Breaking News

ರಾಜ್ಯ

ನಿಯಮ ಮರೆತ ಸಚಿವೆ

ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಗುರುವಾರ ಸವದತ್ತಿ ಯಲ್ಲಮ್ಮದೇವಿ ದರ್ಶನ ಪಡೆದಿದ್ದು, ಕೊರೋನಾ ರೂಲ್ಸ್‌ಗಳನ್ನು ಮರೆತು ದೇವಾಲಯಕ್ಕೆ ತೆರಳಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ದೇಗುಲಕ್ಕೆ ತೆರಳಿದ್ದ ಶಶಿಕಲಾ ಜೊಲ್ಲೆ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ದೇವಿಯ ದರ್ಶನ ಪಡೆದಿದ್ದಾರೆ. ಮಾಸ್ಕ್ ಇಲ್ಲದೇ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಇಲ್ಲಿ ಅನುಮತಿ ಇಲ್ಲ. ಆದರೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರಿಂದಲೇ ಕೋವಿಡ್ ರೂಲ್ಸ್ ಬ್ರೇಕ್ …

Read More »

ಹಿರಿಯ ನಟ ಪ್ರೊ.ಜಿ.ಕೆ ಗೋವಿಂದ ರಾವ್ ಇನ್ನಿಲ್ಲ

ಕನ್ನಡದ ಹಿರಿಯ ನಟ ಪ್ರೊ.ಜಿ.ಕೆ ಗೋವಿಂದ ರಾವ್ ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಲೇಖಕರಾಗಿ, ಪ್ರಾಧ್ಯಾಪಕರಾಗಿ, ರಂಗಭೂಮಿ ಕಲಾವಿದರಾಗಿ, ಚಿತ್ರ ನಟರಾಗಿ ಗೋವಿಂದ ರಾವ್ ಗುರುತಿಸಿಕೊಂಡಿದ್ದರು. ಇವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇನ್ನು ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ಬೆಳಗ್ಗೆ 8.30 ಸುಮಾರಿಗೆ ಅಂತ್ಯಕ್ರಿಯೆ ಮಾಡಲಾಗಿದೆ. ಈ ಬಗ್ಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ”ಹಿರಿಯ ಲೇಖಕ, ಚಿಂತಕ,‌ ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. …

Read More »

ಗಂಗಾವತಿ : ವೈಭವದಿಂದ ಜರುಗಿದ ಹೇಮಗುಡ್ಡದ ಅಂಬಾರಿ ಮೆರವಣಿಗೆ

ಗಂಗಾವತಿ :ನಾಡಹಬ್ಬ ದಸರಾ ಸಕಲ ಜೀವರಾಶಿಗಳಿಗೆ ಒಳಿತನ್ನು ಮಾಡಲಿ ಜಗತ್ತನ್ನು ಕಾಡುತ್ತಿರುವ ಕೊರೋನಾ ಮಹಾಮಾರಿ ಬೇಗನೆ ದೂರವಾಗಲಿ ದುರ್ಗಾಪರಮೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಮಾಜಿ ಸಂಸದ ಎಚ್. ಜಿ .ರಾಮುಲು ಹೇಳಿದರು . ಅವರು ತಾಲ್ಲೂಕಿನ ಸುಕ್ಷೇತ್ರ ಹೇಮಗುಡ್ಡದಲ್ಲಿ ಶರನ್ನವರಾತ್ರಿ ನಿಮಿತ್ತ ದಸರಾ ಆನೆ ಮೇಲೆ ಅಂಬಾರಿ ಮೆರವಣಿಗೆಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು . ನಾಡಹಬ್ಬ ದಸರಾ ಆಚರಣೆ ಮಾಡಿದ್ದು ಮೊದಲು ಕುಮ್ಮಟ ದುರ್ಗದ …

Read More »

ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಹಬ್ಬದ ಶುಭಾಶಯ ಕೋರಿದ ಸಿಎಂ

ಬೆಂಗಳೂರು : ದೇಶಾದ್ಯಂತ ಇಂದು ದಸರಾ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಬ್ಬದ ಶುಭಾಶಯ ಕೋರಿದ್ದಾರೆ. ಯಡಿಯೂರಪ್ಪ ಅವರ ನಿವಾಸ ಕಾವೇರಿಗೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಶಾಲು ಹೊದಿಸಿ ಸನ್ಮಾನ ಮಾಡುವ ಮೂಲಕ ಹಬ್ಬದ ಶುಭಾಶಯ ತಿಳಿಸಿದ್ದಾರೆ. ದಸರಾ ಮತ್ತು ವಿಜಯದಶಮಿ ಹಬ್ಬ ತಮಗೆ ಶುಭ ತರಲಿ …

Read More »

ಡಿ.ಕೆ ಶಿವಕುಮಾರ್ ಪರ ಮಾಜಿ ಸಿಎಂ ಕುಮಾರಸ್ವಾಮಿ ಬ್ಯಾಟಿಂಗ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರ ಮಾಜಿ ಸಿಎಂ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದ ಕುಮಾರಸ್ವಾಮಿ ದಿಢೀರ್ ಸಾಫ್ಟ್ ಆಗಿದ್ದಾರೆ ಎನ್ನಲಾಗಿದೆ. ಉಗ್ರಪ್ಪ, ಸಲೀಂ ಪಿಸುಮಾತು ವಿಡಿಯೋ ಪ್ರಸಾರವಾಗುತ್ತಿದ್ದಂತೆ ಡಿಕೆಎಸ್​ ಪರ ಸಾಫ್ಟ್ ಆಗಿರುವ ಕುಮಾರಸ್ವಾಮಿ ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಪಾಪ ಡಿ.ಕೆ ಶಿವಕುಮಾರ್ ಪಕ್ಷ ಕಟ್ಟುತ್ತಿದ್ದಾರೆ’.. ‘ಸಿದ್ದರಾಮಯ್ಯ ಪಟಾಲಂ ಡಿಕೆ …

Read More »

ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಂಭಾಷಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್

ಬೆಂಗಳೂರು: ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಮತ್ತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನಡುವಿನ ಡಿ.ಕೆ ಶಿವಕುಮಾರ್ ಬಗೆಗಿನ ಸಂಭಾಷಣೆ ಕೋಲಾಹಲವನ್ನೇ ಎಬ್ಬಿಸಿದೆ. ಈಗ ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಂಭಾಷಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್ ಮಾಡಿದ್ದಾರೆ. ಸದ್ಯ ಈ ಡ್ಯಾಮೇಜ್ ಕಂಟ್ರೋಲ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹರಸಾಹಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಮುಂದೆ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ. ಇದೇ ಹೊತ್ತಲ್ಲೇ ಕೆಪಿಸಿಸಿ ಸಾರಥಿ ಬಗ್ಗೆಯೇ …

Read More »

ಹುಬ್ಬಳ್ಳಿ: ಭೂಸ್ವಾಧೀನ ಕೈಬಿಡಲು ತೀರ್ಮಾನ

ಹುಬ್ಬಳ್ಳಿ: ನಿವೇಶನಕ್ಕಾಗಿ ಧಾರವಾಡ ಸಮೀಪದ ಸತ್ತೂರಿನಲ್ಲಿ 227 ಎಕರೆ ಜಾಗ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆಗೆ ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರಿಂದ ಹುಬ್ಬಳ್ಳಿ-ಧಾರವಾಡ ಪ್ರಾಧಿಕಾರ ಈ ಯೋಜನೆ ಕೈಬಿಟ್ಟಿದೆ. ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಸರ್ವಸಮ್ಮತದಿಂದ ಈ ತೀರ್ಮಾನಕ್ಕೆ ಬರಲಾಯಿತು. ಸತ್ತೂರಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಹುಡಾ 2016ರಿಂದಲೇ ರೈತರ ಜೊತೆ ನಿರಂತರ ಮಾತುಕತೆಯಲ್ಲಿ ತೊಡಗಿತ್ತು. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಾಗ …

Read More »

ಐಪಿಎಲ್ 2021: ಕೋಲ್ಕತ್ತಾ- ಚೆನ್ನೈ ನಡುವೆ ಫೈನಲ್ ಫೈಟ್

ದುಬೈ: ಶುಕ್ರವಾರ ಕೊಲ್ಕತ್ತಾ ಹಾಗೂ ಚೆನ್ನೈ ನಡುವೆ ಐಪಿಎಲ್ 14ನೇ ಆವೃತ್ತಿಯ ಫೈನಲ್ ಕಾದಾಟ ನಡೆಯಲಿದೆ. ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಫೈನಲ್ ನಲ್ಲಿ ಸೆಣಸಾಡಲಿದೆ. ಇದು ಚೆನ್ನೈಯ 9 ನೇ ಫೈನಲ್ ಆಗಿದ್ದು, ಕೋಲ್ಕತಾ ತಂಡವು ಮೂರನೇ ಬಾರಿಗೆ ಫೈನಲ್ ಆಡಲಿದೆ. ಎರಡೂ …

Read More »

ನಾರಾಯಣಗುರುಗಳ ಹೋರಾಟದಿಂದ ಸಮಾಜ ತಲೆ ಎತ್ತಿದೆ

ಧಾರವಾಡ: ‘ಬ್ರಹ್ಮಶ್ರೀ ನಾರಾಯಣಗುರುಗಳು ಅಂದು ದೇವಾಲಯ ಪ್ರವೇಶಕ್ಕಾಗಿ ಹೋರಾಟ ಮಾಡದಿದ್ದರೆ ಇಂದು ಈಡಿಗ ಸಮುದಾಯದ ಜನರು ಇಸ್ಲಾಂ, ಇಲ್ಲವೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಬೇಕಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು. ಇಲ್ಲಿನ ಸತ್ತೂರಿನಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ ಹಾಗೂ ಧಾರವಾಡ ಜಿಲ್ಲಾ ಆರ್ಯ ಈಡಿಗ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಈಡಿಗ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಅಂದು ಸಾಮಾಜಿಕ ಹೋರಾಟ ಮಾಡಿದ್ದರ …

Read More »

ಸ್ಟಾರ್​ಗಳ ಮಕ್ಕಳು ಮಾತ್ರ ಡ್ರಗ್ಸ್​ ಸೇವಿಸುವವರಲ್ಲ.. ನಶೆವ್ಯೂಹಕ್ಕೆ ಸಿಲುಕಿದ್ದಾರೆ ಲಕ್ಷಾಂತರ ಮಕ್ಕಳು

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.. ಈ ಮಾತನ್ನ ಇತ್ತೀಚಿನ ಪೀಳಿಗೆಯ ಮಕ್ಕಳಿಗೆ ಒತ್ತಿ ಹೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾಕೆ ಗೊತ್ತಾ ? ಹದಿಹರೆಯದ ವಯಸ್ಸಿನಲ್ಲಿ, ಮುಂದಿನ ಜವಾಬ್ದಾರಿಗಳನ್ನು ಮರೆತು, ನಶೆಯ ಜೀವನಕ್ಕೆ ಮಾರು ಹೋಗ್ತಾ ಇದ್ದಾರೆ ಯುವ ಚೇತನಗಳು. ಕಳೆದ ದಶಕವನ್ನು ಹೋಲಿಸಿ, ಮಾದಕ ಲೋಕದ ಜಾಲಕ್ಕೆ ಸಿಲುಕಿರುವ ಮಕ್ಕಳ ಬಗೆಗಿನ ಈ ಸಮೀಕ್ಷೆ ನೋಡಿದರೆ, ದೇಶದ ಮುಂದಿನ ಭವಿಷ್ಯದ ಬಗ್ಗೆ ಭಯ ಹುಟ್ಟುತ್ತದೆ. ಆ ಸರ್ವೆ ಕುರಿತ ರಿಪೋರ್ಟ್​ …

Read More »