Breaking News

ರಾಜ್ಯ

ಯಶಸ್ವಿ ಶಸ್ತ್ರಚಿಕಿತ್ಸೆ: ಯುವತಿ ಹೊಟ್ಟೆಯಲ್ಲಿದ್ದ 8 ಕೆ.ಜಿ. ಗಡ್ಡೆ ಹೊರಕ್ಕೆ

ಸಾಗರ: ಇಲ್ಲಿನ ತಾಯಿ ಮಗು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು 21 ವರ್ಷದ ಯುವತಿಯ ಹೊಟ್ಟೆಯಲ್ಲಿದ್ದ 8 ಕೆ.ಜಿ. ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಪ್ರಸೂತಿ ತಜ್ಞರಾದ ಡಾ. ಪ್ರತಿಮಾ ಅವರ ಬಳಿ ಸೊರಬ ತಾಲ್ಲೂಕಿನ ಯುವತಿಯೊಬ್ಬರು ತೀವ್ರವಾಗಿ ಕಾಡುತ್ತಿದ್ದ ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದರು. ಯುವತಿಯನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಬೆಳೆದಿರುವುದು ಪತ್ತೆಯಾಗಿದೆ. ಅದನ್ನು ಹಾಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತಿರುಗುವ …

Read More »

ಶೀಘ್ರವೇ `ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್’ ರೈಲು

ಹುಬ್ಬಳ್ಳಿ : ರಾಜ್ಯದ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಆರಂಭಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಮ್ಮತಿ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ ಬೆಂಗಳೂರು ಮಧ್ಯೆ ಸೂಪರ್ ಫಾಸ್ಟ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲು ಪ್ರಯಾಣದ ಅವಧಿ 8 …

Read More »

ತೈಲೋತ್ಪನ್ನ: ಜನರಿಗೆ ತೆರಿಗೆ ಹೊರೆ

ಆದಾಯ, ವೆಚ್ಚ, ತೈಲೋತ್ಪನ್ನಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ…ಇವು ಇದೀಗ ಜನಸಾಮಾನ್ಯರ ದೈನಂದಿನ ಚರ್ಚೆಯ ವಿಷಯಗಳು. ಬೇಸಗೆಯ ಸುಡುಬಿಸಿಲಿನ ಝಳಕ್ಕಿಂತಲೂ ಬೆಲೆ ಏರಿಕೆಯ ಬಿಸಿ ಶ್ರೀಸಾಮಾನ್ಯರನ್ನು ಹೆಚ್ಚು ತಟ್ಟತೊಡಗಿದೆ. ಕಳೆದ ವರ್ಷವಿಡೀ ಕೊರೊನಾದಿಂದಾಗಿ ಕಂಗೆಟ್ಟಿದ್ದ ಜನಸಾಮಾನ್ಯರು ಮೈಕೊಡವಿ ಎದ್ದುನಿಲ್ಲುವ ಪ್ರಯತ್ನದಲ್ಲಿರುವಾಗಲೇ ಬೆಲೆ ಏರಿಕೆ ಹೊಡೆತ ನೀಡಿದೆ. ಬೆಲೆ ಏರಿಕೆಗೆ ಸರಕಾರ ಬೆಟ್ಟು ಮಾಡುತ್ತಿರುವುದು ಕಚ್ಚಾ ತೈಲ ಬೆಲೆ ಹೆಚ್ಚಳದತ್ತ. ವಾಸ್ತವವಾಗಿ ಕಳೆದ ಏಳು ವರ್ಷಗಳಲ್ಲಿ ಸರಕಾರವು ಪೆಟ್ರೋಲಿಯಂ …

Read More »

ಯುವತಿಯ ಪೋಷಕರು ಡಿಕೆಶಿ ಬಗ್ಗೆ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು: ಜೋಶಿ

ಬೆಳಗಾವಿ: ‘ನಮ್ಮ ಮಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದರು ಎಂದು ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ.ಯಲ್ಲಿ ಕಾಣಿಸಿಕೊಂಡ ಯುವತಿಯ ಪೋಷಕರು ಹೇಳಿಕೆ ನೀಡಿರುವುದನ್ನು ಎಸ್‌ಐಟಿಯವರು ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು. ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಕರಣ ಗೊಂದಲಕಾರಿಯಾಗಿದೆ. ತನಿಖಾ ಸಂಸ್ಥೆಯು ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಬೇಗನೆ ತೆಗೆದುಕೊಂಡು ಹೋಗಬೇಕು. ಯುವತಿಯ ಪೋಷಕರು ಮಾಡಿರುವ ಆರೋಪಗಳು ಗಂಭೀರ …

Read More »

