Breaking News

ರಾಜ್ಯ

ಇನ್ಮುಂದೆ ‘ಸರ್ಕಾರಿ ನೌಕರ’ರಿಗೆ ವಾರದಲ್ಲಿ 4 ದಿನ ಕೆಲಸ ‘3 ದಿನ’ ರಜೆ.?

ನವದೆಹಲಿ : ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಕೆಲಸದ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಇನ್ಮುಂದೆ ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡಿ, ಮೂರು ದಿನ ರಜೆ ನೀಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಇಂತಹ ಊಹಾಪೋಹಳಿಗೆ ಕೇಂದ್ರ ಕಾರ್ಮಿಕ ಸಚಿವರು ಸಂಸತ್ ನಲ್ಲಿ ಕೇಳಲಾದ ಪ್ರಶ್ನೆಗೆ ಏನ್ ಉತ್ತರಿಸಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.. ದೇಶದಲ್ಲಿ ಕೆಲವು ದಿನಗಳಿಂದ, ಮುಂಬರುವ …

Read More »

ದರ್ಶನ್‌-ಸುದೀಪ್‌ ಒಂದಾಗಬೇಕು: ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಯಾನ

ನಟ ದರ್ಶನ್‌ ಹಾಗೂ ಸುದೀಪ್‌ ಒಂದು ಸಮಯದಲ್ಲಿ ಕುಚುಕು ಗೆಳೆಯರಾಗಿದಿದ್ದು ನಿಮಗೆ ಗೊತ್ತೇ ಇದೆ. ಆ ನಂತರ ಇಬ್ಬರ ನಡುವೆ ಮುನಿಸು ಬಂದು ಈಗ ದೂರವಾಗಿದ್ದಾರೆ. ಆದರೆ, ಈಗ ಅವರ ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾಗ ಬೇಕೆಂದು ಬಯಸಿದ್ದಾರೆ. ಇದರ ಪರಿಣಾಮವಾಗಿ ಅಭಿಮಾನಿಗಳು ಟ್ವೀಟರ್‌ನಲ್ಲಿ ಒಂದು ಅಭಿಯಾನ ವನ್ನೇ ಆರಂಭಿಸಿದ್ದಾರೆ. #DbossKicchaComeTogether ಅಭಿಯಾನದಡಿ ಅವರ ಅಭಿಮಾನಿಗಳು ಟ್ವೀಟ್‌ ಮಾಡಿದ್ದಾರೆ. ಜೊತೆಗೆ ದರ್ಶನ್‌ ಸುದೀಪ್‌ ಜೊತೆಗಿರುವ ಸಿಡಿಪಿಯೊಂದನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. …

Read More »

ಸಾಲ ಮಾಡಿ ತುಪ್ಪ ತಿಂದಿಲ್ಲ : ಸಿಎಂ B.S.Y.

ಬೆಂಗಳೂರು: ವಿಪಕ್ಷ ಕಾಂಗ್ರೆಸ್‌ ಸದಸ್ಯರ ಧರಣಿ, ಧಿಕ್ಕಾರ ಘೋಷಣೆ ನಡುವೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕರ್ನಾಟಕ ಧನವಿನಿಯೋಗ ವಿಧೇಯಕಕ್ಕೆ ಉಭಯ ಸದನಗಳಲ್ಲಿ ಅನುಮೋದನೆ ನೀಡುವ ಮೂಲಕ 2,46,207 ಕೋಟಿ ರೂ. ಗಾತ್ರದ 2021-22ನೇ ಸಾಲಿನ ಆಯವ್ಯಯಕ್ಕೆ ಒಪ್ಪಿಗೆ ಪಡೆದಿದ್ದಾರೆ. “ನಾವು ಸಾಲ ಪಡೆದು ತುಪ್ಪ ತಿಂದಿಲ್ಲ, ಮೋಜು ಅಥವಾ ಔತಣಕ್ಕಾಗಿ ಸಾಲದ ಹಣ ಬಳಸಿಲ್ಲ’ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ ಯಡಿಯೂರಪ್ಪ, ಸಾಲ ಮಾಡದೇ ಯಾವ ಸರಕಾರಗಳೂ ಯೋಜನೆ ಗಳನ್ನು …

