Home / ರಾಜ್ಯ / ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ.

ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ.

Spread the love

ಉಡುಪಿ ಡಿಸಿ ಅವರು ಉತ್ತರಿಸಲೇ ಬೇಕು…
ಮೆಹಂದಿಯಲ್ಲಿ ಭಾಗವಹಿಸಿ, ಮಾಸ್ಕ್ ಹಾಕದೇ‌ ಇರೋ ವ್ಯಕ್ತಿ ನೀವೇ ಆಗಿದ್ದರೆ…
ಖಂಡನೀಯ!!

ಮದುವೆಗೆ ಮಾತ್ರ ಅವಕಾಶ, ಮೆಹಂದಿಗೆ ಇಲ್ಲ
ಈ‌ ನಿಯಮ ಜನ ಸಾಮಾನ್ಯರಿಗೆ ಮಾತ್ರವಾ?

ಅದೂ ಅಲ್ಲದೆ ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ!
ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ… ತಪ್ಪಲ್ವಾ ಸರ್…

ನಾವು ಇಂಥ ತಪ್ಪು ಮಾಡೋದಿಲ್ಲ ಅಂಥಲ್ಲಾ.. ಆದರೆ ನೀವೇ ಮಾಡಿದ್ರೆ ಹೇಗೆ?
ಬಡವರಿಗೊಂದು ನ್ಯಾಯ, ಶ್ರೀಮಂತ ರಿಗೊಂದು ನ್ಯಾಯ, ಅಧಿಕಾರಿಗಳಿಗೊಂದು ನ್ಯಾಯ…

ಉಡುಪಿ: ಅಂದ ಹಾಗೇ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವ್ರು ಕೆಲ ದಿವಸದ ಕೆಳಗೆ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದ್ದು ನಿಮಗೆ ನೆನಪು ಇರಬಹದು, ಆ ವೇಳೆಯಲ್ಲಿ ಡಿಸಿಯವರು ಮಾಡಿದ್ದ ಕೆಲಸಕ್ಕೆ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆದರೆ ಇದೇ ಡಿಸಿ ಈಗ ಮದ್ವೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಫೋಟೋವೊಂದು ವೈರಲ್‌ ಆಗಿದ್ದು, ಈ ಫೋಟೋದಲ್ಲಿ ಡಿಸಿ ಮಾಸ್ಕ್‌ ಹಾಕಿಕೊಳ್ಳದೇ ಇರೋದು, ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಇರುವುದು ಕಂಡು ಬರುತ್ತಿದೆ.

ಇವೆಲ್ಲದರ ನಡುವೆ Shame on u Udupi DC ಅಂತ ಫೇಸ್‌ ಬುಕ್‌ ಸೇರಿದಂತೆ ಇತರೆ ಮಾಧ್ಯಮಗಳಲ್ಲಿ ಡಿಸಿ ವಿರುದ್ದ ಜನತೆ ಕಿಡಿಕಾರುತಿದ್ದು, 23-04-2021 ರಂದು ಅಡಿಶನಲ್‌ ಎಸ್ಪಿಯೊಬ್ಬರ ಮಗಳ ಮೆಹಂದಿ ಸಂಭ್ರಮದಲ್ಲಿ ಕರೋನ ನಿಯಮಗಳನ್ನು ಬದಿಗಿಟ್ಟು ಭಾಗವಹಿಸಲು ನಿಮಗೆ ಅಧಿಕಾರ ಇದ್ಯಾ? ಅಂತ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಇದಲ್ಲದೇ ಡಿಸಿ ನಡವಳಿಕೆ ಬಗ್ಗೆ ಕೂಡ ಅನೇಕ ಅನುಮಾನಗಳು ಮೂಡಿದ್ದು, ಸರ್ಕಾರ ಮದುವೆಯಲ್ಲಿ ಭಾಗವಹಿಸಲು 50 ಮಂದಿಗೆ ಮಾತ್ರ ಅವಕಾಶ ನೀಡಿದ್ದು, ಅಡಿಶನಲ್‌ ಎಸ್ಪಿಯೊಬ್ಬರ ಮಗಳ ಮದುವೆಯಲ್ಲಿ ಈ ಎಲ್ಲವೂ ಪಾಲನೆಯಾಗುವುದ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಜನತೆಗೆ ಬೀದಿಯಲ್ಲಿ ಬುದ್ದಿ ಹೇಳೋ ಡಿಸಿ ಸಾಹೇಬ್ರೇ ಇದೇನಿದು ನಿಮ್ಮ ನಡೆ ಅಂತ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರು ನೀತಿ ಹೇಳೋರು ನೀರಿನಲ್ಲಿ ನಿಂತಿಕೊಂಡು ………. ಮಾಡಿದ್ದದರಂತೆ ನೀವು ಮಾಡಿದ್ದು, ಮಾಡಿರೋದು ಸರಿನಾ ಅಂತ ಉಡುಪಿ ಹಾಗೂ ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿರುವ ಜಗದೀಶ್‌ ಸಾಹೇಬ್ರು ನೀತಿ ಹೇಳುವ ಮುನ್ನ ನೀರಿನಲ್ಲಿ ನಿಂತುಕೊಂಡು…… ಮಾಡೋದು ಬಿಡಬೇಕು ಅಂತ ಜನತೆ ಬುದ್ದಿ ಹೇಳುತ್ತಿದ್ದಾರೆ. ಇದಲ್ಲದೇ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಖುದ್ದು ಅವರೇ ಕ್ಲಾರಿಟಿ ಕೂಡ ನೀಡಬೇಕಾಗಿದೆ. ಕಾದು ನೋಡೋಣ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