Breaking News

ರಾಜ್ಯ

1-5 ಶಾಲೆಗಳ ಪ್ರಾರಂಭಕ್ಕೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು.?

ಕೋಲಾರ : ರಾಜ್ಯದಲ್ಲಿ 1 ರಿಂದ 5 ನೇ ತರಗತಿವರೆಗೂ ಶಾಲೆ ಆರಂಭದ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ 1 ರಿಂದ 5 ನೇ ತರಗತಿಗಳು ಸದ್ಯಕ್ಕೆ ಆರಂಭವಿಲ್ಲ. 6 ನೇ ತರಗತಿಯಿಂದ ಮಾತ್ರ ಶಾಲೆಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಮಕ್ಕಳ ಹಿತದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರವನ್ನು ಖಾಸಗಿ ಶಾಲೆಗಳೂ ಅನುಸರಿಸಬೇಕು ಎಂದು ಹೇಳಿದ್ದಾರೆ. …

Read More »

ಸಿಕ್ಕಿಬಿದ್ದ ‘ಸಿಡಿ ಲೇಡಿ’ : ವ್ಯಾನಿಟಿ ಬ್ಯಾಗ್ ನಲ್ಲಿ ಕ್ಯಾಮೆರಾ, ಅಸಲಿ ವಿಡಿಯೋ ಪತ್ತೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿ, ಕಲಾಪಕ್ಕೂ ಕಲ್ಲು ಹಾಕಿದ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇಕ್ಸ್ ಸಿಡಿ ಕೇಸ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಹೌದು ಸತತ ಹದಿನೈದು ದಿನಗಳ ಸತತ ಕಾರ್ಯಾಚರಣೆ ಬಳಿಕ ಜಾರಕಿಹೊಳಿ ಸಿ.ಡಿ. ಪ್ರಕರಣದ ಅಸಲಿ ವಿಡಿಯೋ ಪತ್ತೆ ಹಚ್ಚುವಲ್ಲಿ ವಿಶೇಷ ತನಿಖಾ ದಳ (ಎಸ್ ಐಟಿ) ಯಶಸ್ಸು ಕಂಡಿದೆ. ಯುವತಿಯ ವ್ಯಾನಿಟಿ ಬ್ಯಾಗ್ ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಯೇ ಖಾಸಗಿ ಕ್ಷಣಗಳನ್ನು ಸೆರೆ …

Read More »

ಸಿಡಿ ಪ್ರಕರಣ; ಯುವತಿ ಪರ ವಕೀಲರು ಹೇಳುವುದೇನು?

ಬೆಂಗಳೂರು, ಮಾರ್ಚ್ 26; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತಿರುವನ್ನು ಪಡೆದುಕೊಳ್ಳುತ್ತಿದೆ. ಸಂತ್ರಸ್ತ ಯುವತಿ 3ನೇ ವಿಡಿಯೋವನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾಳೆ. ಮಾಜಿ ಸಚಿವರ ವಿರುದ್ಧ ವಕೀಲರ ಮೂಲಕ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ. ಶುಕ್ರವಾರ ಯುವತಿ ವಿಡಿಯೋ ಬಿಡುಗಡೆಯಾದ ಬಳಿಕ ಆಕೆಯ ಪರ ವಕೀಲ ಜಗದೀಶ್ ಕೆ. ಎನ್. ಮಹಾದೇವ್ ಅವರು ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದರು. “ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದಲೇ ಲಿಖಿತ …

Read More »

ಸತತ ಎರಡನೇ ದಿನ ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆ

ನವದೆಹಲಿ: ಸತತ ಏರಿಕೆ ಕಂಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರಎರಡು ದಿನಗಳಿಂದ ಇಳಿದು ಮುಖದಲ್ಲಿ ಸಾಗುತ್ತಿದ್ದು, ಇಂದು ಕೂಡ ದರದಲ್ಲಿ ಇಳಿಕೆ ಕಂಡಿದೆ. ಪೆಟ್ರೋಲ್ ದರ 21 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 20 ಪೈಸೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು …

Read More »

ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ 20 ದಿನದಲ್ಲಿ 53.80 ಲಕ್ಷ ರೂ. ಕಾಣಿಕೆಸಂಗ್ರಹ

ಸವದತ್ತಿ – ಕೇವಲ 20 ದಿನದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ 53.80 ಲಕ್ಷ ರೂ.ಕಾಣಿಕೆ ಸಂಗ್ರಹವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಸಾಲಿನಲ್ಲಿ ಕೇವಲ 20 ದಿನ ದೇವಸ್ಥಾನದ ಬಾಗಿಲು ತೆರೆಯಲಾಗಿತ್ತು. ಈ ಅಲ್ಪ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತದ ಕಾಣಿಕೆ ಬಂದಿದೆ. 85 ಜನರು ಸೇರಿ ಕಾಣಿಕೆಯನ್ನು ಎಣಿಸಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ತಿಳಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಕೊರೋನಾ ಆರಂಭವಾದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ …

Read More »

