Breaking News

ರಾಜ್ಯ

ಜನ ಸಹಕರಿಸಿದರೆ ಜೂ.7ರ ನಂತರ ಲಾಕ್‍ಡೌನ್ ಇರಲ್ಲ : ಸಿಎಂ

ಬೆಂಗಳೂರು,- ಜನ ಅಗತ್ಯ ಸಹಕಾರ ನೀಡಿದರೆ ಜೂನ್ 7ರ ನಂತರ ಲಾಕ್‍ಡೌನ್ ಮುಂದುವರೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 7ರವರೆಗೂ ಎಂದಿನಂತೆ ಲಾಕ್‍ಡೌನ್ ಮುಂದುವರೆಯಲಿದೆ. 7ರ ನಂತರ ಪರಿಸ್ಥಿತಿ ಅವಲೋಕಿಸಿ ಲಾಕ್‍ಡೌನ್ ವಿಸ್ತರಣೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಜನ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಜೂನ್ 7ರ ನಂತರ ಲಾಕ್‍ಡೌನ್ ವಿಸ್ತರಣೆಯ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಜನರು ಲಾಕ್‍ಡೌನ್ ಸಂದರ್ಭದಲ್ಲಿ …

Read More »

ಏರ್ ಸ್ಪ್ರೇ ಅಸ್ತ್ರ- ಲಘು ವಿಮಾನದಿಂದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ಬೆಂಗಳೂರು: ಗಾಳಿಯಲ್ಲಿ ಅಲ್ಪ ಕಾಲ ತೇಲುವ ಕೊರೊನಾ ವೈರಸ್ ನಾಶಕ್ಕೆ ಬಿಬಿಎಂಪಿ ಮುಂದಾಗಿದ್ದು, ಇದಕ್ಕಾಗಿ ಸೋಂಕು ನಿವಾರಕ ದ್ರಾವಣವನ್ನು ವಿಮಾನದ ಮೂಲಕ ಸಿಂಪಡಣೆ ಮಾಡಲು ಪ್ಲಾನ್ ಮಾಡಿದೆ. ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ಸಿಂಪಡಿಸುವ ಏರಿಯಲ್ ವರ್ಕ್ಸ್ ಏರೋ ಎಲ್‍ಎಲ್‍ಪಿ ಸಂಸ್ಥೆಯ ಪ್ರಾಯೋಗಿಕ ಕಾರ್ಯಾಚರಣೆ ಯೋಜನೆಗೆ ಇಂದು ಚಾಲನೆ ಕೊಡಲಾಗಿದೆ. ವಿದೇಶಗಳಂತೆ ಬೆಂಗಳೂರಿನಲ್ಲಿ ಕೂಡ ಲಘು ವಿಮಾನದ ಮೂಲಕ ಸಾಂಕ್ರಾಮಿಕ ಔಷಧಿ ಸಿಂಪಡಣೆ ಮಾಡಲಾಗುತ್ತದೆ. ದೇಶದಲ್ಲೇ ಇದು ಮೊದಲ …

Read More »

ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಾಗಪ್ಪ ಶೇಖರಗೋಳ

ಗೋಕಾಕ: ನಗರದ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಸಂರ್ಪಕ ಕೇಂದ್ರಗಳಾದ ಗೋಕಾಕ, ಅರಭಾವಿ, ಕೌಜಲಗಿ ಹಾಗೂ ಬೀಜ ಮಾರಾಟ ಕೇಂದ್ರಗಳ ಜೊತೆಗೆ 18 ಉಪ ಮಾರಾಟ ಕೇಂದ್ರಗಳಲ್ಲಿಯೂ ಬೀಜಗಳನ್ನು ವಿತರಿಸಲಾಗುತ್ತಿದೆ …

Read More »