Read More »

ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ನಾಳೆ `ಭಾರತ್ ಬಂದ್’ ಗೆ ಕರೆ

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿರುವ ರೈತ ಸಂಘಟನೆಗಳು ಮಾರ್ಚ್ 26 ರ ನಾಳೆ ಸಂಪೂರ್ಣ ಭಾರತ್ ಬಂದ್ ಗೆ ಕರೆ ನೀಡಿವೆ. ‘ 40 ರೈತ ಸಂಘಗಳ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ಕಾರ್ಮಿಕ ಸಂಘಗಳು, ಸಾರಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘಗಳು ಮತ್ತು ಇತರೆ ಸಾಮೂಹಿಕ ಸಂಸ್ಥೆಗಳು ಭಾರತ್ ಬಂದ್ …

Read More »

ಸರಕಾರಕ್ಕೆ 12.99 ಕೋಟಿ ರೂ ರಾಜಸ್ವ ನಷ್ಟ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅಮಾನತು

ಬೆಳಗಾವಿ – ಆಸ್ತಿ ನೊಂದಣಿ ವೇಳೆ ದರವನ್ನು ಅಪಮೌಲ್ಯಗೊಳಿಸಿ ನೊಂದಣಿ ಮಾಡಲಾಗಿದೆ. ಇದರಿಂದ ಸರಕಾರಕ್ಕೆ 12.99 ಕೋಟಿ ರೂ ರಾಜಸ್ವ ನಷ್ಟವಾಗಿದೆ ಎಂದು ಆರೋಪಿಸಿ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅವರನ್ನು ಅಮಾನತುಗೊಳಿಸಲಾಗಿದೆ. 2015-18 ಅವಧಿಯಲ್ಲಿ ಒಟ್ಟೂ 9 ದಸ್ತಾವೇಜುಗಳಿಂದ 1299.12 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಮುದ್ರಾಂಕ ಶುಲ್ಕ 12,78,79,056 ಹಾಗೂ ನೊಂದಣಿ ಶುಲ್ಕ 12,91,707 ರೂ. ಕಡಿಮೆ ಆಕರಿಸಲಾಗಿತ್ತು. ಈ ಬಗ್ಗೆ ವಿಷ್ಣುತೀರ್ಥ ಅವರಿಗೆ ನೋಟೀಸ್ …

Read More »

ಲೋಕಸಭಾ ಉಪಚುನಾವಣಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಫೈನಲ್:

ಬೆಂಗಳೂರು: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬೆಳಗಾವಿ ಉಪಚುನಾವಣೆ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಸತೀಶ್ ಜಾರಕಿಹೊಳಿಯೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದರು. ಕೆಲ ದಿನಗಳ ಹಿಂದೆ ಬೆಳಗಾವಿ ಲೋಕಸಭಾ ಉಪಚುನಾವಣಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಫೈನಲ್ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದೀಗ ಅಧಿಕೃತವಾಗಿ ಸತೀಶ್ ಜಾರಕಿಹೊಳಿ ಹೆಸರನ್ನು ಘೋಷಿಸಿದ್ದಾರೆ. ಇದೇ ವೇಳೆ ಬಜೆಟ್ ಮೇಲಿನ ಚರ್ಚೆ …

Read More »

ಗೋಕಾಕ: ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸುತ್ತಿರುವುದು.

