Breaking News

ರಾಯಚೂರು

ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವ – ರಾಯರ 405ನೇ ಪಟ್ಟಾಭಿಷೇಕ ಮಹೋತ್ಸವ

ರಾಯಚೂರು: ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಗುರುವೈಭವೋತ್ಸವ ಸಂಭ್ರಮ ಮನೆಮಾಡಿದೆ. ಫೆ.18ರಿಂದ 24ರವರೆಗೆ ಏಳು ದಿನಗಳ ಕಾಲ ರಾಯರ ಪಟ್ಟಾಭಿಷೇಕ, ವರ್ಧಂತಿ ಉತ್ಸವಗಳು ಸೇರಿ ನಾನಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗುರುವೈಭವೋತ್ಸವಕ್ಕೆ ಇಂದು (ಫೆ.18) ಚಾಲನೆ ಸಿಕ್ಕಿದ್ದು, ನಾಳೆ ಗುರುರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ ಜರುಗಲಿದೆ. ರಾಘವೇಂದ್ರ ತೀರ್ಥರ ಶಿಷ್ಯ ಯತಿ ಯೋಗಿಂದ್ರ ತೀರ್ಥರ ಪಾರ್ಥನೆಯಂತೆ ಮೂಲ ಪಾದುಕೆಗಳ ಪಟ್ಟಾಭಿಷೇಕ ನೆರವೇರಿಸಲಾಗುತ್ತದೆ. ಮಠದ ಪ್ರಸ್ತುತ ಪೀಠಾಧಿಪತಿ …

Read More »

ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ: ಗ್ರಾ.ಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರ ಹೋರಾಟ

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ತಾಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದಿದ್ದು, ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಕೈಯಲ್ಲಿ ಕೊಡಗಳನ್ನ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಕಳೆದ 20 ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಕುಡಿಯುವ ನೀರು …

Read More »

ಮಂತ್ರಾಲಯದಲ್ಲಿ ಶಿವರಾತ್ರಿ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಮಹಾರುದ್ರಾಭಿಷೇಕ

ರಾಯಚೂರು: ಮಹಾಶಿವರಾತ್ರಿ ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ  ಶಿವಲಿಂಗಕ್ಕೆ ವಿಶೇಷ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರುದ್ರದೇವರಿಗೆ ಅಭಿಷೇಕ ನೆರವೇರಿಸಿದರು. ಮಠದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಮಠದ ಪಂಡಿತರು ನಿರಂತರವಾಗಿ ಮಂತ್ರಗಳನ್ನ ಪಠಿಸಿದರು. ಮಠದ ಶ್ರೀಗಳು ಮಹಾರುದ್ರಾಭಿಷೇಕದ ಜೊತೆ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ಇನ್ನೂ ರಾಯಚೂರು ನಗರದ ಎಲ್ಲಾ ಈಶ್ವರ ದೇವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಭಕ್ತರ ದಂಡು …

Read More »

ಶಾಸಕ ಯತ್ನಾಳಗೆ ಮಂತ್ರಾಲಯ ಪರಿಮಳ ಪ್ರಶಸ್ತಿ

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ 2026ನೇ ಸಾಲಿನ ಮಂತ್ರಾಲಯ ಪರಿಮಳ ಪ್ರಶಸ್ತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರಿಗೆ ಸಂದಿದೆ. ಸಮಾಜ ಸೇವೆ, ಕಲಾ, ಸಾಹಿತ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟಿನಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಈ …

Read More »

ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ – 21 ದಿನದಲ್ಲಿ 3.08 ಕೋಟಿ ರೂ. ಸಂಗ್ರಹ

ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯದ ) ಶ್ರೀ ರಾಘವೇಂದ್ರ ಸ್ವಾಮಿ  ಮಠದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, 21 ದಿನದಲ್ಲಿ 3.08 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಜನವರಿಯಿಂದ ಫೆಬ್ರವರಿ ತಿಂಗಳು ಸೇರಿ ಒಟ್ಟು 21 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, 21 ದಿನದಲ್ಲಿ 3,08, 37,571 ರೂ. ಕಾಣಿಕೆ ಸಂಗ್ರಹವಾಗಿದೆ. ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಎರಡು ತಿಂಗಳಿನ ಈ 21 ದಿನಗಳಲ್ಲಿ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ …

Read More »

ರಾಯಚೂರು ಜಿಲ್ಲಾ ಉತ್ಸವದಲ್ಲಿ ಬಾಯಲ್ಲಿ ನೀರೂರಿಸಿದ ವೈವಿಧ್ಯಮಯ ಆಹಾರ

ರಾಯಚೂರು: ಸಾಂಪ್ರದಾಯಿಕ ಜತೆಗೆ ಆಧುನಿಕ ಶೈಲಿಯ ಬಗೆಬಗೆಯ ಸಸ್ಯಾಹಾರಗಳು, ಘಮಘಮಿಸುವ ಮಸಾಲೆ ತಿಂಡಿಗಳು, ಮಾಂಸಾಹಾರದ ಖಾದ್ಯಗಳು, ಬಾಯಿ ಚಪ್ಪರಿಸಿ ತಿನ್ನುತ್ತಿರುವ ಗ್ರಾಹಕರು… ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಗುರುವಾರ ಕಂಡು ಬಂದ ದೃಶ್ಯಗಳಿವು. ದಕ್ಷಿಣ ಉತ್ತರ ಕರ್ನಾಟಕದ ನಾನಾ ಶೈಲಿಯ ಅಡುಗೆಗಳು ಜನರ ಗಮನ ಸೆಳೆಯುತ್ತಿವೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಸಾಂಪ್ರದಾಯಿಕ ತಿನಿಸುಗಳಾದ ಮಸಾಲೆ ದೋಸೆ, ಪಲಾವ್, …

