ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಮೃತಪಟ್ಟ ಘಟನೆ ಬಗ್ಗೆ ಎಲ್ಲರಿಗೂ ನೋವಿದೆ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ, ಆದರೂ ಮಾಧ್ಯಮಗಳಲ್ಲಿ ಹಲವಾರು ಊಹಾಪೋಹಗಳು ಬರುತ್ತಿವೆ, ವದಂತಿಗಳನ್ನು ಹಬ್ಬಿಸಿ ಜನತೆಯನ್ನು ತಪ್ಪು ದಾರಿಗೆಳೆಯುವುದು ಬೇಡ, ಸರ್ಕಾರ ತನಿಖೆಗೆ ಅಧಿಕಾರಿಗಳನ್ನು ನೇಮಿಸಿದೆ, ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಪ್ರತಿಕ್ರಿಯಿಸಿದ್ದಾರೆ. ರೋಗಿಗಳು ಎಲ್ಲಿ ಸಾವಾದರೂ ಅದು ನಮಗೆ ನೋವಿನ ಸಂಗತಿಯೇ, ಅದು ನಮ್ಮ …
Read More »ಸ್ಮಶಾನದಲ್ಲಿಯೇ ಸೋಂಕಿತನ ಶವ ಬಿಸಾಡಿದ ಪಾಪಿಗಳು?
ಚಿಕ್ಕಬಳ್ಳಾಪುರ : ಇಲ್ಲಿಯ ನಿಮ್ಮಾಕಲಕುಂಟೆ ಹತ್ತಿರದ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಕೋವಿಡ್ ಸೋಂಕಿತ ಶವವನ್ನು ಮಣ್ಣು ಮಾಡದೆ ಬಿಸಾಡಿ ಹೋಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮೃತ ದೇಹವನ್ನು ಬಿಸಾಡಿ ಮೂರ್ನಾಲ್ಕು ದಿನಗಳೇ ಕಳೆದಿವೆ. ಮೃತ ದೇಹ ಆಸ್ಪತ್ರೆಯಲ್ಲಿ ಪ್ಯಾಕ್ ಮಾಡಿದ ರೀತಿಯಲ್ಲಿದೆ. ನಾಯಿಗಳು ಮೃತದೇಹದ ಭಾಗಗಳನ್ನು ಎಳೆದು ತಿನ್ನುತ್ತಿವೆ. ಅಷ್ಟೇ ಇಲ್ಲ, ಈ ಸ್ಮಶಾನದ ಅಕ್ಕ ಪಕ್ಕದಲ್ಲಿಯೇ …
Read More »ನಟಿ ಕಂಗನಾಗೆ ಮತ್ತೊಂದು ಶಾಕ್: ಟ್ವಿಟರ್ ಬಳಿಕ ಫ್ಯಾಶನ್ ಡಿಸೈನರ್ಗಳಿಂದಲೂ ಬಹಿಷ್ಕಾರ..!
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಸಾಲು ಸಾಲು ಟ್ವೀಟ್ಗಳನ್ನ ಮಾಡಿದ ಕಂಗನಾ ರಣಾವತ್ ಖಾತೆಗೆ ಟ್ವಿಟರ್ ಇಂಡಿಯಾ ಕೊಕ್ ನೀಡಿದೆ. ಟ್ವಿಟರ್ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ಕಂಗನಾ ರಣಾವತ್ರ ಟ್ವಿಟರ್ ಖಾತೆಯನ್ನ ಶಾಶ್ವತವಾಗಿ ಅಮಾನತು ಮಾಡಲಾಗಿದೆ. ಕಂಗನಾ ರಣಾವತ್ರನ್ನ ಟ್ವಿಟರ್ ಬಹಿಷ್ಕರಿಸಿದ ಬೆನ್ನಲ್ಲೇ ಇದೀಗ ಭಾರತೀಯ ಫ್ಯಾಷನ್ ಡಿಸೈನರ್ಗಳೂ ಸಹ ಕಂಗನಾರನ್ನ ಬಹಿಷ್ಕರಿಸಿದ್ದಾರೆ. ಡಿಸೈನರ್ ರಿಮಜಿನ್ ದಾದು ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನ ಶೇರ್ ಮಾಡಿದ್ದಾರೆ. ಒಳ್ಳೆಯ …
Read More »ಹಾಲು ಖರೀದಿಸುವ ಸಮಯದಲ್ಲಿ ಮದ್ಯ ಕೊಳ್ಳಲು ಯಾರು ಬರಲ್ಲ.
