Breaking News

ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಂಭಾಷಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್

Spread the love

ಬೆಂಗಳೂರು: ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಮತ್ತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನಡುವಿನ ಡಿ.ಕೆ ಶಿವಕುಮಾರ್ ಬಗೆಗಿನ ಸಂಭಾಷಣೆ ಕೋಲಾಹಲವನ್ನೇ ಎಬ್ಬಿಸಿದೆ. ಈಗ ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಂಭಾಷಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್ ಮಾಡಿದ್ದಾರೆ. ಸದ್ಯ ಈ ಡ್ಯಾಮೇಜ್ ಕಂಟ್ರೋಲ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹರಸಾಹಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮುಂದೆ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ. ಇದೇ ಹೊತ್ತಲ್ಲೇ ಕೆಪಿಸಿಸಿ ಸಾರಥಿ ಬಗ್ಗೆಯೇ ಭ್ರಷ್ಟಾಚಾರದ ಮಾತನ್ನಾಡಿರುವುದು ನಾಯಕರಿಗೆ ತಲೆಬಿಸಿಯಾಗಿದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ನಿರಂತರ ಹೋರಾಟ ಮಾಡುತ್ತಿದ್ದಾರೆ ಡಿ.ಕೆ ಶಿವಕುಮಾರ್. ಪಕ್ಷದ ನಾಯಕರನ್ನು ಒಂದೆಡೆ ಸೇರಿಸಿ ಡಿ.ಕೆ ಶಿವಕುಮಾರ್​ಗೆ ಈ ವಿವಾದವೂ ಭಾರೀ ಮುಜುಗರ ಉಂಟು ಮಾಡಿದೆ.

ಉಪಚುನಾವಣೆ ವೇಳೆ ಇದನ್ನ ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನ್ನಾಡುವ ನೈತಿಕತೆ ಪ್ರಶ್ನೆ ಎದುರಾಗಲಿದೆ ಎಂಬ ಆತಂಕ ಶುರುವಾಗಿದೆ.

ಹಾನಗಲ್, ಸಿಂದಗಿ ಬೈ ಎಲೆಕ್ಷನ್ ಬೆನ್ನಲ್ಲೇ ಮುಂದೆ ಬಿಬಿಎಂಪಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಾಗಲಿದೆ. ಅದಾದ ಬಳಿಕ 2023 ವಿಧಾನಸಭಾ ಚುನಾವಣೆಗೆ ಅಣಿಯಾಗಬೇಕಿದೆ. ರಾಜ್ಯ ಕಾಂಗ್ರೆಸ್ ಸಾರಥ್ಯ ವಹಸಿಕೊಂಡಿರುವ ಡಿಕೆಎಸ್ ಹೇಗೆ ಇದನ್ನು ನಿಭಾಯಿಸಲಿದ್ದಾರೋ ಎಂಬುದೇ ಕುತೂಹಲ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