Breaking News
Home / ರಾಜಕೀಯ / ಸಾಲ ಮಾಡಿ ತುಪ್ಪ ತಿಂದಿಲ್ಲ : ಸಿಎಂ B.S.Y.

ಸಾಲ ಮಾಡಿ ತುಪ್ಪ ತಿಂದಿಲ್ಲ : ಸಿಎಂ B.S.Y.

Spread the love

ಬೆಂಗಳೂರು: ವಿಪಕ್ಷ ಕಾಂಗ್ರೆಸ್‌ ಸದಸ್ಯರ ಧರಣಿ, ಧಿಕ್ಕಾರ ಘೋಷಣೆ ನಡುವೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕರ್ನಾಟಕ ಧನವಿನಿಯೋಗ ವಿಧೇಯಕಕ್ಕೆ ಉಭಯ ಸದನಗಳಲ್ಲಿ ಅನುಮೋದನೆ ನೀಡುವ ಮೂಲಕ 2,46,207 ಕೋಟಿ ರೂ. ಗಾತ್ರದ 2021-22ನೇ ಸಾಲಿನ ಆಯವ್ಯಯಕ್ಕೆ ಒಪ್ಪಿಗೆ ಪಡೆದಿದ್ದಾರೆ.

“ನಾವು ಸಾಲ ಪಡೆದು ತುಪ್ಪ ತಿಂದಿಲ್ಲ, ಮೋಜು ಅಥವಾ ಔತಣಕ್ಕಾಗಿ ಸಾಲದ ಹಣ ಬಳಸಿಲ್ಲ’ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ ಯಡಿಯೂರಪ್ಪ, ಸಾಲ ಮಾಡದೇ ಯಾವ ಸರಕಾರಗಳೂ ಯೋಜನೆ ಗಳನ್ನು ಅನುಷ್ಠಾನಗೊಳಿಸಿದ ಉದಾಹರಣೆ ಇಲ್ಲ ಎಂದು ಒತ್ತಿ ಹೇಳಿದ್ದಾರೆ.

ಯಾವುದೇ ಹೊಸ ತೆರಿಗೆ, ಸರ್‌ಚಾರ್ಜ್‌, ಉಪಕರ ಹಾಕಿಲ್ಲ. ಪ್ರತಿ ಜಿಲ್ಲೆಗೊಂದು ಹೊಸ ಯೋಜನೆ ಘೋಷಿಸಲಾಗಿದ್ದು, 2021-22ನೇ ಸಾಲಿನ ಆಯವ್ಯಯ ಯಶಸ್ವಿಯಾಗಿ ಜಾರಿ ಯಾಗು ವಂತೆ ಅಗತ್ಯವಿರುವ ಎಲ್ಲ ಪ್ರಾಮಾಣಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ವಿತ್ತೀಯ ಕೊರತೆ ಇಳಿಕೆಗೆ ಪ್ರಯತ್ನ. ಮಂಜೂ ರಾದ ಹುದ್ದೆಗಳನ್ನು ಪರಾಮರ್ಶಿಸಿ ಆಡಳಿ ತಾತ್ಮಕ ವಾಗಿ ಅಗತ್ಯವಿರುವ ಹುದ್ದೆಗಳನ್ನಷ್ಟೇ ಹಂತ ಹಂತವಾಗಿ ನೇಮಕ. ನಾನಾ ಇಲಾಖೆಗಳ ಸೇವೆ ಗಳಿಗೆ ವಿಧಿಸುವ ಶುಲ್ಕ ಪರಿಷ್ಕರಣೆ ಮೂಲಕ ತೆರಿಗೆ ಯೇತರ ಆದಾಯ ಹೆಚ್ಚಳಕ್ಕೆ ಒತ್ತು ಸೇರಿದಂತೆ ಇತರೆ ಭರವಸೆಗಳನ್ನು ನೀಡುವ ಮೂಲಕ ಯಡಿಯೂರಪ್ಪ ಉಭಯ ಸದನಗಳಲ್ಲಿ ಆಯವ್ಯಯಕ್ಕೆ ಅನುಮೋದನೆ ಪಡೆದುಕೊಂಡರು. ಹಾಗೆಯೇ ಧರಣಿನಿರತ ಕಾಂಗ್ರೆಸ್‌ ಸದಸ್ಯರ ನಡೆಯನ್ನೂ ಖಂಡಿಸಿದ ಯಡಿಯೂರಪ್ಪ, ಜನ ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮಂತ್ರದಂಡ ಇರುವುದಿಲ್ಲ
ಹಿಂದೆಂದೂ ಕಂಡರಿಯದ ವಿಶ್ವವ್ಯಾಪಿ ಸಾಂಕ್ರಾಮಿಕ ರೋಗವು ಅನಿರೀಕ್ಷಿತವಾಗಿ ಬಂದೆರಗಿದಾಗ ಸರಕಾರದ ಬಳಿ ದಿಢೀರ್‌ ಪರಿಹಾರ ನೀಡಲು ಯಾವುದೇ ಮಂತ್ರದಂಡ ಇರುವುದಿಲ್ಲ. ಇಲ್ಲವೇ ಸರಕಾರದ ಬೊಕ್ಕಸ ಅಕ್ಷಯಪಾತ್ರೆಯೇನೂ ಅಲ್ಲ ಎಂಬುದು ವಿಪಕ್ಷದವರಿಗೆ, ಆಡಳಿತ ಪಕ್ಷದವರಿಗೆ ತಿಳಿದಿದೆ ಎಂದೂ ಹೇಳಿದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