ಕೊರೊನಾ ಸೋಂಕಿಗೆ ನಾಟಿ ಔಷಧ ನೀಡುತ್ತಿದ್ದ ಮಹಿಳೆಗೆ ತಹಶೀಲ್ದಾರ್​ ಎಚ್ಚರಿಕೆ

ಬಳ್ಳಾರಿ: ಕೊರೊನಾ ಸೋಂಕಿಗೆ ನಾಟಿ ಔಷಧ ನೀಡುತ್ತಿದ್ದ ಮಹಿಳೆಗೆ ಜಿಲ್ಲೆಯ ಸಂಡೂರು ತಾಲೂಕಿನ ತಹಶೀಲ್ದಾರ್​ ರಶ್ಮಿ ಅವರು ಎಚ್ಚರಿಕೆ ನೀಡಿದ್ದು, ಯಾರಿಗೂ ಔಷಧಿ ನೀಡದಂತೆ ಸೂಚನೆ ಕೊಟ್ಟಿದ್ದಾರೆ. ಸಂಡೂರು ತಾಲೂಕಿನ ಹಳೆ ದರೋಜಿ ಗ್ರಾಮದಲ್ಲಿ ಕೊರೊನಾಗೆ ಮಹಿಳೆಯೊಬ್ಬರು ನಾಟಿ ಔಷಧ ನೀಡುತ್ತಿದ್ದರು. ಈ ಔಷಧ ಪಡೆದರೆ ಕೊರೊನಾ ವಾಸಿಯಾಗುತ್ತೆ ಎಂದು ನಂಬಿರುವ ಹಲವರು ಔಷಧ ಪಡೆಯಲು ಮಹಿಳೆಯ ನಿವಾಸದ ಎದುರು ಆಗಮಿಸುತ್ತಿದ್ದರು. ಮಹಿಳೆ ಮನೆಯಲ್ಲಿ ಔಷಧ ತಯಾರಿಸಿ ಜನರಿಗೆ ನೀಡುತ್ತಿದ್ದಾರೆ …

Read More »

ಕೊರೊನಾ ಲಾಕ್ ಡೌನ್ ನಡುವೆಯೇ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ದೆಹಲಿ: ಕೊರೊನಾ ಲಾಕ್ ಡೌನ್ ನಡುವೆಯೇ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ ಲೀಟರ್ ಗೆ 25 ರಿಂದ 26 ಪೈಸೆ ಹಾಗೂ ಡೀಸೆಲ್ ದರ ಲೀಟರ್ ಗೆ 28ರಿಂದ 30 ಪೈಸೆ ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ ಈವರೆಗೆ 15 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 100 ರೂ ಗಡಿ ದಾಟಿದ್ದು, 100.19 ರೂಪಾಯಿಯಾಗಿದೆ. ಡೀಸೆಲ್ ದರ 92.17 ರೂಪಾಯಿ …

Read More »

ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದು ಕೊಳ್ಳುತ್ತಿದು ಒಂದು ರೋಚಕ ವಿಷಯ ಹೊರ ಬಂದಿದೆ.ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.  ವಿವರಣೆ : ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಯುವತಿಗೆ ಕೆಲಸದ ಅಮಿಷೆ ಒಡ್ಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ಹೊರಸಿರುವ ಆರೋಪ. ವಿಪರ್ಯಾಸವೆಂದರೆ ಆಕೆ ಇಂಜಿನಿಯರಿಂಗ್ ಪದವಿ ಸೇರಿದ್ದು ಬಿಟ್ಟರೆ ಬರೋಬ್ಬರಿ …

Read More »

ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ : ರಾಜ್ಯ ಸರಕಾರಕ್ಕೆ ಮಾಜಿ ಸಚಿವೆ ಉಮಾಶ್ರೀ ಮನವಿ

ಮಹಾಲಿಂಗಪುರ : ಕಾರ್ಮಿಕ ಇಲಾಖೆಯಲ್ಲಿ ನೇಕಾರರನ್ನು ಕಾರ್ಮಿಕರು ಅಂತಾ ಸೇರಿಸಿ. ಪಾವರ್‌ ಲೂಮ್ ನೇಕಾರರಿಗೆ ಕನಿಷ್ಠ ಮೂರು ವರ್ಷ ನಿರಂತರ ಉಚಿತ ವಿದ್ಯುತ್ ನೀಡಬೇಕು. ಆ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ ಎಂದು ಮಾಜಿ ಸಚಿವೆ ಉಮಾಶ್ರೀ ಸರಕಾರಕ್ಕೆ ಮನವಿ ಮಾಡಿದರು. ಶುಕ್ರವಾರ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆ ಹೊರತುಪಡಿಸಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ನಿರ್ಜೀವವಾಗಿವೆ. ಅನೇಕರು ನೇಣಿಗೆ ಶರಣಾಗಿದ್ದಾರೆ. …