ಕೊಪ್ಪಳ: ಹಾಲು ಖರೀದಿಸುವ ಸಮಯದಲ್ಲಿ ಮದ್ಯ ಕೊಳ್ಳಲು ಯಾರು ಬರಲ್ಲ. ರಾಜ್ಯ ಸರ್ಕಾರ ಬಾರ್ ಗಳಿಗೆ ನೀಡಿರುವ ಸಮಯ ವ್ಯಾಪಾರಕ್ಕೆ ಸೂಕ್ತವಲ್ಲ ಎಂದು ಮದ್ಯದಂಗಡಿಗಳ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ನೀಡಿರುವ ಸಮಯದಲ್ಲಿ ನಮಗೆ ವ್ಯಾಪಾರ ಸಹ ಆಗುತ್ತಿಲ್ಲ. ಸರ್ಕಾರಕ್ಕೆ ಆದಾಯವು ಬರಲ್ಲ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಬಾರ್ ಗಳನ್ನು ಬಂದ್ ಮಾಡಿದ್ರೆ ಉತ್ತಮ ಎಂದು ಕೊಪ್ಪಳ ಬಾರ್ ಮಾಲೀಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತುಮಾತನಾಡಿರುವ ಮದ್ಯ ಮಾರಾಟಗಾರರು, …
Read More »ಬಳ್ಳಾರಿ; ವಿಮ್ಸ್‌ನಲ್ಲಿ ಬೆಡ್ ಸಿಗದೇ ಆಸ್ಪತ್ರೆ ಮುಂದೆ ವ್ಯಕ್ತಿ ನರಳಾಟ
ವಿಜಯನಗರ, ಮೇ 04; ಬೆಂಗಳೂರು ನಗರದಲ್ಲಿ ಬೆಡ್ ಸಿಗದೇ ಕೋವಿಡ್ ಸೋಂಕಿತರು ಪರದಾಡುತ್ತಿದ್ದಾರೆ. ಬಳ್ಳಾರಿಯ ವಿಮ್ಸ್‌ನಲ್ಲಿಯೂ ಇಂತಹ ಪ್ರಕರಣ ಈಗ ಬೆಳಕಿಗೆ ಬಂದಿದೆ. ಬೆಡ್ ಸಿಗದೆ ಕೋವಿಡ್ ಸೋಂಕಿತ ನರಳಾಡಿದ ಘಟನೆ ಮಂಗಳವಾರ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಬಳ್ಳಾರಿಯಲ್ಲಿಯೂ ಬೆಡ್‌ನ ಕೊರತೆ ಶುರುವಾಗಿದೆಯೇ? ಎಂಬ ಅನುಮಾನ ಈಗ ಉಂಟಾಗಿದೆ. ಎರಡು ಗಂಟೆಯಿಂದ ಬೆಡ್ ಸಿಗದೆ ಕೋವಿಡ್ ಸೋಂಕಿತ ರೋಗಿ ಆಸ್ಪತ್ರೆಯ ಬಾಗಿಲ ಮುಂದೆ ಮಲಗಿ ನರಳಾಡಿದ್ದಾನೆ. ಮಗನಿಗೆ ಬೆಡ್ …
Read More »ಆಕ್ಸಿಜನ್ ಕೊರತೆಗೆ ಕಾರಣ ಯಾರು : ಪ್ರಧಾನಿಗಳೇ ನಮ್ಮ ಕರ್ನಾಟಕ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಲಂಗು ಲಗಾಮು ಇಲ್ಲದೇ ಹುಚ್ಚು ಕುದುರೆಯಂತೆ ಓಡುತ್ತಿರುವ ಕೊರೊನಾಗೆ ಕಡಿವಾಣ ಹಾಕಲು ಹರಸಾಹಸಪಡುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದ್ದು, ಆಮ್ಲಜಕನವಿಲ್ಲದೇ ನೂರಾರು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ. ಆಕ್ಸಿಜನ್ ಇದೆ ಎನ್ನುವ ಸರ್ಕಾರ ಈ ಸಮಸ್ಯೆಯನ್ನು ನೀಗಿಸಲು ನಾನಾ ಸರ್ಕಸ್ ನಡೆಸುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗಲು ನರೇಂದ್ರ ಮೋದಿ ನೇತೃತ್ವದ …
Read More »ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಿಲಗಳ ರಕ್ಷಣೆಗಾ : ಸಿದ್ದರಾಮಯ್ಯ ಗರಂ
ಬೆಂಗಳೂರು : ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಅವರೇ ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು ಬಿಬಿಎಂಪಿಯ ಅಧಿಕಾರಿಗಳ ವಿರುದ್ಧವಲ್ಲ, ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿ, ಸಚಿವರು ಮತ್ತು ಬಿಜೆಪಿ ಶಾಸಕರು, ಸಂಸದರ ವಿರುದ್ಧ. ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಿಲಗಳ ರಕ್ಷಣೆಗಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಕೋವಿಡ್ ಪ್ರಾರಂಭದ ದಿನಗಳಲ್ಲಿಯೇ ನಾನು ಪತ್ರಿಕಾಗೋಷ್ಠಿ ನಡೆಸಿ ಕೋವಿಡ್ ನಿರ್ವಹಣೆಯಲ್ಲಿನ ಭ್ರಷ್ಟಾಚಾರವನ್ನು ದಾಖಲೆಸಹಿತ ಬಹಿರಂಗಗೊಳಿಸಿದ್ದೆ. ಅದರ ಜೊತೆ ಈಗ ನೀವು …
