Breaking News

ರಾಜ್ಯ

ಡಿಸಿಎಂ ಸವದಿ ಸಹೋದರನ ಪುತ್ರ ಕೊರೊನಾ ಸೋಂಕಿಗೆ ಬಲಿ

ಬೆಂಗಳೂರು; ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸಹೋದರನ ಪುತ್ರ ವಿನೋದ್ ಸವದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಡಿಸಿಎಂ ಸವದಿ ಅವರ ಸಹೋದರ ಪರಪ್ಪ ಸವದಿ ಅವರ ಪುತ್ರ ವಿನೋದ್ ಸವದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಕೇವಲ 36 ವರ್ಷದ ವಿನೋದ್ ಸವದಿ ಕೊರೊನಾಗೆ ಬಲಿಯಾಗಿರುವುದು ಕುಟುಂಬದವರಿಗೆ ಬರಸಿಡಿಲುಬಡಿದಂತಾಗಿದೆ.

Read More »

ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ?: ಎಂ.ಬಿ. ಪಾಟೀಲ್ ಪ್ರಶ್ನೆ

ವಿಜಯಪುರ: ದೇಶದಲ್ಲಿ ಜನರು ಸಾಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರಾಜಪಥ ಅಭಿವೃದ್ಧಿ, ಪ್ರಧಾನಮಂತ್ರಿಗಳ ನಿವಾಸ, ಉಪರಾಷ್ಟ್ರಪತಿಗಳ ನಿವಾಸದ ಪ್ರಗತಿಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲಿ ಸಂಸತ್ ನಿರ್ಮಾಣ ಕಾರ್ಯ ಬೇಕಿತ್ತಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅವರು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿಯವರು ಈ ಹಿಂದೆ ಯಾವ ಮಹಾರಾಜರು ಮಾಡದ ರೀತಿಯಲ್ಲಿ ವರ್ತಿಸುತ್ತಿದ್ದಾರೆ‌. …

Read More »

ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಪತ್ರಕರ್ತರೂ ಆಗಿದ್ದ ಹುಕ್ಕೇರಿಯ ಪ್ರಕಾಶ ದೇಶಪಾಂಡೆ ನಿಧನರಾಗಿದ್ದಾರೆ.

ಹುಕ್ಕೇರಿ – ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಪತ್ರಕರ್ತರೂ ಆಗಿದ್ದ ಹುಕ್ಕೇರಿಯ ಪ್ರಕಾಶ ದೇಶಪಾಂಡೆ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕೊರೋನಾದಿಂದಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿವಿಧ ಪತ್ರಿಕೆಗಳಿಗೆ ಬಿಡಿ ವರದಿಗಾರರಾಗಿ ಹಲವಾರು ವರ್ಷ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಸೇವಾದಳದಲ್ಲಿ ಕೆಲಸ ಮಾಡಿದ್ದರು. ಸಧ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ. …

Read More »

ಕರ್ನಾಟಕದಲ್ಲಿ ಈವರೆಗೆ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ಹಂಚಿಕೊಂಡ ಸಚಿವ ಡಾ.ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ 1,07,59,572 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. 18 ರಿಂದ44 ವರ್ಷದೊಳಗಿನ 41,803 ಜನರಿಗೆ ಲಸಿಕೆ ಹಾಕಲಾಗಿದೆ. ಕರ್ನಾಟಕಕ್ಕೆ ಅಂದಾಜು 6.52 ಕೋಟಿ ಲಸಿಕೆ ಅಗತ್ಯವಿದೆ. ಹೀಗಾಗಿ ಸದ್ಯ ಕೇಂದ್ರ ಸರ್ಕಾರದ ಬಳಿ 2 ಕೋಟಿ ಕೊವಿಶೀಲ್ಡ್​, 1 ಕೋಟಿ ಕೊವ್ಯಾಕ್ಸಿನ್​ ಡೋಸ್​ ಲಸಿಕೆ ಒದಗಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಸೇರಮ್ ಸಂಸ್ಥೆಯಿಂದ ಕೊವಿಶೀಲ್ಡ್​ ಲಸಿಕೆ ಪಡೆಯಲಾಗಿದೆ. ಭಾರತ್​ ಬಯೋಟೆಕ್​ ಸಂಸ್ಥೆ ಇನ್ನೂ ಕೊವ್ಯಾಕ್ಸಿನ್​ ಪೂರೈಸಿಲ್ಲ. ಮೇ 3ನೇ …

Read More »

