Breaking News

ರಾಜ್ಯ

ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!

ಶಿವಮೊಗ್ಗ: : ಮದುವೆಯಾಗಿ ಕೇವಲ ನಾಲ್ಕು ದಿನಕ್ಕೆ ನವ ವಿವಾಹಿತೆಯೊಬ್ಬಳು ಕರೊನಾಕ್ಕೆ ಬಲಿಯಾಗಿರುವ ಘಟನೆ ಶುಕ್ರವಾರ ಹೊರವಲಯದ ಮಲವಗೊಪ್ಪದಲ್ಲಿ ನಡೆದಿದೆ. ಹರಿಗೆ ನಿವಾಸಿ ಪೂಜಾ (24) ಮೃತಪಟ್ಟ ನವ ವಿವಾಹಿತೆ. ಹೊರವಲಯದ ನಿದಿಗೆ ಟಿಇಎಸ್ ಕಾಲನಿಯ ಪೂಜಾಳನ್ನು ಹರಿಗೆ ನಿವಾಸಿ ಮಹೇಶ್ ಮದುವೆಯಾಗಿದ್ದ. ನಗರದ ನಿದಿಗೆ ಟಿಇಎಸ್ ಕಾಲನಿಯ ವಧುವಿನ ಮನೆಯಲ್ಲಿಯೇ ಸೋಮವಾರ ಮದುವೆಯಾಗಿತ್ತು. ಆದರೆ ಎರಡೇ ದಿನಗಳಲ್ಲಿ ಪೂಜಾಗೆ ಮೈಕೈ ನೋವು ಕಾಣಿಸಿಕೊಂಡಿತ್ತು. ಒಂದೆರಡು ದಿನ ಮೆಡಿಕಲ್‌ನಿಂದ ಮಾತ್ರೆಗಳನ್ನು …

Read More »

ಆರೋಗ್ಯ ಇಲಾಖೆಯ ನೌಕರ ಕುಟುಂಬವೇ ಅನಾಥ!

ಜಮಖಂಡಿ: ತಾಲೂಕಿನ ಚಿಕ್ಕಲಕಿ ಕ್ರಾಸ್‌ನ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು,ಕುಟುಂಬವೇ ಈಗ ಅನಾಥ ವಾಗಿದೆ. ತಾಲೂಕಿನ ಚಿಕ್ಕಲಕಿ ಕ್ರಾಸ್‌ದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ದುಂಡಪ್ಪ ಮುರನಾಳ (39) ಕೊರೊನಾ ಸೋಂಕಿನಿಂದ 13ರಂದು ಮೃತಪಟ್ಟಿದ್ದಾರೆ. ಆನವಾಡ ಪುನರ್‌ ವಸತಿ ಕೇಂದ್ರದಲ್ಲಿವಾಸವಿರುವ ದುಂಡಪ್ಪ ಮುರನಾಳ ಅವರಿಗೆ ಪತ್ನಿ ದಾನಮ್ಮಾ, ಪುತ್ರ ಸೃಜನ ಹಾಗೂ ಪುತ್ರಿ ಶ್ರೀನಿಧಿ ಮಕ್ಕಳಿದ್ದಾರೆ. 2010ರಲ್ಲಿ ಬೀದರ ಜಿಲ್ಲೆಯಲ್ಲಿ ಆರೋಗ್ಯ …

Read More »

ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಲಾಕ್ ಡೌನ್ ನಂತರ ಬೆಳಗಾವಿಯಲ್ಲಿ ಅಧಿಕಾರ ಸ್ವೀಕಾರ,ಕೆಎಟಿ ವಿಚಾರಣೆ ನಡೆಸಿ ಅವರ ಅಮಾನತನ್ನು ರದ್ದುಪಡಿಸಿದೆ..

ಬೆಂಗಳೂರು  – ಭಾರೀ ಕುತೂಹಲ ಮೂಡಿಸಿದ್ದ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅಮಾನತು ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ವಿಷ್ಣುತೀರ್ಥ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಅಮಾನ್ಯಗೊಳಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಅವರ ಅಮಾನತನ್ನು ರದ್ಧುಪಡಿಸಿದೆ. ಜೊತೆಗೆ ಬೆಳಗಾವಿಯಲ್ಲೇ ಪುನಃ ಅಧಿಕಾರ ಮುಂದುವರಿಸುವಂತೆ ಸೂಚಿಸಿದೆ.  ಆಸ್ತಿ ನೊಂದಣಿ ವೇಳೆ ದರವನ್ನು ಅಪಮೌಲ್ಯಗೊಳಿಸಿ ನೊಂದಣಿ ಮಾಡಲಾಗಿದೆ. ಇದರಿಂದ ಸರಕಾರಕ್ಕೆ 12.99 ಕೋಟಿ ರೂ ರಾಜಸ್ವ ನಷ್ಟವಾಗಿದೆ ಎಂದು ಆರೋಪಿಸಿ ಬೆಳಗಾವಿ ಸಬ್ …