Read More »

ಕೋವಿಡ್ : ರಾಜ್ಯದಲ್ಲಿಂದು 52253 ಜನರು ಗುಣಮುಖ; 22823 ಪಾಸಿಟಿವ್ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 52253 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೆ ಅವಧಿಯಲ್ಲಿ ಹೊಸದಾಗಿ 22823 ಜನರಿಗೆ ಕೋವಿಡ್ ಪಾಸಿಟಿವ್ ‍ಪ್ರಕರಣ ವರದಿಯಾಗಿದೆ. ಇಂದು ಸಂಜೆ ( ಮೇ.28) ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ( ದಿನಾಂಕ:27.05.2021, 00:00 ರಿಂದ 23:59 ರವರೆಗೆ) ಅವಧಿಯಲ್ಲಿ 22823 ಕೋವಿಡ್ ಹೊಸ ಪ್ರಕರಣಗಳು ದೃಢ ಪಟ್ಟಿವೆ, ಹಾಗೂ …

Read More »

ಪ್ರೇಮಿ ಜೊತೆ ಸೇರಿ 2ನೇ ಗಂಡನ ಕೊಲ್ಲಿಸಿದ 5 ಮಕ್ಕಳ ತಾಯಿ!

ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆ ಆಗಿದ್ದ 5 ಮಕ್ಕಳ ತಾಯಿ ಪ್ರಿಯಕರನ ಜೊತೆಗೂಡಿ ಎರಡನೇ ಗಂಡನನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಬದನ್ಯುವಿನ ನಿವಾಸಿ ಸುಶೀಲಾ ತನ್ನ ಮೊದಲನೇ ಗಂಡ ಲಾಲಾರಾಮ್​ನನ್ನು 5 ಮಕ್ಕಳೊಂದಿಗೆ ತೊರೆದು ಸಂತ್ರಾಮ್​ ಎಂಬಾತನನ್ನು ಎರಡನೇ ಮದುವೆ ಆಗಿ ನಯಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಸಂತ್ರಾಮ್ ಜೊತೆ10ರಿಂದ 20 ವರ್ಷ ಸಂಬಂಧ ಹೊಂದಿದ್ದ ಸುಶೀಲಾ, ಅದೇ ಗ್ರಾಮದ ಬದನ್ಯುವಿನ ನಿವಾಸಿ ಮನೋಜ್​ …

Read More »

ನಾನು ಗರ್ಭಿಣಿ, ಹೊಟ್ಟೆ ನೋವು ಎಂದರೂ ಬಿಡುತ್ತಿಲ್ಲ: ಪೊಲೀಸರ ವಿರುದ್ಧ ಮಹಿಳೆ ಆರೋಪ

ಮೈಸೂರು, : ಕೊರೋನ ಲಾಕ್ ಡೌನ್ ಹಿನ್ನಲೆಯಲ್ಲಿ ವಾಹನ ತಪಾಸಣೆ ವೇಳೆ ಗರ್ಭಿಣಿ ಮಹಿಳೆ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಗರ್ಭಿಣಿ ಮಹಿಳೆ ಕಣ್ಣೀರಿಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ರಾಮಸ್ವಾಮಿ ವೃತ್ತದಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಸಂಬಂಧಿಯೊಂದಿಗೆ ವಾಹನದಲ್ಲಿ ಬರುತ್ತಿದ್ದ ಗರ್ಭಿಣಿ ಮಹಿಳೆಯನ್ನು ಪೊಲೀಸರು ತಡೆದಿದ್ದಾರೆ. ನಾನು ಗರ್ಭಿಣಿ, ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದರೂ ಲೇಡಿ ಸಬ್ ಇನ್ಸ್ ಪೆಕ್ಟರ್ ಬಿಡಲಿಲ್ಲ. ಇದರಿಂದ ಮಹಿಳೆ ಮತ್ತು ಮಹಿಳಾ …

Read More »