Breaking News

ರಾಜಕೀಯ

ಕೋವಿಡ್-೧೯ ಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಚಾಲನೆ

ಬೆಳಗಾವಿ ಜಿಲ್ಲೆಗೆ ಹೊಸದಾಗಿ ಮಂಜೂರಾಗಿರುವ ಕೋವಿಡ್-೧೯ ಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಗುರುವಾರ (ಏ.೨೩) ಚಾಲನೆ ನೀಡಿದರು.   ಇಲ್ಲಿನ ನೆಹರೂ ನಗರದ ಕೆ.ಎಲ್.ಇ. ಆಸ್ಪತ್ರೆ ಎದುರಿಗೆ ಇರುವ ಭಾರತ ಸರ್ಕಾರದ ಆರೋಗ್ಯ ಸಂಶೋಧನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ”ಯ ಆವರಣದಲ್ಲಿ ಕೋವಿಡ್-೧೯ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗಿರುತ್ತದೆ. ಸದ್ಯಕ್ಕೆ …

Read More »

ಹುಬ್ಬಳ್ಳಿಯ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕು

ಹುಬ್ಬಳ್ಳಿ: ದೆಹಲಿಗೆ ವ್ಯಾಪಾರಕ್ಕಾಗಿ ಹೋಗಿ ಬಂದಿದ್ದ ಹುಬ್ಬಳ್ಳಿಯ ಮುಲ್ಲಾ ಓಣಿಯ ನಿವಾಸಿ ರೋಗಿ ನಂಬರ್-194ರ ಸಂಪರ್ಕದಿಂದ ಇದೀಗ ಹುಬ್ಬಳ್ಳಿಯಲ್ಲಿ ಮತ್ತೆ ಎರಡು ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಬ್ಬನಿಂದ ಒಂದೇ ಕುಟುಂಬದ ಏಳು ಜನರಿಗೆ ಸೋಂಕು ತಗುಲಿದೆ. ತಮ್ಮನಿಂದಾಗಿ ಸಹೋದರ, ಸಹೋದರಿಯರ ಮಕ್ಕಳಿಗೂ ಸೋಂಕು ತಗುಲಿದೆ. ಕೊರೊನಾ ವೈರಸ್ ಮುಲ್ಲಾ ಓಣಿಯ ಕುಟುಂಬಕ್ಕೆ ಸಂಕಷ್ಟವನ್ನು ತಂದೊಡ್ಡಿದ್ದು, ಈಗ ಒಂದೇ ಕುಟುಂಬದಲ್ಲಿಯೇ 7 ಜನರಿಗೆ ಸೋಂಕು ತಗುಲುವ ಮೂಲಕ ಕೊರೊನಾ …

Read More »

ಬೆಳಗಾವಿಯಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ.

ಬೆಂಗಳೂರು – ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 443ಕ್ಕೇರಿದೆ. ಬೆಂಗಳೂರಿನಲ್ಲಿ ಹೊಸದಾಗಿ 9 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 16 ಜನರಿಗೆ ಸೋಂಕು ಪತ್ತೆಯಾಗಿದೆ. ನಿನ್ನೆ 427 ಜನರಿಗೆ ಸೋಂಕು ತಗುಲಿತ್ತು. ಬೆಂಗಳೂರಿನಲ್ಲಿ ಬಿಹಾರ ಮೂಲದ ಕಾರ್ಮಿಕನಿಂದ 9 ಜನರಿಗೆ ಸೋಂಕು ತಗುಲಿದೆ. ವಿಜಯಪುರ, ಮಂಡ್ಯ ಹಾಗೂ ಧಾರವಾಡದ ತಲಾ ಇಬ್ಬರಿಗೆ ಹಾಗೂ ದಕ್ಷಿಣಕನ್ನಡದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ ಇಂದು ಯಾವುದೇ ಪ್ರಕರಣ …

Read More »

