Breaking News

ಸತತ ಎರಡನೇ ದಿನ ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆ

Spread the love

ನವದೆಹಲಿ: ಸತತ ಏರಿಕೆ ಕಂಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರಎರಡು ದಿನಗಳಿಂದ ಇಳಿದು ಮುಖದಲ್ಲಿ ಸಾಗುತ್ತಿದ್ದು, ಇಂದು ಕೂಡ ದರದಲ್ಲಿ ಇಳಿಕೆ ಕಂಡಿದೆ. ಪೆಟ್ರೋಲ್ ದರ 21 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 20 ಪೈಸೆ ಇಳಿಕೆಯಾಗಿದೆ.

ಫೆಬ್ರವರಿ ತಿಂಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು 90 ರೂಪಾಯಿ 99 ಪೈಸೆಯಿಂದ 90 ರೂಪಾಯಿ 78 ಪೈಸೆಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 81 ರೂಪಾಯಿ 30 ಪೈಸೆಯಿಂದ 81 ರೂಪಾಯಿ 10 ಪೈಸೆಗೆ ಇಳಿದಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಇಂದಿನ ದರ 90.98 ರೂ. ಮುಂಬೈ 97.19 ರೂ. ಚೆನ್ನೈ 92.77 ರೂ. ಇನ್ನು ಬೆಂಗಳೂರಿನಲ್ಲಿ 93.28 ರೂಪಾಯಿ ಇದೆ.

ಅಂತೆಯೇ, ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ 83.98 ರೂ. ಮುಂಬೈನಲ್ಲಿ 88.20 ರೂ. ಚೆನ್ನೈನಲ್ಲಿ 86.10 ರೂ. ಇನ್ನು ಬೆಂಗಳೂರಿನಲ್ಲಿ 85.99 ರೂಪಾಯಿ ಇದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