ಪಾಸಿಟಿವ್‌ ಬಂದರೆ ತಂಡದಿಂದ ಹೊರಕೆ : ಟೀಮ್‌ ಇಂಡಿಯಾಕ್ಕೆ ಬಿಸಿಸಿಐ ಖಡಕ್‌ ಸೂಚನೆ

ಹೊಸದಿಲ್ಲಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ ಭಾಗಿಯಾಗಲಿದೆ. ಇದಕ್ಕಾಗಿ ಈಗಾಗಲೇ ತಂಡವನ್ನು ಆಯ್ಕೆ ಮಾಡಲಾಗಿದ್ದು, ಜೂನ್‌ 2ರಂದು ಕ್ರಿಕೆಟಿಗರು ಇಂಗ್ಲೆಂಡಿಗೆ ವಿಮಾನವೇರಲಿದ್ದಾರೆ. ಆದರೆ ಇದಕ್ಕೂ ಮುನ್ನ ಬಿಸಿಸಿಐ ಎಲ್ಲ ಆಟಗಾರರಿಗೂ ಖಡಕ್‌ ಸೂಚನೆಯೊಂದನ್ನು ರವಾನಿಸಿದೆ. ಈ ಪ್ರವಾಸಕ್ಕೂ ಮುನ್ನ ಎಲ್ಲ ಆಟಗಾರರು ಮುಂಬಯಿಗೆ ಆಗಮಿಸಿದ ಬಳಿಕ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಬಳಿಕ ಆಟಗಾರರಿಗೆ ಎರಡು ಬಾರಿ …

Read More »

ನಾಲಾಯಕ್ ಇಡು ಫೋನ್ ದೊಡ್ಡ ಕಿಸಾಮತಿ ಮಾಡ್ತಿ : ಸಿದ್ದು ಸವದಿ

ಬಾಗಲಕೋಟೆ: ಕೊರೊನಾದಿಂದ ಸಹೋದರನನ್ನು ಕಳೆದುಕೊಂಡ ವ್ಯಕ್ತಿ ಶಾಸಕರಿಗೆ ಕರೆ ಮಾಡಿ ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ಆಸ್ಪತ್ರೆಯ ಮುಂದೆ ಕೂರಬೇಕು ಹೇಳಿದ್ದಕ್ಕೆ ನಾಲಾಯಕ್ ಇಡು ಫೋನ್ ಎಂದು ತೆರದಾಳ ಶಾಸಕ ಸಿದ್ದು ಸವದಿ ಉದ್ದಟತನದ ಮಾತುಗಳನ್ನಾಡಿದ್ದಾರೆ. ಸಂಜಯ್ ದೊಂಡಿಬಾಗ ಗಾಯಕವಾಡ(41) ಕೊರೊನಾ ದಿಂದ ಶನಿವಾರ ಸಾವನ್ನಪ್ಪಿದ್ದಾರೆ. ಇವರು ರಬಕವಿಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದ ನಿವಾಸಿಯಾಗಿದ್ದಾರೆ. ಆಕ್ಸಿಜನ್ ಸಿಗದೇ ಸಂಜಯ್ ಸಾವನ್ನಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಜಯ್ ಅವರನ್ನು ಉಳಿಸಿಕೊಳ್ಳಲು ಕುಟುಂಬದವರು ಬಾಗಲಕೋಟೆ …

Read More »

ಕೊರೊನಾ ಸೋಂಕಿತೆ ಶವವನ್ನ ನಡುಬೀದಿಯಲ್ಲಿ ಬಿಟ್ಟ ಆರೋಗ್ಯ ಸಿಬ್ಬಂದಿ..!

ಕೋವಿಡ್​ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನ ಆರೋಗ್ಯ ಸಿಬ್ಬಂದಿ ಮರದಡಿಯಲ್ಲೇ ಬಿಟ್ಟು ಹೋದ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಪಾವಗಡದ ಮರಡಿಪಾಳ್ಯದಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಕೋವಿಡ್​ ಸೋಂಕಿಗೆ ಒಳಗಾಗಿದ್ದ ಮಹಿಳೆಯನ್ನ ಪಾವಗಡದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಮಹಿಳೆ ಕ್ವಾರಂಟೈನ್​ ಕೇಂದ್ರದಲ್ಲೇ ಸಾವನ್ನಪ್ಪಿದ್ದರು. ಮಹಿಳೆಯ ಮೃತದೇಹವನ್ನ ತೆಗೆದುಕೊಂಡು ಹೋಗಿ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ಮಾಡೋದು ಬಿಟ್ಟು ಆರೋಗ್ಯ ಸಿಬ್ಬಂದಿ ಸೋಂಕಿತೆಯ …

Read More »

ಬೆಂಗಳೂರನ್ನು ಟೆರರಿಸ್ಟ್ ಎಂದು ಆರೋಪಿಸಿದ್ದು, ತೇಜಸ್ವಿ ಸೂರ್ಯ: ಡಿ.ಕೆ.ಶಿ.

