Breaking News

ರಾಜಕೀಯ

ಬೊಮ್ಮಾಯಿ ಅವರ ಸಂಪುಟದಲ್ಲಿ ಕಚ್ಚಾಟ ಬಿಜೆಪಿ ಸರ್ಕಾರವು ಪೂರ್ಣಾವಧಿ ಅಧಿಕಾರ ನಡೆಸಲಾರದು: ಧ್ರುವನಾರಾಯಣ

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ, ಹಲವು ಗೊಂದಲ, ಅಸಮಾಧಾನ, ಆಂತರಿಕ ಕಚ್ಚಾಟ ನಡೆಯುತ್ತಿರುದರಿಂದ ಬಿಜೆಪಿ ಸರ್ಕಾರವು ಪೂರ್ಣಾವಧಿ ಅಧಿಕಾರ ನಡೆಸಲಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು. ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಿಲ್ಲ. ಭ್ರಷ್ಟಾಚಾರ ಆರೋಪ …

Read More »

ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 18ರಿಂದ 20ರಷ್ಟು ಹೆಚ್ಚಿಸುವ ಪ್ರಸ್ತಾವ?: ಶ್ರೀರಾಮುಲು

ಚಿತ್ರದುರ್ಗ: ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 18ರಿಂದ 20ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ಪರಿಶೀಲಿಸುತ್ತಿದ್ದೇನೆ. ಈ ಸಂಬಂಧ ಮಂಗಳವಾರ ಅಧಿಕಾರಿಗಳ ಸಭೆ ಕರೆದಿದ್ದು, ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜನರಿಗೆ ಹೊರೆಯಾಗಲು ಬಿಡುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದಲ್ಲಿ ಕೊವಿಡ್ 3ನೇ ಅಲೆ ತಡೆ ಮತ್ತು ಮಳೆ ಹಾನಿ ಪರಿಹಾರ ಬಗ್ಗೆ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. …

Read More »

ಅಯ್ಯೋ ಮಗನೇ ಬೇಡ ಬೇಡ ಅಂದ್ರೂ ಸಿನಿಮಾ ಫೀಲ್ಡ್​ಗೆ ಹೋಗಿ ಅಲ್ಲೇ ಕೊನೆಯುಸಿರೆದು ಬಿಟ್ಟಲ್ಲೋ

ರಾಮನಗರ: ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಸೋಮವಾರ ಫೈಟರ್​ ವಿವೇಕ್​(35) ಮೃತಪಟ್ಟಿದ್ದಾನೆ. ಈತ ಹೆತ್ತಮ್ಮನ ಮಾತು ಕೇಳಿದ್ದರೆ ಇಷ್ಟು ಬೇಗ ಸಾಯುತ್ತಿರಲಿಲ್ಲವೇನೋ… ಮಗನ ಸಾವಿನ ಸುದ್ದಿ ಕೇಳಿ ವಿವೇಕ್​ರ ತಾಯಿ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಆಕ್ರಂದಿಸುತ್ತಿದ್ದ ದೃಶ್ಯ ನೋಡಿದ್ರೆ ಎಂಥವರ ಮನದಲ್ಲೂ ಈ ಪ್ರಶ್ನೆ ಮೂಡುತ್ತಿತ್ತು. ‘ನಾನು ನಿನ್ನೆ ದೇವಸ್ಥಾನಕ್ಕೆ ಹೋಗಿ ರಾತ್ರಿ ಮನೆಗೆ …

Read More »

ಚಿತ್ರತಂಡದ ಮೇಲೆ ನಾಯಕ ಅಜಯ್ ರಾವ್ ಗಂಭೀರ ಆರೋಪ: ನ್ಯಾಯ ಸಿಗುವವರೆಗೂ ಶೂಟಿಂಗ್‌ಗೆ ಹೋಗದಿರಲು ನಿರ್ಧಾರ

ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ನಾಯಕನಾಗಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ ಸಿನಿಮಾ ಲವ್ ಯೂ ರಚ್ಚು. ಇಂದು ಬಿಡದಿಯಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿ ವಿವೇಕ್ ಎಂಬ ಸಾಹಸ ಕಲಾವಿದ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕ ಕೃಷ್ಣ ಅಜಯ್ ರಾವ್, ವಿವೇಕ್ ಸಾವಿಗೆ ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ಚಿತ್ರೀಕರಣಕ್ಕೆ ಹೋಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. 2017ರ ನವೆಂಬರ್ ತಿಂಗಳಲ್ಲಿ ಮಾಸ್ತಿಗುಡಿ …

Read More »

