Breaking News

ರಾಜ್ಯ

ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್

ನವದೆಹಲಿ, ಮೇ 13; ಮೇ ಅಂತ್ಯದ ವೇಳೆಗೆ ನಾವು ಬೇಡಿಕೆ ಇಟ್ಟಿರುವ ಕೋವಿಡ್ ಲಸಿಕೆ ಉತ್ಪಾದಕರಿಂದ ರಾಜ್ಯಕ್ಕೆ ತಲುಪಬಹುದು ಎಂದು 9 ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿವೆ. ಸುಪ್ರೀಂಕೋರ್ಟ್ ಕೋವಿಡ್ ಲಸಿಕೆ ಪೂರೈಕೆ ಬಗ್ಗೆ ಸ್ವಯಂ ಪ್ರೇರಿತ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಲಸಿಕೆ ಬರುವ ತನಕ 18-44 ವರ್ಷದವಿಗೆ ಲಸಿಕೆ ನೀಡುವುದು ಕಷ್ಟಸಾಧ್ಯವಾಗಲಿದೆ ಎಂದು ರಾಜ್ಯಗಳು ಹೇಳಿವೆ. ಪಂಜಾಬ್, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, …

Read More »

ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಬೆಂಗಳೂರು, ಮೇ 13; ಕೋವಿಡ್ ಪಿಡುಗು ತೀವ್ರವಾಗಿದ್ದು, ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಗುರುವಾರ ಪತ್ರಿಕಾ ಪ್ರಕಟಣೆ ಮೂಲಕ ಅವರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಗೆ ಈ ಕುರಿತು ಮನವಿ ಮಾಡಿದ್ದಾರೆ. ಮೇ 15ರಂದು ಡಿ. ಕೆ. ಶಿವಕುಮಾರ್ 59ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. …

Read More »

ಟ್ರಾಯ್: 4ಜಿ ಡೌನ್‌ಲೋಡ್‌ ಸ್ಪೀಡ್‌ನಲ್ಲಿ ರಿಲಯನ್ಸ್ ಜಿಯೋ ಎಲ್ಲರಿಗಿಂತ ಮುಂದೆ

ನವದೆಹಲಿ, ಮೇ 13: ರಿಲಯನ್ಸ್ ಜಿಯೋ, ಪ್ರತಿ ಸೆಕೆಂಡ್‌ಗೆ 20.1 ಮೆಗಾಬೈಟ್ ಡೇಟಾ ಡೌನ್‌ಲೋಡ್‌ ಪ್ರಮಾಣದಲ್ಲಿ 4ಜಿ ಸ್ಪೀಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಏಪ್ರಿಲ್ ತಿಂಗಳ ಅಪ್‌ಲೋಡ್ ವೇಗದ ವಿಭಾಗದಲ್ಲಿ ವೊಡಾಫೋನ್ 6.7 Mbpsನೊಂದಿಗೆ ಇತರೆ ಕಂಪೆನಿಗಳಿಗಿಂತ ಮುಂಚೂಣಿಯಲ್ಲಿದೆ ಎಂದು ದೂರಸಂಪರ್ಕ ನಿಯಂತ್ರಕ ಸಂಸ್ಥೆ ಟ್ರಾಯ್‌ನ ಇತ್ತೀಚಿನ ಮಾಹಿತಿ ತಿಳಿಸಿದೆ. ತನ್ನ ಅತ್ಯಂತ ನಿಕಟ ಸ್ಪರ್ಧಿ ವೊಡಾಫೋನ್‌ಗಿಂತಲೂ ಮೂರು ಪಟ್ಟು ಅಧಿಕ ಡೌಲ್‌ಲೋಡ್ ವೇಗವನ್ನು ರಿಲಯನ್ಸ್ ಜಿಯೋ ಹೊಂದಿದೆ. …

Read More »

ಕೋವಿಡ್: 12ದಿನದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು; ಇಬ್ಬರು ಮಕ್ಕಳು ಅನಾಥ

