Breaking News

ರಾಜ್ಯ

1000 ಆಕ್ಸಿಜನ್​ ಬೆಡ್​ ಇರುವ, ದೇಶದಲ್ಲಿಯೇ ಅತ್ಯಂತ ದೊಡ್ಡ ಕೊವಿಡ್​ ಕಾಳಜಿ ಕೇಂದ್ರ ಕೇರಳದಲ್ಲಿ ನಿರ್ಮಾಣ

ಭಾರತದಲ್ಲಿಯೇ ಅತ್ಯಂತ ದೊಡ್ಡದಾದ, ಆಕ್ಸಿಜನ್​ ಬೆಡ್​ಗಳನ್ನೊಳಗೊಂಡ ಕೊವಿಡ್​ 19 ಕಾಳಜಿ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. ಇದು ಎರ್ನಾಕುಲಂನ ಅಂಬಾಲಮುಗಲ್​ನಲ್ಲಿ ಸಿದ್ಧವಾಗುತ್ತಿರುವ ಈ ಕೊವಿಡ್​ ಕೇರ್​​ ಸೆಂಟರ್​​ನಲ್ಲಿ 1000 ಆಕ್ಸಿಜನ್ ಬೆಡ್​ಗಳು ಇರಲಿವೆ. ಗುರುವಾರ (ಮೇ 13)ದ ಹೊತ್ತಿಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ. ಎಲ್ಲೆಲ್ಲೂ ಆಕ್ಸಿಜನ್ ಕೊರತೆ ಮಿತಿಮೀರುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅಂಬಾಲಮುಗಲ್​ನ ರಿಫೈನರಿ ಶಾಲೆ ಮೈದಾನದಲ್ಲಿ, 1000 ಆಕ್ಸಿಜನ್ ಬೆಡ್​​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎಸ್​. ಸುಹಾಸ್ …

Read More »

ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

ಮೊಟ್ಟೆಯೊಡೆದು ಬರೋಬ್ಬರಿ 1.48ಕೋಟಿ ಆಮೆ ಮರಿಗಳು ಒಡಿಶಾದ ಗಹಿರ್ ಮಾತಾ ಕಡಲ ಸೇರಿವೆ. ಈ ಕಡಲ ತೀರದಲ್ಲಿ ಆಲಿವ್ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ ಇಲ್ಲದೇ ಇರುವ ವೇಳೆಯಲ್ಲಿ ಮೊಟ್ಟೆಯೊಡೆದುಕೊಂಡು ಹೊರಬಂದಿವೆ. ಪ್ರಕೃತಿಯ ಈ ವಿಸ್ಮಯದ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. “ಒಟ್ಟಾರೆಯಾಗಿ 1.48ಕೋಟಿ ಆಮೆಗಳು ಮೊಟ್ಟೆಯೊಡೆದು …

Read More »

ಕುತೂಹಲಕ್ಕೆ ಕಾರಣವಾಗಿದೆ ಆಕಾಶದಲ್ಲಿ ಕಂಡುಬಂದ ವಿಚಿತ್ರ ಆಕೃತಿ.!

ಕಳೆದ ವರ್ಷ ಜನವರಿ ತಿಂಗಳಲ್ಲಿ ಲಾಹೋರ್​​ನಲ್ಲಿ ವಿಚಿತ್ರವಾದ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಾಣಿಸಿಕೊಂಡ ಘಟನೆ ನಿಮಗೆ ನೆನಪಿದ್ದಿರಬಹುದು. ಈ ದೃಶ್ಯದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕರು ಇದನ್ನ ಹಾರುವ ತಟ್ಟೆ ಇರಬಹುದು ಎಂದು ಭಾವಿಸಿದ್ದರು. ಆದರೆ ಬಳಿಕ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿ ಇದೊಂದು ಕೈಗಾರಿಕಾ ಪ್ರದೇಶದಲ್ಲಿ ಆದ ಸಮಸ್ಯೆಯಿಂದಾಗಿ ಈ ರೀತಿ …

Read More »

ಕೊರೊನಾ ಸೋಂಕು ವರದಿ ನೆಗೆಟಿವ್‌ ಬರುತ್ತಿದ್ದಂತೆ ಮಕ್ಕಳನ್ನು, ಕುಟುಂಬದವರನ್ನು ಭೇಟಿಯಾದ ಅಲ್ಲು ಅರ್ಜುನ್‌..!

