Breaking News

ಜಿಲ್ಲೆ

ಲೋಕಾರ್ಪಣೆಗೆ ಸಿದ್ಧಗೊಂಡ ಎಂ.ಬಿ.ಪಾಟೀಲ್ ಕಂಚಿನ ಪ್ರತಿಮೆ

ವಿಜಯಪುರ : ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಕಂಚಿನ ಪುತ್ಥಳಿ ಲೋರ್ಕಾಪಣೆಗೆ ಸಿದ್ಧಗೊಂಡಿದೆ. ಜಲಸಂಪನ್ಮೂಲ ಸಚಿವರಾಗಿ ತಾವು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಿರುವ ಕೃತಜ್ಞತೆಗಾಗಿ ಬಬಲೇಶ್ವರ ತಾಲೂಕಿನ ಸಂಗಾಗಪುರ ಎಸ್.ಎಚ್.ಗ್ರಾಮದ ಜನರು ಎಂ.ಬಿ.ಪಾಟೀಲ ಅವರ ಪುತ್ಥಳಿ ನಿರ್ಮಿಸಲು ಮುಂದಾಗಿದ್ದಾರೆ.   ಈಗಾಗಲೇ ಎಂ.ಬಿ.ಪಾಟೀಲ ಅವರ ಕಂಚಿನ ಪ್ರತಿಮೆ ಪೂರ್ಣಗೊಂಡಿದ್ದು, ಮಾ.17 ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಪುತ್ಥಳಿ ಅನಾವರಣ …

Read More »

ದೇವಲತ್ತಿ ಲೋಕೋಳಿ- ಲಕ್ಕೇಬೈಲ್ ಮಾರ್ಗದಿಂದ ವಿದ್ಯುತ್ ಸರಬರಾಜು:ಡಾ. ಸೋನಾಲಿ

ಬೆಳಗಾವಿ: ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯನ್ನು ಕೊನೆಗೂ ಈಡೇರಿಸಿ ಕೊಡುವಲ್ಲಿ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದಾರೆ. ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದರೂ ಈ ಮಾರ್ಗ ಪದೇ ಪದೇ ದುರಸ್ತಿಗೆ ಈಡಾಗುತ್ತಿರುವುದರಿಂದ ದೇವಲತ್ತಿ ಗ್ರಾಮದವರು ತೀವ್ರ ಸಮಸ್ಯೆ ಅನುಭವಿಸುವಂತಾಗಿತ್ತು. ಈ ಭಾಗದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಪಡಿಪಾಟಲು ಪಡುವಂತಾಗಿತ್ತು. ಹಾಗಾಗಿ ಈ ಜನರ ಸಮಸ್ಯೆ ಬಗ್ಗೆ ತಿಳಿದು ಜನರ ನೋವಿಗೆ ಸ್ಪಂದಿಸಿದ …

Read More »

5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಹೈಕೋರ್ಟ್ ಏಕಸದಸ್ಯಪೀಠ ರದ್ದುಗೊಳಿಸಿ ಆದೇಶ

ಬೆಂಗಳೂರು: 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಹೈಕೋರ್ಟ್ ಏಕಸದಸ್ಯಪೀಠ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮಾರ್ಚ್ 13ರಿಂದ 5 ಹಾಗೂ 8ನೇ ತರಗತಿಗಳಿಗೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ ಪಬ್ಲಿಕ್ ಪರೀಕ್ಷೆ ನಡೆಸದಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. 5 ಹಾಗೂ 8ನೇ ತರಗತಿಯ ವಾರ್ಷಿಕ ಪರೀಕ್ಷೆ ವಿರೋಧಿಸಿ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯಪೀಠ ಪರೀಕ್ಷೆಗೆ ತಡೆ ನೀಡಿದೆ. ನಿಯಮಗಳಿಗೆ ಅನುಸಾರವಾಗಿ …

Read More »

