Breaking News

ರಾಜ್ಯ

ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ಆಕ್ಸಿಜನ್ ಕೊರತೆ; ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಾಲ್ವರ ಸಾವು

ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೊಂದು ಆಕ್ಸಿಜನ್ ದುರ್ಘಟನೆ ಸಂಭವಿಸಿದೆ. ಆಕ್ಸೀಜನ್ ಕೊರತೆಯಿಂದ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೋವಿಡ್ ಸೋಂಕಿತರು ಅಸುನೀಗಿದ್ದಾರೆ. ಅಫಜಲಪುರ ತಾಲೂಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ. ಅಫಜಲಪುರ ತಾಲೂಕ ಆಸ್ಪತ್ರೆಯಲ್ಲಿ ಒಟ್ಟು 32 ಸೋಂಕುತರನ್ನು ತೀವ್ರ ನಿಗಾದಲ್ಲಿಟ್ಟು, ಆಕ್ಸಿಜನ್ ನೀಡಲಾಗುತ್ತಿತ್ತು. ಆದರೆ, ಮಧ್ಯರಾತ್ರಿಯ ನಂತರ ಆಸ್ಪತ್ರೆಯಲ್ಲಿನ ಆಕ್ಸಿಜನ್ ಖಾಲಿಯಾಗಿದೆ ಎನ್ನಲಾಗಿದೆ. ಪರಿಣಾಮ …

Read More »

ಸೋನು ಸೂದ್ ಮೋಸಗಾರ ಎಂಬ ಟ್ವಿಟ್ಟರ್ ಪೋಸ್ಟ್ ಗೆ ಲೈಕ್ ಕೊಟ್ಟು ಟ್ರೋಲ್ ಆದ ಕಂಗನಾ..!

ನವದೆಹಲಿ : ನಟಿ ಕಂಗನಾ ರಣಾವತ್ ಸುಖಾಸುಮ್ಮನೆ ತನಗೆ ಸಂಬಂಧವಿಲ್ಲದೇ ಇರುವ ವಿಚಾರವಾಗಿ ಮಾತನಾಡಿ ಟ್ವೀಟ್ ಮಾಡಿ ಸದಾ ಕಾಂಟ್ರವರ್ಸಿ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸಿ ವಿವಾದ ಮೈಮೇಲೆ ಎಳೆದುಕೊಳ್ಳುವ ಕಂಗನಾ ಅನೇಕ ಶತ್ರುಗಳನ್ನ ಸಂಪಾದಿಸಿಕೊಂಡಿದ್ಧಾರೆ. ಬಹುತೇಕ ಎಲ್ಲಾ ತಾರಯರ ಜೊತೆಗೂ ಕಂಗನಾ ಕಿರಿಕ್ ಮಾಡಿಕೊಂಡಿದ್ದಾರೆ. ಹಾಗೆಯೇ ಬಡವರ ಪಾಲಿನ ರಿಯಲ್ ಹೀರೋ ಸೋನು ಸೂದ್ ಜೊತೆಗೂ ಗಲಾಟೆ ಮಾಡಿಕೊಂಡು ಸೋನು ಸೂದ್ ಅವರನ್ನ ಮಣಿಕರ್ಣಿಕಾ ಸಿನಿಮಾದಿಂದಲೇ …

Read More »

ವಿಶ್ವದ ಶ್ರೀಮಂತ ದಂಪತಿ ಡಿವೋರ್ಸ್​: 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಬಿಲ್​ ಗೇಟ್ಸ್​!

ವಾಷಿಂಗ್ಟನ್​: ಟೆಕ್​ ದೈತ್ಯ ಕಂಪನಿ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ ಮತ್ತು ಪತ್ನಿ ಮೆಲಿಂಡಾ ಗೇಟ್ಸ್​ ಡಿವೋರ್ಸ್​ ಪಡೆದುಕೊಂಡಿರುವುದಾಗಿ ಸೋಮವಾರ ಘೋಷಿಸಿದ್ದು, 27 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ ವಿಶ್ವದ ಶ್ರೀಮಂತ ದಂಪತಿಗಳಲ್ಲಿ ಒಬ್ಬರಾಗಿದ್ದರು. ಇಬ್ಬರ ಆಸ್ತಿ ಮೌಲ್ಯ 130 ಬಿಲಿಯನ್​ ಡಾಲರ್​ ಎಂದು ಅಂದಾಜಿಸಲಾಗಿದೆ. ಗೇಟ್ಸ್​ ಪರೋಪಕಾರಿ ಗುಣವುಳ್ಳ ವ್ಯಕ್ತಿಯಾಗಿದ್ದು, ತಮ್ಮ ಭಾರಿ ಪ್ರಭಾವಶಾಲಿ ಅಡಿಪಾಯದ ಮೂಲಕ ವಿಶ್ವದಾದ್ಯಂತ ಶತಕೋಟಿ ಹಣವನ್ನು …