ನವದೆಹಲಿ: ಕೊರೊನಾ ಸೋಂಕು ದೃಢಪಟ್ಟು ಕ್ವಾರಂಟೈನ್‌ನಲ್ಲಿದ್ದ ಟಾಲಿವುಡ್‌ ನಟ ಅಲ್ಲು ಅರ್ಜುನ್‌‌ ಅವರ ವರದಿ ನೆಗೆಟಿವ್‌ ಬರುತ್ತಿದ್ದಂತೆ ತಮ್ಮ ಮಕ್ಕಳನ್ನು ಮುದ್ದಾಡಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಕಳೆದ 14 ದಿನಗಳ ಹಿಂದೆ ಕೊರೊನಾ ಸೋಂಕು ಹಿನ್ನೆಲೆ ಕ್ವಾರಂಟೈನ್‌ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದಿದೆ. 15 ದಿನಗಳ ಬಳಿಕ ಅವರು ತಮ್ಮ ಮಕ್ಕಳನ್ನು ಹಾಗೂ ಕುಟುಂಬದರನ್ನು …

Read More »

ಕೊರೊನಾ ಎರದನೆ ಅಲೆ ನಿಯಂತ್ರಣಕ್ಕೆ 6-8 ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ?:I.C.M.R.

ನವದೆಹಲಿ: ಕೊರೊನಾ ಎರದನೆ ಅಲೆ ನಿಯಂತ್ರಣಕ್ಕೆ 6-8 ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಮಾಡಬೇಕು ಎಂದು ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಕೇಂದ್ರ ಸರ್ಕಾರಕ್ಕೆ ಸಲಹೆ ನಿಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಮುಂದಿನ 6-8 ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡುವುದು ಒಳ್ಳೆಯದು. ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು ಲಾಕ್ ಡೌನ್ ಅಗತ್ಯವಿದೆ ಎಂದು ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಅಭಿಪ್ರಾಯಪಟ್ಟಿದ್ದಾರೆ. …

Read More »

ಸಿಇಟಿ ಪರೀಕ್ಷೆ ಮುಂದೂಡಿಕೆ: ದಿನಾಂಕ ಮರು ನಿಗದಿ ಮಾಡಲಾಗಿದೆ.

ಬೆಂಗಳೂರು: ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿರುವ ಕಾರಣ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಮುಂದೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷೆಯನ್ನು ಮುಂದೂಡಿ, ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ. ಈ ಹಿಂದೆ ಸಿಇಟಿ ಪರೀಕ್ಷೆಯನ್ನು ಜುಲೈ 7 ಮತ್ತು 8ರಂದು ನಡೆಸಲು ತೀರ್ಮಾನಿಸಲಾಗಿದೆ. ಇದೀಗ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಮುಂದೂಡಿಕೆಯಾದ ಕಾರಣ ಸಿಇಟಿ ಪರೀಕ್ಷೆಯನ್ನು ಮುಂದೂಡಿ, ಆಗಸ್ಟ್ 28 ಮತ್ತು 29ರಂದು ನಡೆಸಲು ಕರ್ನಾಟಕ ಪರೀಕ್ಷಾ …

Read More »

ಹೆಲ್ಮೆಟ್ ಧರಿಸದ ಬೈಕ್​ ಸವಾರನಿಗೆ ದಂಡ ಹಾಕಿದ ಎಸ್​ಐಗೆ ನಡುರಸ್ತೆಯಲ್ಲೇ ಎಸಿ, ತಹಸೀಲ್ದಾರ್ ಅವಾಜ್​! ವಿಡಿಯೋ ವೈರಲ್​

ಮಂಡ್ಯ: ಹೆಲ್ಮೆಟ್​ ಹಾಕದೆ ಬೈಕ್​ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ ಸಬ್​ಇನ್​ಸ್ಪೆಕ್ಟರ್​ಗೆ ನಡು ರಸ್ತೆಯಲ್ಲೇ ನಿಂತು ಎಸಿ ಮತ್ತು ತಹಸೀಲ್ದಾರ್ ಅವಾಜ್​ ಹಾಕಿರುವ ವಿಡಿಯೋ ವೈರಲ್​ ಆಗಿದೆ. ಇನ್ನುಂದೆ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ಪೊಲೀಸರಿಗೆ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಕುಂಞ ಅಹಮದ್ ವಾರ್ನಿಗ್​ ಮಾಡಿರುವ ಘಟನೆ ನಾಗಮಂಗಲದಲ್ಲಿ ಸಂಭವಿಸಿದೆ.  ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್‌ಐ ರವಿಶಂಕರ್ ನೇತೃತ್ವದ ತಂಡ ವಾಹನ ತಪಾಸಣೆ ಮಾಡುತ್ತಿದ್ದರು, …