ಸಾರಿಗೆ ನೌಕರರ ವೇತನ ಶೇ10 ರಷ್ಟು ಹೆಚ್ಚಿಸಲು ಕ್ರಮ: ಸಚಿವ ಬಿ.ಶ್ರೀರಾಮುಲು

ರಾಯಚೂರು: ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ ಸಾರಿಗೆ ನೌಕರರ ವೇತನವನ್ನು ಶೇ 10 ರಷ್ಟು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನೌಕರರ ಸಂಘದೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೆ ಸಿಹಿ ಸುದ್ದಿ ನೀಡಲಾಗುವುದು ಎಂದರು.   ಬೆಂಗಳೂರಿನಲ್ಲಿ ಸಜೀವವಾಗಿ ದಹನವಾಗಿರುವ ಬಸ್‌ ಚಾಲಕನ ಕುಟುಂಬಕ್ಕೆ ತಕ್ಷಣ ₹5 ಲಕ್ಷ ಪರಿಹಾರ ನೀಡಬೇಕು, ವಿಮಾ ಪರಿಹಾರ …

Read More »

ಬೆಳಗಾವಿ: ಮೂರು ಹೆಣ್ಣುಮಕ್ಕಳ ಹೆತ್ತಿದ್ದೇ ತಪ್ಪಾಯಿತೇ…

ಬೆಳಗಾವಿ: ‘ಗಂಡ ಸಾಲ ಮಾಡಿ ಓಡಿಹೋದ. ಸಾಲ ಕೊಟ್ಟವರು ದಿನವೂ ಕಾಡತೊಡಗಿದರು. ಎಳೆಯ ಮಕ್ಕಳು ಹಸಿವಿನಿಂದ ಅಳುತ್ತಿದ್ದವು. ಹೆಣ್ಣು ಹೆತ್ತಿದ್ದೇನೆ ಎಂಬ ಕಾರಣಕ್ಕೆ ಅತ್ತೆ-ಮಾವನೂ ದೂರ ಮಾಡಿದ್ದಾರೆ. ತವರಿನಲ್ಲೂ ಕಷ್ಟವಿದೆ. ಬದುಕು ಬೀದಿಗೆ ಬಿತ್ತು. ಈ ಜೀವ ಇಟ್ಟು ಇನ್ನೇನು ಮಾಡುವುದು ಎಂದು ಸಾಯಲು ಹೊರಟೆ. ನಾನು ಹೋದ ಮೇಲೆ ಮಕ್ಕಳು ಹಸಿವಿನಿಂದ ಸಾಯಬಾರದು ಎಂದು ಅವರಿಗೂ ಫಿನೈಲ್‌ ಕುಡಿಸಿದೆ…’ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ತಮ್ಮ …

Read More »

ಹಿಂಡಲಗಾ: ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ

ಬೆಳಗಾವಿ: ‘ಜಗತ್ತು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಾವೂ ನಮ್ಮನ್ನು ಹೊಂದಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಸ್ಮಾರ್ಟ್ ಕ್ಲಾಸ್‌ ವ್ಯವಸ್ಥೆ ಮೂಲಕ ಶಿಕ್ಷಣ ಒದಗಿಸಲು ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.   ಹಿಂಡಲಗಾ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಹಣ ಮಂಜೂರು ಮಾಡಿಸಿದ ಅನುದಾನದಲ್ಲಿ ನಿರ್ಮಿಸಲಾದ ನೂತನ ಸ್ಮಾರ್ಟ್ ಕ್ಲಾಸ್ …

Read More »

ಬೆಳಗಾವಿ| ಪ್ರತಿ ಮನೆಯಲ್ಲೂ ಹೆಣ್ಣಿಗೆ ಸಮಾನತೆ ಸಿಗಲಿ: ಕೃಷ್ಞಕುಮಾರ

ಬೆಳಗಾವಿ: ‘ಕೇವಲ ಭಾಷಣಗಳಲ್ಲಿ ಮಹಾ ಗ್ರಂಥಗಳಲ್ಲಿ ಮಹಿಳೆಯರಿಗೆ ಗೌರವ ನೀಡಿದರೆ ಸಾಲದು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳ ಜೊತೆಗೆ ಸಮಾಜದ ಎಲ್ಲ ಮಹಿಳೆಯರನ್ನು ಸೋದರಿಯರಂತೆ ಕಾಣಬೇಕು’ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಞಕುಮಾರ ಹೆಳಿದರು.   ಕೇಂದ್ರ ಕಾರಾಗೃಹದಲ್ಲಿ ಬುಧವಾರ ‘ಅಂತರರಾಷ್ಟ್ರೀಯ ಮಹಿಳಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಣ್ಣು ತನ್ನ ಜೀವನದಲ್ಲಿ ಮಗುವಾಗಿ, ಮಗಳಾಗಿ, ಸಹೋದರಿಯಾಗಿ, …