Read More »

ಇಂದಿನಿಂದ ಮೂರು ದಿನ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ

ರಾಯಚೂರು: ಎರಡು ದಶಕಗಳ ಬಳಿಕ ರಾಯಚೂರಿನಲ್ಲಿ  ನಡೆಯುತ್ತಿರುವ ಜಿಲ್ಲಾ ಉತ್ಸವಕ್ಕೆ  ಇಂದು ಚಾಲನೆ ಸಿಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು  ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಫೆಬ್ರವರಿ 5, 6 ಮತ್ತು 7 ಮೂರು ದಿನಗಳ ಕಾಲ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಉತ್ಸವ ಹಿನ್ನೆಲೆ ಇಡೀ ರಾಯಚೂರು ನಗರ ಮದುವಣಗಿತ್ತಿಯಂತೆ …

Read More »

ಕೌಟುಂಬಿಕ ಕಲಹಕ್ಕೆ ಗರ್ಭಿಣಿ ಸೊಸೆಯನ್ನ ಕೊಂದ ಮಾವ – ಆರೋಪಿ ಅರೆಸ್ಟ್

ರಾಯಚೂರು: ಹಣ ಕೊಡದಿದ್ದಕ್ಕೆ ಮಗನೋರ್ವ ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಲೆ ಮಾಡಿದ್ದ ಘಟನೆ ಮಂಗಳವಾರ ನಗರದಲ್ಲಿ ನಡೆದಿತ್ತು. ಇಂದು ಇದೇ ರಾಯಚೂರಿನಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಗರ್ಭಿಣಿ ಸೊಸೆಯನ್ನ ಕತ್ತು ಸೀಳಿ ಮಾವ ಕೊಲೆ ಮಾಡಿರುವಂತಹ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ. ರೇಖಾ(25) ಕೊಲೆಯಾದ ಸೊಸೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹ: ಸೊಸೆ ಕೊಲೆ ಕೌಟುಂಬಿಕ ಕಲಹ ಹಿನ್ನೆಲೆ ಮಾವ …

Read More »

ಸಿನಿಮಾ ಟಿಕೆಟ್ ಸಿಗದೆ ಈಜಲು ಕಾಲುವೆಗಿಳಿದ ಇಬ್ಬರು ಯುವಕರು ನೀರುಪಾಲು

ರಾಯಚೂರು: ಸಿನಿಮಾ ನೋಡಲು ಹೋಗಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ನಿವಾಸಿಗಳಾದ ಯಲ್ಲಾಲಿಂಗ (28), ವೆಂಕಟೇಶ ಮೋಚಿ (30) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಮಸ್ಕಿ ಪಟ್ಟಣದ ಬಳಗಾನೂರು ರಸ್ತೆಗೆ ಬರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಈ ಇಬ್ಬರು ಈಜಲು ತೆರಳಿದ್ದರು. ಮುದಗಲ್ ಪಟ್ಟಣದ ನಾಲ್ವರು ಸ್ನೇಹಿತರು ಶನಿವಾರ ಮಸ್ಕಿ ಪಟ್ಟಣಕ್ಕೆ …

Read More »

ಪತಿಯನ್ನು ಪತ್ನಿ ಕೃಷ್ಣಾ ನದಿಗೆ ತಳ್ಳಿದ ಪ್ರಕರಣ: ಪೋಕ್ಸೋ ಕಾಯ್ದೆಯಡಿ ಪತಿ ತಾತಪ್ಪ ಅರೆಸ್ಟ್

ರಾಯಚೂರು, ಆಗಸ್ಟ್​ 03: ಪತಿಯನ್ನು ಪತ್ನಿ ಕೃಷ್ಣಾ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಪೋಕ್ಸೋ ಕಾಯ್ದೆಯಡಿ (Pocso Case) ಪತಿ ತಾತಪ್ಪನನ್ನು ರಾಯಚೂರು (Raichur) ಮಹಿಳಾ ಪೊಲೀಸರು ಬಂಧಿಸಿದ್ದಾರೆ. ತಾತಪ್ಪ ವಿರುದ್ಧ ಬಾಲ್ಯ ವಿವಾಹ (Child Marriage) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತಿ ತಾತಪ್ಪ 16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದನು. ಕೌಟುಂಬಿಕ ಕಲಹ ಹಿನ್ನೆಲೆ ಪತಿ ತಾತಪ್ಪನನ್ನು ಪತ್ನಿ ಕೊಲೆ ಮಾಡಲು ಯತ್ನಿಸಿದ್ದಳು ಎಂಬ ಆರೋಪ …

Read More »