Read More »

ಹೋಟೆಲ್, ರೆಸ್ಟೋರೆಂಟ್ ನಲ್ಲಿ ನೀರಿನ ಬಾಟಲಿಯನ್ನು ಖರೀದಿಸುತ್ತೀರಾ..?ಹಾಗಾದ್ರೆ ಈ ಸ್ಟೋರಿ ನೋಡಿ

ಹೋಟೆಲ್‌ಗಳಲ್ಲಿ MRP – ಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ . ಇದನ್ನು ಪ್ರಶ್ನಿಸಿದ ಕೇಂದ್ರ ಸರ್ಕಾರಕ್ಕೆ ನ್ಯಾ . ಎಫ್ ನಾರಿಮನ್ ಪೀಠ , ಹೋಟೆಲ್ , ರೆಸ್ಟೋರೆಂಟ್ – ಗೆ ಯಾರೂ ಕುಡಿಯವ ನೀರನ್ನು ಖರೀದಿಸಲು ಹೋಗುವುದಿಲ್ಲ ಎಂದು ಉತ್ತರಿಸಿದೆ . ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ( FHRAI ) ಸಲ್ಲಿಸಿದ್ದ ಅರ್ಜಿ ವಿಚಾರಣೆ …

Read More »

ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ಅಮಾನತು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಹೊಸದಿಲ್ಲಿ:ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ಅಮಾನತು ಮಾಡಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, 2021ನೇ ಸಾಲಿನ ಐಪಿಎಲ್ ಕೂಟವನ್ನು ಸ್ಥಗಿತಗೊಳಿಸಲಾಗಿದೆ, ಮುಂದೆ ಮತ್ತೆ ಕೂಟ ಆಯೋಜಿಸಲು ಪ್ರಯತ್ನಿಸುತ್ತೇವೆ. ಆದರೆ ರದ್ದು ಮಾಡಿಲ್ಲ ಎಂದಿದ್ದಾರೆ. ಮೂವರು ಆಟಗಾರರು ಸೇರಿದಂತೆ ಒಟ್ಟು ಆರು ಮಂದಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ …

Read More »

ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ : ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ ಬೆಡ್ ಗಳ ಮಾಹಿತಿಯನ್ನು ಪ್ರತಿದಿನ ವೆಬ್‌ಸೈಟ್‌ ಮೂಲಕ ಜನರಿಗೆ ನೀಡಬೇಕು; ಆಕ್ಸಿಜನ್, ರೆಮಿಡಿಸಿವಿರ್ ಮತ್ತಿತರ ಔಷಧೋಪಕರಣಗಳ ಕೊರತೆ ಉಂಟಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಅಗತ್ಯ ಚಿಕಿತ್ಸೆ …

Read More »

ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ವಾಹನ ಚಾಲಕರಿಗೆ ಶಾಕ್ ಕೊಟ್ಟ ಕೇಂದ್ರ

ನವದೆಹಲಿ: ಪಂಚರಾಜ್ಯ ಚುನಾವಣೆಗೂ ಮುಂಚೆ ದಿನನಿತ್ಯ ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತಲೇ ಇತ್ತು. ಚುನಾವಣೆ ಹೊತ್ತಲ್ಲಿ ಸ್ಥಿರವಾಗಿದ್ದ ದರ ಇದೀಗ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 15 ಪೈಸೆ ಏರಿಕೆಯಾಗಿದ್ದು, ಡಿಸೇಲ್ ದರ 16 ಪೈಸೆ ಏರಿಕೆ ಮಾಡಲಾಗಿದೆ. ಈ ಮೂಲಕ ದೆಹಲಿಯಲ್ಲಿ ಪ್ರತಿ …

Read More »

ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಮಾಂಗಲ್ಯ ಸರ ಕಳವು

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನಿಂದ ಮೃತಳಾದ ಮಹಿಳೆಯ ಮಾಂಗಲ್ಯ ಸರಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ನಡೆದಿದೆ. ಅಂದಾರ್ಲಹಳ್ಳಿ ಗ್ರಾಮದ ಲಕ್ಷ್ಮಮ್ಮ ಕೊರೊನಾ ದಿಂದ ಮೃತಪಟ್ಟಿದ್ದರು. ಮೃತದೇಹ ಪಡೆಯಲು ಬಂದ ಸಂಬಂಧಿಕರು ಮೃತ ಮಹಿಳೆಯ ಮೈಮೇಲೆ ಇದ್ದ ಆಭರಣಗಳನ್ನು ಕೇಳಿದ್ದಾರೆ. ಈ ವೇಳೆ ಮೊದಲು ಬೆಳ್ಳಿ ಕಾಲು ಚೈನ್ ತದನಂತರ ಬಂಗಾರದ ಕಿವಿ ಒಲೆ ತಂದುಕೊಟ್ಟಿದ್ದಾರೆ. ಆದರೆ ಮಾಂಗಲ್ಯ ಸರ ಎಲ್ಲಿ ಅಂತ ಕೇಳಿದ್ರ ಯಾರ ಬಳಿಯೂ ಉತ್ತರ …

Read More »

ನೆಲಮಂಗಲ ಬಳಿ ಬಿಜೆಪಿಯ ಪೋಸ್ಟರ್ ಶೋಕಿ- ಫೋಟೋ ವೈರಲ್ ಆಗ್ತಿದ್ದಂತೆ ಫ್ಲೆಕ್ಸ್ ತೆರವ

ನೆಲಮಂಗಲ: ಅಂತ್ಯಸಂಸ್ಕಾರ ವ್ಯವಸ್ಥೆಯಲ್ಲೂ ಬಿಜೆಪಿ ಶೋಕಿಗೆ ಇಳಿದಿದೆ. ಕೋವಿಡ್‍ನಿಂದ ಮೃತಪಟ್ಟವರ ಉಚಿತ ಅಂತ್ಯಸಂಸ್ಕಾರಕ್ಕೆ ಗಿಡ್ಡೇನಹಳ್ಳಿಯಲ್ಲಿ ಸ್ಮಶಾನ ನಿರ್ಮಿಸಲಾಗಿದೆ. ಈ ಸ್ಮಶಾನಕ್ಕೆ ಹೋಗುವ ದಾರಿಯ ಮಾರ್ಗವನ್ನ ಸೂಚಿಸುವ ಫ್ಲೆಕ್ಸ್ ನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್ ಅಶೋಕ್, ಬಿಡಿಎ ಅಧ್ಯಕ್ಷ ಎಸ್. ಆರ್ ವಿಶ್ವನಾಥ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಫೋಟೊ ಹಾಕಲಾಗಿತ್ತು. ಅಲ್ಲದೆ ಕೊರೊನಾ ಶವಸಂಸ್ಕಾರಕ್ಕೆ ಬರುವ ಸಂಬಂಧಿಕರು, ಅಂಬುಲೆನ್ಸ್ ಚಾಲಕರು ಹಾಗೂ …

Read More »

ರಾಜ್ಯದ ಜನರಿಗೆ ಶಾಕ್ ನೀಡಿದ ವೈದ್ಯರು; ಸೋಂಕಿತರ ಸಂಖ್ಯೆ ಇನ್ನೂ ಏರಿಕೆಯಾಗಲಿದೆಯಂತೆ..!!!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯು ಜೋರಾಗಿದ್ದು, ಇದು ಇನ್ನೂ 15 ದಿನಗಳ ಕಾಲ ಹೀಗೆ ಮುಂದುವರೆಯುತ್ತದೆ ಎಂದು ಹೇಳುವ ಮೂಲಕ ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ರಾಜ್ಯದ ಜನರಿಗೆ ಶಾಕ್ ಕೊಟ್ಟಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕೋವಿಡ್ 2 ನೇ ಅಲೆಯ ತೀಕ್ಷ್ಣತೆ ಇನ್ನೂ 15 ದಿನ ಇರಲಿದ್ದು, ನಂತರ ಕಡಿಮೆಯಾಗಬಹುದು. ಕೊರೊನಾದ 2 ನೇ ಅಲೆಯು ಬಹಳ ವೇಗವಾಗಿ ವ್ಯಾಪಿಸುತ್ತಿದ್ದು, …

Read More »