Read More »

ಸಂಸದೆ ಸುಮಲತಾ ಇಂದು ಬಿಜೆಪಿಗೆ, ಬಿಜೆಪಿ ತೊರೆದ ಪುಟ್ಟಣ್ಣ ಕಾಂಗ್ರೆಸ್‌ಗೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಪಕ್ಷಾಂತರ ಪರ್ವ ಜೋರಾಗಿ ಸದ್ದು ಮಾಡುತ್ತಿದೆ. ಆಡಳಿತಾರೂಢ ಬಿಜೆಪಿಗೆ ಈ ವಿಚಾರ ಈಗ ತೀವ್ರ ಪ್ರಮಾಣದಲ್ಲಿ ಒಳ ಏಟು ನೀಡಲಾರಂಭಿಸಿದ್ದು, ಪ್ರಬಲ “ವಿಕೆಟ್‌’ಗಳು ಉರುಳದಂತೆ ನೋಡಿಕೊಳ್ಳುವುದು ಕೇಸರಿ ಪಡೆಗೆ ಸವಾಲಾಗಿದೆ.   ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆಯುತ್ತಿರುವಾಗಲೇ ಬಿಜೆಪಿಯಿಂದ ವಲಸೆ ವಿಚಾರ ಸುದ್ದಿಯಾಗುತ್ತಿದೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸಚಿವ ನಾರಾಯಣ ಗೌಡ ಜತೆಗೆ ಇನ್ನೂ ಮೂವರು …

Read More »

A.P.M.C. ಪೊಲೀಸರ ಕಾರ್ಯಾಚರಣೆ ಕುಖ್ಯಾತ ಅಂತರರಾಜ್ಯ ವಂಚಕರಬಂಧನ

ಬೆಳಗಾವಿ : ಎಪಿಎಮ್‌ಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತರರಾಜ್ಯ ವಂಚಕರನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು ರೂ.೬,೦೯,೦೦೦ ಮೌಲ್ಯದ ಬಂಗಾರ, ನಗದು & ಮೋಟರ್ ಸೈಕಲ್‌ಗಳನ್ನು ಜಪ್ತಿ ಮಾಡಿದ್ದಾರೆ. ದಿನಾಂಕ. ೨೯/೧೧/೨೦೨೨ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮುರಳಿಧರ ಕಾಲನಿಯ ಸೋಮಲಿಂಗ ಅಮ್ಮಣಗಿರವರ ಎ.ಟಿ.ಎಮ್ ಕಾರ್ಡನ್ನು ಬದಲಾಯಿಸಿಕೊಂಡು ಅವರ ಎ.ಟಿ.ಎಮ್ ಕಾರ್ಡಿಂದ ೪,೦೩,೭೮೯/- ರೂಗಳನ್ನು ತೆಗೆದುಕೊಂಡು ಮೋಸ ಮಾಡಿದ ಬಗ್ಗೆ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಪಿಐ ರಮೇಶ …

Read More »

1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ 6 ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ: ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಕಾರಣ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಗಮನ ನೀಡಬೇಕು. ನಿಮಗೆ ಬೇಕಾದ ಸಹಾಯ, ಸಹಕಾರ ನೀಡಲು ನಾನು ಸದಾ ಬದ್ಧನಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಮುಚ್ಚಂಡಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಕನ್ನಡ ಶಾಲೆ ಸನ್ 2022 – 23 ರಲ್ಲಿ ” 4059″ ಕಟ್ಟಡಗಳ ಯೋಜನೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ 6 ಪ್ರಾಥಮಿಕ …

Read More »