Breaking News

ರಾಜ್ಯ

ಕೊರೊನಾ ಸೋಂಕಿತ ವ್ಯಕ್ತಿಯ ಜೇಬಿನಿಂದ 11 ಸಾವಿರ ರೂ. ನಗದನ್ನು ಕಳವು ಮಾಡಿದ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

ಮಡಿಕೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಜೇಬಿನಿಂದ 11 ಸಾವಿರ ರೂ. ನಗದನ್ನು ಕಳವು ಮಾಡಿದ್ದ ಆಸ್ಪತ್ರೆಯ ತಾತ್ಕಾಲಿಕ ಡಿ ಗ್ರೂಪ್ ಸಿಬ್ಬಂದಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಕಳೆದ 17 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಡಿಕೇರಿ ತಾಲೂಕಿನ ಜೋಡುಪಾಲ ನಿವಾಸಿ ದಿಲ್‍ಶಾದ್(45) ಬಂಧಿತ ಆರೋಪಿಯಾಗಿದ್ದಾಳೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮದ ರಜನಿಕಾಂತ್ …

Read More »

ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಇಂದು ಲಿಂಗೈಕ್ಯ…

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಇಂದು ಲಿಂಗೈಕ್ಯರಾಗಿದ್ದಾರೆ. ಶರಣಮ್ಮನವರಿಗೆ ಸುಮಾರು 105 ವರ್ಷ ವಯಸ್ಸಾಗಿತ್ತು. ಹೀಗಾಗಿ ವಯೋಸಹಜ ಖಾಯಿಲೆಯಿಂದ ಶಿವಾನಂದ ಮಠದ ಶರಣಮ್ಮನವರು ಶುಕ್ರವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. ಕಳೆದ 65 ವರ್ಷಗಳ ಹಿಂದೆಯೇ ಸಂಸಾರ ತ್ಯಜಿಸಿ, ಗದಗ ಶಿವಾನಂದ ಮಠದ ಜಗದ್ಗುರುಗಳಿಂದ ಧೀಕ್ಷೆ ಪಡೆದಿದ್ದ ಅಮ್ಮನವರು, ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ತಮ್ಮ ಇಡೀ ಬದುಕನ್ನೇ ಸಮಾಜ ಸೇವೆಗಾಗಿ ಮುಡುಪಾಗಿಟ್ಟಿದ್ದರು. ಇಚ್ಚಂಗಿ …

Read More »

ಲಕ್ಷ್ಮಿ ನಿವ್ಸ್ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿದ್ದಾರೆ, ಏನೇ ತಪ್ಪು ಸಂದೇಶ ಬಂದ್ರು ವಾಹಿನಿಯ ವೀಕ್ಷಕರು ತಪ್ಪು ತಿಳಿಯಬೇಡಿ…

ಎಲ್ಲಾ ಲಕ್ಷ್ಮಿ news ವೀಕ್ಷಕರಿಗೆ ನಮಸ್ಕಾರ .. ಒಂದು ವಿಷಾದದ ಸಂಗತಿ , ನಮ್ಮ ಹಾಗುವನಿಮ್ಮೆಲ್ಲರ್ ಗೋಕಾಕ ನ ಲಕ್ಷ್ಮಿ news ವಾಹಿನಿ ಫೇಸ್ಬುಕ್ ಪೇಜ ಅನ್ನ ಯಾರೋ ಕಿಡಿ ಗೆಡಿ ಗಳು ನಿನ್ನೆ ಹ್ಯಾಕ್ ಮಾಡಿದ್ದಾರೆ. ಹಾಗೂ ಅದರಲ್ಲಿ ಅಶ್ಲೀಲ ಚಿತ್ರ ಗಳನ್ನ ಹಾಕುತ್ತಿದ್ದಾರೆ, ದಯವಿಟ್ಟು ಯಾರು ವಾಹಿನಿಯ ಬಗ್ಗೆ ತಪ್ಪು ತಿಳುವಳಿಕೆ ಯನ್ನ ತಿಳಿಬೇಡಿ ಇದು ಯಾರೋ ಕುತಂತ್ರಿ ಗಳ ಕೆಲ್ಸ ಹಾಗೂ ತಾವು ಕಂಡಂತೆ ನಮ್ಮ …

Read More »

ಕೋವಿಡ್-19 ಸೋಂಕಿತರು ಉಚಿತ ಚಿಕಿತ್ಸೆ ಪಡೆಯಬಹುದು: ಎಂ.ಜಿ.ಹಿರೇಮಠ

ಬೆಳಗಾವಿ: ನೋಂದಾಯಿತ ಖಾಸಗಿ ಆಸ್ಪತ್ರೆಗಳ ಕಾಯ್ದಿರಿಸಿದ ಹಾಸಿಗೆಗಳಲ್ಲಿ ಕೋವಿಡ್-19 ಸೋಂಕಿತರು ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ರಷ್ಟು ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಕಾಯ್ದಿರಿಸಲಾಗಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ 06 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, 9 ತಾಲೂಕಾ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ …

