Breaking News

ರಾಜ್ಯ

ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾರೀ ಅವ್ಯವಹಾರ

ಬೆಂಗಳೂರು : 4 ಸಾವಿರ ಸಿವಿಲ್ ಸರ್ವೆಂಟ್‌ಗಳು ಬಿಜೆಪಿಯ ಕಾರ್ಯಕರ್ತರು ಇದ್ದಾರೆ. ವಿಶ್ವವಿದ್ಯಾಯಲಗಳಲ್ಲಿ ಆರ್‌ಎಸ್‌ಎಸ್‌ನವರನ್ನು ಸಿಂಡಿಕೇಟ್‌ ಸದಸ್ಯದರನ್ನಾಗಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇದೀಗ ರಾಮಮಂದಿರ ಬಗ್ಗೆ ಗಂಭೀರ ಆರೋಪಿಸಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾರೀ ಅವ್ಯವಹಾರ ಆಗಿದೆ. ರಾಮನ ಹೆಸರಲ್ಲಿ ಹಣ ದುರುಪಯೋಗ ಆಗಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.

Read More »

ಆಯುಧ ಪೂಜೆಗೆ ನಗರಸಭೆ ಸದಸ್ಯೆಗೆ ಆಹ್ವಾನ ನೀಡದ್ದಕ್ಕೆ ಮಾರಾಮಾರಿ..9 ಮಂದಿಗೆ ಗಾಯ

ಯಾದಗಿರಿ: ನಗರಸಭೆ ಸದಸ್ಯೆಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಬೆಂಬಲಿಗರು ಮತ್ತು ಆಯೋಜಕರ ನಡುವೆ ಮಾರಾಮಾರಿ ನಡೆದ ಘಟನೆ ನಗರದ ಲಾಡಿಸ್ ಗಲ್ಲಿಯ ಭವಾನಿ ಮಂದಿರದ ಬಳಿ ನಡೆದಿದೆ. ವಿಜಯದಶಮಿ ನಿಮಿತ್ತ ಆಯುಧ ಪೂಜೆ ಹಿನ್ನೆಲೆಯಲ್ಲಿ ಲಾಡಿಸ್ ಗಲ್ಲಿಯ ಭವಾನಿ ಮಂದಿರದ ಬಳಿ ಹಿಂದೂ ಸೇವಾ ಸಮಿತಿಯಿಂದ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಜಯಮ್ಮ ಅವರಿಗೆ ಆಹ್ವಾನ ನೀಡಿಲ್ಲ ಎಂಬ ವಿಚಾರವಾಗಿ ನಗರಸಭೆ ಸದಸ್ಯೆ ಬೆಂಬಲಿಗರು ಮತ್ತು …

Read More »

ಭೀಕರ ಅಪಘಾತದಲ್ಲಿ ಲಾರಿ ಪಲ್ಟಿ: ಚಾಲಕ ಸಾವು, ಕ್ಲೀನರ್​ ಕಾಲು ಕಟ್

ಹಾಸನ: ಸಿಮೆಂಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಕಲೇಶಪುರ ಶಿರಾಡಿಘಾಟ್ ಮಾರನಹಳ್ಳಿ ಬಳಿ ನಡೆದಿದೆ. ಮಂಜುನಾಥ್, ಮೃತ ದುರ್ದೈವಿ. ಮೃತ ವ್ಯಕ್ತಿ ಮಂಜುನಾಥ್ ಗೌರಿಬಿದನೂರು ಮೂಲದವರು ಎನ್ನಲಾಗಿದೆ. ಇನ್ನು ಲಾರಿಯಲ್ಲಿದ್ದ ಕ್ಲೀನರ್ ಕಾಲು ಕಟ್ ಆಗಿದೆ. ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ವಾಕ್ಸಮರ,ಸಿದ್ದುಗೆ ತಿರುಗೇಟು ಕೊಟ್ಟ ಹೆಚ್ಡಿಕೆ