ನವದೆಹಲಿ: ಭಾರತದಲ್ಲಿ ಕೋವಿಡ್ ನ ಎರಡನೇ ರೂಪಾಂತರಿ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಕೋವಿಡ್ ಸೋಂಕಿನಿಂದ ಕುಟುಂಬಗಳು ಒಡೆದು ಹೋಗಿದ್ದು, ಜನರ ಬದುಕು ಹಳಿತಪ್ಪಿದ ರೈಲಿನಂತಾಗಿದೆ ಎಂದು ತಿಳಿಸಿದೆ. ಕೋವಿಡ್ ಸೋಂಕಿನಿಂದ ಸಂಭವಿಸಿದ ಹೃದಯವಿದ್ರಾವಕ ಘಟನೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದು, ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲೂ ಇಂತಹ ಘಟನೆಯೊಂದು ನಡೆದಿದೆ. ಕೋವಿಡ್ ಸೋಂಕಿನಿಂದಾಗಿ ತಂದೆ, ತಾಯಿ ಮತ್ತು ಅಜ್ಜ, ಅಜ್ಜಿ ನಿಧನರಾಗಿದ್ದು, ಇದರ ಪರಿಣಾಮ ಅರು ಮತ್ತು ಎಂಟು ವರ್ಷದ ಇಬ್ಬರು ಹೆಣ್ಣುಮಕ್ಕಳು …

Read More »

ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ನಿಂತುಹೋಗಿದೆ – KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು : ‘ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್ ಗಳು ಕೆಟ್ಟು ನಿಂತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಚಾಮರಾಜನಗರದಲ್ಲಿ 24 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು …

Read More »

ಬಂಗಾಳ: 11 ದಿನದಲ್ಲೇ ಶಾಸಕತ್ವ ತ್ಯಜಿಸಿದ ಬಿಜೆಪಿ ಸಂಸದರು!

ಕೊಲ್ಕತ್ತಾ: ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯಬಲ 77ರಿಂದ 75ಕ್ಕೆ ಇಳಿದಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಿಜೆಪಿಯ ಇಬ್ಬರು ಸಂಸದರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹೈಕಮಾಂಡ್ ಆದೇಶದಂತೆ ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ . ಬಿಜೆಪಿಯ ಕ್ರಮವನ್ನು ಲೋಕಸಭೆಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಕ್ರಮ ಇದಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಎಲ್ಲ ಬಿಜೆಪಿ ಶಾಸಕರಿಗೆ ಕೇಂದ್ರೀಯ ಭದ್ರತೆ ನೀಡಿರುವ ಕೇಂದ್ರ …

Read More »

ಲಸಿಕೆಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಜ್ಯಗಳು ಪರಸ್ಪರ ಕಿತ್ತಾಟಡುವಂತೆ ಮಾಡಿರುವುದು ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಲಸಿಕೆಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಜ್ಯಗಳು ಪರಸ್ಪರ ಕಿತ್ತಾಟಡುವಂತೆ ಮಾಡಿರುವುದು ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಭಾರತದ ರಾಜ್ಯಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಸ್ಪರ ಸ್ಪರ್ಧಿಸುವಂತಾಗಿದೆ. ಯುಪಿ ವಿರುದ್ಧ ಮಹಾರಾಷ್ಟ್ರ, ಮಹಾರಾಷ್ಟ್ರ ವಿರುದ್ದ ಒರಿಸ್ಸಾ, ಒರಿಸ್ಸಾ ದೆಹಲಿಯ ವಿರುದ್ಧ ಹೋರಾಡುತ್ತಿದೆ” ಎಂದು ಹೇಳಿದ್ದಾರೆ. “ಭಾರತ ಎಲ್ಲಿದೆ?” ಎಂದು ಪ್ರಶ್ನಿಸಿರುವ ಅವರು, “ಈ ಎಲ್ಲ ಬೆಳವಣಿಗೆಗಳು ಭಾರತದ …

Read More »

