Breaking News

ಜಿಲ್ಲೆ

ಬೆಳಗಾವಿ: ‘ಸಾಂಪ್ರದಾಯಿಕ ತಂತ್ರಜ್ಞಾನದಿಂದ ಸ್ವಾವಲಂಬನೆ’

ಬೆಳಗಾವಿ: ‘ಸಾಂಪ್ರಾದಾಯಿಕ ತಂತ್ರಜ್ಞಾನವು ಆಧುನಿಕ ಯುಗದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬಲ್ಲದು. ಮಹಿಳಾ ಸ್ವಾವಲಂಬನೆಗೆ ಇದು ಅತ್ಯಂತ ಸುಲಭ ಮಾರ್ಗ’ ಎಂದು ಪುಣೆಯ ದಿ ಎಕೊಸೋಸಿಯೊ ಟ್ರೈಬ್‌ನ ಸಂಸ್ಥಾಪಕಿ ಅಮಿತಾ ದೇಶಪಾಂಡೆ ಸಲಹೆ ನೀಡಿದರು.   ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಾಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್‌ನಿಂದ ಆದಿವಾಸಿ ಮಹಿಳೆಯರ ಜೀವನಮಟ್ಟ ಸುಧಾರಿಸಲು ಸಾಧ್ಯ. …

Read More »

ಇನ್ಮುಂದೆ ನಾವೆಲ್ಲರು ಜೆಡಿಎಸ್​ ಪರ ಕೆಲಸ ಮಾಡ್ಬೇಕು: ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ ಎ. ಮಂಜು

ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು ದಿಢೀರ್ ಕಾರ್ಯಕರ್ತರ ಸಭೆ ಕರೆದಿದ್ದು, ಇನ್ನು ಮುಂದೆ ಎಲ್ಲರು ಜೆಡಿಎಸ್​ ಪರ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.   ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಸಭೆ ಕರೆದು ಪ್ರತಿಜ್ಞೆ ಮಾಡಿಸಿದ್ದಾರೆ. ಇನ್ನು ಮುಂದೆ ನಾವೆಲ್ಲರು ಜೆಡಿಎಸ್​ನವರು, ಜೆಡಿಎಸ್ ಪಕ್ಷದಿಂದ ಎ.ಮಂಜು ಅವರನ್ನು ಗೆಲ್ಲಿಸಬೇಕು ಎಂದು ಪ್ರತಿಜ್ಞೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು …

Read More »

ಚಿಕ್ಕೋಡಿ: ಪತ್ನಿಯನ್ನು ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ

ಚಿಕ್ಕೋಡಿ: ಪತ್ನಿ ಕೊಲೆ ಮಾಡಿದ್ದ ಇಲ್ಲಿನ ಸಂಜಯ ಗಾಂಧಿ‌ ನಗರದ ನಿವಾಸಿ ಅಜೀತ್‌ ಉರೂಫ್‌ ಸಾವಳಾ ಮಹಾದೇವ ಮಾಳಿ ಎಂಬಾತನಿಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜಿವಾವಧಿ ಶಿಕ್ಷೆ ಹಾಗೂ ₹ 2,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.   ಈ ವ್ಯಕ್ತಿ ನಿರುದ್ಯೋಗಿ ಆಗಿದ್ದು ಪ್ರತಿನಿತ್ಯ ತನ್ನ ಪತ್ನಿ ಪಾರ್ವತಿ ಬಳಿ ಖರ್ಚಿಗೆ ಹಣ ಕೇಳುತ್ತಿದ್ದ. ಕೊಡದೇ ಇದ್ದಾಗ ‍ಪೀಡಿಸುತ್ತಿದ್ದ. 2016ರ ನವೆಂಬರ್‌ 4ರಂದು ಹಣ …

Read More »

28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ

ಬೈಲಹೊಂಗಲ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಜಿಲ್ಲಾ ಘಟಕ ಹಾಗೂ ಊರಿನ ಎಲ್ಲ ಮಾಜಿ ಸೈನಿಕರು ಹಮ್ಮಿಕೊಂಡಿದ್ದರು ಊರಿನ ದ್ವಾರದಿಂದ ಶ್ರೀ ಜೋಡು ಬಸವಣ್ಣನ ಗುಡಿಯವರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಸವಂತಪ್ಪ ಕರಾಂವಿ ಇವರ ನೇತೃತ್ವದಲ್ಲಿ …

