Breaking News

ರಾಜಕೀಯ

ಅಪ್ಪುವಿನ ಸಾವಿಗೆ ಕಾರಣ ಇದೇ ಎಂದ ವೈದ್ಯರು: ಇದು ಯುವ ಜನರಿಗೆ ಎಚ್ಚರಿಕೆಯ ಘಂಟೆನಾ?

ಅಕ್ಟೋಬರ್ 29 ರ ಶುಕ್ರವಾರದಂದು ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣವು ಇಡೀ ಕರ್ನಾಟಕಕ್ಕೆ ಆಘಾತವನ್ನುಂಟು ಮಾಡಿದೆ. ಕೇವಲ 46 ವರ್ಷ ವಯಸ್ಸಿನ ನಟ, ಶುಕ್ರವಾರ ಜಿಮ್ ಗೆ ಹೋಗುವ ಮೊದಲು ಕೊಂಚ ಸುಸ್ತಿನ ಬಗ್ಗೆ ಬಗ್ಗೆ ಹೇಳಿಕೊಂಡಿದ್ದರು ಮತ್ತು ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿದೆ. ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಯಾವಾಗಲೂ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಅಪ್ಪು …

Read More »

ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ

  ಎಂ.ಕೆ.ಹುಬ್ಬಳ್ಳಿ :ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಿತ್ತೂರು ಎಂ.ಕೆ.ಹುಬ್ಬಳ್ಳಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.ಬೆಳ್ಳಂ ಬೆಳಿಗ್ಗೆ ಬಹಿರ್ದೆಸೆಗೆ ಕೆರೆ ಕಡೆಗೆ ಹೋಗಿದ್ದ ಇಬ್ಬರು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಈಜಲು ಬಾರದೇ ಇಬ್ಬರು ನೀರಿನಲ್ಲಿಯೇ ಮುಳುಗಿದ್ದು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳಿಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಓರ್ವ ವ್ಯಕ್ತಿಯ ಶವವನ್ನು ನೀರಿನಿಂದ …

Read More »

: ಮಣ್ಣಲ್ಲಿ ಮಣ್ಣಾದ ಪುನೀತ್ ರಾಜ್ ಕುಮಾರ್

ಬೆಂಗಳೂರು : ಹೃದಯಾಘಾತದಿಂದ ನಿಧನಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಯ ಪಕ್ಕದಲ್ಲೇ ಈಡಿಗ ಸಂಪ್ರದಾಯದಂತೆ ನಡೆದಿದೆ. ಅಪಾರ ಸಂಖ್ಯೆಯ ಜನ ಅಂತಿಮ ದರ್ಶನ ಪಡೆದ ನಂತರ ಕಂಠೀರ ಸ್ಟೇಡಿಯಂನಿಂದ ಪುನೀತ್ ರಾಜ್ ಕುಮಾರ್ ಪಾರ್ಥಿವ ಶರೀರದ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋ ತಲುಪಿತು. ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಕುಟುಂಬದವರು ಬಂಧುಗಳು ಮತ್ತು ಗಣ್ಯರು …

Read More »

ಧಾರವಾಡದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್ ಮೇಲೆ ಎಸಿಬಿ‌ ರೆಡ್

ಧಾರವಾಡದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್ ಮೇಲೆ ಎಸಿಬಿ‌ ರೆಡ್: ದಾಳಿಯಲ್ಲಿ 5 ಲಕ್ಷಕ್ಕೂ ಅಧಿಕ ನಗದು ಹಣ ವಶಕ್ಕೆ.‌* ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಸರ್ಕಾರಿ ಕೆಲಸ ಕಾರ್ಯಗಳಿಗೆ ಬಂದಂತಹ‌ ಸಾರ್ವಜನಿಕರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ, ಧಾರವಾಡದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.‌ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ …

Read More »

ಎರಡೂ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಮತದಾನ; ಅಲ್ಲಲ್ಲಿ ಕಾರ್ಯಕರ್ತರ ನಡುವೆ ಗಲಾಟೆ