Read More »

ಶಾರುಖ್ ಖಾನ್ ಮಗಳ ಪೂಲ್ ಪಾರ್ಟಿ ಚಿತ್ರಗಳು ವೈರಲ್

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾಗಳಲ್ಲಿ ನಟಿಸದಿದ್ದರೂ ಬಾಲಿವುಡ್‌ನ ಯುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಸುಹಾನಾಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಜನಪ್ರಿಯರಾಗಿದ್ದಾರೆ ಸುಹಾನಾ. ಇವರ ಒಂದೊಂದು ಪೋಸ್ಟ್‌ಗಳು ಲಕ್ಷಾಂತರ ವೀವ್ಸ್ ಪಡೆಯುತ್ತವೆ. ಗ್ಲಾಮರಸ್‌ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ಸುಹಾನಾ ಚಿತ್ರಗಳು ವೈರಲ್ ಆಗುವುದು ಸಾಮಾನ್ಯ. ಅಮೆರಿಕದಲ್ಲಿ ನೆಲೆಸಿರುವ ಸುಹಾನಾ ಇತ್ತೀಚೆಗಷ್ಟೆ ತಮ್ಮ ಗೆಳತಿಯರೊಂದಿಗೆ ಪಾರ್ಟಿ ಮಾಡಿದ್ದು ಆ ಚಿತ್ರಗಳು ಸಖತ್ ವೈರಲ್ ಆಗಿವೆ. ಪೂಲ್ ಪಾರ್ಟಿ ಮಾಡಿರುವ …

Read More »

ಕರೆನ್ಸಿ ಮೌಲ್ಯ, ಪ್ರಮಾಣ ಹೆಚ್ಚಳ

ಹೊಸದಿಲ್ಲಿ: ದೇಶದಲ್ಲಿ ಕರೆನ್ಸಿಯ ಮೌಲ್ಯ ಮತ್ತು ಪ್ರಮಾಣ 2020-21ನೇ ಸಾಲಿನಲ್ಲಿ ಕ್ರಮವಾಗಿ ಶೇ.16.8 ಹಾಗೂ ಶೇ.7.2ಕ್ಕೆ ಏರಿಕೆಯಾಗಿದೆ. 500 ರೂ., 2 ಸಾವಿರ ರೂ. ನೋಟುಗಳ ಮೌಲ್ಯ ಜತೆ ಸೇರಿ ಶೇ.85.7 ಆಗಿದೆ. 2020ರ ಮಾ.31ರಂದು ಅದರ ಪ್ರಮಾಣ ಶೇ.83.4ರಷ್ಟು ಆಗಿತ್ತು. ಗುರುವಾರ ಬಿಡುಗಡೆಯಾಗಿರುವ ಆರ್‌ಬಿಐ ವಾರ್ಷಿಕ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಸೋಂಕಿನ ಹಿನ್ನೆಲೆಯಲ್ಲಿ ಬ್ಯಾಂಕ್‌ ನೋಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಲ್ಲಿವೆ. ಎಲ್ಲಾ ರೀತಿಯ ಮೌಲ್ಯಗಳ ಬ್ಯಾಂಕ್‌ ನೋಟುಗಳು …

Read More »

ಮದ್ಯದಂಗಡಿ ಮುಂದೆ ಮಕ್ಕಳನ್ನೂ ಕ್ಯೂ ನಿಲ್ಲಿಸಿದ ಮದ್ಯ ಪ್ರಿಯರು

ಲಕ್ಮೇಶ್ವರ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಗುರುವಾರದಿಂದ ಗದಗ ಜಿಲ್ಲೆ ಸಂಪೂರ್ಣ ಲಾಕ್‌ ಆಗುವುದರಿಂದ ಬುಧವಾರ ಲಕ್ಮೇಶ್ವರದಲ್ಲಿ ಮದ್ಯಪ್ರಿಯರು ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತ ದೃಶ್ಯ ಕಂಡು ಬಂದಿತು. https://laxminews24x7.com/laxminews-8217/ ನಸುಕಿನ 5 ಗಂಟೆಯಷ್ಟರಲ್ಲಾಗಲೇ ಮದ್ಯದ ಅಂಗಡಿಗಳ ಮುಂದೆ ಮದ್ಯಪ್ರಿಯರು ಕಾದು ಕುಳಿತಿದ್ದರು. ನೆರೆಯ ಧಾರವಾಡ, ಹಾವೇರಿ ಜಿಲ್ಲೆ ಕಳೆದ ಮೂರ್‍ನಾಲ್ಕು ದಿನಗಳ ಹಿಂದೆಯೇ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಈ ಭಾಗದಿಂದ ಮದ್ಯ ಖರೀದಿಗೆ …

Read More »