Read More »

ಪತಿಯನ್ನು ಜಿಲ್ಲಾಸ್ಪತ್ರೆಗೆ ತಳ್ಳುಗಾಡಿಯಲ್ಲಿ ಕರೆತಂದ ಪತ್ನಿ

ಗದಗ: ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ ಡೌನ್‌ ಘೋಷಣೆಯಾಗಿದ್ದರಿಂದ ವಾಹನ ಸಿಗದೇ ಮಹಿಳೆಯೊಬ್ಬರು ಪತಿಯನ್ನು ಸುಮಾರು 4 ಕಿ.ಮೀ. ದೂರದ ಜಿಲ್ಲಾ ಆಸ್ಪತ್ರೆಗೆ ತಳ್ಳುಗಾಡಿಯಲ್ಲೇ ಕರೆದೊಯ್ದ ಮನಕಲುಕುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಇಲ್ಲಿನ ಸಿದ್ಧರಾಮೇಶ್ವರ ನಗರದ ಗೋವಿಂದಪ್ಪ ಎಂಬಾತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಎರಡು ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಒಂದು ಕಾಲು ತೆಗೆದಿದ್ದರು. ಇಂದು ಮತ್ತೆ ಚಿಕಿತ್ಸೆ ಪಡೆದು, ಕಾಲಿಗೆ ಡ್ರೆಸ್ಸಿಂಗ್‌ ಮಾಡಿಸಿಕೊಂಡು ಔಷಧತೆಗೆದುಕೊಂಡು ಹೋಗಲು …

Read More »

ಕೊರೋನ ಕಾಲ ಘಟ್ಟದಲ್ಲೂ ದಾಖಲೆಯ ಪ್ರಮಾಣದಲ್ಲಿ ನಿವ್ವಳ ಲಾಭ ಗಳಿಸಿದ ಕರ್ನಾಟಕ ಬ್ಯಾಂಕ್

ಮಂಗಳೂರು: ಮಂಗಳೂರು ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರ್ನಾಟಕ ಬ್ಯಾಂಕ್ ಲಿಮಿಟೆಡ್ 2020-21ನೇ ಸಾಲಿನಲ್ಲಿ 482.57 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ, ಇದು ಹಿಂದಿನ ಎಲ್ಲ ದಾಖಲೆಗಳನ್ನು ವಿನಮ್ರಗೊಳಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕ್ ನಿವ್ವಳ ಲಾಭವನ್ನು 431.78 ಕೋಟಿ ರೂ. ಆಗಿದ್ದು, ವರ್ಷದಿಂದ ವರ್ಷಕ್ಕೆ 11.76 ರಷ್ಟು ಹೆಚ್ಚಳವಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಇದು ಕೇವಲ 14.83 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮೇ 26 ರ ಬುಧವಾರ ಇಲ್ಲಿ …

Read More »

ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ

ಮಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ ಪಡೆದ ಪರಿಣಾಮ ಓಮ್ನಿ ವ್ಯಾನ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡಿರುವ ಘಟನೆ, ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಎಂಬಲ್ಲಿ ನಡೆದಿದೆ. ಪುದು ಗ್ರಾಮದ ಅಮೆಮಾರ್ ನಿವಾಸಿ ದಾವೂದ್(22) ಹಾಗೂ ಕುಂಜತ್ಕಲ ನಿವಾಸಿ ಉನೈಸ್(27) ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಗಳು. ತೀವ್ರವಾಗಿ ಗಾಯಗೊಂಡಿರುವವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಗಳೂರಿನಿಂದ ಫರಂಗಿಪೇಟೆ ಕಡೆಗೆ ಬರುತ್ತಿದ್ದ …

Read More »

ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್‌ ಸಾಕ್ಷಿ: H.D.K.