ವಿಜಯಪುರ/ ಹಾವೇರಿ; ಇವತ್ತು ಸಿಂದಗಿ ಮತ್ತು ಹಾನಗಲ್ (Sindagi, Hangal By Election) ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ. ಬೆಳಗ್ಗೆ ನೀರಸವಾಗಿ ಮತದಾನ ಕಂಡು ಬಂದ್ರೂ 10 ಗಂಟೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸುತ್ತಿದ್ದಾರೆ. ಗಂಟೆಯಿಂದ ಗಂಟೆಗೆ ಶೇಕಡಾವಾರು ಮತದಾನ ಪ್ರಮಾಣ ಸಹ ಏರಿಕೆಯಾಗುತ್ತಿದೆ. ಜೊತೆಗೆ ಮತದಾನ (Voting)ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಹಾನಗಲ್ ವಿಧಾನಸಭಾ ಕ್ಷೇತ್ರದ ಮೂರು ಬೂತ್ ಗಳಲ್ಲಿ ಇವಿಎಂ …

Read More »

ದೊಡ್ಮನೆ ಹುಡುಗ ಸಿನಿಮಾ ಸಂದರ್ಭದಲ್ಲಿ ಅಕ್ಕಾ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದ್ದರು.

ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ನೋವನ್ನು ಅಭಿಮಾನಿಯಾಗಿ ನನಗೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲ ಅಭಿಮಾನಿಗಳಿಗೂ ಕೂಡ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೆ ವಿಧಿಯಾಟದ ಎದುರು ಯಾರೂ ಏನೂ ಮಾಡಲು ಆಗುವುದಿಲ್ಲ. ಎಲ್ಲರೂ ಶಾಂತ ರೀತಿಯಿಂದ ಇರ್ರಿ, ಪುನೀತ್ ರಾಜ್‍ಕುಮಾರ್ ಅವರು ಎಲ್ಲಿಯೂ ಹೋಗಿಲ್ಲ. ಅವರು ನಮ್ಮ ನಿಮ್ಮ ಮಧ್ಯದಲ್ಲಿಯೇ ಇದ್ದಾರೆ. ಅವರ ಒಳ್ಳೆಯ ಕಾರ್ಯಗಳು, ಗುಣ, ಸಂಸ್ಕøತಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅವರು ಅಸ್ತಂಗತವಾಗಿಲ್ಲ, ಅಮರರಾಗಿದ್ದಾರೆ ನಮ್ಮ ಜೊತೆಯೇ ಇದ್ದಾರೆ …

Read More »

ಶ್ರಮಿಕ ರತ್ನ ಪ್ರಶಸ್ತಿ ಸಿಗುವ ಮೂಲಕ ತಂದೆ-ಮಕ್ಕಳು ಅಪರೂಪದ ಸಾಧನೆಗೆ ಸಾಕ್ಷಿ

ಅಂದು ತಂದೆಗೆ ಶ್ರಮಿಕ ರತ್ನ ಪ್ರಶಸ್ತಿ, ಇಂದು ಪುತ್ರ ಪತ್ರಕರ್ತ ಡಿ.ವಿ.ಕಮ್ಮಾರಗೂ ಕೂಡಾ ಅದೇ ಶ್ರಮಿಕ ರತ್ನ ಪ್ರಶಸ್ತಿ ಸಿಗುವ ಮೂಲಕ ತಂದೆ-ಮಕ್ಕಳು ಅಪರೂಪದ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಹೌದು ಖಾನಾಪೂರ ತಾಲೂಕಿನ ಅವರೋಳ್ಳಿ ಗ್ರಾಮದ ವೀರಭದ್ರ ಕಮ್ಮಾರ ಅವರಿಗೆ ಎರಡು ವರ್ಷಗಳ ಹಿಂದೆಯಷ್ಟೇ ಮುಷ್ಠಿ ಬೀಗದ ಆವಿಷ್ಕಾರಕ್ಕಾಗಿ ಅಕ್ಷರ ತಾಯಿ ಲೂಯಿ ಸಾಲ್ಡಾನ್ ಸೇವಾ ಸಂಸ್ಥೆ ಕೊಡಮಾಡುವ ಶ್ರಮಿಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿತ್ತು. ಈಗ ಈ ವರ್ಷದ …

