Breaking News

ಐಪಿಎಲ್ 2021: ಕೋಲ್ಕತ್ತಾ- ಚೆನ್ನೈ ನಡುವೆ ಫೈನಲ್ ಫೈಟ್

Spread the love

ದುಬೈ: ಶುಕ್ರವಾರ ಕೊಲ್ಕತ್ತಾ ಹಾಗೂ ಚೆನ್ನೈ ನಡುವೆ ಐಪಿಎಲ್ 14ನೇ ಆವೃತ್ತಿಯ ಫೈನಲ್ ಕಾದಾಟ ನಡೆಯಲಿದೆ. ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಫೈನಲ್ ನಲ್ಲಿ ಸೆಣಸಾಡಲಿದೆ.

ಇದು ಚೆನ್ನೈಯ 9 ನೇ ಫೈನಲ್ ಆಗಿದ್ದು, ಕೋಲ್ಕತಾ ತಂಡವು ಮೂರನೇ ಬಾರಿಗೆ ಫೈನಲ್ ಆಡಲಿದೆ. ಎರಡೂ ತಂಡಗಳು ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ದೆಹಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಫೈನಲ್ ಗೆ ಟಿಕೆಟ್ ಪಡೆದುಕೊಂಡಿವೆ.

ಚೆನ್ನೈ ಮೊದಲ ಕ್ವಾಲಿಫೈಯರ್ ನಲ್ಲಿ ದೆಹಲಿಯನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿದರೆ, ಬುಧವಾರ ನಡೆದ ರೋಚಕ ಹೋರಾಟದಲ್ಲಿ ಕೋಲ್ಕತ್ತಾ ದೆಹಲಿಯನ್ನು ಮೂರು ವಿಕೆಟ್ ಗಳಿಂದ ಸೋಲಿಸಿತು. ಶುಕ್ರವಾರ ನಡೆಯಲಿರುವ ಫೈನಲ್ ನಲ್ಲಿ ಚೆನ್ನೈ ಮತ್ತು ಕೋಲ್ಕತ್ತಾ ಮುಖಾಮುಖಿಯಾಗಲಿವೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