ಡಿಕೆಶಿ ಸಪೋರ್ಟ್ ಇದೆ, ಗೋವಾಕ್ಕೆ ಕಳಿಸಿದ್ದಾರೆ; ಸಿಡಿ ಯುವತಿಯ ಮತ್ತೊಂದು ಆಡಿಯೋ ಬಹಿರಂಗ

ಯುವತಿಯ ಮತ್ತೊಂದು ಆಡಿಯೋ ಬಹಿರಂಗವಾಗಿದೆ. ಡಿ.ಕೆ. ಶಿವಕುಮಾರ್ ಹೆಸರು ಹೇಳಿದ ಸಿಡಿ ಯುವತಿಯ ಇನ್ನೊಂದು ಆಡಿಯೋ ಬಹಿರಂಗವಾಗಿದೆ. ಸಹೋದರನೊಂದಿಗೆ ಯುವತಿ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಇವತ್ತು 1ನಿಮಿಷ 51 ಸೆಕೆಂಡ್ ಆಡಿಯೋ ಬಹಿರಂಗವಾಗಿದ್ದು, ನನಗೆ ಡಿಕೆಶಿ ಸಪೋರ್ಟ್ ಇದೆ ಎಂದು ಸಹೋದರನೊಂದಿಗೆ ಮಾತನಾಡುತ್ತಾ ಯುವತಿ ಹೇಳಿದ್ದು. ನಾನು ಗೋವಾಕ್ಕೆ ಹೋಗುತ್ತಿದ್ದೇನೆ. ನೀನು ಭಯ ಪಡಬೇಡ. ಮನೆಯವರಿಗೆ ವಿಷಯ ತಿಳಿಸಬೇಡ ಎಂದು ಹೇಳಿದ್ದಾರೆ. ಇದೇ ವೇಳೆ ಸಹೋದರ ಸಿಮ್ ಕಾರ್ಡ್ ಬದಲಿಸು …

Read More »

ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? – ಬಿಜೆಪಿ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಒತ್ತೆಯಾಗಿಟ್ಟುಕೊಂಡು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ರಾಜಕೀಯ ಆಟವಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡು ರಾಜಕೀಯ ಆಟ ಆಡುತ್ತಿರುವ ಮಾನ್ಯ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮದೆಂತಹ ಕುತ್ಸಿತ ಮನೋಸ್ಥಿತಿ ಇರಬಹುದು? ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? ಎಂದು ಪ್ರಶ್ನಿಸಿದೆ. ಸಂತ್ರಸ್ಥೆಯ ಕುರಿತು ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್‌ ನಾಯಕರು ಈಗೆಲ್ಲಿದ್ದಾರೆ? ಎಂದು ಬಿಜೆಪಿ ಕಿಡಿ …

Read More »

ಮಹಾನ್​ ನಾಯಕ ರಾಜಕಾರಣಕ್ಕೆ ನಾಲಾಯಕ್​; ಕನಕಪುರದಲ್ಲಿ ಮುಂದಿನ ಹೋರಾಟ: ರಮೇಶ್​ ಜಾರಕಿಹೊಳಿ

ಬೆಂಗಳೂರು (ಮಾ. 24): ಇಂದು ಸ್ಪೋಟಕ ಮಾಹಿತಿ ಬಿಚ್ಚಿಡುತ್ತೇನೆ ಎಂದಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ, ನಾನು ನೀಡಬೇಕಾದ ಎಲ್ಲಾ ವಿವರಗಳನ್ನು ಸಿಡಿ ಯುವತಿಯ ಪೋಷಕರೇ ಹೇಳಿದ್ದಾರೆ. ಈ ಹಿನ್ನಲೆ ನನ್ನ ಸುದ್ದಿಗೋಷ್ಟಿಗೆ ಮಹತ್ವ ಇಲ್ಲ. ಈ ಪ್ರಕರಣದ ರೂವರಿ ಯಾರು ಎಂಬುದನ್ನು ಪೋಷಕರು ಒಪ್ಪಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು. ಆ ಮಹಾನ್​ ನಾಯಕ ಯಾರು ಎಂಬುದು ಅವರೇ ತಿಳಿಸಿದ್ದಾರೆ. ಆ ಮಹಾನ್​ ನಾಯಕ ರಾಜಕಾರಣಕ್ಕೆ ನಾಲಾಯಕ್​, ರಾಜಕೀಯದಲ್ಲಿ ಇರಬಾರದು. ಅವನಿಗೆ …

Read More »

