Breaking News

ರಾಜ್ಯ

ರಾಜ್ಯದಲ್ಲಿ ನಿಲ್ಲುತ್ತಿಲ್ಲ ಮಳೆರಾಯನ ಕಾಟ.. ಕರಾವಳಿ ಭಾಗಗಳಿಗೆ ಮತ್ತೆ ಎಚ್ಚರಿಕೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ರಾಜ್ಯದಲ್ಲಿ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿ ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದೂ ಹೇಳಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ‌ಯಾಗಿದೆ. ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಲ್ಲಿ ಭಾರೀ ಮಳೆ‌ಯ ಮುನ್ಸೂಚನೆಯೂ ನೀಡಲಾಗಿದೆ. ಇನ್ನು ಕೇರಳದಲ್ಲಿ ಭಯಾನಕ ಮಳೆಯಾಗುತ್ತಿದ್ದು, ಅಪಾರ …

Read More »

ಡಿಕೆಶಿ ಹಾಗೂ ಸಿದ್ದರಾಮಯ್ಯನವರ ತಂಡದ ಮಧ್ಯೆ ಯುದ್ಧ ಆರಂಭ ಆಗಿದೆ ಎಂದ ಲಕ್ಷ್ಮಣ ಸವದಿ

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮಧ್ಯೆ ಎರಡು ತಂಡಯಾಗಿದ್ದು, ಡಿಕೆಶಿ ಹಾಗೂ ಸಿದ್ದರಾಮಯ್ಯನವರ ತಂಡದ ಮಧ್ಯೆ ಯುದ್ಧ ಆರಂಭ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ಮಾತನಾಡಿ, ಕಾಂಗ್ರೆಸ್ ನವರು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾತನಾಡುತ್ತಾರೆ. ಅವರ ಅವರ ಲೋಪ ದೋಷಗಳನ್ನು ಅವರೇ ಜನತೆ ಮುಂದೇ ಹೇಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ …

Read More »

ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’ ಜೀವನದಿಯ ದರ್ಶನಕ್ಕೆ ಕ್ಷಣಗಣನೆ

ಮಡಿಕೇರಿ: ಕಾವೇರಿ… ಇದೊಂದು ಕೇವಲ ನದಿಯಲ್ಲ. ಕೋಟ್ಯಾಂತರ ಮಂದಿಗೆ ತಾಯಿ. ಜೀವನದಿ. ದೈವೀ ಸ್ವರೂಪಿಣಿ. ಹೀಗಾಗಿಯೇ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇವತ್ತು ಸಂಭ್ರಮ ಮನೆ ಮಾಡಿದೆ. ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿರುವ ಜೀವನದಿಯ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’ ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಿದ್ದಾಳೆ ಅನ್ನೋದು ಪ್ರತೀತಿ. ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಅದೇ …

Read More »

ಇಂದು ತಾಲೂಕಾ ಆಡಳಿತ ಗೋಕಾಕ ವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ಇಂದು ತಾಲೂಕಾ ಆಡಳಿತ ಗೋಕಾಕ ವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ   ಕಾರ್ಯಕ್ರಮದ ಭಾಗವಾಗಿ ರಡ್ಡೆರಹಟ್ಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ 32 ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಸಿ ನೆಡುವ ಕಾರ್ಯಕ್ರಮ, ಮಕ್ಕಳೊಡನೆ ಸಂವಾದ, ಕಾನೂನು ಅರಿವು ಮತ್ತು ವಾರ್ಡ್ ಗಳ ಬೇಟಿ ಕಾರ್ಯಕ್ರಮ ಮಾಡಲಾಯಿತು. ಆರೋಗ್ಯ ಶಿಬಿರವನ್ನು ಸಹ ಆಯೋಜಿಸಲಾಗಿತ್ತು. ಸದರಿ ಶಿಬಿರದಲ್ಲಿ NCD ಕಾಯ೯ಕ್ರಮ ಒಟ್ಟು ಕೇಸ್-107 NEW BP ಕೇಸ್- …

Read More »

ಬಿ.ಎಸ್.ಯಡಿಯೂರಪ್ಪಗೆ ಪ್ರಚಾರಕ್ಕೆ ಬರಲು ಮನಸ್ಸಿಲ್ಲ: ಸಿದ್ದರಾಮಯ್ಯ ಆರೋಪಕ್ಕೆ ಬಿ.ಸಿ.ಪಾಟೀಲ್ ತಿರುಗೇಟು

ಹಾವೇರಿ: ಸಿದ್ದರಾಮಯ್ಯ ಆರೋಪಕ್ಕೆ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದು, ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಚಾರಕ್ಕೆ ಬರಲು ಮನಸ್ಸಿಲ್ಲ. ಬಿ.ಎಲ್.ಸಂತೋಷ್ ಬಲವಂತವಾಗಿ ಪ್ರಚಾರಕ್ಕೆ ಕರೆ ತರುತ್ತಿದ್ದಾರೆ. ಸಿದ್ದರಾಮಯ್ಯಗೆ ಸಂತೋಷ್ ಫೋನ್ ಮಾಡಿ ಹೇಳಿದ್ರಾ? ಬಿಎಸ್​ವೈಗೆ ದೊಣ್ಣೆ ನಾಯಕನ ಅಪ್ಪಣೆ ಏನೂ ಬೇಕಾಗಿಲ್ಲ ಎಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಉಪಚುನಾವಣೆಯ ಪ್ರಚಾರದ ವೇಳೆ ಹೇಳಿದ್ದಾರೆ. ಸಿದ್ದರಾಮಯ್ಯ ಕೇಳಿಕೊಂಡು ಯಡಿಯೂರಪ್ಪ ಬರಬೇಕಾ? ಇವರ ಊಹೆಗೆ ನಾವು ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಯಡಿಯೂರಪ್ಪ ಅವರು …