Read More »

ಹಳೆ ವೀಡಿಯೋಗೆ ಧ್ವನಿ ; ಪೊಲೀಸರಿಂದ ಪದ್ಮಾ ಹರೀಶ್ ವಿಚಾರಣೆ

ಬೆಂಗಳೂರು, : ಮುಂಬೈ ಪೊಲೀಸರು ವೃದ್ಧ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋಗೆ ಹಿನ್ನೆಲೆ ಧ್ವನಿ ಕೊಟ್ಟಿದ್ದ ಕೈ ಪಕ್ಷದ ಮಹಿಳಾ ಮಣಿ ತೊಂದರೆಯಲ್ಲಿ ಸಿಲುಕಿದ್ದಾರೆ. ಕರ್ನಾಟಕ ಪೊಲೀಸರಿಗೆ ಛೀಮಾರಿ ಹಾಕಿ ವೈರಲ್ ಮಾಡಿದ್ದ ಕೈ ಪಕ್ಷದ ಮಹಿಳಾ ಮಣಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೈ ಪಕ್ಷದ ನಾಯಕಿ ಇದೀಗ …

Read More »

ಮೈಸೂರು ತಲುಪಿದ ಆಮ್ಲಜನಕ ಟ್ಯಾಂಕ್‌

ಮೈಸೂರು: ಕೇಂದ್ರ ಸರ್ಕಾರವು ಆಮ್ಲಜನಕ ಎಕ್ಸ್‌ಪ್ರೆಸ್‌ನಲ್ಲಿ ಮಂಗಳವಾರ ಬೆಂಗಳೂರಿಗೆ ಸಾಗಿಸಿದ್ದ ಆಮ್ಲಜನಕದ ಒಂದು ಕಂಟೈನರ್‌ ಅನ್ನು (ಟ್ಯಾಂಕ್‌) ಬುಧವಾರ ಬೆಳಿಗ್ಗೆ ಮೈಸೂರಿಗೆ ತರಲಾಯಿತು. ಈ ಕಂಟೈನರ್‌ನಲ್ಲಿ 20 ಸಾವಿರ ಲೀಟರ್ ಆಮ್ಲಜನಕ ತುಂಬಿದೆ. ಈ ಆಮ್ಲಜನಕವನ್ನು ಸ್ಥಳೀಯವಾಗಿ ಶೇಖರಿಸಿ ಕೂಡಲೇ ಕಂಟೈನರ್‌ ಹಿಂದಿರುಗಿಸಬೇಕಿತ್ತು. ಆದರೆ, ಇಷ್ಟು ಆಮ್ಲಜನಕವನ್ನು ಸಂಗ್ರಹಿಸಲು ಬೇಕಾದ ಶೇಖರಣಾ ಘಟಕ ಮೈಸೂರು ಜಿಲ್ಲೆಯಲ್ಲಿ ಇರಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿಕೋಪ ನಿರ್ವಹಣೆ ಕಾಯ್ದೆ ಪ್ರಯೋಗಿಸಿ …

Read More »

ರಾಜ್ಯಕ್ಕೆ 12 ದಿನಗಳಲ್ಲಿ 8 ಲಕ್ಷ ಡೋಸ್‌ ಲಸಿಕೆ ಪೂರೈಕೆ: ಮುಖ್ಯ ಕಾರ್ಯದರ್ಶಿ

ಬೆಂಗಳೂರು: ’45 ವರ್ಷ ದಾಟಿದವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಪ್ರತಿ 15 ದಿನಕ್ಕೆ 15 ಲಕ್ಷ ಡೋಸ್‌ ಲಸಿಕೆ ಕೊಡಬೇಕಿತ್ತು. ಆದರೆ, ರಾಜ್ಯಕ್ಕೆ 12 ದಿನಗಳಲ್ಲಿ 8 ಲಕ್ಷ ಮಾತ್ರ ಬಂದಿದೆ’ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ತಿಳಿಸಿದ್ದಾರೆ. ‘ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಕೊಡುತ್ತೇವೆ. 45 ವರ್ಷ ದಾಟಿದವರಿಗೆ ಕೊಡಲು 15 ದಿನಗಳಲ್ಲಿ 80 ಸಾವಿರ ಡೋಸ್‌ ಮಾತ್ರ ಕೋವ್ಯಾಕ್ಸಿನ್‌ ಲಸಿಕೆ ಬಂದಿದೆ. …

Read More »