ಬೆಂಗಳೂರು: ಉಪ ಚುನಾವಣೆಗಳ ಬೆನ್ನಲ್ಲೇ ಶುರುವಾಗಿರುವ ಮಾಜಿ ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ ಮುಂದುವರಿದಿದೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ವಿಚಾರವಾಗಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಲ್ಪಸಂಖ್ಯಾತರನ್ನು ಪೇಟೆಂಟ್ ತೆಗೆದುಕೊಂಡವರಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ, ತಮ್ಮದೇ ಪಕ್ಷದಲ್ಲಿ ಮುಸ್ಲಿಂ ನಾಯಕರನ್ನು ಮುಳುಗಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರು ಸ್ವಪಕ್ಷದಲ್ಲಿರುವ ಮುಸ್ಲಿಂ ಮುಖಂಡರನ್ನು ಸೋಲಿಸಲು …

Read More »

ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಹಿಳೆಯರ ಸಾವು: ಮೀನುಗಾರರ ಸಮಯಪ್ರಜ್ಞೆಯಿಂದ ಬದುಕಿದ ಐವರು!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಲಲಿತಾ ಕತ್ತಿ(37) ಮತ್ತು ಅನುಪಮಾ ದೊಡ್ಡಮನಿ(20) ಜಲಸಮಾಧಿಯಾದವರು. ಕೆರೆಯಲ್ಲಿ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿದ್ದ ಆರು ಜನ‌‌ರನ್ನು ಸ್ಥಳೀಯರು ಮತ್ತು ಮೀನುಗಾರರಿಂದ ಐವರ ರಕ್ಷಣೆಯಾಗಿದೆ. ಒಂದೇ ಕುಟುಂಬದ ವ್ಯಕ್ತಿ, ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗುಳೇದಗುಡ್ಡ ಪಟ್ಟಣದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಲಲಿತಾ ಕತ್ತಿ …

Read More »

ಸಿಎಂ ಬೊಮ್ಮಾಯಿ ನವೆಂಬರ್​ವರೆಗೆ ಮಾತ್ರ ಅಧಿಕಾರದಲ್ಲಿ ಇರುತ್ತಾರೆ: ಸಿಎಂ ಇಬ್ರಾಹಿಂ

ತುಮಕೂರು: ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತುಮಕೂರಿನಲ್ಲಿ ಮಾತನಾಡಿದ್ದು ಸಿಎಂ ಬೊಮ್ಮಾಯಿ ನವೆಂಬರ್​ವರೆಗೆ ಮಾತ್ರ ಅಧಿಕಾರದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ. ಈ ಕುರಿತು ಭವಿಷ್ಯ ನುಡಿದ ಇಬ್ರಾಹಿಂ.. ಕೇಶವಕೃಪಾದವರು ಯಡಿಯೂರಪ್ಪಗೇ ಬಿಟ್ಟಿಲ್ಲ.. ಬೊಮ್ಮಾಯಿಗೆ ಬಿಡುತ್ತಾರಾ.? ಬೊಮ್ಮಾಯಿ ಏನು ಮಾಡಿದರೂ ಅವರು ಒಪ್ಪಲ್ಲ. ಬಸವ ತತ್ವದ ಮೇಲೆ ಅಧಿಕಾರ ನಡೆಸೋದಾದರೆ ನಡೆಸಿ.. ಇಲ್ಲಾ ಅಂದರೆ ಅಧಿಕಾರದಿಂದ ಕೆಳಗಿಳೀರಿ ಎಂದು ಇಬ್ರಾಹಿಂ ಹೇಳಿದ್ದಾರೆ. ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಮಾತನಾಡಿ.. ಇದಕ್ಕೆ …

Read More »

ಫೈರಿಂಗ್​​​​​ ಮಾಡಿ ಜೈಲು ಸೇರಿದ್ದ ಉದ್ಯಮಿ ಬಿಚ್ಚಿಟ್ಟ ಸತ್ಯ; ಚಾಕು ತೋರಿಸಿ ಹಲ್ಲೆ ಮಾಡಿದ್ದನಂತೆ ಸವಾರ

