದಲ್ಲಿ ಮತ್ತೆ ಹೇಳುತ್ತಿರುವ ಕೋರೋನ ಎರಡನೇ ಅಲೆ ಭೀತಿ ಕರ್ನಾಟಕ ರಾಜ್ಯಕ್ಕೂ ತಟ್ಟಿದ್ದು, 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ಕ್ಲಾಸ್ ಪ್ರಾರಂಭಿಸಲು ಹಿಂದೇಟು ಹಾಕುತ್ತಿರುವ ಸರ್ಕಾರ, ಈ ಚಿಕ್ಕ ಮಕ್ಕಳಿಗೆ ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ . ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿದ್ದು , ರಾಜ್ಯದಲ್ಲಿಯೂ ಸೋಂಕು ಹೆಚ್ಚುವ ಆತಂಕ ಸೃಷ್ಟಿಯಾಗಿದ್ದರ …
Read More »16ನೇ ಶರಣ ಸಂಸ್ಕೃತಿ ಉತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಫಲ್ಲಕಿ ಉತ್ಸವದಲ್ಲಿ ಪಾಲ್ಗೊಂಡ ಶ್ರೀಗಳು ಹಾಗೂ ಗಣ್ಯರು.
ಗೋಕಾಕ: ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ 16ನೇ ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನವಾದ ಗುರುವಾರದಂದು ಮುಂಜಾನೆ ಫಲ್ಲಕ್ಕಿ ಉತ್ಸವಕ್ಕೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಚಾಲನೆ ನೀಡಿದರು. ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳ ಹಾಗೂ ವಚನ ತಾಡೋಲೆ ಪ್ರತಿಗಳು, ವಿಶ್ವ ಗುರು ಬಸವಣ್ಣನವರ ಭಾವಚಿತ್ರ ಹಾಗೂ ಸಕಲ ಭಕ್ತರೊಂದಿಗೆ ಮೆರವಣಿಗೆ ಮೂಲಕ ಸಂಚರಿಸಿ …
Read More »ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ರಸ್ತೆ ತಡೆ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ.
ಗೋಕಾಕ: ರಮೇಶ ಜಾರಕಿಹೊಳಿ ಅವರ ಕೌಜಲಗಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಗುರುವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಗ್ರಾಮದ ರವಿವರ್ಮ ಚೌಕದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಟೈರ್ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, …
Read More »ಮೀಸಲಾತಿ: ಬಿಕ್ಕಟ್ಟು ಇತ್ಯರ್ಥಕ್ಕೆ ಸಮಿತಿ ರಚಿಸಲು ಸಂಪುಟ ಸಭೆಯಲ್ಲಿ ನಿರ್ಧಾರ
ಬೆಂಗಳೂರು: ವಿವಿಧ ಸಮುದಾಯಗಳು ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಪಡೆಯಲು, ಪ್ರವರ್ಗಗಳಲ್ಲಿ ಬದಲಾವಣೆ ಮತ್ತು ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಇಟ್ಟಿರುವ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲು ಬುಧವಾರ ನಡೆದ ಸಂಪುಟ ಸಭೆ ತೀರ್ಮಾನಿಸಿದೆ. ತಮ್ಮನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕುರುಬ ಸಮುದಾಯ ಪಟ್ಟು ಹಿಡಿದಿತ್ತು. ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಅಡಿಯಲ್ಲಿ ಮೀಸಲಾತಿ ನೀಡಲು …