ಬೆಂಗಳೂರು, ಮೇ 11- ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ರೈತರು ಹಾಗೂ ಬಡ ವರ್ಗದವರ ನೆರವಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಕೇಜ್ ಕೊಡಲು ನಾವು ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದು ಕೆಲ ಸಚಿವರು ಹೇಳಿದ್ದಾರೆ. ಸರ್ಕಾರಕ್ಕೆ ಪ್ಯಾಕೇಜ್ ಕೊಡಲಾಗದಿದ್ದರೆ ಆಗಲ್ಲ ಎಂದು ಹೇಳಲಿ ಅದನ್ನು ಬಿಟ್ಟು ಉದ್ಧಟತನದ ಮಾತುಗಳನ್ನು …

Read More »

ಹೊಸ ಎಂಆರ್‌ಪಿ ಸ್ಟಿಕರ್ ಅಂಟಿಸಿ ದುಬಾರಿ ಬೆಲೆಗೆ ವೈದ್ಯಕೀಯ ಉಪಕರಣ, ಔಷಧಿಗಳ ಮಾರಾಟ

ಬೆಂಗಳೂರು, ಮೇ 11- ರಾಜ್ಯ ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರು ಕೊರೊನಾ ಚಿಕಿತ್ಸೆ ಹಾಗೂ ಅದರ ನಿರ್ವಹಣೆಗೆ ಬಳಕೆಯಾಗುವ ಸಾಮಗ್ರಿಗಳ ದರ ಮಾರುಕಟ್ಟೆಯಲ್ಲೇ ದುಬಾರಿಯಾಗಿದ್ದು, ಜನ ಸಾಮಾನ್ಯರು ಪರಿತಪಿಸುವಂತಾಗಿದೆ. ವೈದ್ಯಕೀಯ ಕ್ಷೇತ್ರದ ವ್ಯಾಪಾರ ವಹಿವಾಟುಗಳಿ ಹಿಂದೆಂದಿಗಿಂತಲೂ ನಲವತ್ತು ಪಟ್ಟು ಹೆಚ್ಚಾಗಿದೆ. ಜೊತೆಯಲ್ಲಿ ಲಾಭಕೋರತನ ದುಪ್ಪಟ್ಟಾಗಿದೆ. ಆಕ್ಸಿಜನ್ ಮತ್ತು ಅದನ್ನು ತುಂಬುವ ಸಿಲಿಂಡರ್ ಗಳು, ಪಿಪಿಇ ಕಿಟ್, ಪಲ್ಸಾಸ್ಕೋಮೀಟರ್, ಬಿಪಿ ಆಪರೆಟರ್, ಮಧುಮೇಹ ಪರೀಕ್ಷಿರುವ ಕಿರು ಯಂತ್ರ, ರೆಮ್ ಡಿಸಿವಿರ್ ಹಾಗೂ …

Read More »

ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಆಹಾರ ಪೂರೈಕೆಗೆ ರಾಜ್ಯ ಸರ್ಕಾರದಿಂದ ಸೂಚನೆ

ರಾಜ್ಯದಲ್ಲಿ ಕೊರೊನಾ 2ನೇ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 24ರವರೆಗೂ ರಾಜ್ಯ ಸರ್ಕಾರ ಲಾಕ್​ಡೌನ್​ ಆದೇಶ ವಿಧಿಸಿದೆ. ಈ ಸಮಯದಲ್ಲಿ ಯಾರೂ ಉಪವಾಸದಿಂದ ಇರಬಾರದು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್​ನಲ್ಲಿ ಸಾರ್ವಜನಿಕರಿಗೆ ಉಚಿತ ಆಹಾರ ಒದಗಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ರಾಜ್ಯದಲ್ಲಿ ಮೇ 10ರಿಂದ ಮೇ 24ನೇ ತಾರೀಖಿನಿವರೆಗೆ ಲಾಕ್​ಡೌನ್​ ಆದೇಶ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟವನ್ನ ಎದುರಿಸುವ ದಿನಗೂಲಿ ಕಾರ್ಮಿಕರು ಸೇರಿದಂತೆ …

Read More »