ಇಂದು ಉದ್ಘಾಟನೆಯಾಗಲಿದೆ ವಾರ್ ರೂಂ

Enಬೆಳಗಾವಿ – ಇಲ್ಲಿಯ ಸ್ಮಾರ್ಟ್ ಸಿಟಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಆರಂಭಿಸಲಾಗಿರುವ ಕೋವಿಡ್ -19 (ಕೊರೋನಾ) ವಾರ್ ರೂಂ ಇಂದು ಉದ್ಘಾಟನೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಧ್ಯಾಹ್ನ 12.30ಕ್ಕೆ ವಾರ್ ರೂಂ ಉದ್ಘಾಟಿಸುವರು. ಕೊರೋನಾಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು, ವಿವರಗಳು ಈ ವಾರ್ ರೂಂ ನಲ್ಲಿ ಲಭ್ಯವಾಗಲಿದೆ. ಇಡೀ ನಗರದ ಪರಿಸ್ಥಿತಿಯ ಮೇಲೆ ಇಲ್ಲಿಂದ ನಿಗಾ ಇಡಲಾಗುತ್ತದೆ. ಇದಕ್ಕಾಗಿ …

Read More »

ಓರ್ವ ಕೊರೊನಾ ಸೋಂಕಿತನ ಚಿಕಿತ್ಸೆಗೆ ಎಷ್ಟು ಖರ್ಚು ಆಗುತ್ತೆ? ….

ತಿರುವನಂತಪುರಂ: ಕೊರೊನಾ ರೋಗಿಗಳ ಚಿಕಿತ್ಸೆಗೆ ಎಷ್ಟು ರೂ. ಖರ್ಚಾಗಬಹುದು? ಈ ಪ್ರಶ್ನೆ ಹಲವು ಮಂದಿಗೆ ಕಾಡಿರಬಹುದು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಕೇರಳದಲ್ಲಿ ಪ್ರತಿನಿತ್ಯ ಒಬ್ಬ ಸೋಂಕಿತನಿಗೆ ಅಂದಾಜು 25 ಸಾವಿರ ರೂ. ಖರ್ಚಾಗುತ್ತದೆ. ಕೊರೊನಾ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದ್ದರೂ ಕೆಲ ಗುಣಮಟ್ಟದ ಖಾಸಗಿ ಆಸ್ಪತೆಯಲ್ಲೂ ಚಿಕಿತ್ಸೆ ನೀಡಲಾಗುತ್ತದೆ. ಸಾಧಾರಣವಾಗಿ ಕೋವಿಡ್-19 ರೋಗಿಗೆ ಪ್ರತಿನಿತ್ಯ 20 ಸಾವಿರದಿಂದ-25 ಸಾವಿರ ರೂ. ಖರ್ಚಾಗುತ್ತದೆ ಎಂದು ತಿರುವನಂತಪುರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ …

Read More »

ಮೂವತ್ತನೇ ದಿನದತ್ತ ಲಾಕ್‍ಡೌನ್-30 ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗಿದಿಯಾ?

ಬೆಂಗಳೂರು: ಲಾಕ್‍ಡೌನ್ ಆಗಿ ಇಂದಿಗೆ ಒಂದು ತಿಂಗಳಾಗಿದೆ. ಕಳೆದ ಮೂವತ್ತು ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆ ಆಗುತ್ತಲೇ ಇದೆ. ಸದ್ಯ ಇಪ್ಪತ್ತು ಸಾವಿರ ಗಡಿ ದಾಟಿರುವ ಮಹಾಮಾರಿ ಲಾಕ್‍ಡೌನ್ ಮಾಡಿದಿದ್ದರೇ ದೊಡ್ಡ ಅನಾಹುತವನ್ನೇ ಸೃಷ್ಟಿಸುತ್ತಿತ್ತು. ಈ ನಡುವೆ ಕೊರೊನಾ ನಿರ್ವಹಣೆಯಲ್ಲಿ ಭಾರತ ಬೆಸ್ಟ್ ಎನಿಸಿಕೊಂಡ್ರೆ ಪ್ರಧಾನಿ ಮೋದಿ ನಂಬರ್ ಸ್ಥಾನದಲ್ಲಿ ಕೂತಿದ್ದಾರೆ. ಲಾಕ್‍ಡೌನ್ ಮೂವತ್ತು ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗಿದಿಯಾ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್. ಮಾರ್ಚ್ 24 ರಾತ್ರಿ …

Read More »