ಬೆಂಗಳೂರು, ಮೇ 28: ಜಿಂದಾಲ್‌ಗೆ ಭೂಮಿ ಮಾರಾಟ ಹಿಂದಕ್ಕೆ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಡಿದ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಎಚ್‌ಡಿಕೆ, “”ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ” ಎಂದಿದ್ದಾರೆ. ರಾಜಕೀಯ …

Read More »

2000 ರೂ. ನೋಟ್ ಗೆ ಗೇಟ್ ಪಾಸ್ ಗ್ಯಾರಂಟಿ.? ಪ್ರಿಂಟ್ ನಿಲ್ಲಿಸಿದ ನಂತ್ರ ಚಲಾವಣೆಯಿಂದಲೂ ಹೊರಕ್ಕೆ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್(RBI) ಪ್ರಜ್ಞಾಪೂರ್ವಕವಾಗಿಯೇ ಗುಲಾಬಿ ನೋಟುಗಳನ್ನು ಚಲಾವಣೆಯಿಂದ ಹೊರತೆಗೆಯುತ್ತಿದೆ. 2000 ರೂ. ನೋಟುಗಳಿಗೆ ಪಿಂಕ್ ಸ್ಲಿಪ್ ನೀಡುವುದು ಖಚಿತವಾಗಿದೆ. ಚಲಾವಣೆಯಿಂದ 2000 ರೂಪಾಯಿ ನೋಟುಗಳನ್ನು ತೆಗೆದುಹಾಕುವುದು ಖಚಿತವೆನ್ನಲಾಗಿದೆ. ಗುರುವಾರ ಬಿಡುಗಡೆಯಾದ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, 2021 ರ ಹಣಕಾಸು ವರ್ಷದಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ 57,757 ಕೋಟಿ ನೋಟುಗಳು ಚಲಾವಣೆಯಿಂದ ಹೊರ …

Read More »

ಗ್ರಾಮಸ್ಥರೊಂದಿಗೆ ವೈಮನಸ್ಯ; ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಹೆಣ್ಣುಮಕ್ಕಳು

ರಾಂಚಿ : ಮೃತಪಟ್ಟ ಮಹಿಳೆಯ ಶವವನ್ನು ಹೊರಲು ಪುರುಷರು ನಿರಾಕರಿಸಿದ ಕಾರಣಕ್ಕೆ ಮಹಿಳೆಯರೇ ಶವಸಂಸ್ಕಾರ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗ್ರಾಮ ಒಂದರಲ್ಲೇ ನಡೆದಿದೆ. ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ಖಂಡ್ವಾ ಗ್ರಾಮದಲ್ಲಿ ಉಂಟಾದ ವೈಮನಸ್ಸಿನಿಂದಾಗಿ ಮೃತಪಟ್ಟ ಮಹಿಳೆಯ ಶವ ಹೊರಲು ಪುರುಷರು ಮುಂದಾಗದ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳೇ ಶವಸಂಸ್ಕಾರ ಮಾಡಿದ್ದಾರೆ. ಮೃತರಾಗಿರುವ ಮಹಿಳೆ ಕುಂತೀದೇವಿ ನಾಲ್ಕು ವರ್ಷಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದರು . ಆದ್ದರಿಂದ ಅವರನ್ನು ಗ್ರಾಮದ ಮುಖಂಡರು ತಮ್ಮ …

Read More »

ಬೆಂಗಳೂರಲ್ಲಿ ಲಸಿಕೆ ವಿತರಣೆಯಲ್ಲೂ ಗೋಲ್ಮಾಲ್..!

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಒಂದೆಡೆ ತನ್ನ ರೌದ್ರನರ್ತನ ತೋರುತ್ತಿದ್ದರೆ, ಇನ್ನೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಲಸಿಕೆ ವಿತರಣೆಯಲ್ಲಿಯೂ ಗೋಲ್ ಮಾಲ್ ನಡೆಯುತ್ತಿದೆ. ಬೆಂಗಳೂರಲ್ಲಿ ಬಿಜೆಪಿ ನಾಯಕರ ಆಪ್ತರಿಗೆ ಸುಲಭದಲ್ಲಿ ಲಸಿಕೆ ಸಿಗುತ್ತಿದೆ. ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರ ಉಚಿತ ಲಸಿಕೆ ಘೋಷಿಸಿದೆ. ಈ ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲೂ ರಾಜಕಾರಣ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ಲಸಿಕೆ ರಾಜಕಾರಣ ಬಯಲಾಗಿದೆ. …

Read More »