Read More »

ಚುನಾವಣೆ ಸಮೀಪಿಸಿದ ಸಂದರ್ಭದಲ್ಲೂ C.M. ಬೊಮ್ಮಾಯಿ ಅವರು ಅಲ್ಪಾವಧಿ ಟೆಂಡರ್‌ ಮತ್ತು ಕಾರ್ಯಾದೇಶ ನೀಡುತ್ತಿದ್ದಾರೆ.

ಬೆಳಗಾವಿ: ‘ಚುನಾವಣೆ ಸಮೀಪಿಸಿದ ಸಂದರ್ಭದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಲ್ಪಾವಧಿ ಟೆಂಡರ್‌ ಮತ್ತು ಕಾರ್ಯಾದೇಶ ನೀಡುತ್ತಿದ್ದಾರೆ. ಇದು ಲೂಟಿ ಮಾಡುವ ತಂತ್ರ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.   ‘ಚುನಾವಣೆ ನೀತಿ ಸಂಹಿತೆ ಬರುವುದಕ್ಕೂ ಮುನ್ನ ಹಣ ಸಂಗ್ರಹಿಸಿಡಲು ಬಿಜೆಪಿ ಸರ್ಕಾರ ಈ ಉಪಾಯ ಮಾಡಿದೆ. ಮುಂದೆ ಕಾಂಗ್ರೆಸ್‌ ಸರ್ಕಾರ ಬರುವುದು ನಿಶ್ಚಿತ. 15 ದಿನಗಳಲ್ಲಿ ಈ ಎಲ್ಲ ಟೆಂಡರ್‌, ಕಾರ್ಯಾದೇಶಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸುತ್ತೇವೆ. ಅಧಿಕಾರಿ, …

Read More »

ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಕಚೇರಿ ಉದ್ಘಾಟಿಸಿದ: ಸತೀಶ ಜಾರಕಿಹೊಳಿ

ಬೆಳಗಾವಿ: ‘ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆದರೆ, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.   ವಡಗಾವಿಯಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಮೊದಲು ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಂಘಟನೆ ಕಡಿಮೆ ಇದೆ ಎಂಬ ಭಾವನೆ ಇತ್ತು. ಆದರೆ, ಈಗ ಇಲ್ಲಿಯೂ ಪಕ್ಷದ …

Read More »

ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿ ಕಿರುಕುಳ ರೈಲಿಗೆ ತಲೆಯೊಡ್ಡಿಆತ್ಮಹತ್ಯೆ

ರಾಯಬಾಗ: ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕಿ ಕಿರುಕುಳದ ಆರೋಪ ಹೊರಿಸಿ ಸಹ ಶಿಕ್ಷಕಿಯೊಬ್ಬರು ಡೆತ್‌ನೋಟ್‌ ಬರೆದಿಟ್ಟು ಇಲ್ಲಿನ ರೈಲು ನಿಲ್ದಾಣದ ಬಳಿ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಅನ್ನಪೂರ್ಣಾ ರಾಜು ಬಸಾಪುರೆ (55) ಆತ್ಮಹತ್ಯೆಗೆ ಶರಣಾದವರು. ಅವರು ತಾಲೂಕಿನ ಕುಡಚಿ ನಿವಾಸಿಯಾಗಿದ್ದು, ಖಾಸಗಿ ಅನುದಾನಿತ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈ ಶಿಕ್ಷಣ ಮುಖ್ಯಶಿಕ್ಷಕ ಜಮಾದಾರ ಹಾಗೂ ಸಹ ಶಿಕ್ಷಕಿ ಮಯೂರಿ ಹಾಗೂ ಉಮಾ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು …

Read More »

ನೂತನವಾಗಿ ಆರಂಭವಾದ ಚಿರಾಯು ಕ್ರಿಟಿಕಲ್ ಆಸ್ಪತ್ರೆಗೆ ಭೇಟಿ ನೀಡಿ ಶುಭ ಹಾರೈಸಿದ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು

ಗೋಕಾಕ: ಗೋಕಾಕ ನಗರದಲ್ಲಿ ಹೊಸದಾಗಿ ಪ್ರಾರಂಭ ವಾಗಿರುವ ಚಿರಾಯು ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಭೇಟಿ ನೀಡಿದರು. ಸದಾ ಕ್ರಿಯಾಶೀಲ ರಾಗಿರುವ ಸಂತೋಷ್ ಜಾರಕಿಹೊಳಿ ಅವರು ಯಾವುದಾದರೂ ಒಂದು ಕೆಲಸ ಕಾರ್ಯ ಗಳಲ್ಲಿ ಸದಾ ತಮ್ಮನ್ನ ತಾವು ತೊಡಗಿಸಿ ಕೊಂಡಿರುತ್ತಾರೆ. ಅವರು ಮಾಡಿದ ಕೆಲಸ ಗಳು ಕಣ್ಣಿಗೆ ಕಾಣುವುದು ಒಂದೋ ಅಥವಾ ಎರಡು ಆದ್ರೆ ಕಾಣದ ಕೆಲಸಗಳು ಸಾವಿರಾರು ಅಂತ ಈ ಒಂದು ಆಸ್ಪತ್ರೆಗೆ …

Read More »

ಸಾವಿನಲ್ಲೂ ಒಂದಾದ ತಾಯಿ-ಮಗ; ಬಾಗಲಕೋಟೆಯಲ್ಲಿ ನಡೆಯಿತು ಹೃದಯ ಹಿಂಡುವ ಘಟನೆ!

ಬಾಗಲಕೋಟೆ: ತಾಯಿ ಮತ್ತು ಮಗ ಒಂದೇ ದಿನ ಪ್ರಾಣ ಬಿಡುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ. ಈ ಹೃದಯ ಕಲಕುವ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆದಿದೆ. ಕಲಾದಗಿ‌ ಗ್ರಾಮದ ಸ್ಥಳೀಯ ಮುಖಂಡ ದಶರಥ ದುರ್ವೆ(60) ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ. ಇತ್ತ ಮಗನ ಸಾವಿನ ಸುದ್ದಿ ತಿಳಿದು ದುಃಖಕ್ಕೀಡಾಗಿದ್ದ ಅವರ ತಾಯಿ ಶಾವಕ್ಕ ದುರ್ವೆ(90) ಶುಕ್ರವಾರ ಸಂಜೆ 6.30ರ ಸುಮಾರಿಗೆ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ.

Read More »

ಶಿಸ್ತು, ಪರಿಶ್ರಮ, ತಾಳ್ಮೆಯಿಂದ ಸಾಧನೆ ಸಾಧ್ಯ

ನಿಪ್ಪಾಣಿ: ‘ಶಿಸ್ತು, ಪರಿಶ್ರಮ, ಸೌಮ್ಯತೆ, ತಾಳ್ಮೆ ಇದ್ದಲ್ಲಿ ವಿದ್ಯಾರ್ಥಿಗಳು ಮುಂದೆ ಹೋಗಿ ಬಯಸಿದ್ದನ್ನೆಲ್ಲ ಸಾಧಿಸುತ್ತಾರೆ. ಅದಕ್ಕೆ ತಕ್ಕಂತೆ ಬೋಧನೆ ಶಾಲೆಯಲ್ಲಿ ಶಿಕ್ಷಕರಿಂದಾಗಬೇಕು, ಸಂಸ್ಕಾರ ಮನೆಯಲ್ಲಿ ಪಾಲಕರಿಂದಾಗಬೇಕು’ ಎಂದು ವಿದ್ಯಾ ಸಂವರ್ಧಕ ಮಂಡಳದ ಸಿಇಒ ಡಾ. ಸಿದ್ಧಗೌಡ ಪಾಟೀಲ ಅಭಿಪ್ರಾಯಪಟ್ಟರು. ಸ್ಥಳೀಯ ವಿಎಸ್‍ಎಂ ಜಿ.ಐ. ಬಾಗೇವಾಡಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿಎಸ್‍ಎಂ ಕನ್ನಡ ಮತ್ತು ಮರಾಠಿ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾರ ಬೀಳ್ಕೊಡುವ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು …

Read More »