ಉಡುಪಿ:ನರ್ಸ್‍ಗೆ ಜೀವ ಬೆದರಿಕೆ ಹಾಕಿದ ಪುಂಡರು……

ಉಡುಪಿ: ಕೋವಿಡ್-19ಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ನರ್ಸ್‍ಗಳಿಗೆ ವಿದೇಶದಲ್ಲಿ ವಿಭಿನ್ನ ರೀತಿಯ ಧನ್ಯವಾದ, ಶುಭಾಶಯ ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಕೆಲವು ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತರು, ಡಾಕ್ಟರ್‌ಗಳಿಗೆ ಧಮ್ಕಿ ಹಾಕುವ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಾಪು ತಾಲೂಕಿನ ಪಡುಬಿದ್ರೆಯ ಆರೋಗ್ಯ ಸಹಾಯಕಿ ಶ್ಯಾಮಲಾ ಅವರಿಗೆ ಧಮ್ಕಿ ಹಾಕಲಾಗಿದೆ. ನಿನ್ನನ್ನು ಫೀಲ್ಡ್ ನಲ್ಲಿ ನೋಡಿಕೊಳ್ಳುತ್ತೇನೆ. ಹೇಗೆ ಕೆಲಸ ಮಾಡುತ್ತೀಯಾ ನೋಡ್ಕೋತೇವೆ ಎಂದು ಮಮ್ತಾಜ್ ಮತ್ತು ಮನ್ಸೂರ್ ಎಂಬ ಕಿಡಿಗೇಡಿಗ ಜೀವ ಬೆದರಿಕೆ …

Read More »

ಗದಗ:ಸಚಿವರ ಅಭಿಮಾನಿಗಳಿಂದ ಸುಳ್ಳು ಸುದ್ದಿ- ಆತಂಕದಲ್ಲಿ ಜನ

ಗದಗ: ಬುಧವಾರ ಜಿಲ್ಲೆನಲ್ಲಿ ಯಾವುದೇ ಕೊರೊನಾ ಸಟಿವ್ ಪ್ರಕರಣಗಳು ಧೃಢಪಟ್ಟಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಫೇಸ್ಬುಕ್ ಫಾಲೋವರ್ಸ್ ಪಾಸಿಟಿವ್ ಕೇಸ್ ಇದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಜನತೆ ತೀವ್ರ ಆತಂಕಕ್ಕೊಳಗಾಗಿದ್ದು, ಭಯಭೀತರಾಗಿದ್ದಾರೆ. ಕೊರೊನಾ ವೈರಸ್ ಪ್ರಕರಣದ ಕುರಿತು ಇಂದಿನ ಮೀಡಿಯಾ ಬುಲೆಟಿನ್ ನಲ್ಲಿಪ್ರಕಟವಾಗಿಲ್ಲ. ಆದರೆ ಫೆಸ್ಬುಕ್‍ನಲ್ಲಿ ಹಾಕಿದ್ದಾರೆ. ಇದು ಸುಳ್ಳು ಸುದ್ದಿಯಾಗಿದ್ದು, …

Read More »

ಚಿಕ್ಕಮಗಳೂರು:ಕೂಲಿಗೆ ಹೋಗಿಲ್ಲ, ಆಹಾರ ಕಿಟ್ ಸಿಕ್ಕಿಲ್ಲ- ಹಕ್ಕಿಪಿಕ್ಕಿ ಜನಾಂಗದವರ ಅಳಲು

ಚಿಕ್ಕಮಗಳೂರು: ದೇಶದಲ್ಲಿ ಲಾಕ್‍ಡೌನ್ ಆದಾಗಿನಿಂದ ನಗರದ ಇಂದಿರಾಗಾಂಧಿ ಬಡಾವಣೆಯ ಹಕ್ಕಿಪಿಕ್ಕಿ ಕಾಲೋನಿಯ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ನಮಗೆ ಆಹಾರ ಸಾಮಾಗ್ರಿಗಳ ಕಿಟ್ ಕೂಡ ಸಿಕ್ಕಿಲ್ಲ, ಆಹಾರ ಧಾನ್ಯಗಳೇ ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು …

Read More »

ಮೇ 3ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ : ಸಚಿವ ಎಸ್.ಟಿ. ಸೋಮಶೇಖರ್

ಚಾಮರಾಜನಗರ- ಮೇ 3ರ ವರೆಗೆ ರಾಜ್ಯದ ಯಾವುದೇ ಭಾಗದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ಜನತೆ ಹಿತದೃಷ್ಟಿಯಿಂದ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಲವು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಬಳಿಕ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾಮಾಜಿಕ ಅಂತರವನ್ನು …

Read More »