ಉಪ ಚುನಾವಣೆ ಕಣ : ಕೈ, ಕಮಲಕ್ಕೆ ಅಗ್ನಿಪರೀಕ್ಷೆ, ತೆನೆಗೆ ಅಸ್ತಿತ್ವದ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಣ ಸಜ್ಜಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇದು ಮತ್ತೂಂದು ಅಗ್ನಿಪರೀಕ್ಷೆಯಾದರೆ ಜೆಡಿಎಸ್‌ಗೆ ಅಸ್ತಿತ್ವ ಸಾಬೀತುಪಡಿಸುವ ಸವಾಲಿನ ಪ್ರಶ್ನೆಯಾಗಿದೆ. ಉಪ ಚುನಾವಣೆ ಫ‌ಲಿತಾಂಶದಿಂದ ದೊಡ್ಡ ಮಟ್ಟದ ರಾಜಕೀಯ ಬದಲಾವಣೆ ಆಗದು. ಆದರೆ ಸಿ.ಡಿ. ಪ್ರಕರಣ ಎಬ್ಬಿಸಿರುವ ರಾಡಿಯ ಹಿನ್ನೆಲೆಯಲ್ಲಿ ಜನರ ನಾಡಿ ಮಿಡಿತ ತಿಳಿಯಲಿದೆ. ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಉಪ ಚುನಾವಣೆ ಪ್ರತಿಷ್ಠೆ. …

Read More »

ಮಹಾನಾಯಕನ ಷಡ್ಯಂತ್ರಕ್ಕೆ ಮಾಫಿ ಇಲ್ಲ; ಡಿ.ಕೆ. ಶಿವಕುಮಾರ್ ಗೆ ಬಹಿರಂಗ ಸವಾಲು ಹಾಕಿದ ರಮೇಶ್ ಜಾರಕಿಹೊಳಿ

ಬೆಂಗಳೂರು: ಸಿಡಿ ಪ್ರಕರಣದ ಮಹಾನಾಯಕ ಎಂದೇ ಆರೋಪಿಸಲಾಗುತ್ತಿರುವ ಡಿ.ಕೆ. ಶಿವಕುಮಾರ್ ವಿರುದ್ಧ ಬಹಿರಂಗ ಸವಾಲು ಹಾಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ಬೆಳಗಾವಿಗೆ ಬಂದರೆ ಸ್ವಾಗತಿಸುತ್ತೇವೆ. ಅವರನ್ನು ಮರ್ಯಾದೆಯಿಂದ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ. ಆದರೆ ಕನಕಪುರದಲ್ಲಿ ಮಾತ್ರ ಡಿಕೆಶಿ ವಿರುದ್ಧ ನೇರವಾಗಿ ಹೋರಾಡುತ್ತೇವೆ. ಕನಕಪುರದಲ್ಲಿ ಮಾತ್ರ ಅವರನ್ನು ಸೋಲಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕೊಹೊಳಿ, ಸಿಡಿ ಪ್ರಕರಣದಲ್ಲಿ ನಾನು ನಿರಪರಾಧಿ ಎಂಬುದನ್ನು ಯುವತಿ ಪೋಷಕರೇ ಹೇಳಿದ್ದಾರೆ. …

Read More »

ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾದ ಅಜ್ಜಿ :ಗುಜರಿ ನಡೆಸುತ್ತಿದ್ದವರ ಮನೆ ತುಂಬಾ ಈಗ ಹಣದ ಹೊಳೆ!

ಚಂಡೀಗಢ: ಪಂಜಾಬ್ ಸ್ಟೇಸ್​ ಡಿಯರ್​​ 100 ಮಾಸಿಕ ಲಾಟರಿ ಬೆಳಗಾಗುವುದರೊಳಗೆ ಒಂದು ಬಡ ಕುಟುಂಬವನ್ನು ಕೋಟ್ಯಾಧೀಶರನ್ನಾಗಿ ಮಾಡಿದೆ. ಹೌದು, ಬಾಗಾಪುರಾಣದ ನಿವಾಸಿ 61 ವರ್ಷದ ಆಶಾ ರಾಣಿ ಒಂದು ಕೋಟಿ ರೂಪಾಯಿಗಳನ್ನು ಲಾಟರಿ ಮೂಲಕ ಗೆದ್ದಿದ್ದಾರೆ. ಈ ತಿಂಗಳ ಲಾಟರಿ ವಿಜೇತರಲ್ಲಿ ಆಶಾ ಗೆದ್ದಿದ್ದು, ಈ ಸಂಬಂಧ ಹಣ ಪಡೆದುಕೊಳ್ಳಲು ಲಾಟರಿ ಟಿಕೆಟ್ ಮತ್ತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಿದ್ದಾರೆ. ಬಹುಮಾನವನ್ನು ಗೆದ್ದ ನಂತರ ಪ್ರತಿಕ್ರಿಯೆ ನೀಡಿರುವ ಅವರು, …

Read More »