ಬೆಂಗಳೂರು: ರಾಮಯ್ಯ ಆಸ್ಪತ್ರೆ ಬಳಿ ಕಾರು ಮತ್ತು ಬೈಕ್ ಡಿಕ್ಕಿಯಾಗಿದ್ದಕ್ಕೆ ಜಗಳ ತೆಗೆದು, ಬೈಕ್ ಸವಾರನ ಮೇಲೆ ಫೈರಿಂಗ್​​ಗೆ ಯತ್ನಿಸಿದ್ದ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ. ಬೈಕ್ ಸವಾರ ಅನಿಲ್ ಎಂಬಾತನ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಕೇಸ್ ಸಂಬಂಧ ಉದ್ಯಮಿ ರವೀಶ್ ಗೌಡನನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಮೇಲ್ನೋಟಕ್ಕೆ ಉದ್ಯಮಿಯದ್ದೇ ತಪ್ಪು ಅಂತ ತಿಳಿಯಲಾಗಿತ್ತು. ಆದ್ರೀಗ ಪ್ರಕರಣ ಬೈಕ್ ಸವಾರ …

Read More »

ಸಿದ್ದರಾಮಯ್ಯರನ್ನು ಭೇಟಿಯಾದ ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪ

ಬೆಂಗಳೂರು: ಮಾಜಿ ಸಚಿವ ಬಿಜೆಪಿಯ ಶಾಸಕ ಕುಮಾರ್‌ ಬಂಗಾರಪ್ಪ ಅವರು ಶುಕ್ರವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕುಮಾರ್‌ ಬಂಗಾರಪ್ಪ ಅವರು ಆಗಮಿಸುವ ಮೊದಲು ಸಹೋದರ ಮಧು ಬಂಗಾರಪ್ಪ ಅವರೂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರು. ಪುತ್ರಿ ಮದುವೆಗೆ ಆಹ್ವಾನ ತಾನು ಪುತ್ರಿಯ ಮದುವೆಗೆ ಆಮಂತ್ರಿಸಲು ಬಂದಿದ್ದು, ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಾನು ಕಾಂಗ್ರೆಸ್‌ ಸೇರುವುದೂ ಇಲ್ಲ. ಸಿದ್ದರಾಮಯ್ಯ ಇಂಥ ಆಹ್ವಾನವನ್ನೂ ನೀಡಿಲ್ಲ …

Read More »

ಭೀಕರ ರಸ್ತೆ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ಸಾವು , ಮತ್ತೊಬ್ಬನ ಸ್ಥಿತಿ ಗಂಭೀರ

ರಾಯಚೂರು: ತಾಲೂಕಿನ ನಲ್ಲಬಂಡಾ ಕ್ರಾಸ್ ಬಳಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಇಬ್ಬರು ಸಾವನಪ್ಪಿದ್ದು ಮತ್ತೊಬ್ಬ ಸವಾರನಿಗೆ ಗಂಭೀರ ಗಾಯವಾಗಿದೆ.ಮೃತರು ರಾಯಚೂರು ನಗರದ ತಿಮ್ಮಪೂರ ಪೇಟೆ ನಿವಾಸಿಗಳಾದ ದೀಪಕ್ (22) ಮತ್ತು ಹುಸೇನ್(23)ಎಂದು ತಿಳಿದು ಬಂದಿದೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು ರೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಬಿದ್ದು ಒದ್ದಾಡುತ್ತಿದ್ದ ಗಾಯಾಳುವಿಗೆ ನೀರು ಹಾಕಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.‌ಕೂಡಲೇ ಆಂಬುಲೆನ್ಸ್​ಗೆ ಕರೆ ಮಾಡಿ ಗಾಯಾಳುವನ್ನ ಆಸ್ಪತ್ರೆಗೆ ರವಾನಿಸಿದರು. …

Read More »

ವಿಧಾನ ಪರಿಷತ್ ಸದಸ್ಯೆ ಪಾಸ್ ದುರ್ಬಳಕೆ: ದೂರು ನೀಡಿದ ಮಗಳು

ಬೆಂಗಳೂರು: ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರ ಹೆಸರಿನಲ್ಲಿ ಪಾಸ್ ಸೃಷ್ಟಿಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ‘ತೇಜಸ್ವಿನಿ ಗೌಡ ಅವರ ಮಗಳು ಬಿ.ಎಸ್. ಯಶಸ್ವಿನಿ ದೂರು ನೀಡಿದ್ದಾರೆ. ಹುಂಡೈ ಐ- 20 (ಕೆಎ 03 ಎಂವೈ 6331) ಕಾರಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು. ‘ತೇಜಸ್ವಿನಿ ಗೌಡ ಅವರು ಯಾರಿಗೂ ಪಾಸ್ …

Read More »