ಐಸಿಯುಗೆ ಸ್ಥಳಾಂತರಿಸಲು ಕೇಳಿಕೊಂಡ್ರು ಜನರಲ್​ ವಾರ್ಡ್​ನಲ್ಲೇ ಚಿಕಿತ್ಸೆ: ಯುವಕ ಸಾವು

ಚಿಕ್ಕಮಗಳೂರು: ಸರಿಯಾದ ಸಮಯಕ್ಕೆ ವೆಂಟಿಲೇಟರ್​ ಸಿಗದೇ ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮೇಘರಾಜ್(31) ಮೃತ ಯುವಕ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದ ನಿವಾಸಿ. ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯ ಜನರಲ್ ವಾರ್ಡ್​ನಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಐಸಿಯುಗೆ ಶಿಫ್ಟ್ ಮಾಡುವಂತೆ ಯುವಕ ಕೇಳಿಕೊಂಡಿದ್ದ. ಆದರೆ, ಯುವಕನ ಮನವಿಯನ್ನು ಪುರಷ್ಕರಿಸಿದೇ ಕೊನೆಯ ಕ್ಷಣದವರೆಗೂ ಜನರಲ್ ವಾರ್ಡ್​ನಲ್ಲೇ ಯುವಕನಿಗೆ ಚಿಕಿತ್ಸೆ …

Read More »

ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ

ಬೆಂಗಳೂರು: ನಗರದಿಂದ ರೈಲಿನ ಮೂಲಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದ ಜನರಿಗೆ ಕೋವಿಡ್ ನೆಗಟಿವ್ ನಕಲಿ ವರದಿ ಪ್ರಪತಿ ನೀಡುತ್ತಿದ್ದ ಆರೋಪದಡಿ ಸಂಪತ್‌ ಲಾಲ್ ಎಂಬಾತನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಅಕ್ಕಿಪೇಟೆ ಮುಖ್ಯರಸ್ತೆ ನಿವಾಸಿ ಸಂಪತ್ ಲಾಲ್, ಹಲವು ದಿನಗಳಿಂದ ಕೃತ್ಯ ಎಸಗುತ್ತಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಆತನಿಂದ 3 ನಕಲಿ ನೆಗಟಿವ್ ವರದಿ ಪ್ರತಿ ಹಾಗೂ ಮೊಬೈಲ್ …

Read More »

ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ; ಐವರ ಬಂಧನ

ಮೈಸೂರು, : ರಾಜ್ಯದಲ್ಲಿ ರೆಮ್‌ಡಿಸಿವಿರ್ ಚುಚ್ಚುಮದ್ದು ಕೊರತೆ ಕೇಳಿ ಬರುತ್ತಿರುವ ಬೆನ್ನಲ್ಲೇ ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ಮಾಡುತ್ತಿದ್ದ ಎರಡು ಜಾಲಗಳನ್ನು ಪತ್ತೆ ಮಾಡಿರುವ ಮೈಸೂರು ಸಿಸಿಬಿ ಪೊಲೀಸರು, ಐವರನ್ನು ಬಂಧಿಸಿದ್ದಾರೆ.ಮೈಸೂರಿನ ಜೆಪಿ ನಗರದ ಕಾಮಾಕ್ಷಿ ಆಸ್ಪತ್ರೆಯ ಸ್ಟಾಫ್ ನರ್ಸ್ ಜಿ.ಸುರೇಶ್ (27), ಕೆ.ಆರ್ ಆಸ್ಪತ್ರೆ ಇನ್‌ಸ್ಟಿಟ್ಯೂಟ್ ಆಫ್ ನೆಪ್ರೋ ನ್ಯೂರೋ ಸ್ಟಾಫ್ ನರ್ಸ್ ಡಿ.ಎಂ ರಾಘವೇಂದ್ರ(27), ಕೆ.ಆರ್ ಆಸ್ಪತ್ರೆ ಸ್ಟಾಫ್ ನರ್ಸ್ ಅಶೋಕ (31), ವಿಶ್ವೇಶ್ವರ ನಗರದ ಗಿರೀಶ್ ಚಂದ್ರ …

Read More »