Read More »ಮೈಸೂರಿನಲ್ಲಿ ಅಕ್ರಮ ಆಕ್ಸಿಜನ್ ಸಿಲಿಂಡರ್ ಮಾರಾಟ ;ಓರ್ವನನ್ನು ಬಂಧಿಸಿದ ಸಿಸಿಬಿ ಪೊಲೀಸರು
ಮೈಸೂರು: ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ನಂಜನಗೂಡು ಸಮೀಪದ ಪೆಟ್ರೋಲ್ ಬಂಕ್ ಬಳಿ ದಾಖಲೆ ಇಲ್ಲದೆ, ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಧುಕುಮಾರ್(37) ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂಜನಗೂಡು ತಾಲೂಕು ಹೊಸಕೋಟೆಯ ಮಧುಕುಮಾರ್ ಎನ್ನುವ ವ್ಯಕ್ತಿ ಅಕ್ರಮವಾಗಿ ಆಕ್ಸಿಜನ್ ಮಾರಾಟ ಮಾಡುತ್ತಿದ್ದ. ಆರೋಪಿ ಬಳಿ ಇದ್ದ ತುಂಬಿದ ಆಕ್ಸಿಜನ್ ಸಿಲಿಂಡರ್ ವಶಕ್ಕೆ ಪಡೆದಿರುವ …
Read More »ದೆಹಲಿಯ ಭಾರತೀಯ ಸೇನಾ ಆಸ್ಪತ್ರೆಯಲ್ಲಿ ದೆಹಲಿ ಸರ್ಕಾರವು ಆಕ್ಸಿಜನ್ ಸರಬರಾಜು ಗಣನೀಯವಾಗಿ ಕಡಿತ
ನವ ದೆಹಲಿ : ದೆಹಲಿಯ ಭಾರತೀಯ ಸೇನಾ ಆಸ್ಪತ್ರೆಯಲ್ಲಿ ದೆಹಲಿ ಸರ್ಕಾರವು ಆಕ್ಸಿಜನ್ ಸರಬರಾಜು ಗಣನೀಯವಾಗಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಆಸ್ಪತ್ರೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು, ಸದ್ಯದ ಮಟ್ಟಿಗೆ ಆಕ್ಸಿಜನ್ ಕೊರತೆಯಿಲ್ಲದಿದ್ದರೂ, ನಿತ್ಯ ಕಳಿಸುತ್ತಿರುವ ಆಕ್ಸಿಜನ್ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದ ಮುಂದೆ ಕೋವಿಡ್ 19 ರೋಗಿಗಳ ಚಿಕಿತ್ಸೆಯಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿದ್ದಾರೆ. 450 ಹಾಸಿಗೆಗಳ …
Read More »ವಿದ್ಯಾರ್ಥಿನಿ ಸಾವಿಗೆ ಬೆಡ್ ಸಿಗದಿರುವುದೇ ಕಾರಣ: ಆರೋಪ
ದಾವಣಗೆರೆ: ಭಾರತ್ ಕಾಲೊನಿಯ 17 ವರ್ಷದ ಬಾಲಕಿ ಮಂಗಳವಾರ ಮೃತಪಟ್ಟಿದ್ದಾಳೆ. ಎಲ್ಲ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದರೂ ಬೆಡ್ ಸಿಗದೇ, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಇದ್ದಿದ್ದರಿಂದ ಈ ಸಾವು ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ನಗರದ ಭಾರತ್ ಕಾಲೊನಿಯ 12ನೇ ಕ್ರಾಸ್ ನಿವಾಸಿ ಮಂಜಪ್ಪ-ವೇಡಿಯಮ್ಮ ದಂಪತಿಯ ಮಗಳು ಸಂಗೀತ ಮೃತಪಟ್ಟವಳು. ಸಂಗೀತಾಳಿಗೆ ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಕ್ಲಿನಿಕ್‌ನಲ್ಲಿ ಗ್ಲುಕೋಸ್ ಕೊಡಿಸಿ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದಾರೆ. ಎಲ್ಲಿಯೂ ಬೆಡ್ …
Read More »
Laxmi News 24×7