Read More »

ಕರ್ನಾಟಕದಲ್ಲಿ ಹೊಸದಾಗಿ 264 ಜನರಿಗೆ ಕೊರೊನಾ ದೃಢ; 6 ಮಂದಿ ಸಾವು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಅಕ್ಟೋಬರ್ 16) ಹೊಸದಾಗಿ 264 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,83,133 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,35,659 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 6 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,937 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 9,508 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ …

Read More »

ಸನ್ 2021-22 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

    ಸತೀಶ ಶುಗರ್ಸ ಲಿಮಿಟೆಡ್, ಹುಣಶ್ಯಾಳ ಪಿ.ಜಿ ಸತೀಶ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಸನ್ 2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ದಿನಾಂಕ 15.10.2021 ರಂದು ಜಿಲ್ಲೆಯ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಸಂಸ್ಥೆಯ ಚೇರಮನ್‍ರು ಮತ್ತು ಮುಖ್ಯ ಹಣಕಾಸಿನ ಅಧಿಕಾರಿಗಳಾದ ಶ್ರೀ.ಪ್ರದೀಪಕುಮಾರ ಇಂಡಿ ಇವರು ಇದೇ ಸಮಯದಲ್ಲಿ ಮಾತನಾಡುತ್ತಾ ಜಿಲ್ಲೆಯ ಸತೀಶ ಶುಗರ್ಸ ಕಾರ್ಖಾನೆಯ ರೈತ …

Read More »

ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿದೆ. ಇದೇನಾ ಮೋದಿ ಹೇಳಿದ ಅಚ್ಚೇ ದಿನ್

ಬೆಂಗಳೂರು : ಇಂದಿನಿಂದ ಹಾನಗಲ್ ಸಿಂದಗಿ ಉಪಚುನಾವಣಾ ಅಬ್ಬರ ಶುರುವಾಗಿದೆ. ಇಂದು ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಕೇಂದ್ರ ಸರ್ಕಾರ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಆಳ್ವಿಕೆಯಲ್ಲಿ ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿದೆ. ಇದೇನಾ ಮೋದಿ ಹೇಳಿದ ಅಚ್ಚೇ ದಿನ್.? ನಾನು ಸತ್ಯ ಹೇಳ್ತೀನಿ ಎಂದು ಕೆಲವರು ನನ್ನ ಕಂಡರೆ ಭಯಪಡುತ್ತಾರೆ’ ಎಂದಿದ್ದಾರೆ.

Read More »

ಕೊಟ್ಟಿಗೊಬ್ಬ 3ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಗಂಭೀರ ಆರೋಪ

ಆಯುಧಪೂಜೆ ದಿನವಾದ ಅಕ್ಟೋಬರ್ 14 ರಂದು ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ವಿತರಕರು ಸಂಚು ಮಾಡಿದ್ದರಿಂದ ವಿತರಣೆ ಒಂದು ದಿನ ವಿಳಂಬವಾಗಿದೆ. ಸಂಚು ಮಾಡಿದ ವಿತರಕರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ. ಆದರೆ, ಸೂರಪ್ಪ ಬಾಬು ಅವರ ವಿರುದ್ಧವೇ ವಿತರಕ ಖಾಜಾಪೀರ್ ಗಂಭೀರ ಆರೋಪ ಮಾಡಿದ್ದಾರೆ. ನೀಡಿದ ಹಣವನ್ನು ವಾಪಸ್ ಕೊಡದೆ ಸೂರಪ್ಪಬಾಬು ಕೊಲೆ ಬೆದರಿಕೆ ಹಾಕಿರುವುದಾಗಿ ಚಿತ್ರದುರ್ಗದ ಸಿನಿಮಾ …

Read More »

ಮುಂಗಾರು ಅಧಿವೇಶನ ವೇಳೆ ಪ್ರತಿಭಟನೆ ನಡೆಸಲು ಸಂಸದ ಬದಲು ಬೇರೆ ಸ್ಥಳ ಆಯ್ಕೆ ಮಾಡಿ : ರೈತರರಿಗೆ ಪೊಲೀಸ್ ರಿಂದ ಸಲಹೆ

40 ಕ್ಕೂ ಹೆಚ್ಚು ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿದಿನ ಸಂಸತ್ತಿನ ಹೊರಗೆ 200 ರೈತರನ್ನು ಒಳಗೊಂಡ ಪ್ರತಿಭಟನೆಯನ್ನು ಯೋಜಿಸಿದೆ. ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಾಹನ್, ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ಮೋರ್ಚಾದ ಹಲವಾರು ಸದಸ್ಯರು ಶನಿವಾರ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಿಗೆ , ರೈತರ ಬೇಡಿಕೆಗೆ ದನಿಯಾಗಬೇಕು ಮತ್ತು ಅಧಿವೇಶನದಿಂದ ಹೊರನಡೆಯಬೇಕು ಎಂದು ರೈತ ಮುಖಂಡರು …

Read More »