Breaking News

ಆರೋಗ್ಯ ಇಲಾಖೆಯ ನೌಕರ ಕುಟುಂಬವೇ ಅನಾಥ!

Spread the love

ಜಮಖಂಡಿ: ತಾಲೂಕಿನ ಚಿಕ್ಕಲಕಿ ಕ್ರಾಸ್‌ನ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು,ಕುಟುಂಬವೇ ಈಗ ಅನಾಥ ವಾಗಿದೆ.

ತಾಲೂಕಿನ ಚಿಕ್ಕಲಕಿ ಕ್ರಾಸ್‌ದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ದುಂಡಪ್ಪ ಮುರನಾಳ (39) ಕೊರೊನಾ ಸೋಂಕಿನಿಂದ 13ರಂದು ಮೃತಪಟ್ಟಿದ್ದಾರೆ. ಆನವಾಡ ಪುನರ್‌ ವಸತಿ ಕೇಂದ್ರದಲ್ಲಿವಾಸವಿರುವ ದುಂಡಪ್ಪ ಮುರನಾಳ ಅವರಿಗೆ ಪತ್ನಿ ದಾನಮ್ಮಾ, ಪುತ್ರ ಸೃಜನ ಹಾಗೂ ಪುತ್ರಿ ಶ್ರೀನಿಧಿ ಮಕ್ಕಳಿದ್ದಾರೆ.

2010ರಲ್ಲಿ ಬೀದರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸರಕಾರಿ ವೃತ್ತಿ ಆರಂಭಿಸಿದ್ದ ದುಂಡಪ್ಪ ಮುರನಾಳ 2016ರಲ್ಲಿ ತಾಲೂಕಿನ ಚಿಕ್ಕಲಕಿ ಕ್ರಾಸ್‌ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೌಕರನಾಗಿ ಆಗಮಿಸಿ ನಂತರ ಬಡ್ತಿ ಪಡೆದು ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದರು.

ಚಿಕ್ಕಲಕಿ ಕ್ರಾಸ್‌ ದ ಆರೋಗ್ಯ ಕೇಂದ್ರದಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು, ಜನರಿಗೆ ವಾಕ್ಸಿನ್‌ ನೀಡುವುದು ಮತ್ತು ದ್ರವ ಪರೀಕ್ಷೆಗೆ ಜನರ ತಪಾಸಣೆ ಮಾಡುತ್ತಿದ್ದರು. ತಾಲೂಕಿನಲ್ಲಿ ಮೊದಲ ಕೊರೊನಾ ವಾರಿಯರ್ ಸಾವು ಸಂಭವಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