ಗೋಕಾಕ: ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಮಹಿಳೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾ ಅಬಲಿ ಎಂಬ ಸ್ಥಿತಿ ಮೀರಿ ಸಾಧನೆಯತ್ತ ದಾಪುಗಾಲು ಹಾಕುತ್ತಿದ್ದಾಳೆ ಎಂದು ಡಾ: ದೀಪಾ ತುಬಾಕಿ ಹೇಳಿದರು. ಬುಧವಾರದಂದು ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಕುಟುಂಬ ಮತ್ತು ವೃತ್ತಿ ನಿಭಾಯಿಸುತ್ತಾ ಮಹಿಳೆ ಸಾಧನೆಯತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ: ಜ್ಯೋತಿಲಕ್ಷ್ಮೀ ವಾಲಿ, ಡಾ: ವಿಜಯಲಕ್ಷ್ಮೀ ಪಲೋಟಿ, …

Read More »

ಗೋಕಾಕ: ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು.

ಗೋಕಾಕ: ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವಿಘ್ನಹಾರ ಪಾಟೀಲ, ಸಚೀನಗೌಡ, ರಾಕೇಶ ಕೊಳದುರ್ಗಿ ಇವರು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಪ್ರಾಯೋಗಿಕ ವಿಭಾಗದಲ್ಲಿ ಚಿನ್ನ, ಲಿಖಿತ ವಿಭಾಗದಲ್ಲಿ ಬೆಳ್ಳಿಯ ಪದಕಗಳನ್ನು ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಚೇರಮನ್ ಲಖನ ಜಾರಕಿಹೊಳಿ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಸಿ.ಬಿ.ಪಾಗದ, ತರಬೇತಿದಾರ ಅಮೃತ ಕದ್ದು ಸೇರಿದಂತೆ …

Read More »

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಶಾಸಕರಿಗಾಗಿ ಭೋಜನಕೂಟ

ಬೆಂಗಳೂರು : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇಂದು ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಲಾಗಿದೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಏರ್ಪಡಿಸಲಾಗಿರುವ ಔತಣಕೂಟದಲ್ಲಿ ಕೈ ಶಾಸಕರು, ಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಭಾಗಿಯಾಗಿದ್ದರು. ಕಾಂಗ್ರೆಸ್ ಮುಖಂಡರ ಜೊತೆ ನಡೆದ ಭೋಜನಕೂಟದ ಸಮಯದಲ್ಲಿ ಕಲಾಪದ ಬಗ್ಗೆ ಚರ್ಚೆ ನಡೆಯಿತು. ಅಹೋರಾತ್ರಿ ಧರಣಿ ಬಗ್ಗೆ ಗಂಭೀರ ಚರ್ಚೆ : ಇಂದು ಅಹೋರಾತ್ರಿ ಧರಣಿ ಮಾಡಬೇಕೋ, …

Read More »

ಮಸ್ಕಿ ಉಪ ಚುನಾವಣೆ; ಪ್ರತಾಪ್ ಗೌಡ ಪಾಟೀಲ್ ನಾಮಪತ್ರ

ರಾಯಚೂರು, ಮಾರ್ಚ್ 24: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದೆ. ಪ್ರತಾಪ್ ಗೌಡ ಪಾಟೀಲ್ ಬುಧವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ. ಬಿಜೆಪಿ ಇನ್ನೂ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಬುಧವಾರ ಪ್ರತಾಪ್ ಗೌಡ ಪಾಟೀಲ್ ಅಂಕಲಿಮಠಕ್ಕೆ ಭೇಟಿ ನೀಡಿದರು. ಗಚ್ಚಿನಮಠಕ್ಕೆ ಭೇಟಿ ಕೊಟ್ಟರು. ಬಳಿಕ ಬಿಜೆಪಿ ಕಚೇರಿಗೆ ಆಗಮಿಸಿದರು. ಅಲ್ಲಿಂದ ಕಾರ್ಯಕರ್ತರ ಜೊತೆ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಬಂದರು.   ಚುನಾವಣಾಧಿಕಾರಿ ಹಾಗೂ …

Read More »