Read More »

ಪುನೀತ್​ ರಾಜ್​ಕುಮಾರ್​​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನ ಪಡೆಯಲು ನಟಿ, ಮಾಜಿ ಸಂಸದೆ ರಮ್ಯ ಬೆಂಗಳೂರಿಗೆ

ಬೆಂಗಳೂರು: ಪವರ್​​ಸ್ಟಾರ್ ಪುನೀತ್​ ರಾಜ್​ಕುಮಾರ್​​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನ ಪಡೆಯಲು ನಟಿ, ಮಾಜಿ ಸಂಸದೆ ರಮ್ಯ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮುಂಬೈದಿಂದ ನಗರದ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಮ್ಯ ಬಂದಿಳಿದಿದ್ದು ಪುನೀತ್​​ ರಾಜ್​ಕುಮಾರ್​ ಅಂತಿಮ ದರ್ಶನ ಪಡೆಯಲು ಕಂಠೀರವ ಸ್ಟೇಡಿಯಂಗೆ ತೆರಳಿದ್ದಾರೆ.

Read More »

ಪುನೀತ್ ರಾಜಕುಮಾರ್ ನಿಧನಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿರುವ ಬೆಳಗಾವಿ ಅಭಿಮಾನಿ

ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಸುರಿಯುತ್ತಿದೆ. ಅಪ್ಪು ನಿಧನದಿಂದ ಆಘಾತಕ್ಕೆ ಒಳಗಾಗಿದ್ದ ಅಭಿಮಾನಿಯೊರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಶಿಂಧೊಳ್ಳಿ ಗ್ರಾಮದ ಪರಶುರಾಮ ದೇಮಣ್ಣವರ್ ಮೃತ ಅಭಿಮಾನಿ. ನಟ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಮೃತ ಪರಶುರಾಮ್ ಟಿವಿಯಲ್ಲಿ ಅಪ್ಪು ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಇದೇ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಹೃದಯಾಘಾತದಿಂದ …

Read More »

ಬೆಳಗಾವಿಯಲ್ಲಿ ಆಯೋಜಿಸಿರುವ ನಿಸರ್ಗದ ಬಗೆಗಿನ ಮನಮೋಹಕ ಚಿತ್ರಗಳ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ

ಬೆಳಗಾವಿಯಲ್ಲಿ ಆಯೋಜಿಸಿರುವ ನಿಸರ್ಗದ ಬಗೆಗಿನ ಮನಮೋಹಕ ಚಿತ್ರಗಳ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಸಾಕಷ್ಟು ವಿದ್ಯಾರ್ಥಿಗಳು, ಪೇಂಟಿಂಗ್ಸ್ ರಸಿಕರನ್ನು ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೌದು ಬೆಳಗಾವಿಯ ಟಿಳಕವಾಡಿಯಲ್ಲಿರುವ ಕೆ.ಬಿ.ಕುಲಕರ್ಣಿ ಆರ್ಟ ಗ್ಯಾಲರಿಯ ವರೆರ್ಕರ್ ನಾಟ್ಯಗ್ರಹದಲ್ಲಿ ಅಕ್ಟೋಬರ್ 25ರಿಂದ ಅಕ್ಟೋಬರ್ 31ವರೆಗೆ ನಿಸರ್ಗದ ಬಗೆಗಿನ ಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿವಿಧ ಕಾಲೇಜು, ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿ ನಿಸರ್ಗದ ರಮಣೀಯ ಚಿತ್ರಗಳನ್ನು ಕಣ್ತುಂಬಿಕೊಂಡರು. ಎಲ್ಲ ಚಿತ್ರಗಳು ಕೂಡ ನಮ್ಮ ನಿಸರ್ಗವನ್ನು ಕಾಪಾಡುವ …

Read More »