ಬೆಳಗಾವಿಯಿಂದ ಕಡಿಮೆ ಸರಬರಾಜು: ಗೋವಾದಲ್ಲಿ ತರಕಾರಿಗೆ ಹಾಹಾಕಾರ

ಪಣಜಿ: ಗೋವಾ ತೋಟಗಾರಿಕಾ ನಿಗಮಕ್ಕೆ ಬೆಳಗಾವಿಯಿಂದ ಸದ್ಯ ವಾರದಲ್ಲಿ ಮೂರು ದಿನಗಳ ಕಾಲ ತರಕಾರಿ ಪೂರೈಕೆಯಾಗುತ್ತಿದೆ, ಇದರಿಂದಾಗಿ ಅಲ್ಲಿರುವ ನಿಗಮದ ಹಲವು ತರಕಾರಿ ಅಂಗಡಿಗಳನ್ನು ಅನಿವಾರ್ಯವಾಗಿ ಬಂದ್ ಮಾಡುವಂತಾಗಿದೆ. ಕೋವಿಡ್ ನಿರ್ಬಂಧದಿಂದಾಗಿ ಬೆಳಗಾವಿ ತರಕಾರಿ ಮಾರುಕಟ್ಟೆ ಬಂದ್ ಆಗಿದೆ. ಗೋವಾ ರಾಜ್ಯಾದ್ಯಂತ ನಿಗಮದ ಸುಮಾರು 1400 ತರಕಾರಿ ಅಂಗಡಿಗಳಿವೆ. ಈ ಅಂಗಡಿಗಳ ಮೂಲಕ ಸರ್ಕಾರವು ರಾಜ್ಯದಲ್ಲಿ ಜನತೆಗೆ ಸಬ್ಸಿಡಿ ದರದಲ್ಲಿ ತರಕಾರಿ ಮಾರಾಟ ಮಾಡುತ್ತದೆ. ಆದರೆ ಬೆಳಗಾವಿಯಿಂದ ಪ್ರತಿದಿನ ತರಕಾರಿ …

Read More »

ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ B.S.Y.

ಬೆಂಗಳೂರು: ನಾಯಕತ್ವದ ಬದಲಾವಣೆಯ ವಿಷಯದಲ್ಲಿ ಮೌನ ಕಾಪಾಡಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಈಗ ಮೌನ ಮುರಿದು ಕೊನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ವಿಧಾನ ಸೌಧದಲ್ಲಿ ಮಾತನಾಡಿದ ಅವರು, “ಪ್ರಸ್ತುತ, ನನ್ನ ಆದ್ಯತೆಗಳು COVID-19 ಸೋಂಕುಗಳ ನಿಯಂತ್ರಣದಲ್ಲಿದೆ. ಜನರ ಕಲ್ಯಾಣಕ್ಕೆ ಒತ್ತು ನೀಡುವುದು ನನ್ನ ಆದ್ಯತೆ. ಬೇರೆ ಯಾವುದೇ ಸಮಸ್ಯೆಗಳು ನನ್ನ ಮುಂದೆ ಇಲ್ಲ “ಎಂದು ಅವರು ಪ್ರತಿಕ್ರಿಯಿಸಿದರು. “ಯಾರು ದೆಹಲಿಗೆ ಹೋಗಿ ಹಿಂದಿರುಗಿದರೂ ಅವರು ತಮ್ಮ ಉತ್ತರಗಳನ್ನು ಪಡೆದಿದ್ದಾರೆ. COVID …

Read More »

ದೇಶದ ಸ್ಥಳೀಯ ಕಾನೂನಿಗೆ ಗೂಗಲ್ ಬದ್ಧವಾಗಿರುತ್ತದೆ: ಸುಂದರ್ ಪಿಚೈ

ನವದೆಹಲಿ : ಪ್ರತಿಯೊಂದು ದೇಶದಲ್ಲೂ ಅದರದ್ದೇ ಆದಂತಹ ಕಾನೂನು ಇರುತ್ತದೆ. ಆದೇಶದ ಸ್ಥಳೀಯ ಕಾನೂನು ಪಾಲನೆ ಮಾಡಲು ನಾವು ಬದ್ಧರಾಗಿರುತ್ತೇವೆ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಹೇಳಿದ್ದಾರೆ. ಏಷ್ಯಾ ಪೆಸಿಫಿಕ್‌ನ ಆಯ್ದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರಗಳ ಜತೆ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ. ಉಚಿತ ಮತ್ತು ಮುಕ್ತ ಇಂಟರ್‌ನೆಟ್ ಮೌಲ್ಯವನ್ನು ನಾವು ತಿಳಿದಿದ್ದೇವೆ . ಇದರ ಪ್ರಯೋಜನಗಳ ಅರಿವೂ ನಮಗಿದೆ ಎಂದು ತಿಳಿಸಿದರು. ಸರ್ಕಾರಗಳು ಪರಿಶೀಲನೆ ವ್ಯವಸ್ಥೆ ಮತ್ತು …

Read More »