ಇಂದು ಮಧ್ಯಾಹ್ನ 2 ಗಂಟೆಗೆ ವಕೀಲರ ಮೂಲಕ ದೂರು ದಾಖಲು: ಸಿಡಿ ಲೇಡಿ

ಬೆಂಗಳೂರು – ಕಳೆದ 24 ದಿನಗಳಿಂದ ತೀವ್ರ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದೆ. ರಮೇಶ ಜಾರಕಿಹೊಳಿ ವಿರುದ್ಧ ಇಂದೇ ಪ್ರಕರಣ ದಾಖಲಿಸಲು ಸಿಡಿಯಲ್ಲಿರುವ ಯುವತಿ ನಿರ್ಧರಿಸಿದ್ದು, ವಕೀಲ ಜಗದೀಶ್ ಎನ್ನುವವರ ಮೂಲಕ ಮಧ್ಯಾಹ್ನ 2 ಗಂಟೆಗೆ ದೂರು ದಾಖಲಾಗಲಿದೆ. ಯುವತಿಯ ಹಸ್ತಾಕ್ಷರದಲ್ಲೇ ದೂರು ದಾಖಲಿಸಲಾಗುವುದು ಎಂದು ಅವಳ ಪರ ವಕೀಲ ಜಗದೀಶ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಬ್ಬ ಪ್ರಭಾವಿ …

Read More »

ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ, ಕೊರೋನಾ 2 ನೇ ಅಲೆ ಆರ್ಭಟ ತಡೆಗೆ ಹಬ್ಬ ಆಚರಣೆಗೆ ನಿರ್ಬಂಧ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಆರ್ಭಟದ ಹಿನ್ನೆಲೆಯಲ್ಲಿ ಮುಂದಿನ ಹಬ್ಬ-ಹರಿದಿನ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಯುಗಾದಿ ಹಬ್ಬ, ಹೋಳಿ ಹಬ್ಬ, ಗುಡ್ ಫ್ರೈಡೇ, ಶಬ್ ಎ ಬರಾತ್ ಮೊದಲಾದ ಹಬ್ಬಗಳಂದು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಮೈದಾನ, ಮಾರ್ಕೆಟ್, ಪಾರ್ಕ್, ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸುವುದಕ್ಕೆ ನಿಷೇಧ …

Read More »

ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಪ್ರಮಾಣ ಕಡಿತ

ಬೆಂಗಳೂರು: ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿದೆ. ಇದಾದ ನಂತರದಲ್ಲಿ ಅಂತ್ಯೋದಯ ಕಾರ್ಡ್ ಅಕ್ಕಿಯನ್ನು ಕೂಡ ಕಡಿತ ಮಾಡಲು ನಿರ್ಧರಿಸಲಾಗಿದ್ದು 35 ಕೆಜಿ ಅಕ್ಕಿಯ ಬದಲು 15 ಕೆಜಿ ಅಕ್ಕಿ ಜೊತೆಗೆ 20 ಕೆಜಿ ರಾಗಿ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿದೆ. ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. …

Read More »

ವಿದ್ಯಾರ್ಥಿಗಳೇ ಗಮನಿಸಿ: ರದ್ದಾಗಿದೆ ಈ 7 ಬಿ.ಇಡಿ ಕಾಲೇಜುಗಳ ಮಾನ್ಯತೆ

ಬಿ.ಇಡಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ರಾಜ್ಯದ 7 ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ರದ್ದುಗೊಳಿಸಿದ್ದು, ಜೊತೆಗೆ ಎರಡು ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಮಾನ್ಯತೆ ರದ್ದುಗೊಂಡಿರುವ ಕಾಲೇಜುಗಳ ಪಟ್ಟಿ ಇಂತಿದ್ದು, ಬೆಳಗಾವಿಯ ಕೆಎಸ್‌ಆರ್ ಕಾಲೇಜ್ ಆಫ್ ಎಜುಕೇಶನ್ ಹಾಗೂ ಶ್ರೀ ಸಿದ್ಧಿವಿನಾಯಕ ರೂರಲ್ ಕಾಲೇಜ್, ವಿಜಯಪುರದ ಎಸ್ ಎಂ ಆರ್ ಕೆ ಮಹಿಳಾ ವಿದ್ಯಾವರ್ಧಕ ಕಾಲೇಜ್ ಆಫ್ ಎಜುಕೇಶನ್, ಶ್ರೀ ಫುಲ್ಸಿಂಗ್ …

Read More »

ಕುಟುಂಬಕ್ಕೆ ಮಣೆ ಹಾಕುವುದಿಲ್ಲ ಎನ್ನುವ ಮಾತನ್ನು ಮೀರಿ ಸುರೇಶ ಅಂಗಡಿ ಅವರ ಪತ್ನಿಗೇ ಟಿಕೆಟ್ ನೀಡಲಾಗಿದೆ.

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ದಿ.ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿಗೆ ಟಿಕೆಟ್ ನೀಡಲಾಗಿದೆ. ಕುಟುಂಬಕ್ಕೆ ಮಣೆ ಹಾಕುವುದಿಲ್ಲ ಎನ್ನುವ ಮಾತನ್ನು ಮೀರಿ ಸುರೇಶ ಅಂಗಡಿ ಅವರ ಪತ್ನಿಗೇ ಟಿಕೆಟ್ ನೀಡಲಾಗಿದೆ.

Read More »