Home / ರಾಜ್ಯ / ಪ್ರಶಾಂತ್​ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್​ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ

ಪ್ರಶಾಂತ್​ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್​ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ

Spread the love

ಬಿಗ್​ ಬಾಸ್​​ ಮನೆ ಒಳಗೆ ತೆರಳಿರುವ 17 ಸ್ಪರ್ಧಿಗಳ ಅಸಲಿ ಮುಖ ಈಗ ಬಯಲಾಗುತ್ತಿದೆ. ಕೆಲವರು ತುಂಬಾನೇ ಸಾಫ್ಟ್​ ತರ ಕಂಡರೂ ಮನೆ ಒಳಗೆ ಸಖತ್​ ರಫ್​-ಆಯಂಡ್​ ಟಫ್​. ಮನೆ ಹೊರಗೆ ತುಂಬಾನೇ ಅಬ್ಬರ ಮಾಡಿದವರು ಮನೆ ಒಳಗೆ ತುಂಬಾನೇ ಸೈಲೆಂಟ್​. ಆದರೆ, ಮನೆ ಒಳಗೂ ಹೊರಗೂ ಒಂದೇ ತರ ಇದ್ದವರು ಪ್ರಶಾಂತ್​ ಸಂಬರಗಿ. ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿದ್ದ ಅವರು, ಈಗ ಮನೆ ಒಳಗೂ ಜಗಳಕ್ಕೆ ಕಾರಣರಾಗುತ್ತಿದ್ದಾರೆ. ಅವರನ್ನು ಮನೆ ಒಳಗೆ ಇರುವ ಜೈಲಿಗೆ ಕಳುಹಿಸುವಂತೆ ನಿಧಿ ಸುಬ್ಬಯ್ಯ ಆಗ್ರಹಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಜೈಲು ಇರುವ ವಿಚಾರ ಗೊತ್ತೇ ಇದೆ. ಏನಾದರೂ ತಪ್ಪು ಮಾಡಿದರೆ ಅಥವಾ ಬಿಗ್​ ಬಾಸ್​ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ ಈ ಜೈಲಿನೊಳಗೆ ಹಾಕಲಾಗುತ್ತದೆ. ಬಿಗ್​ ಬಾಸ್​ ಮನೆಯೇ ಒಂದು ಜೈಲಿನ ರೀತಿ ಇದ್ದರೆ, ಅದಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತಿದೆ ಈ ಜೈಲು. ಪ್ರಶಾಂತ್​ ಅವರನ್ನು ಈ ಜೈಲಿಗೆ ಹಾಕಿ ಎನ್ನುವ ಬೇಡಿಕೆ ನಿಧಿ ಅವರದ್ದು. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿಧಿ ಹಾಗೂ ಅರವಿಂದ್​ ನಿನ್ನೆ ಕ್ಯಾಮೆರಾ ಎದುರು ಬಂದಿದ್ದರು. ಈ ವೇಳೆ, ನನಗೆ ಸ್ವಿಮ್ಮಿಂಗ್​ ಫೂಲ್​ನ ಟಾಸ್ಕ್​ ಮಾಡಿ ನೆಗಡಿ ಆಗಿದೆ. ಕಾಫಿ ಕುಡಿಯೋಣ ಎಂದರೆ ಕಾಫಿ ಪೌಡರ್​ ಇಲ್ಲ. ಪ್ರಶಾಂತ್​ ಅವರು ಕಾಫಿ ಪೌಡರ್​ ಖಾಲಿ ಮಾಡಿದ್ದಾರೆ. ಅಗತ್ಯ ಬಿದ್ದರೆ ಅವರನ್ನು ಜೈಲಿಗೆ ಹಾಕಿ. ನಮಗೆ ಕಾಫಿ ಪೌಡರ್​ ಕಳುಹಿಸಿ ಎಂದಿದ್ದಾರೆ.

ಒಂದೊಮ್ಮೆ ನಿಧಿ ಇಟ್ಟ ಬೇಡಿಕೆ ಪ್ರಶಾಂತ್​ ಅವರಿಗೆ ಗೊತ್ತಾದರೆ ಬಿಗ್ ಬಾಸ್​ ಮನೆಯಲ್ಲಿ ದೊಡ್ಡ ಜಗಳ ನಡೆಯೋದು ಗ್ಯಾರಂಟಿ. ನಿನ್ನೆ ನಡೆದ ಸಣ್ಣ ವಿಚಾರಕ್ಕೆ ಬ್ರೋ ಗೌಡ ಜತೆ ಪ್ರಶಾಂತ್​ ಕಾಲ್ಕೆರುದುಕೊಂಡು ಜಗಳಕ್ಕೆ ಹೋಗಿದ್ದರು. ಹೀಗಿರುವಾಗ ನಿಧಿ ತಮ್ಮನ್ನು ಜೈಲಿಗೆ ಕಳುಹಿಸುವಂತೆ ಕೋರಿದ್ದು ಗೊತ್ತಾದರೆ ಪ್ರಶಾಂತ್​ ಮತ್ತೆ ಕೂಗಾಡುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