ಶೂಟಿಂಗ್‌ ವೇಳೆ ವಿದ್ಯುತ್‌ ಸ್ಪರ್ಶ ; ಸಾಹಸ ಕಲಾವಿದನ ಸಾವು

ರಾಮನಗರ: ತಾಲ್ಲೂಕಿನ ಜೋಗನದೊಡ್ಡಿ ಬಳಿ ʻಲವ್‌ ಯೂ ರಚ್ಚುʼ ಸಿನಿಮಾ ಶೂಟಿಂಗ್‌ ವೇಳೆ ಫೈಟರ್‌ವೊಬ್ಬರು ಸಾವಿಗೀಡಾಗಿರುವ ಘಟನೆ ಸೋಮವಾರ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ ವಿವೇಕ್‌ ಎಂದು ಗುರುತಿಸಲಾಗಿದೆ. ಸಾಹಸ ದೃಶ್ಯ ಚಿತ್ರೀಕರಣ ವೇಳೆ ಫೈಟರ್​ ವಿವೇಕ್‌ಗೆ​ ವಿದ್ಯುತ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವಿದ್ಯುತ್‌ ತಂತಿಗೆ ರೋಪ್‌ ಸ್ಪರ್ಷಿಸಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ …

Read More »

ಗೋಕರ್ಣ: ಸಮುದ್ರದಲ್ಲಿ ಈಜಲು ಹೋದ ಯುವಕ ನಾಪತ್ತೆ

ಕಾರವಾರ: ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸಮುದ್ರದಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾಗಿದ್ದಾನೆ. ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ. ಒಟ್ಟು ಎಂಟು ಜನ ಸ್ನೇಹಿತರೊಂದಿಗೆ ಈತ ಪ್ರವಾಸಕ್ಕಾಗಿ ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ. ಸ್ಥಳೀಯ ಜನರ ಎಚ್ಚರಿಕೆ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು.ಅಲೆಯ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದರು. ಈ ವೇಳೆ ಓರ್ವನನ್ನು ಲೈಫ್ ಗಾರ್ಡ ಹಾಗೂ ಸ್ಥಳೀಯರ …

Read More »

ತೋಟಗಾರಿಕೆ ಖಾತೆ ತೃಪ್ತಿ ತಂದಿದೆ : ಸಚಿವ ಮುನಿರತ್ನ

ತುಮಕೂರು,ಆ.9-ನನಗೆ ಕೊಟ್ಟಿರಿವ ತೋಟಗಾರಿಕೆ ಖಾತೆ ತೃಪ್ತಿ ತಂದಿದೆ, ಬೇರೆ ಪಕ್ಷದಿಂದ ಬಿಜೆಪಿಗೆ ಬಂದು ಸಚಿವನಾಗಿದ್ದೇನೆ ಎಂದು ಮುನಿರತ್ನ ತಿಳಿಸಿದ್ದಾರೆ. ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅನ್ಯ ಪಕ್ಷದಿಂದ ಬಿಜೆಪಿಗೆ ಬಂದು ನಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ.   ಪಕ್ಷದ ವರಿಷ್ಠರು ನಮಗೆ ಜವಾಬ್ದಾರಿ ನೀಡಿದ್ದಾ. ಅದನ್ನು …

Read More »

ಜಮೀರ್ ಮೇಲೆ ಇಡಿ ದಾಳಿ ಮಾಡಿಸಿದ್ಯಾರು? ಮತ್ಯಾಕೇ?

ಐಎಂಎ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೂಡಲೇ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಜಮೀರ್ ಅಹ್ಮದ್ ಅವರಿಗೆ ಸೇರಿದ್ದ ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿಯಿರುವ ನಿವಾಸ, ಸದಾಶಿವ ನಗರದ ಫ್ಲಾಟ್ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಸತತ 24 ಗಂಟೆಗಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು. …

Read More »

ಕಾಂಗ್ರೆಸ್‌ನಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಶಿವಮೊಗ್ಗ: ಟೋಕಿಯೋ ಒಲಿಂಪಿಕ್‌ನ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾನುವಾರ ಶಿವಪ್ಪ ನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಶೂಟರ್ ಅಭಿನವ್ ಬಿಂದ್ರಾ ನಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 140 ಕೋಟಿ ಭಾರತೀಯರ ಹಿರಿಮೆ ಎತ್ತಿಹಿಡಿದ ಸಾಧನೆ ಮಾಡಿದ್ದಾರೆ ಎಂದು ಸಂತಸ …

Read More »

ದೇವರ ದಯೆಯಿಂದ ಕೋವಿಡ್ ಮೂರನೇ ಅಲೆ ಬರಬಾರದು: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಕೋವಿಡ್ ಮೂರನೇ ಅಲೆ ದೇವರ ದಯೆಯಿಂದ ಬರಬಾರದು. ಬಂದರೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೋವಿಡ್ ಕುರಿತ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಮಾಡಿದ್ದೇನೆ. ಮೈಸೂರು ಜಿಲ್ಲೆ ಸ್ಥಿತಿಗತಿ, ಮೂರನೇ ಹಂತದ ಮುಂಜಾಗ್ರತೆ ಬಗ್ಗೆ ಪರಿಶೀಲನೆ ಮಾಡಿ ಸಭೆ ಮಾಡಿದ್ದೇನೆ. ಮೈಸೂರಿನ ಪಾಸಿಟಿವಿಟಿ ರೇಟ್ 1.19 ಇದೆ. ಕಳೆದ ಒಂದು ವಾರದಿಂದ …

Read More »