Read More »ಪ್ರಶಾಂತ್ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ
ಬಿಗ್ ಬಾಸ್ ಮನೆ ಒಳಗೆ ತೆರಳಿರುವ 17 ಸ್ಪರ್ಧಿಗಳ ಅಸಲಿ ಮುಖ ಈಗ ಬಯಲಾಗುತ್ತಿದೆ. ಕೆಲವರು ತುಂಬಾನೇ ಸಾಫ್ಟ್ ತರ ಕಂಡರೂ ಮನೆ ಒಳಗೆ ಸಖತ್ ರಫ್-ಆಯಂಡ್ ಟಫ್. ಮನೆ ಹೊರಗೆ ತುಂಬಾನೇ ಅಬ್ಬರ ಮಾಡಿದವರು ಮನೆ ಒಳಗೆ ತುಂಬಾನೇ ಸೈಲೆಂಟ್. ಆದರೆ, ಮನೆ ಒಳಗೂ ಹೊರಗೂ ಒಂದೇ ತರ ಇದ್ದವರು ಪ್ರಶಾಂತ್ ಸಂಬರಗಿ. ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿದ್ದ ಅವರು, ಈಗ ಮನೆ ಒಳಗೂ ಜಗಳಕ್ಕೆ ಕಾರಣರಾಗುತ್ತಿದ್ದಾರೆ. ಅವರನ್ನು ಮನೆ …
Read More »ನನ್ನ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ:ಸಿಎಂ ಕುಟುಂಬದ ವಿರುದ್ಧ ಶಾಸಕ ಸಂಗಮೇಶ್ ಆರೋಪ
ಬೆಂಗಳೂರು: ನನ್ನ ಮೇಲೆ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಭದ್ರಾವತಿ ಶಾಸಕ ಸಂಗಮೇಶ್ ಅವರು ಸಿಎಂ ಮತ್ತು ಅವರ ಕುಟುಂಬದ ವಿರುದ್ಧ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯ ನಡೆಸಿದ್ದೆವು. ಬಹುಮಾನ ಕೊಡುವ ವೇಳೆ ಆರ್ ಎಸ್‌ಎಸ್ ಕಿತಾಪತಿ ನಡೆಸಿದ್ದು, ಧರ್ಮ, ಜಾತಿ ಮುಂದಿಟ್ಟು ಕಿತಾಪತಿ ಮಾಡಿದ್ದಾರೆ. ಆಟದಲ್ಲಿ ಧರ್ಮ,ಜಾತಿ ರಾಜಕೀಯ ತಂದಿದ್ದಾರೆ. ಕೋಮುಗಲಭೆ ಸೃಷ್ಠಿಗೆ ಮುಂದಾಗಿದ್ದರು. ಅಂದು ಅವರನ್ನು …
Read More »ತಾಜ್‍ಮಹಲ್‍ಗೆ ಬಾಂಬ್ ಬೆದರಿಕೆ ಕರೆ..!
ನವದೆಹಲಿ/ಆಗ್ರಾ, ಮಾ.4 (ಪಿಟಿಐ)- ವಿಶ್ವ ಪ್ರಸಿದ್ಧ ತಾಜ್‍ಮಹಲ್ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆಗೆ ಹೆದರಿ, ಮುನ್ನೆಚ್ಚರಿಕೆ ಕ್ರಮವಾಗಿ ಸಂಕೀರ್ಣವನ್ನು ಖಾಲಿ ಮಾಡಲಾಗಿದೆ.ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಪೊಲೀಸರ ತುರ್ತು ಪ್ರತಿಕ್ರಿಯೆ ಸಂಖ್ಯೆ 112ಕ್ಕೆ ಕರೆ ಮಾಡಿ, ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಹೇಳಿದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಕ್ಷಣ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಸಿಬ್ಬಂದಿಗೆ ತಿಳಿಸಿದರು. ಕೇಂದ್ರ ಪುರಾತತ್ವ …
Read More »ಸದನದಲ್ಲಿ ‘ಶರ್ಚ್ ಬಿಚ್ಚಿ’ ಪ್ರತಿಭಟನೆ ನಡೆಸಿದ ‘ಶಾಸಕ ಬಿ.ಕೆ.ಸಂಗಮೇಶ್’ 1 ವಾರ ಸದನದಿಂದ ಸಸ್ಪೆಂಡ್
ಬೆಂಗಳೂರು : ಒಂದು ದೇಶ, ಒಂದೇ ಚುನಾವಣೆ ಚರ್ಚೆ ಸಂಬಂಧ ಶರ್ಚ್ ಬಿಚ್ಚಿ ಸದನದಲ್ಲಿ ಪ್ರತಿಭಟನೆ ನಡೆಸಿದಂತ ಭದ್ರಾವತಿಯ ಶಾಸಕ ಸಂಗಮೇಶ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಒಂದು ವಾರ ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಷಣ ಮುಗಿಸಿ ಸದಸ್ಯರೆಲ್ಲರೂ ತಮ್ಮ ತಮ್ಮ ಆಸನಗಳಿಗೆ ಹಿಂತಿರುಗಬೇಕೆಂದು ಮನವಿ ಮಾಡಿದರು. …
Read More »
Laxmi News 24×7